10 ಸಾವಿರ ಉದ್ಯೋಗ ಸೃಷ್ಟಿಸಲಿರುವ ಪಿಡಬ್ಲ್ಯೂಸಿ

By Suvarna News  |  First Published Jun 16, 2022, 3:34 PM IST

* ಒಡಿಶಾದ ರಾಜಧಾನಿ ಭುವನೇಶ್ವರ ನಗರದಲ್ಲಿ ಕಚೇರಿ ಆರಂಭಿಸಿದ PwC
*ಈ ರಾಜ್ಯದಲ್ಲಿ ಮುಂದಿನ ಒಂದು ವರ್ಷದಲ್ಲಿ 500 ಜನರನ್ನು ನೇಮಕ ಮಾಡಿಕೊಳ್ಳಲಿದೆ
*ಟೈರ್ 1 ಸಿಟಿಗಳಿಗಿಂತಲೂ ಟೈರ್ 2 ಮತ್ತು 3ನೇ ನಗರಗಳತ್ತ ಕಂಪನಿಯ ಚಿತ್ತ


ಜಗತ್ತಿನ ನಾಲ್ಕು ಪ್ರಮುಖ ಲೆಕ್ಕ ಪರಿಶೋಧಕ ಕಂಪನಿಗಳಲ್ಲಿ ಒಂದಾಗಿರುವ ಪ್ರೈಸ್ ವಾಟರ್ ಹೌಸ್ ಕೂಪರ್ಸ್ ಇಂಡಿಯಾ (PricewatershouseCoppers India) ಕಂಪನಿಯು ಭಾರಿ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಗೆ ಮುಂದಾಗಿದೆ. ಮುಂದಿನ ಐದು ವರ್ಷಗಳಲ್ಲಿ ಭಾರತದಲ್ಲಿ ಕಂಪನಿಯು 10,000 ಉದ್ಯೋಗಳನ್ನು ಸೃಷ್ಟಿಸುವುದಾಗಿ ಘೋಷಿಸಿ ಕೊಂಡಿದೆ. ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ಆರಂಭಿಸಿರುವ ಪ್ರೈಸ್‌ವಾಟರ್‌ಹೌಸ್‌ಕೂಪರ್ಸ್, ಒಡಿಶಾದ ರಾಜಧಾನಿ ಭುವನೇಶ್ವರ (Bhubaneswar) ದಲ್ಲಿ ತನ್ನ ಕಚೇರಿಯನ್ನು ತೆರೆಯುವ ಮೂಲಕ ಈ ರಾಜ್ಯದಲ್ಲೂ ತನ್ನ ಕಾರ್ಯಚಟುವಟಿಕೆಯನ್ನು ವಿಸ್ತರಿಸಿಕೊಂಡಿದೆ.  ಮುಂದಿನ ಒಂದು ವರ್ಷದಲ್ಲಿ ಒಡಿಶಾ (Odisha) ದಿಂದಲೇ ಸುಮಾರು 500 ಜನರನ್ನು ನೇಮಕ ಮಾಡಿಕೊಳ್ಳುವ ಗುರಿಯನ್ನು ಹಾಕಿಕೊಂಡಿದೆ ಎನ್ನಲಾಗಿದೆ. ಭವನೇಶ್ವರದಲ್ಲಿ ಆರಂಭವಾಗಿರುವ ಹೊಸ ಕಚೇರಿಯುವ ಫ್ಲೆಕ್ಸಿಬಲ್ ಆಗಿದ್ದು, ಈ ಪ್ರದೇಶದಲ್ಲಿ ತನ್ನ ಕ್ಲೈಂಟುಗಳಿಗೆ ಸೇವೆಯನ್ನು ಒದಗಿಸಲು ಇದು ಬಹು ಉದ್ದೇಶ ಉಪಯೋಗಿಯಾಗಿದೆ ಎಂದು ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಂದಿನ ಐದು ವರ್ಷಗಳಲ್ಲಿ ಹೆಚ್ಚುವರಿಯಾಗಿ ಹತ್ತು ಸಾವಿರ ಉದ್ಯೋಗ (Jobs) ಸೃಷ್ಟಿಸುವ ಕಂಪನಿಯ ಬದ್ಧತೆಗೆ ಈಗ ಮಾಡಲಾಗಿರುವ ವಿಸ್ತರಣೆಯು ನೆರವು ಒದಗಿಸಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ನಮ್ಮ ಟ್ಯಾಲೆಂಟ್ ಪೂಲ್ ಇನ್ನು ಮುಂದೆ ಕೇವಲ ಮೆಟ್ರೋ ಸಿಟಿಗಳ ಮೇಲೆ ಮಾತ್ರವೇ ಗಮನಗೊಂಡಿರವುದಿಲ್ಲ.  ಉಳಿದ ನಗರಗಳಲ್ಲೂ ನಾವು ಕೌಶಲ್ಯಯುಕ್ತ ವೃತ್ತಿಪರರ ಶ್ರೀಮಂತಿಕೆಯನ್ನು ಹೆಚ್ಚಿಸುವತ್ತ ನೋಡುತ್ತಿದ್ದೇವೆ ಎಂದು ಪಿಡಬ್ಲ್ಯೂಸಿ (PwC) ಚೇರಪರ್ಸನ್ ಸಂಜೀವ್  ಕೃಷ್ಣನ್ (Sanjeev Krishnan) ಅವರು ಹೇಳಿದ್ದಾರೆ. 2006ರಿಂದ 2017ರ ನಡುವೆ ಎರಡನೇ ಸ್ತರ ಮತ್ತು ಮೂರನೇ ಸ್ತರದ ನಗರಗಳು ಒಂದನೇ ಸ್ತರ ಹಾಗೂ ಮೆಟ್ರೋ ನಗರಗಳ (Metro Cities) ರಿಟೇಲ್ ಮೂಲಸೌಕರ್ಯಕ್ಕೆ ಹೆಚ್ಚಿ ಪ್ರಮಾಣದ ಹೂಡಿಕೆಯನ್ನುಪಡೆದುಕೊಂಡಿವೆ. ಅಂದರೆ, ಐದು ಪಟ್ಟು ಹೆಚ್ಚಳ ಹೂಡಿಕೆಯನ್ನನು ತಮ್ಮ ಪಾಲು ಮಾಡಿಕೊಂಡಿವೆ ಅವರು ತಿಳಿಸಿದ್ದಾರೆ.

ಡಿಜಿಟಲ್ ಶಿಕ್ಷಣ ಒದಗಿಸಲು ಒಂದಾದ ಇನ್ಫೋಸಿಸ್- ಹಾರ್ವರ್ಡ್!

Latest Videos

undefined

PwCಯಲ್ಲಿ, ನಮ್ಮ ಪ್ರಯತ್ನವು ಭಾರತದ USD 5 ಟ್ರಿಲಿಯನ್ ಆಕಾಂಕ್ಷೆಯೊಂದಿಗೆ ಜೋಡಿಸಲ್ಪಟ್ಟಿದೆ" ಎಂದು ಅವರು ಹೇಳಿದ್ದಾರೆ. ದೇಶಾದ್ಯಂತ ಉದ್ಯೋಗಾವಕಾಶಗಳನ್ನು ಒದಗಿಸುವುದು ಈ ಗುರಿಯನ್ನು ಸಾಧಿಸಲು ಒಂದು ಪ್ರಮುಖ ಹೆಜ್ಜೆಯಾಗಿದೆ ಮತ್ತು "ನಾವು ಇದನ್ನು ನಮ್ಮ ಬೆಳವಣಿಗೆಯ ಕಾರ್ಯತಂತ್ರದ ಅವಿಭಾಜ್ಯ ಅಂಗವಾಗಿ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಭುವನೇಶ್ವರವನ್ನು ಹೊರತುಪಡಿಸಿ, ಸಂಸ್ಥೆಯು ಇತ್ತೀಚೆಗೆ ಜೈಪುರ (Jaipur) ದಲ್ಲಿ ಕಾರ್ಯಾಚರಣೆಯನ್ನು ವಿಸ್ತರಿಸಿದೆ. ನೋಯ್ಡಾ (Noida) ಮತ್ತು ಥಾಣೆ (Thane) ಯಲ್ಲಿ ಶಾಖಾ ಕಚೇರಿಗಳನ್ನು ಸ್ಥಾಪಿಸಲಿದೆ ಎಂದು ಅವರು ಹೇಳಿದರು.

ಪ್ರೈಸ್‌ವಾಟರ್‌ಹೌಸ್‌ಕೂಪರ್ಸ್ ಸಂಸ್ಥೆಗಳ ಬಹುರಾಷ್ಟ್ರೀಯ ವೃತ್ತಿಪರ ಸೇವಾ ಜಾಲವಾಗಿದ್ದು, PwC ಬ್ರಾಂಡ್‌ನ ಅಡಿಯಲ್ಲಿ ಪಾಲುದಾರಿಕೆಯಾಗಿ ಕಾರ್ಯನಿರ್ವಹಿಸುತ್ತದೆ. PwC ವಿಶ್ವದಲ್ಲಿ ಎರಡನೇ ಅತಿದೊಡ್ಡ ವೃತ್ತಿಪರ ಸೇವೆಗಳ ಜಾಲವಾಗಿದೆ.  ಮತ್ತು ಡೆಲಾಯ್ಟ್, EY ಮತ್ತು KPMG ಜೊತೆಗೆ ದೊಡ್ಡ ನಾಲ್ಕು ಲೆಕ್ಕಪರಿಶೋಧಕ ಸಂಸ್ಥೆಗಳಲ್ಲಿ ಒಂದಾಗಿದೆ.

ಸೆಕೆಂಡ್ ಪಿಯು ಮುಗಿದ್ಮೇಲೆ ಯಾವ ಕೋರ್ಸ್ ಮಾಡಬೇಕು?

PwC ಸಂಸ್ಥೆಗಳು 157 ದೇಶಗಳಲ್ಲಿ, 742 ಸ್ಥಳಗಳಲ್ಲಿ 284,000 ಜನರೊಂದಿಗೆ ಕಾರ್ಯನಿರ್ವಹಿಸುತ್ತವೆ. 2019 ರ ಹೊತ್ತಿಗೆ, 26% ಉದ್ಯೋಗಿಗಳು ಅಮೆರಿಕದಲ್ಲಿ, 26% ಏಷ್ಯಾದಲ್ಲಿ, 32% ಪಶ್ಚಿಮ ಯುರೋಪ್‌ನಲ್ಲಿ ಮತ್ತು 5% ಮಧ್ಯಪ್ರಾಚ್ಯ ಮತ್ತು ಆಫ್ರಿಕಾದಲ್ಲಿ ನೆಲೆಸಿದ್ದಾರೆ.  ಕಂಪನಿಯ ಜಾಗತಿಕ ಆದಾಯವು FY 2019 ರಲ್ಲಿ 42.4 ಬಿಲಿಯನ್ ಡಾಲರ್ ಆಗಿತ್ತು, ಅದರಲ್ಲಿ 17.4 ಶತಕೋಟಿ ಡಾಲರ್ ಅದರ 10.7 ಶತಕೋಟಿ ಡಾಲರ್ ತೆರಿಗೆ ಮತ್ತು ಕಾನೂನು ಅಭ್ಯಾಸದಿಂದ ಮತ್ತು 14.4 ಶತಕೋಟಿ ಡಾಲರ್ ಅದರ ಅಡ್ವೈಸರಿ ಪ್ರಾಕ್ಟಿಸ್ (Advisory practice) ದಿಂದ ಉತ್ಪತ್ತಿಯಾಗಿದೆ.

click me!