ಚಾಮರಾಜನಗರ: ಮಕ್ಕಳು ಶಾಲೆಗೆ ಹೋಗಲ್ಲ ಅಂದ್ರೆ ಕುದುರೆ ಮಾಮ ಹಾಜರ್‌..!

By Girish Goudar  |  First Published Jun 16, 2022, 9:35 PM IST

*  ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನ ಕಂದಹಳ್ಳಿಯಲ್ಲಿ ಕುದುರೆ ಮಾಮನ ಕರಾಮತ್ತು
*  ಮಗುವನ್ನು ಕುದುರೆ ಮೇಲೆ ಕೂರಿಸಿ ಶಾಲೆಗೆ ಕರೆದೊಯ್ಯುತ್ತಾರೆ
*  ಕುದುರೆ ಸವಾರಿ ಆಸೆಯಿಂದ ಶಾಲೆಗೆ ಹೋಗುವ
 


ವರದಿ: ಪುಟ್ಟರಾಜು. ಆರ್.ಸಿ, ಏಷ್ಯಾನೆಟ್‌ ಸುವರ್ಣ ನ್ಯೂಸ್, ಚಾಮರಾಜನಗರ

ಚಾಮರಾಜನಗರ(ಜೂ.16): ಮಕ್ಕಳು ಶಾಲೆಗೆ ಹೋಗವುದಿಲ್ಲ ಎಂದುಲ ಹಠ ಮಾಡಿದರೆ ಪೋಷಕರು ಚಾಕೊಲೇಟ್, ಸಿಹಿ ತಿನಿಸು, ಗೊಂಬೆ ಹೀಗೆ ನಾನಾ ತರದ  ಆಮಿಷ ಒಡ್ಡಿ ಮಕ್ಕಳನ್ನು ಶಾಲೆಗೆ ಬಿಟ್ಟು ಬರೋದು ಸಾಮಾನ್ಯ. ಆದರೆ ಈ ಊರಿನಲ್ಲಿ ಯಾವುದಾದರು ಮಗು ಶಾಲೆಗೆ ಹೋಗಲ್ಲ ಎಂದು ಹಠ ಹಿಡಿದರೆ ವ್ಯಕ್ತಿಯೊಬ್ಬರು ತಮ್ಮ ಕುದುರೆಯೊಂದಿಗೆ ಹಾಜರಾಗುತ್ತಾರೆ. ಆ ಮಗುವನ್ನು ಕುದುರೆ ಸವಾರಿ ಮೂಲಕ ಶಾಲೆಗೆ ಕರೆದೊಯ್ಯುತ್ತಾರೆ. ಆ ಮಗು ಹಠ ಬಿಟ್ಟು ಖುಷಿಯಿಂದ ಶಾಲೆಗೆ ಹೋಗುತ್ತದೆ. ಹೀಗಿ ಕುದುರೆ ಸವಾರಿ ಮಾಡುವ ಆಸೆಯಿಂದ ಅನೇಕ ಮಕ್ಕಳು ಶಾಲೆಯ ಮೆಟ್ಟಿಲು ಹತ್ತುವಂತಾಗಿದೆ.  ಹೌದು ಇಂತಹ ಒಂದು ಅಪರೂಪದ ವಿದ್ಯಾಮಾನ ಚಾಮರಾಜನಗರ ಜಿಲ್ಲೆಯಲ್ಲಿ ನಡೆಯುತ್ತಿದೆ..

Tap to resize

Latest Videos

undefined

ಚಾಮರಾಜನಗರ ಜಿಲ್ಲೆ ಯಳಂದೂರು ತಾಲೋಕಿನ ಕಂದಹಳ್ಳಿಯ ನಾಗೇಂದ್ರ ಅವರಿಗೆ ಪ್ರಾಣಿಪಕ್ಷಿಗಳೆಂದರೆ ಬಲುಪ್ರೀತಿ. ಕುದುರೆ ಎಂದರಂತೂ ಅಚ್ಚುಮೆಚ್ಚು. ಹಾಗಾಗಿಯೇ ಕಳೆದ ಎಂಟು ವರ್ಷಗಳ ಹಿಂದೆ ಮೈಸೂರಿನ ರೇಸ್ ಕೋರ್ಸ್ ನಿಂದ ಕುದುರೆಯೊಂದನ್ನು ಖರೀದಿಸಿ ತಂದು ಸಾಕುತ್ತಿದ್ದಾರೆ. ಈ ಭಾಗರದಲ್ಲಿ ಇವರು ಕುದುರೆ ನಾಗೇಂದ್ರ ಎಂದೇ ಹೆಸರುವಾಸಿಯಾಗಿದ್ದಾರೆ. ನಾಗೇಂದ್ರ ಅವರು ಪ್ರತಿದಿನ ತಮ್ಮ ಹಾಗು ಸಂಬಂಧಿಕರ ಮಕ್ಕಳನ್ನು ಸಮೀಪದ ಕಾರಾಪುರ ವಿರಕ್ತ ಮಠದ ನಿರಂಂಜನ ವಿದ್ಯಾಸಂಸ್ಥೆಗೆ ಕುದುರೆ ಮೂಲಕ ಕರೆದೊಯ್ಯುತ್ತಾರೆ. ಮತ್ತೆ ಶಾಲೆ ಮುಗಿದ ಮೇಲೆ ಕುದುರೆ ಮೂಲಕವೇ  ಕರೆತರುತ್ತಾರೆ.  ಗ್ರಾಮದಲ್ಲಿ ಶಾಲೆಗೆ ಹೋಗುವುದಿಲ್ಲ ಎಂದು ಹಠ ಮಾಡುವ ಅಥವಾ ಶಾಲೆಗೆ ಹೋಗದ ಮಕ್ಕಳ ಮಾಹಿತಿ ಸಿಕ್ಕರೆ ತಕ್ಷಣ ಅಂತಹ ಮಕ್ಕಳ  ಮನೆ ಬಳಿ ಹಾಜರಾಗುತ್ತಾರೆ.  ಕುದುರೆ ಸವಾರಿ ಮಾಡಿಸಿಕೊಂಡು ಶಾಲೆಗೆ ಕರೆದೊಯ್ಯವುದಾಗಿ ಮಗುವಿಗೆ ಆಸೆ ತುಂಬುತ್ತಾರೆ. ಕುದುರೆ ಸವಾರಿ ಮಾಡುವ ಸೆಯಿಂದ ಮಗು ಶಾಲೆಗೆ ಹೋಗಲು ಮುಂದಾಗುತ್ತದೆ.  ..ಹೀಗೆ ಶಾಲೆಗೆ ಅನೇಕ ಮಕ್ಕಳು ಖುಷಿಯಿಂದ ಶಾಲೆಯತ್ತ ಮುಖ ಮಾಡಲು ಕುದುರೆ ನಾಗೇಂದ್ರ ಕಾರಣರಾಗಿದ್ದಾರೆ.

ಹಿಂದಿ ಬಲ್ಲವರಿಗಷ್ಟೇ ಪ್ರವಾಸ: ಆದೇಶ ಹೊರಡಿಸಿದ ಅಧಿಕಾರಿ ವಿರುದ್ಧ ಶಿಸ್ತು ಕ್ರಮ

ಕುದುರೆ ಮೇಲೆ ಕೂರುವ ಆಸೆಯಿಂದ ಮಕ್ಕಳು ಬರುತ್ತಾರೆ, ಕುದುರೆ ಸವಾರಿ ಮಾಡುತ್ತಾ ಖುಷಿಯಿಂದಲೇ ಶಾಲೆಗೆ ಹೋಗುತ್ತಾರೆ ಕುದುರೆ ಸವಾರಿ ಆಸೆಯಿಂದಾದರು ಮಕ್ಕಳು ಶಾಲೆಗೆ ಹೋಗುತ್ತಾರಲ್ಲ  ಎಂಬುದೇ ನನಗು ಖುಷಿಯಾಗುತ್ತದೆ ಎನ್ನುತ್ತಾರೆ ಕುದುರೆ ನಾಗೇಂದ್ರ. ತೆಂಗಿನ ಕಾಯಿ ವ್ಯಾಪಾರಿಯೂ ಆಗಿರುವ ನಾಗೇಂದ್ರ ವರು ತೆಂಗಿನ ತೋಟಗಳಿಗೆ ಸುತ್ತಮುತ್ತಲ ಹಳ್ಳಿಗಳಿಗೆ ಕುದುರೆಯ ಮೇಲೆಯೇ  ಹೋಗಿ ವ್ಯಾಪಾರ ಮಾಡುತ್ತಾರೆ.

ಪಠ್ಯಪುಸ್ತಕ ಪರಿಷ್ಕರಣೆ ವಿಷಯ ಮುಗಿದ ಅಧ್ಯಾಯ: ಸಚಿವ ನಾಗೇಶ್‌

ಶಾಲೆಗೆ ಬರಲು ಇಷ್ಟವಿಲ್ಲದ ಮಕ್ಕಳನ್ನು ಪೋಷಕರು ಬೈಕ್ ನಲ್ಲಿ, ಇಲ್ಲವೆ ಕಾರಿನಲ್ಲಿ ಬಲವಂತವಾಗಿ ಕೂರಿಸಿಕೊಂಡು ಬರುತ್ತಿದ್ದರು. ದರೆ ನಾಗೇಂದ್ರ ವರು ಅಂತಹ ಮಕ್ಕಳನ್ನು ಕುದುರೆ ಸವಾರಿ ಮಾಡಿಸಿಕೊಂಡು ಕರೆದುಕೊಂಡು ಬರುವುದರಿಂದ ಖುಷಿಯಾಗಿ ಶಾಲೆಗೆ ಬರುತ್ತಿವೆ , ಇದೇ ಖುಷಿಯಲ್ಲಿ ಮಕ್ಕಳು ಪಾಠಪ್ರವಚನಗಳನ್ನು ಆಸಕ್ತಿಯಿಂದ ಕೇಳುತ್ತಿದ್ದಾರೆ ಎಂದು  ಶಾಲಾ ಶಿಕ್ಷಕಿ ಶಮಂತಮಣಿ ತಿಳಿಸಿದರು.

ನಾಗೇಂದ್ರ ವರು ಕೇವಲ ಕುದುರೆಯಷ್ಟೇ ಅಲ್ಲ ನಾಯಿ, ಬಾತುಕೋಳಿ, ಮೊಲ, ಪಾರಿವಾಳ, ಲವ್ ಬರ್ಡ್ಸ್, ಗಿಳಿಗಳು, ಕುರಿಗಳು ಹಾಗು ಮೇಕೆಗಳನ್ನು ಸಾಕಿ ಸಲುಹುತ್ತಿದ್ದಾರೆ. ಪೆಟ್ರೋಲ್ ಬೆಲೆ ಏರಿಕೆಯಾಗಿರುವುದರಿಂದ ತಮ್ಮ ಸಂಚಾರಕ್ಕೆ ಹೆಚ್ಚಾಗಿ  ಕುದುರೆಯನ್ನೇ ಬಳುಸುತ್ತಾ ಗಮನ ಸೆಳೆಯುತ್ತಿದ್ದಾರೆ ನಾಗೇಂದ್ರ.
 

click me!