Tamil Nadu CM: ತಮಿಳು ಸರ್ಕಾರಿ ಶಾಲೆಗಳಲ್ಲಿ ಇನ್ಮುಂದೆ ಬೆಳಗಿನ ಉಪಾಹಾರ

By Kannadaprabha News  |  First Published Sep 16, 2022, 5:58 AM IST
  • ತಮಿಳು ಸರ್ಕಾರಿ ಶಾಲೆಗಳಲ್ಲಿ ಇನ್ನು ಬೆಳಗಿನ ಉಪಾಹಾರ
  • ಮಕ್ಕಳ ಪೌಷ್ಟಿಕತೆ ಹೆಚ್ಚಿಸಲು ಈ ಕ್ರಮ
  • ಮಕ್ಕಳು ತಿಂಡಿ ತಿನ್ನದೇ ಶಾಲೆಗೆ ಬರೋದು ನೋಡಿದ್ದೆ ಹೀಗಾಗಿ ಈ ಕ್ರಮ: ಸಿಎಂ ಸ್ಟಾಲಿನ್‌

ಮದುರೈ (ಸೆ.16) : ಮಧ್ಯಾಹ್ನದ ಬಿಸಿಯೂಟ ಆಯ್ತು, ತಮಿಳುನಾಡಿನಲ್ಲಿ ಬೆಳಗಿನ ಉಪಾಹಾರವನ್ನೂ ಶಾಲೆಗಳಲ್ಲಿ ನೀಡಲು ಆರಂಭಿಸಲಾಗಿದೆ. ಸರ್ಕಾರಿ ಪ್ರಾಥಮಿಕ ಶಾಲೆಗಳ 1ರಿಂದ 5ನೇ ತರಗತಿ ಮಕ್ಕಳ ಉಪಾಹಾರ ಯೋಜನೆಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಗುರುವಾರ ಮದುರೈನಲ್ಲಿ ಚಾಲನೆ ನೀಡಿದ್ದಾರೆ. ಈ ವೇಳೆ ಮಾತನಾಡಿದ ಸ್ಟಾಲಿನ್‌, ಉಪಾಹಾರ ಯೋಜನೆಯಿಂದ ಬಡ ಮಕ್ಕಳಲ್ಲಿ ವಿಟಮಿನ್‌ ಕೊರತೆಯನ್ನು ಕಡಿಮೆಮಾಡಿ, ಉತ್ತಮ ಆರೋಗ್ಯ ಒದುಗಿಸುವಲ್ಲಿ ಸಹಾಯವಾಗುತ್ತದೆ. ಈ ಯೋಜನೆಯಿಂದ ಮಕ್ಕಳು ಶಾಲೆಗೆ ಬರಲು ಪ್ರೇರೇಪಿಸುತ್ತದೆ ಎಂದು ಹೇಳಿದರು.

ಚೆನ್ನೈನಲ್ಲಿ ಸಿದ್ದರಾಮಯ್ಯಗೆ ಅಂಬೇಡ್ಕರ್‌ ಪ್ರಶಸ್ತಿ ಪ್ರಧಾನ, ಸ್ಟಾಲಿನ್‌ ಭೇಟಿ

Tap to resize

Latest Videos

ಇದು ಸರ್ಕಾರಿ ಶಾಲೆಗಳನ್ನು ಗುಣಮಟ್ಟದ ಶಾಲೆಗಳನ್ನಾಗಿ ಪರಿವರ್ತಿಸುವಲ್ಲಿ ಇನ್ನೊಂದು ಹೆಜ್ಜೆಯಾಗಿದೆ. ಕೆಲದಿನಗಳ ಹಿಂದೆ ಶಾಲೆಯ ತಪಾಸಣೆ ನಡೆಸುವ ವೇಳೆ ಸುಮಾರು ಮಕ್ಕಳು ಬೆಳಗ್ಗೆ ಉಪಾಹಾರ ಮಾಡದೆ ಶಾಲೆಗೆ ಬರುವುದನ್ನು ಗಮನಿಸಿದ್ದೆ. ಈ ಹಿನ್ನಲೆಯಲ್ಲಿ ಯೋಜನೆಗೆ ಚಾಲನೆ ನೀಡಿದ್ದಾಗಿ ಹೇಳಿದರು.

ಈ ಯೋಜನೆಯನ್ನು 33.56 ಕೋಟಿ ರು. ಗಳಲ್ಲಿ ಪ್ರಾರಂಭಿಸಲಾಗಿದ್ದು. 1,545 ಶಾಲೆಗಳಲ್ಲಿ ಕಾರ್ಯಗತಗೊಳಿಸಲಾಗುತ್ತಿದೆ. 1.14 ಲಕ್ಷ ವಿದ್ಯಾರ್ಥಿಗಳಿಗೆ ಉಪಹಾರ ಯೋಜನೆಯ ಉಪಯೋಗ ಪಡೆದುಕೊಳ್ಳಲಿದ್ದಾರೆ. 1955ರಲ್ಲಿ ತಮಿಳುನಾಡಿನ ಆಗಿನ ಮುಖ್ಯಮಂತ್ರಿ ಕೆ.ಕಾಮರಾಜ್‌ ಅವರು ಮಧ್ಯಾಹ್ನದ ಬಿಸಿಯೂಟಕ್ಕೆ ಚಾಲನೆ ನೀಡಿದ್ದರು.ಒಕ್ಕೂಟ ವ್ಯವಸ್ಥೆ ಮೇಲೆ ಸ್ಟಾಲಿನ್‌ ದಬ್ಬಾಳಿಕೆ: ಸಿಎಂ ಬೊಮ್ಮಾಯಿ ಆಕ್ರೋಶ

click me!