ಕೃಷಿ ಇಂಜಿನಿಯರಿಂಗ್ ಕೃಷಿ ವಲಯವನ್ನು ಸುಧಾರಿಸಲು ತಂತ್ರಜ್ಞಾನವನ್ನು ಬಳಸುವ ಒಂದು ಪ್ರಮುಖ ಕ್ಷೇತ್ರವಾಗಿದೆ. ಈ ಲೇಖನವು ಕೃಷಿ ಇಂಜಿನಿಯರಿಂಗ್‌ನಲ್ಲಿ ವೃತ್ತಿಜೀವನ, ಕೋರ್ಸ್ ವಿವರಗಳು, ಉದ್ಯೋಗಾವಕಾಶಗಳು ಮತ್ತು ಸಂಬಳದ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ.
ರೈತ ದೇಶದ ಬೆನ್ನೆಲುಬು ಎಂಬ ಮಾತಿದೆ. ರೈತ ಮತ್ತು ಕೃಷಿ ಒಂದನ್ನೊಂದು ಬಿಟ್ಟು ಇಲ್ಲ. ಇದನ್ನು ಬೇರ್ಪಡಿಸಲು ಸಾಧ್ಯವೂ ಇಲ್ಲ. ಮಾನವ ಜೀವನವನ್ನು ಪೋಷಿಸಲು ಕೃಷಿ ಅತ್ಯಂತ ಮುಖ್ಯ. ಹಳೆಯ ಕಾಲದ ಕೃಷಿ ಪದ್ದತಿಗಳು ಮರೆಯಾಗುತ್ತಿವೆ. ಈಗ ಆಧುನಿಕ ಕೃಷಿ ಪದ್ದತಿ ನಡೆಸಲಾಗುತ್ತಿದೆ. ಕೃಷಿಯ ಬಗ್ಗೆ ಆಸಕ್ತಿ ಇರುವವರಿಗೆ ಸಂಪೂರ್ಣ ಕೃಷಿ ಪದ್ದತಿಗಳನ್ನು ತಿಳಿದುಕೊಳ್ಳಬೇಕು ಎಂಬುವವರಿಗೆ ಕೃಷಿ ಎಂಜಿನಿಯರಿಂಗ್ ಪ್ರಮುಖವಾದ ಕೋರ್ಸ್. ಇಲ್ಲಿ ತಂತ್ರಜ್ಞರಾಗಿ, ಕೃಷಿ ಮತ್ತು ಕೃಷಿ ಪದ್ಧತಿಗಳನ್ನು ಸುಧಾರಿಸಲು, ಬೆಳೆ ಇಳುವರಿಯನ್ನು ಹೆಚ್ಚಿಸಲು, ತ್ಯಾಜ್ಯವನ್ನು ಕಡಿಮೆ ಮಾಡಲು ಮತ್ತು ಪರಿಸರ ಪರಿಣಾಮವನ್ನು ಮಿತಿಗೊಳಿಸಲು ನವೀನ ಪರಿಹಾರಗಳನ್ನು ಕಂಡುಕೊಳ್ಳುವ ಮೂಲಕ ಕೃಷಿ ಸಮುದಾಯಕ್ಕೆ ಕೊಡುಗೆ ನೀಡಲು ಅಗ್ರಿಕಲ್ಚರ್ ಇಂಜಿನಿಯರಿಂಗ್ ಬಹಳ ಮುಖ್ಯ. ಈ ಕೋರ್ಸ್ ಮಾಡಿದವರಿಗೆ ವೇತನ ಕೂಡ ಭರ್ಜರಿಯಾಗಿದೆ. ಕೃಷಿ ಇಂಜಿನಿಯರಿಂಗ್‌ನಲ್ಲಿ ವೃತ್ತಿಜೀವನವನ್ನು ಹೇಗೆ ಮಾಡುವುದು? ಕೋರ್ಸ್ ವಿವರಗಳು, ಪ್ರವೇಶ ಪ್ರಕ್ರಿಯೆ, ಕೃಷಿ ಇಂಜಿನಿಯರಿಂಗ್ ಮಾಡಿದ ನಂತರ ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಉದ್ಯೋಗ ಆಯ್ಕೆಗಳು ಯಾವುವು? ಉದ್ಯೋಗ ವಿವರ ಮತ್ತು ಸಂಬಳ ಸೇರಿದಂತೆ ಸಂಪೂರ್ಣ ವಿವರಗಳನ್ನು ಈ ಲೇಖನದಲ್ಲಿ ನೀಡಲಾಗಿದೆ.
ಮಹಾರಾಷ್ಟ್ರದ 5 ಜಿಲ್ಲೆಯಲ್ಲಿ 21,219 ರೈತರ ಆತ್ಮಹತ್ಯೆ
ಭಾರತದಲ್ಲಿ ಕೃಷಿ ಇಂದಿಗೂ ನಮ್ಮ ಆರ್ಥಿಕತೆಯ ಬೆನ್ನೆಲುಬು ಎಂದು ಪರಿಗಣಿಸಲಾಗಿದೆ. ಆದರೆ ಈಗ ಇದು ಕೇವಲ ಸಾಂಪ್ರದಾಯಿಕ ಕೃಷಿಗೆ ಸೀಮಿತವಾಗಿಲ್ಲ. ತಂತ್ರಜ್ಞಾನ ಹೆಚ್ಚಾದಂತೆ ಕೃಷಿಯೂ ಆಧುನಿಕವಾಗಿದೆ. ಇಂದಿನ ದಿನಗಳಲ್ಲಿ ಕೃಷಿ ಇಂಜಿನಿಯರಿಂಗ್ ಯುವಕರಿಗೆ ವೃತ್ತಿಜೀವನದ ಹಲವು ಅವಕಾಶಗಳನ್ನು ನೀಡುತ್ತಿರುವ ಕ್ಷೇತ್ರವಾಗಿದೆ. ಕೃಷಿ ಇಂಜಿನಿಯರಿಂಗ್ ಎಂದರೇನು, ಪ್ರವೇಶ ಮತ್ತು ಉದ್ಯೋಗ ಆಯ್ಕೆಗಳು?
ಕೃಷಿ ಇಂಜಿನಿಯರಿಂಗ್ ನಲ್ಲಿ ಏನೇನಿದೆ?
ಇಲ್ಲಿ ಕೃಷಿಗೆ ಸಂಬಂಧಿಸಿದ ಯಂತ್ರಗಳನ್ನು ವಿನ್ಯಾಸಗೊಳಿಸುವುದು, ಅವುಗಳನ್ನು ಉತ್ತಮಗೊಳಿಸುವುದು ಮತ್ತು ಹೊಸ ತಂತ್ರಜ್ಞಾನದಿಂದ ಕೃಷಿಯನ್ನು ಸುಲಭಗೊಳಿಸುವುದು ಹೇಗೆ ಎಂದು ಕಲಿಸಲಾಗುತ್ತದೆ. ಬೆಳೆ ಇಳುವರಿ ಹೆಚ್ಚಿಸುವುದು, ಶ್ರಮ ಕಡಿಮೆ ಮತ್ತು ಹೆಚ್ಚು ಲಾಭ ಗಳಿಸುವುದು ಹೇಗೆ ಎಂಬುದನ್ನು ಹೇಳಿ ಕೊಡಲಾಗುತ್ತದೆ.
ಏ.1ರಿಂದ ಹೊಸ ವಿತ್ತೀಯ ವರ್ಷ ಆರಂಭ : ಇಂದಿನಿಂದ ಏನು ಬದಲು ? ಹಲವು ವಸ್ತು ದುಬಾರಿ
ಯಾರು ಅಗ್ರಿಕಲ್ಚರ್ ಇಂಜಿನಿಯರಿಂಗ್ ಮಾಡಬಹುದು?
12 ನೇ ತರಗತಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತವನ್ನು ಹೊಂದಿದ್ದು, 50% ಅಂಕಗಳನ್ನು ಪಡೆದಿದ್ದರೆ, ನೀವು ಬಿ.ಟೆಕ್ ಗೆ ಪ್ರವೇಶ ಪಡೆಯಬಹುದು. ನಂತರ ಎಂ.ಟೆಕ್ ಕೂಡ ಮಾಡಬಹುದು. 10ನೇ ಅಥವಾ 12ನೇ ತರಗತಿ ನಂತರ 3 ವರ್ಷಗಳ ಡಿಪ್ಲೊಮಾ ಕೋರ್ಸ್ ಮಾಡಿದವರು ಕೂಡ ಮಾಡಬಹುದು.
ರಾಜ್ಯ ಮಟ್ಟದ ಪರೀಕ್ಷೆಗಳಲ್ಲಿ ಪಾಸ್ ಆಗೋದು ಮುಖ್ಯ
ಭಾರತದಲ್ಲಿ ಕೃಷಿ ಎಂಜಿನಿಯರ್ ಆಗಲು, ನೀವುಸಾಮಾನ್ಯವಾಗಿ ಕೃಷಿ ಎಂಜಿನಿಯರಿಂಗ್ ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಪದವಿ ಪಡೆದಿರಬೇಕು, ನಂತರ ಎಂ.ಟೆಕ್ ಅಥವಾ ಪಿಎಚ್‌ಡಿ. ನಂತಹ ಉನ್ನತ ಪದವಿಗಳನ್ನು ಪಡೆಯುವ ಸಾಧ್ಯತೆಯಿದೆ ಮತ್ತು ಜೆಇಇ ಮುಖ್ಯ, ಐಸಿಎಆರ್ ಎಐಇಇಎ ಅಥವಾ ರಾಜ್ಯ ಮಟ್ಟದ ಪರೀಕ್ಷೆಗಳಂತಹ ಪ್ರವೇಶ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರಬೇಕು.
ಪರೀಕ್ಷೆಗಳೆಂದರೆ
ICAR (B.Tech / M.Tech)
IIT-JEE (B.Tech)
IIT-JAM (PG Courses)
KCET ( ಕರ್ನಾಟಕ ರಾಜ್ಯ ಪ್ರವೇಶ ಪರೀಕ್ಷೆ)
GATE (M.Tech) ಮತ್ತು ಇತರವುಗಳು.
ಶುಲ್ಕವು ಕಾಲೇಜನ್ನು ಅವಲಂಬಿಸಿರುತ್ತದೆ
B.Tech: 1 ಲಕ್ಷದಿಂದ 12.40 ಲಕ್ಷ (ಖಾಸಗಿ ಕಾಲೇಜು ಶುಲ್ಕ) ಮತ್ತು 36,000-10.58 ಲಕ್ಷ (ಸರ್ಕಾರಿ ಕಾಲೇಜು ಶುಲ್ಕ)
M.Tech: 60,000-12.50 ಲಕ್ಷ (ಖಾಸಗಿ ಕಾಲೇಜು ಶುಲ್ಕ) 24,000-4.44 ಲಕ್ಷ (ಸರ್ಕಾರಿ ಕಾಲೇಜು ಶುಲ್ಕ)
ಡಿಪ್ಲೊಮಾ: 4,000- 1.55 ಲಕ್ಷದವರೆಗೆ ಕಾಲೇಜು ಶುಲ್ಕ ಇರುತ್ತದೆ.
ಯಾವ ಕ್ಷೇತ್ರದಲ್ಲಿ ಉದ್ಯೋಗವಿದೆ
ಸರ್ಕಾರಿ ಮತ್ತು ಖಾಸಗಿ ಎರಡೂ ವಲಯಗಳಲ್ಲಿ ಕೆಲಸದ ಅವಕಾಶಗಳಿವೆ. ಆಹಾರ ಇಲಾಖೆಗಳು, ಸಂಶೋಧನಾ ಸಂಸ್ಥೆಗಳು, ಕೃಷಿ ತಂತ್ರಜ್ಞಾನ ಕಂಪನಿಗಳು, ಬ್ಯಾಂಕಿಂಗ್ ವಲಯ, ಕಾಲೇಜು-ವಿಶ್ವವಿದ್ಯಾಲಯಗಳಲ್ಲಿ ಬೋಧಿಸುವ ಅವಕಾಶ ಸಿಗಬಹುದು.
CAD ತಜ್ಞ: ಕೃಷಿ ಯಂತ್ರಗಳ ವಿನ್ಯಾಸವನ್ನು ರಚಿಸುತ್ತಾರೆ.
ಕ್ಷೇತ್ರ ಅಧಿಕಾರಿ: ರೈತರಿಗೆ ಸಹಾಯ ಮಾಡುತ್ತಾರೆ.
ಕೃಷಿ ತಜ್ಞ: ಮಣ್ಣು-ಬೆಳೆ ಗುಣಮಟ್ಟವನ್ನು ಪರಿಶೀಲಿಸುತ್ತಾರೆ
ವೇತನ ವಿವರ:
ಪ್ರಾರಂಭದಲ್ಲಿ ವಾರ್ಷಿಕ ಸಂಬಳ ₹4 ಲಕ್ಷದಿಂದ ₹5 ಲಕ್ಷದವರೆಗೆ ಇರಬಹುದು. 4-6 ವರ್ಷಗಳ ಅನುಭವದ ನಂತರ, ಇದು ವರ್ಷಕ್ಕೆ ₹6 ರಿಂದ ₹10 ಲಕ್ಷದವರೆಗೆ ಹೆಚ್ಚಾಗಬಹುದು.