ಈ ವರ್ಷವೇ ಪಠ್ಯ ಪುಸ್ತಕ ಪರಿಷ್ಕರಣೆ ಆಗಲಿದೆ: ಕೆಲವು ಪಾಠಗಳು ಮಾತ್ರ ಬೋಧಿಸಲು ಅನುಮತಿ

By Sathish Kumar KH  |  First Published Jun 8, 2023, 1:02 PM IST

ಕರ್ನಾಟಕ ಕಾಂಗ್ರೆಸ್‌ ಸರ್ಕಾರದಿಂದ ಈ ವರ್ಷವೇ ಪಠ್ಯಪುಸ್ತಕಗಳನ್ನು ಪರಿಷ್ಕರಣೆ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.


ಬೆಂಗಳೂರು (ಜೂ.08): ಮಕ್ಕಳು ತಪ್ಪು ಓದಬಾರದು. ತಪ್ಪು ಪಠ್ಯಗಳನ್ನು ಸರಿಪಡಿಸಲು ಮುಂದುನ ವರ್ಷದವರೆಗೂ ಕಾಯುವುದಿಲ್ಲ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿಯೇ ಪಠ್ಯ ಪುಸ್ತಕವನ್ನು ಪರಿಷ್ಕರಣೆ ಮಾಡಲಾಗುವುದು ಎಂದು ಪ್ರಾಥಮಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಶಿಕ್ಷಣ ಸಚಿವರು, ಈ ವರ್ಷವೇ ಪಠ್ಯ ಪುಸ್ತಕ ಪರಿಷ್ಕರಣೆ ಮಾಡುತ್ತೇವೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬದಲಾವಣೆ ಮಾಡಿಯೇ ಮಾಡ್ತೇವೆ. ಈ ವರ್ಷ ಮಾಡಲ್ಲ ಮುಂದಿನ ವರ್ಷ ಅಂತೆಲ್ಲ ಕೆಲವು ಮಾಧ್ಯಮಗಳಲ್ಲಿ ಬರ್ತಾ ಇದೆ. ಆದರೆ, ಮಕ್ಕಳು ತಪ್ಪು ಓದಬಾರದು, ತಪ್ಪು ಪಠ್ಯಗಳನ್ನು ಮುಂದಿನ ವರ್ಷದ ತನಕ ಕಾಯಬೇಕಿಲ್ಲ. ಪ್ರಸ್ತುತ ಅಭ್ಯಾಸ ಮಾಡಲು ಎಲ್ಲ ಶಾಲಾ ವಿದ್ಯಾರ್ಥಿಗಳಿಗೆ ಸಪ್ಲಿಮೆಂಟ್‌ ಮಾದರಿಯ ಪುಸ್ತಕಗಳನ್ನು ನೀಡುತ್ತೇವೆ ಎಂದು ಮಾಹಿತಿ ನೀಡಿದರು. 

Tap to resize

Latest Videos

ಗೃಹಜ್ಯೋತಿ ಯೋಜನೆ ಎಲ್ಲ ಪ್ರಶ್ನೆಗಳಿಗೂ ಇಲ್ಲಿವೆ ಉತ್ತರ: ಹೊರ ರಾಜ್ಯದವರಿಗೂ ಸಿಗುತ್ತೆ ಫ್ರೀ ವಿದ್ಯುತ್

ಸಿದ್ದರಾಮಯ್ಯ ಅವರಿಂದಲೇ ಸೂಚನೆ: 
ರಾಜ್ಯದಲ್ಲಿ ಈಗಾಗಲೇ ಶಿಕ್ಷಣ ತಜ್ಞರೂ ಕೂಡ ಅದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಈ ಬಗ್ಗೆ ಹೆಚ್ಚು ಆಸಕ್ತಿ ಇಟ್ಟುಕೊಂಡಿದ್ದಾರೆ. ಈ ಕ್ಷಣದಲ್ಲೂ ಕೂಡ ಪಠ್ಯ ಪುಸ್ತಕ ಪರಿಷ್ಕರಣೆ ಸಂಬಂಧಿಸಿ ಸಭೆ ನಡೆಯುತ್ತಿದೆ. ಪ್ರಸ್ತುತ ಸಪ್ಲಿಮೆಂಟ್ ಮಾದರಿಯ ಪುಸ್ತಕ ನೀಡುತ್ತೇವೆ. ಯಾವ ಪಾಠ ಮಾಡಬೇಕು, ಯಾವುದು ಮಾಡಬಾರದು ಎಂಬುದನ್ನೂ ತಿಳಿಸುತ್ತೇವೆ. ಹೀಗಾಗಿ ಯಾರೂ ಗೊಂದಲಕ್ಕೆ ಒಳಗಾಗಬಾರದು ಎಂದು ಮಾಹಿತಿಯನ್ನು ನೀಡಿದರು. 

ಈಗಿರುವ ಪುಸ್ತಕದಲ್ಲಿ ಕೆಲವು ಪಾಠಕ್ಕೆ ಅನುಮತಿ: 
ಪಠ್ಯಪುಸ್ತಕಗಳು ಈಗಾಗಲೇ ಶಾಲೆಗಳಿಗೆ ಹೋಗಿವೆ. ನಾವು ಅದನ್ನ ತಡೆಯಬಹುದಿತ್ತು. ಆದರೆ ಆ ರೀತಿ ಮಾಡಿದರೆ ಈಗ ಆಗಿರುವ ಖರ್ಚು ಕೂಡ ನೋಡಬೇಕು. ಹೀಗಾಗಿ ನಾವು ಸಪ್ಲಿಮೆಂಟ್ ಮೂಲಕ ಯಾವ ಪಠ್ಯ ಮಾಡಬೇಕು ಯಾವುದು ಮಾಡಬಾರದು ಅನ್ನೋದನ್ನ ಪ್ರಕಟ ಮಾಡ್ತೇವೆ. ತಜ್ಞರು ಸೂಚಿಸಿದ ಪಠ್ಯಗಳನ್ನು ಬೋಧಿಸದಂತೆ ಸೂಚನೆ ಕೊಡುವ ಕೆಲಸ ಆಗಲಿದೆ. ಈ ವಿಚಾರದಲ್ಲಿ ಸಿಎಂ ಅವರಿಗೆ ವೈಯಕ್ತಿಕವಾಗಿ ಆಸಕ್ತಿ ಇದ್ದು, ಅವರ ಮಾರ್ಗದರ್ಶನದಲ್ಲಿ ಎಲ್ಲವೂ ಆಗಲಿದೆ ಎಂದು ತಿಳಿಸಿದರು. 

ದೊಡ್ಡ ಮಟ್ಟದ ಚರ್ಚೆ ನಡೆಯಬೇಕಿದೆ: 
ಮಕ್ಕಳ ಹಿತದೃಷ್ಟಿಯಿಂದ  ಸರಿಯಾದ ಕ್ರಮ ತೆಗೆದುಕೊಳ್ತೇವೆ. ಅದು ಇದು ಅಂತ ಏನೂ ಇಲ್ಲ. ತುಂಬಾ ಸೂಕ್ಷ್ಮ ವಿಚಾರಗಳಿವು. ಹಾಗಾಗಿ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಬೇಕಿದೆ. ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಿ ತಿಳಿಸುತ್ತೇವೆ. ದೊಡ್ಡ ಮಟ್ಟದ ಚರ್ಚೆಗಳ ಅವಶ್ಯಕತೆಯಿದೆ. ಹಾಗಾಗಿ ಮಕ್ಕಳ ಒಳಿತನ್ನ ನೋಡಿಯೇ ಮಾಡಬೇಕು. ಮಕ್ಕಳಿಗೆ ಒಳಿತಾಗುವಂತೆ ನಾವು ಮಾಡ್ತೇವೆ ಎಂದು ಶಿಕ್ಷಣ ಸಚಿವರು ಹೇಳಿದರು. 

ತಾತ್ಕಾಲಿಕ ಪಠ್ಯ ಪರಿಷ್ಕರಣೆ ಸಮಿತಿ ರಚನೆ: ರಾಜ್ಯದಲ್ಲಿರುವ ನೂತನ ಕಾಂಗ್ರೆಸ್ ಸರ್ಕಾರ ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ನಿರ್ಧಾರ ಮಾಡಿದ್ದು, ತಾತ್ಕಾಲಿಕ ಸಮಿತಿಯನ್ನು ರಚನೆ ಮಾಡಿ ಶಾಲಾ ಪಠ್ಯದಲ್ಲಿ ಲೋಪದೋಷಗಳನ್ನು ಸರಿಪಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಬಿಜೆಪಿ ಸರ್ಕಾರದ ಆಡಳಿತ ಅವಧಿಯಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಆಗಿದ್ದು, ಈ ಪಠ್ಯಗಳಲ್ಲಿರುವ ಲೋಪದೋಷಗಳನ್ನು ಸರಿಪಡಿಸುವಂತೆ ಸೂಚನೆ ನೀಡಲಾಗಿದೆ. ಅದರಲ್ಲೂ ಪ್ರಮುಖ ಲೇಖಕರ ಪಠ್ಯಗಳನ್ನು ಪಠ್ಯಕ್ರಮದಿಂದ ಕೈಬಿಡಲು ಸರ್ಕಾರ ಮುಂದಾಗಿದೆ ಎನ್ನಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಹಿರಿಯ ಸಾಹಿತಿ ಪ್ರೊಫೆಸರ್ ಬರಗೂರು ರಾಮಚಂದ್ರಪ್ಪ ಹಾಗೂ ಶಿಕ್ಷಣ ತಜ್ಞ ಡಾ.ನಿರಂಜನಾರಾಧ್ಯ ಸೇರಿ ಹಲವು ತಜ್ಞರೊಂದಿಗೆ ಪಠ್ಯ ಪರಿಷ್ಕರಣೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸಿದ್ದಾರೆ. 

ಹೆಣ್ಣೆಂಬ ಕಾರಣಕ್ಕೆ ಹುಟ್ಟಿದ ಮಗುವನ್ನೇ ಮುಳ್ಳಲ್ಲಿ ಬೀಸಾಡಿ ಹೋದ ಪೋಷಕರು

ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರಬಾರದು: ರಾಜ್ಯದಲ್ಲಿ ಈಗಾಘಲೇ ಶಾಲೆಗಳು ಆರಂಭವಾಗಿದ್ದು, ಪುಸ್ತಕಗಳು ಮುದ್ರಣಗೊಂಡು ಶಾಲೆಗಳಿಗೂ ತಲುಪಿವೆ. ಆದ್ದರಿಂದ ದೊಡ್ಡ ಪ್ರಮಾಣದಲ್ಲಿ ತಿದ್ದುಪಡಿ ಮಾಡಲು ಸಮಯ ಇಲ್ಲವೆಂದು ಕೇಳಿಬರುತ್ತಿತ್ತು. ಆದರೆ, ಇದನ್ನು ನಿರಾಕರಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುವ ಪಠ್ಯಗಳನ್ನು ತೆಗೆದು ಹಾಕಿ, ಬೇರೆ ಪಠ್ಯ ಸೇರಿಸಲಾಗುತ್ತದೆ. ಪ್ರಸ್ತುತ ಯಾವ ಪಾಠಗಳನ್ನು ಬೋಧನೆ ಮಾಡಬೇಕೋ ಅಂತಯ ಪಠ್ಯವನ್ನು ಸಪ್ಲಿಮೆಂಟರಿ ಮಾದರಿಯಲ್ಲಿ ಕೊಡಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು. 

ಯಾವ ಪಠ್ಯಗಳಿಗೆ ಬೀಳಲಿದೆ ಕತ್ತರಿ:  ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ಪರಿಷ್ಕೃತಗೊಂಡ ಪಠ್ಯದಲ್ಲಿ ಸೇರ್ಪಡೆ ಮಾಡಲಾದ ಆರ್‌ಎಸ್‌ಎಸ್‌ ಸಂಸ್ಥಾಪಕ ಕೇಶವ ಬಲಿರಾಮ್ ಹೆಗಡೆವಾರ್, ಚಿಂತಕ ಚಕ್ರವರ್ತಿ ಸೂಲಿಬೆಲೆ ಹಾಗೂ ವಿದ್ವಾಂಸರಾದ ಬನ್ನಂಜೆ ಗೋಂವಿದಾಚಾರ್ಯ ಅವರ ವಿಚಾರದ ಪಠ್ಯವನ್ನು ಸೇರಿದಂತೆ ಹಲವು ಪಠ್ಯಗಳನ್ನು ಪರಿಷ್ಕರಣೆ ಮಾಡಲು ಸರ್ಕಾರ ನಿರ್ಧರಿಸಿದೆ. ಶೀಘ್ರ ಪರಿಷ್ಕರಣಾ ಪ್ರಕ್ರಿಯೆ ಆರಂಬವಾಗಲಿದೆ. ಇದಕ್ಕೆ ಸಂಬಂಧಿಸಿದಂತೆ ನಿರಂತರವಾಗಿ ಸಭೆಗಳನ್ನು ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ. 

click me!