ಸ್ವಾತಂತ್ರ ಪೂರ್ವ 1919ರಲ್ಲಿ ಆರಂಭವಾದ ಕೊಪ್ಪ ಪಟ್ಟಣದ ಮೊದಲ ಸರ್ಕಾರಿ ಶಾಲೆ ಶುಕ್ರವಾರ ಶತಮಾನೋತ್ಸವ ಆಚರಿಸಿಕೊಳ್ಳುತ್ತಿದೆ. ಶಾಲೆಯ ಶಿಕ್ಷಕ ವೃಂದ, ಶಾಲಾಭಿವೃದ್ಧಿ ಸಮಿತಿ, ಹಳೆ ವಿಧ್ಯಾರ್ಥಿಗಳು, ಶಾಲೆಯ ಪೋಷಕರು ಅಭೂತಪೂರ್ವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಈಗಾಗಲೇ ತೀರ್ಮಾನಿಸಿದ್ದು ಎಲ್ಲಾ ಸಿದ್ಧತೆಗಳು ಮುಗಿದಿದೆ. ಬೆಳಿಗ್ಗೆ 10 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನೆರವೇರಲಿದೆ.
ಕೊಪ್ಪ (ಜ.6) : ಸ್ವಾತಂತ್ರ ಪೂರ್ವ 1919ರಲ್ಲಿ ಆರಂಭವಾದ ಕೊಪ್ಪ ಪಟ್ಟಣದ ಮೊದಲ ಸರ್ಕಾರಿ ಶಾಲೆ ಶುಕ್ರವಾರ ಶತಮಾನೋತ್ಸವ ಆಚರಿಸಿಕೊಳ್ಳುತ್ತಿದೆ. ಶಾಲೆಯ ಶಿಕ್ಷಕ ವೃಂದ, ಶಾಲಾಭಿವೃದ್ಧಿ ಸಮಿತಿ, ಹಳೆ ವಿಧ್ಯಾರ್ಥಿಗಳು, ಶಾಲೆಯ ಪೋಷಕರು ಅಭೂತಪೂರ್ವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಈಗಾಗಲೇ ತೀರ್ಮಾನಿಸಿದ್ದು ಎಲ್ಲಾ ಸಿದ್ಧತೆಗಳು ಮುಗಿದಿದೆ. ಬೆಳಿಗ್ಗೆ 10 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನೆರವೇರಲಿದೆ.
ಶತಮಾನದ ಹಿಂದೆ ಬಹಳಷ್ಟುಹಿಂದುಳಿದ, ಬಡತನ ಅನರಕ್ಷತೆ, ಆಜ್ಞಾನ, ಮೂಡನಂಬಿಕೆಗಳಿಂದ ಆವರಿಸಲ್ಪಟ್ಟಕೃಷಿ ಪ್ರಧಾನ ಹಳ್ಳಿಗಳು. ಇಂತಹ ಕುಗ್ರಾಮದ ಜನರಿಗೆ ಪ್ರಾಥಮಿಕ ಮೂಲ ಶಿಕ್ಷಣ ನೀಡುವ ಉದ್ದೇಶದಿಂದ ಪ್ರಾರಂಭವಾದ ಈ ಪ್ರಾಥಮಿಕ ಶಾಲೆ ಅಂದಿನಿಂದ ಇಂದಿನವರೆಗೆ ನಾಲ್ಕು ತಲೆಮಾರಿನ ಹತ್ತು ಹಲವಾರು ಸಾವಿರ ಎಳೆಯ ಮನಸ್ಸುಗಳಿಗೆ ವಿದ್ಯಾರ್ಜನೆ ನೀಡಿ, ನಮ್ಮ ಸಮಾಜದ ಮತ್ತು ರಾಷ್ಟ್ರದ ಸತ್ೊ್ರಜೆಗಳನ್ನಾಗಿ ರೂಪಿಸಿದೆ. ಇಲ್ಲಿ ಕಲಿತ ಬಹುತೇಕ ವಿದ್ಯಾರ್ಥಿಗಳು ಉತ್ತಮ ನಾಗರಿಕರಾಗಿ ತಾವು ಆಯ್ಕೆ ಮಾಡಿದ ಕ್ಷೇತ್ರಗಳಲ್ಲಿ, ಪ್ರಪಂಚದ ವಿವಿಧ ಪ್ರದೇಶಗಳಲ್ಲಿ ತಮ್ಮ ಜೀವನ ಪಾವನಮಾಡಿ ಸಂತೃಪ್ತಿಯ ಜೀವನ ನಡೆಸುತ್ತಿದ್ದಾರೆ. ಈ ಪರಿಸರದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಕೌಟುಂಬಿಕ ಪ್ರಗತಿ ಮತ್ತು ಏಳಿಗೆಯಲ್ಲಿ ಈ ಶಾಲೆಯ ಪಾತ್ರ ಆಂದಾಜು ಮಾಡಲು ಆಸಾಧ್ಯ. ಗತ ನೂರು ವರ್ಷಗಳಲ್ಲಿ ಎಷ್ಟೋ ಶಿಕ್ಷಕರು, ಹಲವಾರು ಸಂಚಾಲಕರು ಸಲ್ಲಿಸಿದ ಸತತ ಸೇವೆಯ ಪರಿಶ್ರಮದ ಫಲವಾಗಿ ಈ ಪರಿಸರದ ಸಹಸ್ರ ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಉತ್ತಮ ಶಿಕ್ಷಣ ಲಭಿಸಿದೆ
undefined
Chikkamagaluru: ಭದ್ರಾ ಅಭಯಾರಣ್ಯದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಳ, ಡಿ.1ರಿಂದ ಆರಂಭವಾಗಿದೆ ಹುಲಿ ಗಣತಿ
ಹಿಂದೆ ಶಾಲೆಯಲ್ಲಿ ತುಂಬಾ ಮಕ್ಕಳು ಕಲಿಯುತ್ತಿದ್ದರು. ಹಲವಾರು ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದರು. ಪೋಷÜಕರು ಖಾಸಗಿ ಶಾಲೆಗಳ ಬಗ್ಗೆ ವ್ಯಾಮೋಹ ಹೊಂದಿದ ನಂತರ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ಈಗ 311 ವಿದ್ಯಾರ್ಥಿಗಳು ಕಲಿಯುತ್ತಿದ್ದು, ಮೆರಿಟ್ ಆಧಾರದ ಮೇಲೆ ಆಯ್ಕೆಯಾದ 5 ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಪೋಷಕರ ಸಹಾಯ ಪಡೆದು ನಾಲ್ಕು ಜನ ಅತಿಥಿ ಶಿಕ್ಷರನ್ನು ನೇಮಿಸಲಾಗಿದೆ.
ಈ ಶಾಲೆಯಲ್ಲಿ ಕಲಿತವರು ಸಾಕಷ್ಟುಮಂದಿ ಉನ್ನತ ಉದ್ಯೋಗ ಮತ್ತು ಉದ್ಯಮದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಶಾಲೆಯಲ್ಲಿ ವಿದ್ಯೆ ಕಲಿತ ಮಕ್ಕಳು ರಾಜ್ಯದ ಮೂಲೆ ಮೂಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದಲ್ಲದೆ ರಕ್ಷಣಾ ಇಲಾಖೆ, ಅರಣ್ಯ ಇಲಾಖೆ, ಅಂಚೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇಸ್ರೋದ ವಿಜ್ಞಾನಿ ಸುರೇಶ್ ಅಂದಗಾರು ಇಲ್ಲಿನ ಹಳೆಯ ವಿಧ್ಯಾರ್ಥಿಯಾಗಿದ್ದಾರೆ.\
Chikkamagaluru News: ಶಾಶ್ವತ ಮುಚ್ಚಿದ ಶ್ರೀ ಅಭಿನವ ರಮಾನಂದ ಪ್ರೌಢಶಾಲೆ!
ಶುಕ್ರವಾರ ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು ಶಾಸಕ ಟಿ.ಡಿ.ರಾಜೇಗೌಡ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.