ಗುಲ್ಬರ್ಗಾ ವಿವಿ ಫಲಿತಾಂಶ ವಿಳಂಬ: ಸಿಂಧನೂರಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

By Kannadaprabha News  |  First Published Jan 22, 2023, 10:00 PM IST

ಒಂದು ವೇಳೆ ಸಮಸ್ಯೆ ಸರಿಪಡಿಸಿ ಅರ್ಹ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಿ.ಇಡಿ ಅವಕಾಶ ಕಲ್ಪಿಸುವಂತಹ ವ್ಯವಸ್ಥೆ ಕೈಗೊಂಡರೆ ಒಳ್ಳೆಯದು. ಇಲ್ಲದಿದ್ದರೆ ಫೆಬ್ರವರಿಯಲ್ಲಿ ನಡೆಯುವ ಸದನದಲ್ಲಿ ವಿದ್ಯಾರ್ಥಿಗಳ ಪರವಾಗಿ ಈ ಕುರಿತು ಧ್ವನಿ ಎತ್ತುತ್ತೇನೆ ಎಂದು ತಿಳಿಸಿದ ಶಾಸಕ ವೆಂಕಟರಾವ್‌ ನಾಡಗೌಡರು. 


ಸಿಂಧನೂರು(ಜ.22):  ನಿಗದಿತ ಸಮಯದಲ್ಲಿ ಪದವಿ ಫಲಿತಾಂಶ ಪ್ರಕಟಣೆ ಮಾಡದೇ ಗುಲ್ಬರ್ಗಾ ವಿಶ್ವವಿದ್ಯಾಲಯ ವಿಳಂಬ ನೀತಿ ತೋರಿದ್ದರಿಂದ ಬಿ.ಇಡಿ ಅಭ್ಯಾಸದಿಂದ ತಾವು ವಂಚಿತಗೊಂಡಿದ್ದು, ದಿನಾಂಕ ಮುಂದೂಡಬೇಕು. ಅರ್ಹ ಅಭ್ಯರ್ಥಿಗಳಿಗೆ ಬಿ.ಇಡಿಗೆ ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿ ವಿದ್ಯಾರ್ಥಿಗಳು ಶುಕ್ರವಾರ ಇಲ್ಲಿನ ಸರ್ಕಾರಿ ಮಹಾವಿದ್ಯಾಲಯದ ಮುಂದೆ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಸ್ಥಳಕ್ಕೆ ಬಂದ ಶಾಸಕ ವೆಂಕಟರಾವ್‌ ನಾಡಗೌಡರು ವಿದ್ಯಾರ್ಥಿಗಳಿಂದ ಮನವಿ ಪತ್ರ ಸ್ವೀಕರಿಸಿ, ಈ ಕುರಿತು ವಿಶ್ವ ವಿದ್ಯಾಲಯದವರೊಂದಿಗೆ ಮಾತನಾಡಿ ಸಮಸ್ಯೆ ಸರಿಪಡಿಸಲು ಸೂಚಿಸಿದ್ದೇನೆ ಅಂತ ಹೇಳಿದ್ದಾರೆ.

Tap to resize

Latest Videos

ಎಲ್ಲ ರಂಗದಲ್ಲೂ ಮಕ್ಕಳನ್ನು ಪ್ರೋತ್ಸಾಹಿಸಿ: ರಾಜೇಂದ್ರ

ಒಂದು ವೇಳೆ ಸಮಸ್ಯೆ ಸರಿಪಡಿಸಿ ಅರ್ಹ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಿ.ಇಡಿ ಅವಕಾಶ ಕಲ್ಪಿಸುವಂತಹ ವ್ಯವಸ್ಥೆ ಕೈಗೊಂಡರೆ ಒಳ್ಳೆಯದು. ಇಲ್ಲದಿದ್ದರೆ ಫೆಬ್ರವರಿಯಲ್ಲಿ ನಡೆಯುವ ಸದನದಲ್ಲಿ ವಿದ್ಯಾರ್ಥಿಗಳ ಪರವಾಗಿ ಈ ಕುರಿತು ಧ್ವನಿ ಎತ್ತುತ್ತೇನೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮುಖಂಡರು, ವಿದ್ಯಾರ್ಥಿಗಳು ಇದ್ದರು.

click me!