ಶಿಕ್ಷಕರ ಕೊರತೆ, ಸರ್ಕಾರದ ಅಸಹಕಾರದ ಹಿನ್ನಲೆಯಲ್ಲಿ ಶಾಲೆಗೆ ಮಕ್ಕಳನ್ನೇ ಕಳುಹಿಸಿದ ಪೋಷಕರು ಆಕ್ರೋಶ ಹೊರಹಾಕುತ್ತಿರುವ ಘಟನೆಗೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಸಾಕ್ಷಿ ಆಗಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಜೂ.08): ಶಿಕ್ಷಕರ ಕೊರತೆ, ಸರ್ಕಾರದ ಅಸಹಕಾರದ ಹಿನ್ನಲೆಯಲ್ಲಿ ಶಾಲೆಗೆ ಮಕ್ಕಳನ್ನೇ ಕಳುಹಿಸಿದ ಪೋಷಕರು ಆಕ್ರೋಶ ಹೊರಹಾಕುತ್ತಿರುವ ಘಟನೆಗೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಸಾಕ್ಷಿ ಆಗಿದೆ. ಚಿಕ್ಕಮಗಳೂರು ತಾಲ್ಲೂಕಿನ ಬಿದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬಗೋಳ ಸರ್ಕಾರಿ ಶಾಲೆಯಲ್ಲಿ ಇಂತಹ ದುಸ್ಥಿತಿ ಎದುರಾಗಿದೆ. ಮಕ್ಕಳು ಇಲ್ಲದೇ ಶಾಲೆಯ ಆವರಣ , ಕೊಠಡಿ ಬಣ ಬಣ ಎನ್ನುತ್ತಿದೆ.
undefined
ಇಡೀ ಶಾಲೆಗೆ ಇರುವುದು ಒಬ್ಬರೇ ಶಿಕ್ಷಕರು: ಈ ಸರ್ಕಾರಿ ಶಾಲೆಯಲ್ಲಿ 1 ಟು 7ಥ್ 9 ಜನ ಮಕ್ಕಳಿದ್ದಾರೆ. 1ನೇ ಕ್ಲಾಸಿಗೆ ಇಬ್ರು, 2ನೇ ಕ್ಲಾಸಿಗೂ ಇಬ್ರು, 3ಕ್ಕೆ ಇಲ್ಲ. 4ನೇ ಕ್ಲಾಸಿಗೆ ಇಬ್ರು, 5ಕ್ಕೆ ಮೂವರು. ಎಲ್ಲರಿಗೂ ಒಬ್ಬನೇ ಪಾಠ ಮಾಡ್ಬೇಕು. ಕನ್ನಡ, ಹಿಂದಿ, ಇಂಗ್ಲೀಷ್, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಎಲ್ಲಾ ವಿಷಯಕ್ಕೂ ಅವನೊಬ್ಬನೇ ತಜ್ಞ. ಇನ್ನು ಈ ಶಾಲೆಯಲ್ಲಿ ಇರುವುದು ಒಂದೇ ಒಂದು ಕೊಠಡಿ. ಒಂದರಿಂದ ಐದನೇ ತರಗತಿಯ 9 ಜನ ಮಕ್ಕಳು ಇದೊಂದೇ ಕೊಠಡಿಯಲ್ಲಿ ಪಾಠ ಕೇಳಬೇಕು.ಇರೋದು ಒಬ್ಬನೇ ಶಿಕ್ಷಕ. ಆತ ಯಾರಿಗೆ ಯಾವ ಸಮಯದಲ್ಲಿ ಹೇಗೆ ಪಾಠ ಮಾಡಬಹುದು ನೀವೇ ಊಹಿಸಿ.
ಕಾಂಗ್ರೆಸ್ ಗ್ಯಾರಂಟಿ ಯೋಜನೆಗೆ ಹಣ ಸಂಗ್ರಹಿಸಲು ಮದ್ಯಕ್ಕೆ ತೆರಿಗೆ?
ಯಾವ ತರಗತಿಯ ಯಾವ ಪಾಠವನ್ನು ಯಾವ ಮಕ್ಕಳು ಕೇಳುತ್ತಾರೆ ಎಂದು ಪಾಠ ಮಾಡುವ ಶಿಕ್ಷಕರಿಗೂ ಗೊತ್ತಿಲ್ಲ. ಕೇಳುವ ಮಕ್ಕಳಿಗೆ ಮೊದಲೇ ಗೊತ್ತಿಲ್ಲ. ಶಾಲೆಗೆ ಸೂಕ್ತ ಕೊಠಡಿ ಹಾಗೂ ಶಿಕ್ಷಕರಿಗಾಗಿ ಸ್ಥಳೀಯರು ಮತ್ತು ಎಸ್.ಡಿ.ಎಂ.ಸಿ ಸದಸ್ಯರು ವರ್ಷಗಳಿಂದ ಮನವಿ ಮಾಡುತ್ತಲೇ ಬಂದಿದ್ದಾರೆ. ಆದರೆ, ನೋಡ್ತೀವಿ, ಮಾಡ್ತೀವಿ, ಕಳಿಸ್ತೀವಿ ಅನ್ನೋ ಮೇಲಾಧಿಕಾರಿಗಳಿಂದ ಇಂದಿಗೂ ಕಾರ್ಯರೂಪಕ್ಕೆ ಬಂದಿಲ್ಲ. ಈ ಕಾರಣದಿಂದಲೂ 30 ಮಕ್ಕಳಿದ್ದ ಕಾಡಂಚಿನ ಕುಗ್ರಾಮದ ಶಾಲೆಯಲ್ಲಿ ಇಂದು ಇರುವುದು ಕೇವಲ ಒಂಬತ್ತು ಮಕ್ಕಳು ಮಾತ್ರ. ಸರ್ಕಾರಕ್ಕೆ ಮನವಿ ಮಾಡಿ... ಮಾಡಿ... ಸಾಕಾಗಿದೆ ಎನ್ನುವುದು ಸ್ಥಳೀಯರಾದ ಸುರೇಶ್ ಅಭಿಪ್ರಾಯವಾಗಿದೆ.
ಶಾಲೆಯೇ ಸಮಸ್ಯೆ: ಈ ಶಾಲೆಯಲ್ಲಿ ಸಮಸ್ಯೆ ಇಲ್ಲ. ಶಾಲೆಯೇ ಸಮಸ್ಯೆಯಲ್ಲಿ ಇದೆ. ಈ ಶಾಲೆಯ ಪರಿಸ್ಥಿತಿ ಹೀಗಿರುವಾಗ ಇಲ್ಲಿನ ಶಿಕ್ಷಕರದ್ದು ಮತ್ತೊಂದು ಸಮಸ್ಯೆ. ಶಾಲೆ ಆರಂಭವಾಗಿ ವಾರವಾದರೂ ಮಕ್ಕಳು ಮನೆಯಲ್ಲಿ ಆಟವಾಡುತ್ತಿದ್ದಾರೋ ವಿನಃ ಶಾಲೆಗೆ ಬರುತ್ತಿಲ್ಲ. ಕಾರಣ ಇಲ್ಲಿನ ಮೇಷ್ಟ್ರು. ಇಡೀ ಶಾಲೆಗೆ ಇರುವುದು ಒಬ್ಬರೇ ಶಿಕ್ಷಕರು. ಅವರು ಬೆಳಗ್ಗೆ 11.30ಕ್ಕೆ ಬಂದರೆ 2.30ಕ್ಕೆ ಮನೆ ಸೇರುತ್ತಾರೆ. ಸಂಜೆ ಮಕ್ಕಳೇ ಶಾಲೆಯ ಬೀಗ ಹಾಕಿಕೊಂಡು ಮನೆಗೆ ಹೋಗಬೇಕು. ಇದರಿಂದ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆಯೂ ಇಳಿಮುಖವಾಗಿ ಇಂದು ಒಂಬತ್ತಕ್ಕೆ ಬಂದು ನಿಂತಿದೆ.
ವರ್ಷಾಂತ್ಯದ ಒಳಗೆ ಬಿಬಿಎಂಪಿಗೆ ಚುನಾವಣೆ ನಡೆಸಲು ಸಿದ್ಧ: ಸಿಎಂ ಸಿದ್ದರಾಮಯ್ಯ
ಹಾಗಾಗಿ, ಇಲ್ಲಿನ ಪೋಷಕರು ಹೀಗಿರುವ ಶಿಕ್ಷಕ ಚಂದ್ರೇಗೌಡ ಇಲ್ಲಿಂದ ಬೇರೆಡೆಗೆ ಸ್ಥಳಾಂತರಗೊಂಡು ಬೇರೆ ಶಿಕ್ಷಕರು ಬರುವವರೆಗೂ ಮಕ್ಕಳನ್ನ ಶಾಲೆಗೆ ಕಳುಹಿಸುವುದಿಲ್ಲ ಎಂದು ಶಿಕ್ಷಕರು ಮಕ್ಕಳನ್ನ ಶಾಲೆಗೆ ಕಳುಹಿಸುತ್ತಿಲ್ಲ. ಇಲ್ಲಿನಾ ಶಿಕ್ಷಕರನ್ನ ಬೇರೆ ಕಡೆ ವರ್ಗಾವಣೆ ಮಾಡಿದರೆ ಶಾಲೆಗೆ ಮಕ್ಕಳ ಸಂಖ್ಯೆಯು ಹೆಚ್ಚುತ್ತದೆ ಶಾಲೆಯು ಉಳಿಯುತ್ತೆ ಅಂತಿದ್ದಾರೆ ಪೋಷಕರಾದ ರಘುಪತಿ. ಒಟ್ಟಾರೆ, ಕೂಲಿ ಕಾರ್ಮಿಕರ ಮಕ್ಕಳೇ ಓದುವ ಕುಗ್ರಾಮದ ಸರ್ಕಾರಿ ಶಾಲೆಯೊಂದು ಸರ್ಕಾರಿ ಶಾಲೆಯೊಂದು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿ ಬೀಗ ಬೀಳುವ ಸ್ಥಿತಿ ತಲುಪಿದೆ. ಇದಕ್ಕೆ ಕಾರಣ ಸರ್ಕಾರವು ಅಥವಾ ಶಿಕ್ಷಕನೋ ಗೊತ್ತಿಲ್ಲ. ಆದರೆ, ಬಡ ಮಕ್ಕಳು ಮಾತ್ರ ಶಿಕ್ಷಣದಿಂದ ವಂಚಿತರಾಗೋದ್ರಲ್ಲಿ ನೋ ಡೌಟ್.