2025-26ರ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ಮೇ 29ಕ್ಕೆ ಶಾಲೆ ರೀ ಓಪನ್, ದಸರಾ ರಜೆ, ಪರೀಕ್ಷೆ ದಿನಾಂಕಗಳು ರಿಲೀಸ್!

ಶಾಲಾ ಶಿಕ್ಷಣ ಇಲಾಖೆ 2025-26ನೇ ಸಾಲಿನ ಶೈಕ್ಷಣಿಕ ವರ್ಷದ ವೇಳಾಪಟ್ಟಿ ಪ್ರಕಟಿಸಿದೆ. ಮೇ 29ಕ್ಕೆ ಶಾಲೆಗಳು ಆರಂಭವಾಗಿ ಏಪ್ರಿಲ್ 10ಕ್ಕೆ ಮುಕ್ತಾಯವಾಗಲಿದ್ದು, ದಸರಾ ಮತ್ತು ಬೇಸಿಗೆ ರಜೆಗಳ ವಿವರಗಳನ್ನು ನೀಡಲಾಗಿದೆ. ಪದವಿ ಕಾಲೇಜುಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಕಕ್ಕೆ ಟೆಂಡರ್ ನೀಡಲಾಗಿದೆ.

karnataka education department releases  2025-26 academic calendar to schools gow

ಬೆಂಗಳೂರು: ರಾಜ್ಯ ಪಠ್ಯಕ್ರಮದ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ 2025-26ನೇ ಶೈಕ್ಷಣಿಕ ವರ್ಷದ ಅವಧಿ ಮತ್ತು ರಜಾದಿನಗಳ ವೇಳಾಪಟ್ಟಿಯನ್ನು ಶಾಲಾ ಶಿಕ್ಷಣ ಇಲಾಖೆ ಪ್ರಕಟಿಸಿದೆ. ಪ್ರತಿ ವರ್ಷದಂತೆ ಮೇ 29ರಿಂದ ಶಾಲೆಗಳು ಆರಂಭವಾಗಲಿದ್ದು, 2026ರ ಏ.10ರವರೆಗೆ ಒಟ್ಟು 242 ದಿನ ಶಾಲೆಗಳು ಕಾರ್ಯನಿರ್ವಹಿಸಲಿವೆ. ಶಾಲೆಗಳಲ್ಲಿ ಮೇ 29 ರಿಂದ ಸೆ.19ರವರೆಗೆ ಮೊದಲ ಅವಧಿಯ ಹಾಗೂ ಅ.8ರಿಂದ 2026ರ ಏ.10 ರವರೆಗೆ ಎರಡನೇ ಅವಧಿ ಶೈಕ್ಷಣಿಕ ಚಟುವಟಿಕೆಗಳು ನಡೆಯಲಿವೆ. ಸೆ.20ರಿಂದ ಅ.7ರವರೆಗೆ ದಸರಾ ರಜೆ ಮತ್ತು 2026ರ ಏ.11ರಿಂದ ಮೇ 28ರವರೆಗೆ ಬೇಸಿಗೆ ರಜೆ ಇರಲಿದೆ. ವರ್ಷದ 365 ದಿನಗಳ ಪೈಕಿ 123 ದಿನ ರಜೆ ದಿನಗಳಾಗಿರುತ್ತವೆ.

ಉಳಿದ 242 ದಿನಗಳು ಶಾಲೆಗಳು ನಡೆಯಲಿವೆ. ಈ ಪೈಕಿ ಪರೀಕ್ಷೆ ಮತ್ತು ಮೌಲ್ಯಾಂಕನ ಕಾರ್ಯಕ್ಕಾಗಿ 26 ದಿನಗಳು, 22 ದಿನಗಳನ್ನು ಪಠ್ಯೇತರ ಚಟುವಟಿಕೆ, ಮೌಲ್ಯಮಾಪನ ಮತ್ತು ಫಲಿತಾಂಶ ವಿಶ್ಲೇಷಣೆಗೆ 10 ದಿನ, ಉಳಿದ ದಿನಗಳನ್ನು ಪಠ್ಯ ಬೋಧನೆಗೆ ನಿಗದಿ ಮಾಡಲಾಗಿದೆ.

Latest Videos

ಶಾಲಾ ಮಕ್ಕಳಿಗೆ ತಮಿಳುನಾಡಲ್ಲಿ AI, ಕೋಡಿಂಗ್‌ ಪಠ್ಯಕ್ರಮ; ಕರ್ನಾಟಕದ ಮಕ್ಕಳಿಗೆ ಇದು ಸಿಗುತ್ತಾ?

ಈ ವರ್ಷ ಮೇ 29ರಂದು ಶಾಲಾ ಆರಂಭೋತ್ಸವ, ಪ್ರಾಥಮಿಕ ಶಾಲೆಗಳಲ್ಲಿ ಏ.8 ಮತ್ತು ಪ್ರೌಢ ಶಾಲೆಗಳಲ್ಲಿ ಏ.9ರಂದು ಸಮುದಾಯ ದತ್ತ ಶಾಲೆ/ಪಾಲಕರ ಸಭೆ ಕರೆದು ಫಲಿತಾಂಶ ಪ್ರಕಟಿಸಬೇಕು. ಅದೇ ರೀತಿ ಸರ್ಕಾರ ನಿಗದಿಪಡಿಸಿರುವಂತೆ ಎಲ್ಲ ರಾಷ್ಟ್ರೀಯ ಹಬ್ಬಗಳನ್ನು ಶಾಲೆಗಳಲ್ಲಿ ಆಚರಿಸಬೇಕೆಂದು ಸೂಚಿಸಲಾಗಿದೆ.

ಪದವಿ ಕಾಲೇಜುಗಳಿಗೆ 1000 ಸಿಬ್ಬಂದಿ ಒದಗಿಸಲು ಖಾಸಗಿ ಕಂಪನಿಗೆ ಟೆಂಡರ್‌
ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಕಚೇರಿ ಹಾಗೂ ಎಲ್ಲಾ ಸರ್ಕಾರಿ ಪದವಿ ಕಾಲೇಜುಗಳಿಗೆ 700 ಸಹಾಯಕರು ಮತ್ತು 300 ಮಂದಿ ಪ್ರಯೋಗಾಲಯ ಸಹಾಯಕ ಸಿಬ್ಬಂದಿ ಸೇವೆಯನ್ನು ಹೊರಗುತ್ತಿಗೆ ಆಧಾರದಲ್ಲಿ ಒದಗಿಸಲು ದಾವಣಗೆರೆಯ ಜೆಮಿನಿ ಸೆಕ್ಯುರಿಟಿ ಮತ್ತು ಅಲೈಡ್ ಸರ್ವೀಸಸ್ ಸಂಸ್ಥೆಗೆ ಟೆಂಡರ್ ನೀಡಲಾಗಿದೆ.

ಸಿಬಿಎಸ್‌ಇ 10, 12ನೇ ತರಗತಿಗೆ ಹೊಸ ಪಠ್ಯಕ್ರಮ ಬಿಡುಗಡೆ! ಯಾವೆಲ್ಲ ಬದಲಾವಣೆಯಾಗಿದೆ?

ಕಚೇರಿ ಹಾಗೂ ಕಾಲೇಜುಗಳಲ್ಲಿ ಖಾಲಿ ಇರುವ ಗ್ರೂಪ್-ಡಿ ಹುದ್ದೆಗಳನ್ನು ಭರ್ತಿ ಮಾಡುವವರೆಗೆ ಅಥವಾ ಮುಂದಿನ ಆದೇಶದವರೆಗೆ ಈ ಸಂಸ್ಥೆ ಹೊರಗುತ್ತಿಗೆ ಆಧಾರದಲ್ಲಿ ಸಿಬ್ಬಂದಿಯ ಸೇವೆ ಒದಗಿಸಬೇಕು. ಹೊರಗುತ್ತಿಗೆ ಸಿಬ್ಬಂದಿಯ ಇಪಿಎಫ್ ಮತ್ತು ಇಎಸ್‌ಐ ಖಾತೆಗಳಿಗೆ ನಿಯಮಾನುಸಾರ ಪ್ರತಿ ತಿಂಗಳು ವಂತಿಗೆಗಳನ್ನು ಜಮೆ ಮಾಡದೆ ಇದ್ದಲ್ಲಿ ಸಂಬಂಧಪಟ್ಟ ಏಜೆನ್ಸಿ ಮೂಲಕವೇ ಜಮೆ ಮಾಡಲು ಸೂಚಿಸಲಾಗಿದೆ. ಹೊರಗುತ್ತಿಗೆ ನೌಕರರಿಗೆ ಸಾರ್ವತ್ರಿಕ ರಜೆಗಳನ್ನು ಹೊರತುಪಡಿಸಿ ಒಂದು ದಿನ ಮಾತ್ರ ಸಾಂದರ್ಭಿಕ ರಜೆಯನ್ನು ಪಡೆಯಲು ಅರ್ಹರಾಗಿರುತ್ತಾರೆ. ಒಂದು ವೇಳೆ 15 ದಿನಗಳಿಗಿಂತ ಹೆಚ್ಚಿನ ಸಮಯ ರಜೆ ಪಡೆದಲ್ಲಿ ಬದಲಿ ಸಿಬ್ಬಂದಿ ನೇಮಿಸಬಹುದು ಎಂದು ತಿಳಿಸಲಾಗಿದೆ.

ಪ್ರಾಂಶುಪಾಲರೇ ಸಿಬ್ಬಂದಿ ನೇಮಿಸುವಂತಿಲ್ಲ
ಪ್ರಾಂಶುಪಾಲರು ತಮ್ಮ ಹಂತದಲ್ಲಿ ಯಾವುದೇ ರೀತಿಯ ಗುತ್ತಿಗೆ/ಹೊರ ಗುತ್ತಿಗೆ ಆಧಾರದ ಮೇಲೆ ಗ್ರೂಪ್-ಡಿ ಸಿಬ್ಬಂದಿ ಸೇವೆಯನ್ನು ನೇರ ಅಥವಾ ಹೊರ ಸಂಪನ್ಮೂಲ ಏಜೆನ್ಸಿಗಳಿಂದ ಪಡೆಯುವುದನ್ನು ನಿರ್ಬಂಧಿಸಲಾಗಿದೆ. ಒಂದು ವೇಳೆ ಈ ಆದೇಶ ಮೀರಿ ಕಾಲೇಜು ಹಂತದಲ್ಲಿ ನೇಮಿಸಿಕೊಂಡಲ್ಲಿ ತಗಲುವ ಆರ್ಥಿಕ ವೆಚ್ಚವನ್ನು ನೀಡುವುದಿಲ್ಲ ಎಂದು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
 

vuukle one pixel image
click me!