ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ: ಪ್ರವೇಶಾತಿ ಆರಂಭ

By Suvarna News  |  First Published Jan 23, 2023, 10:49 AM IST

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನುಲಯದ ಪ್ರಥಮ ವರ್ಷದ ಪ್ರವೇಶ ಪ್ರರಂಭವಾಗಿದ್ದು, ವಿಶ್ವವಿದ್ಯಾನಿಲಯವು 2022-23ನೇ ಶೈಕ್ಷಣಿಕ ಸಾಲಿನ ಜನವರಿ ಆವೃತ್ತಿಯ ಪ್ರಥಮ ವರ್ಷಕ್ಕೆ ವಿವಿಧ ಶಿಕ್ಷಣಕ್ರಮಗಳ ಪ್ರವೇಶಾತಿಗಾಗಿ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.


ಬಾಗಲಕೋಟೆ (ಜ.23): ಕರ್ನಾಟಕ ರಾಜ್ಯ ಮುಕ್ತ  ವಿಶ್ವವಿದ್ಯಾನಿಲಯದ ಪ್ರಥಮ ವರ್ಷದ ಪ್ರವೇಶ ಪ್ರರಂಭವಾಗಿದ್ದು, ವಿಶ್ವವಿದ್ಯಾನಿಲಯವು 2022-23ನೇ ಶೈಕ್ಷಣಿಕ ಸಾಲಿನ ಜನವರಿ ಆವೃತ್ತಿಯ ಪ್ರಥಮ ವರ್ಷಕ್ಕೆ ವಿವಿಧ ಶಿಕ್ಷಣ ಕ್ರಮಗಳ ಪ್ರವೇಶಾತಿಗಾಗಿ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಸ್ನಾತಕ ಶಿಕ್ಷಣ ಕಾರ್ಯಕ್ರಮದಡಿ ಬಿ.ಎ, ಬಿ.ಕಾಂ,ಬಿ.ಲಿಬ್‌.ಐ.ಎಸ್‌.ಸಿ ಬಿಬಿಎ, ಬಿಎಡ್‌,ಬಿಎಸ್‌ಸಿ, ಬಿಎಸ್‌ ಹೋಮ್‌ ಸೈನ್ಸ್‌, ಬಿಎಸ್‌ಸಿ-ಇನ್‌ ಫಾರ್‌ಮೇಷನ್‌ ಟೆಕ್ನಾಲಜಿ, ಬಿಸಿಎ ಹಾಗೂ ಪಿಜಿ ಸರ್ಟಿಫಿಕೇಟ್‌ ಕಾರ್ಯಕ್ರಮಗಳು, ಡಿಪೊ್ಲೕಮ ಶಿಕ್ಷಣ. ಸ್ನಾತಕೋತ್ತರ ಪದವಿಗಳಾದ ಎಂ.ಎ, ಎಂಕಾಂ, ಎಂ.ಲಿಬ್‌.ಐ.ಎಸ್‌.ಸಿ ಎಂ.ಎಸ್‌., ಎಂ.ಬಿಎ ಶಿಕ್ಷಣ ಕ್ರಮಗಳಿಗೆ ಪ್ರವೇಶಾತಿ ಪ್ರಕ್ರಿಯೆ ಪ್ರಾರಂಭವಾಗಿವೆ.

ಗುಲ್ಬರ್ಗಾ ವಿವಿ ಫಲಿತಾಂಶ ವಿಳಂಬ: ಸಿಂಧನೂರಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

Tap to resize

Latest Videos

ಬಿ.ಪಿ.ಎಲ್‌ ಕಾರ್ಡ್‌ ಹೊಂದಿರುವ ಮಹಿಳಾ ಅಭ್ಯರ್ಥಿಗಳಿಗೆ ಮತ್ತು ಡಿಫೆನ್ಸ್‌, ಮಾಜಿ ಸೈನಿಕರುಗಳಿಗೆ ಬೋಧನಾ ಶುಲ್ಕದಲ್ಲಿ ಶೇ.15, ಆಟೋ, ಕ್ಯಾಬ್‌ ಚಾಲಕರ ಮಕ್ಕಳಿಗೆ ಬೋಧನಾ ಶುಲ್ಕದಲ್ಲಿ ಶೇ.30 ರಷ್ಟುವಿನಾಯಿತಿ ಇದೆ. ಕೋವಿಡ್‌-19ನಿಂದ ಮರಣ ಹೊಂದಿದ ಪೋಷಕರ ಮಕ್ಕಳಿಗೆ ಮತ್ತು ಟ್ರಾನ್ಸ್‌ ಜೆಂಡರ್‌, ತೃತೀಯ ಲಿಂಗಿಗಳು ಹಾಗೂ ದೃಷ್ಟೀಹೀನ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕ ಉಚಿತವಾಗಿರುತ್ತದೆ. ಮಾ.31 ವರೆಗೆ ಪ್ರವೇಶ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ.886140975, 7353002301, 9743582257ಗೆ ಸಂಪರ್ಕಿಸುವಂತೆ ಪ್ರಾದೇಶಿಕ ನಿರ್ದೇಶಕ ಅರಣ್‌ ಕೆ.ಎಸ್‌ ಪ್ರಕಟಣೆಯಲ್ಲಿ ತಿಳಿದ್ದಾರೆ.

50 ವರ್ಷಗಳ ನಂತರ ಮತ್ತೆ ಭೇಟಿಯಾದ ವಿಜಯಪುರ ಸೈನಿಕ ಶಾಲೆಯ ವಿದ್ಯಾರ್ಥಿಗಳ ಅಪೂರ್ವ

click me!