ತಲೆ ಉಪಯೋಗಿಸಿದ 10ನೇ ತರಗತಿ ವಿದ್ಯಾರ್ಥಿ, AI ಬಳಸಿಕೊಂಡು ಎರಡು ತಿಂಗಳಲ್ಲಿ 1.5 ಲಕ್ಷ ರೂ ಗಳಿಕೆ!

10ನೇ ತರಗತಿಯ ವಿದ್ಯಾರ್ಥಿಯೋರ್ವ AI ಟೂಲ್ ಬಳಸಿ ವೆಬ್‌ಸೈಟ್‌ಗಳನ್ನು ನಿರ್ಮಿಸಿ ಮಾರಾಟ ಮಾಡಿ ಕೇವಲ ಎರಡು ತಿಂಗಳಲ್ಲಿ 1.5 ಲಕ್ಷ ರೂ.ಗಳಿಗೂ ಹೆಚ್ಚು ಗಳಿಸಿದ್ದಾನೆ. ಈ ಯುವಕನ ಸಾಧನೆ ರೆಡ್ಡಿಟ್‌ನಲ್ಲಿ ಚರ್ಚೆಗೆ ಗ್ರಾಸವಾಗಿದೆ.


10 ನೇ ತರಗತಿ ವಿದ್ಯಾರ್ಥಿಯೋರ್ವ AI ಟೂಲ್‌ ಬಳಸಿ  ವೆಬ್‌ಸೈಟ್‌ಗಳನ್ನು ನಿರ್ಮಿಸಿ ಮಾರಾಟ ಮಾಡಿ ಕೇವಲ ಎರಡು ತಿಂಗಳಲ್ಲಿ 1.5 ಲಕ್ಷ ರೂ.ಗಳಿಗೂ ಹೆಚ್ಚು ಗಳಿಸಿರುವ ಘಟನೆ ನಡೆದಿದೆ. ಈ ಸುದ್ದಿ ಈಗ ರೆಡ್ಡಿಡ್‌ ನಲ್ಲಿ ವ್ಯಾಪಕ ಚರ್ಚೆಯನ್ನು ಹುಟ್ಟು ಹಾಕಿದೆ. AI ಉಪಯೋಗಿಸುವ ರೆಡ್ಡಿಡ್‌  ಬಳಕೆದಾರನೊಬ್ಬ ಈ ಕಥೆಯನ್ನು ಹಂಚಿಕೊಂಡಿದ್ದಾನೆ. ಮಸ್ಕ್ ಎಂಬ ಹೆಸರಿನ ವಿದ್ಯಾರ್ಥಿ ವೆಬ್‌ಸೈಟ್‌ಗಳನ್ನು ರಚಿಸಲು ಮತ್ತು ಮಾರಾಟ ಮಾಡಲು AI-ಚಾಲಿತ ವೆಬ್‌ಸೈಟ್ ಬಿಲ್ಡರ್ ಅನ್ನು ಬಳಸಿಕೊಳ್ಳುತ್ತಿರುವ ಬಗ್ಗೆ ಬಹಿರಂಗಪಡಿಸಿದ್ದಾನೆ.

ನೇಮಕಾತಿ ಮಾಡಿಕೊಂಡ ಒಂದೇ ವರ್ಷಕ್ಕೆ 600 ಉದ್ಯೋಗಿಗಳು ವಜಾ, ಟಿಶ್ಯೂ ರೀತಿ ಬಳಸಿಕೊಂಡಿತಾ ಝೊಮೆಟೊ!

Latest Videos

ನಿಯಮಿತವಾಗಿ ವಿದ್ಯಾರ್ಥಿ ಕ್ರೆಡಿಟ್‌ ಪಡೆದುಕೊಂಡು ವೆಬ್‌ಸೈಟ್‌ಗಳ ನಿರ್ಮಾಣ ಮಾಡುತ್ತಿದ್ದ ಹೀಗಾಗಿ ಮಸ್ಕ್‌ ಎಂಬ ಹೆಸರಿನ ಐಡಿಯನ್ನು ಪರಿಶೀಲಿಸಿ ನೋಡಿದಾಗ ಆತ 10ನೇ ತರಗತಿ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಕೇವಲ 2 ತಿಂಗಳಲ್ಲಿ ಒಟ್ಟು 8 ವೆಬ್‌ಸೈಟ್‌ ಗಳನ್ನು ನಿರ್ಮಾಣ ಮಾಡಿ ಮಾರಾಟ ಮಾಡಿದ್ದು, ಪ್ರತೀ ವೆಬ್‌ಸೈಟ್‌ ಗೆ 250 ರಿಂದ 300 ಡಾಲರ್‌ ಪಡೆದಿದ್ದಾನೆ. ಈ ಮೂಲಕ ಸುಮಾರು  1.5 ಲಕ್ಷ ರೂ.ಗಳಿಗೂ ಹೆಚ್ಚು ಸಂಪಾದನೆ ಮಾಡಿದ್ದಾನೆ. ಇದರಲ್ಲಿ ಎಐ ಟೂಲ್‌  ಬಳಸಿಕೊಳ್ಳಲು ಕೇವಲ 2500 ರೂ ಖರ್ಚು ಮಾಡಿದ್ದಾನೆ.

2030ರ ತನಕ ನೀವು ಇದೇ ಉದ್ಯೋಗದಲ್ಲಿದ್ದರೆ ಹೊಟ್ಟೆಗೆ ಹಿಟ್ಟು ಇರಲ್ಲ! ನಿಮ್‌ ಜಾಬ್‌ ಇಲ್ಲಿದ್ಯಾ? ಚೆಕ್‌ ಮಾಡ್ಕೊಳ್ಳಿ!

ಮಸ್ಕ್‌ ಬಗ್ಗೆ ಹೆಚ್ಚು ಗಮನ ಹರಿಸಲು ಕಾರಣ ಆತ ಓರ್ವ ಕೋಡಿಂಗ್ ಮಾಡುವವನು ಅಲ್ಲ, ಪ್ರೋಗ್ರಾಮರ್‌ ಕೂಡ. ಅಷ್ಟೊಂದು ವಯಸ್ಸ ಕೂಡ ಆಗಿಲ್ಲ. ಬದಲಾಗಿ ಒಂದು ವಿಷಯದ ಬಗ್ಗೆ ಬಹಳಷ್ಟು ಕುತೂಹಲ ಮತ್ತು ಆಸಕ್ತಿ ಹೊಂದಿ ಈ ಸಾಧನೆ ಮಾಡಿದ್ದಾನೆ.  AI  ಯಿಂದ ಉದ್ಯೋಗ ಕಳೆದುಕೊಳ್ಳಬೇಕಾಗುತ್ತದೆ ಎಂಬುದು ಸುಳ್ಳು ಬದಲಾಗಿ ಸ್ಥಳೀಯ ವ್ಯವಹಾರಗಳು, ರೆಡ್ಡಿಟ್ ಸಮುದಾಯಗಳು ಮತ್ತು ಸಾಮಾಜಿಕ ವೇದಿಕೆಗಳನ್ನು ತಲುಪುವ ಮೂಲಕ ಆದಾಯವನ್ನು ಗಳಿಸುವ ಸಾಧನವಾಗಿ ಬಳಸಿಕೊಳ್ಳಬಹುದು ಎಂದು ರೆಡ್ಡಿಡ್‌ ಬಳಕೆದಾರ ಹೇಳಿದ್ದಾನೆ.

ಅಬುಧಾಬಿಗೆ ಪರಾರಿಯಾಗಿದ್ದವನ ಇಂಟರ್‌ಪೋಲ್ ಸಹಾಯದಿಂದ ಬಂಧಿಸಿದ ಕೇರಳ ಪೊಲೀಸರು

click me!