ಅಂತೂ ವಿರೋಧದ ನಡುವೆ ಯಶಸ್ವಿಯಾಗಿ SSLC ಪರೀಕ್ಷೆ ಮುಗಿಸಿದ ಸರ್ಕಾರ: ಸುರೇಶ್ ಕುಮಾರ್ ಸರ್ದಾರ

By Suvarna News  |  First Published Jul 3, 2020, 4:13 PM IST

ಕೊರೋನಾ ಭೀತಿ ನಡುವೆಯೇ ವಿದ್ಯಾರ್ಥಿಗಳ ಮಹತ್ವದ ಘಟ್ಟವಾದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮುಕ್ತಾಯಗೊಂಡಿದ್ದು, ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ. ಕಳೆದ ಜು.25ರಿಂದ ಆರಂಭಗೊಂಡ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಯಾವುದೇ ಅಡಚಣೆಯಿಲ್ಲದೆ ಸುಸೂತ್ರವಾಗಿ ನಡೆದಿದ್ದು, ಇನ್ನೇನಿದ್ದರೂ ಮೌಲ್ಯಮಾಪನ ಮತ್ತು ಫಲಿತಾಂಶದ ಹೊಣೆಗಾರಿಕೆ ಶಿಕ್ಷಣ ಇಲಾಖೆ ಮೇಲಿದೆ. ಪರೀಕ್ಷೆ ಮಾಡಬೇಕೋ ಅಥವಾ ಬೇಡವೋ ಎಂಬ ಗೊಂದಲದಲ್ಲಿಯೇ ಪರೀಕ್ಷೆಗಳು ಮುಗಿದಿವೆ. ಇದಕ್ಕೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವ ಸುರೇಶ್ ಕುಮಾರ್ ಅವರ ಕಾರ್ಯ ವೈಖರಿಗೆ ಮೆಚ್ಚುವಂತಹದ್ದು.


ಬೆಂಗಳೂರು, (ಜುಲೈ. 03): ರಾಜ್ಯದ್ಯಂತ ಶುಕ್ರವಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಯಾವುದೇ ಅಡೆತಡೆಯಿಲ್ಲದೇ ಕೊನೆಗೊಂಡಿದೆ. ಕೊರೋನಾ ಭೀತಿ ನಡುವೆ ಪರೀಕ್ಷೆ ಮಾಡಬೇಕೋ ಅಥವಾ ಬೇಡವೋ ಎಂಬ ಗೊಂದಲದಲ್ಲಿಯೇ ಪರೀಕ್ಷೆಗಳು ಮುಗಿದಿವೆ. 

"

Tap to resize

Latest Videos

undefined

ಕಳೆದ ಜು.25ರಿಂದ ಆರಂಭಗೊಂಡ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಯಾವುದೇ ಅಡಚಣೆಯಿಲ್ಲದೆ ಸುಸೂತ್ರವಾಗಿ ನಡೆದಿದ್ದು, ಇನ್ನೇನಿದ್ದರೂ ಮೌಲ್ಯಮಾಪನ ಮತ್ತು ಫಲಿತಾಂಶದ ಹೊಣೆಗಾರಿಕೆ ಶಿಕ್ಷಣ ಇಲಾಖೆ ಮೇಲಿದೆ.

ಇಂದು ಎಸ್ಸೆಸ್ಸೆಲ್ಸಿ ಕೊನೆಯ ಪರೀಕ್ಷೆ, ಪರೀಕ್ಷೆ ಬರೆಯಲಿದ್ದಾರೆ ಅಂದಾಜು 7 ಲಕ್ಷ ವಿದ್ಯಾರ್ಥಿಗಳು

ಕೊರೋನಾ ಭಯದಿಂದ ಏಕೆ ರಿಸ್ಕ್ ತೆಗೆದುಕೊಳ್ಳುವುದು ಅಂತ ತೆಲಂಗಾಣ, ತಮಿಳುನಾಡು ಸೇರಿದಂತೆ ಕೆಲ ರಾಜ್ಯಗಳು ಹತ್ತನ್ನೇ ತರಗತಿ ಪರೀಕ್ಷೆಗಳನ್ನ ರದ್ದು ಮಾಡಿ ಕೈತೊಳೆದುಕೊಂಡಿವೆ.

ಆದ್ರೆ, ಕರ್ನಾಟಕದಲ್ಲಿ ಹಲವಾರು ಒತ್ತಡಗಳ ನಡುವೆಯೂ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಪರೀಕ್ಷೆ ನಡೆಸಲು ಸರ್ಕಾರ ದೃಢ ನಿರ್ಧಾರ ಕೈಗೊಂಡು ಅದರಲ್ಲಿ ಈಗ ಸಫಲತೆ ಸಾಧಿಸಿದೆ.ಅಷ್ಟೇ ಅಲ್ಲದೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯ ಸರ್ಕಾರ ಫಸ್ಟ್ ಕ್ಲಾಸ್‌ನಲ್ಲಿ ಪಾಸ್‌ ಆಗಿದೆ.

ಗೈರಾಗಬೇಕಿದ್ದ ವಿದ್ಯಾರ್ಥಿನಿಯ ಮನವೊಲಿಸಿ ಪರೀಕ್ಷೆ ಬರೆಸಿದ ಅಧಿಕಾರಿಗಳು

ಸಚಿವ ಸುರೇಶ್ ಕುಮಾರ್ ಪಟ್ಟ ಶ್ರಮ ಅಷ್ಟಿಷ್ಟಲ್ಲ

ಹೌದು...ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಸಚಿವ ಸುರೇಶ್ ಕುಮಾರ್ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಒಂದೂ ಚುರು ಹೆಚ್ಚು ಕಮ್ಮಿಯಾದ್ರೂ ತಮ್ಮ ಮೇಲೆ ಬರುತ್ತೇ ಎಂದು ಗೊತ್ತಿದ್ದರೂ ಧೃತಿಗೆಡಲಿಲ್ಲ. ಬದಲಾಗಿ ಯಾವುದೇ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಪರೀಕ್ಷೆಗಳನ್ನ ಯಶಸ್ವಿಯಾಗಿ ನಡೆಸುವುದೊಂದೆ ಗುರಿ ಇಟ್ಟುಕೊಂಡು ರಾಜ್ಯಾದ್ಯಂತ ಸಂಚರಿಸಿದ್ರು. ರಾಜ್ಯದ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಮುನ್ನೆಚ್ಚರಿಕೆ ಕ್ರಮ ವಹಿಸಿ ವಿದ್ಯಾರ್ಥಿಗಳು ಕೂಡ ಯಾವುದೇ ಅಳುಕಿಲ್ಲದೆ ನಿರ್ಭಯವಾಗಿ ಹಗಲು ರಾತ್ರಿ ಎನ್ನದೇ ಅಧಿಕಾರಿಗಳನ್ನ ಕಟ್ಟಿಕೊಂಡು ಪರೀಕ್ಷೆ ಬರೆಯಲು ಪೂರಕ ವಾತಾವರಣ ನಿರ್ಮಿಸಿದರು. 

ಕೊಪ್ಪಳ: ಸಚಿವ ಸುರೇಶ್‌ ಕುಮಾರ್‌ಗೆ SSLC ವಿದ್ಯಾರ್ಥಿಗಳಿಂದ ಅಭಿನಂದನಾ ಪತ್ರ

ಸ್ವತಃ ಶಿಕ್ಷಣ ಸಚಿವರೇ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಅಧಿಕಾರಿಗಳು ಹಾಗೂ ಭದ್ರತೆಯಲ್ಲಿ ಪೊಲೀಸರು, ಎನ್‍ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್, ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಇದರ ಮಹತ್ವ ತಿಳಿಸಿದ್ದರು. ಅಲ್ಲದೇ ಪ್ರತಿ ದಿನ ಸಾಮಾಜಿ ಜಾಲತಾಣಗಳ ಮೂಲಕ ವಿದ್ಯಾರ್ಥಿಗಳಿಗೆ ನಿರ್ಭಯವಾಗಿ ಪರೀಕ್ಷೆ ಬರೆಯಲು ಸಲಹೆ, ಉಪದೇಶಗಳನ್ನ ನೀಡಿದ್ದರು. ಅಷ್ಟೇ ಅಲ್ಲದೇ ತಮ್ಮ ಮಕ್ಕಳನ್ನ ಧೈರ್ಯವಾಗಿ ಪರೀಕ್ಷೆಗೆ ಕಳುಹಿಸಿ ಎಂದು ಪೋಷಕರಿಗೂ  ಮನವಿ ಮೂಲಕ ಜಾಗೃತಿ ಮೂಡಿಸಿದ್ದರು. 

ಮಳೆ ಲೆಕ್ಕಿಸದೇ ಪರೀಕ್ಷೆಗೆ ಬರೆದ ವಿದ್ಯಾರ್ಥಿಗಳು

ಕೊರೋನಾ ಭೀತಿ ನಡುವೆಯೂ ಸುಮಾರು 8 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಪೈಕಿ ಶೇ.98 ರಿಂದ ಶೇ.99ರ ವರೆಗೂ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಮಳೆ ಸೇರಿದಂತೆ ಹಲವು ಅಡಚಣೆಗಳ ನಡುವೆಯೇ ಸಾರಿಗೆ ಹಾಗೂ ಅಗ್ನಿಶಾಮಕ ಸಿಬ್ಬಂದಿ ಕೂಡ ವಿದ್ಯಾರ್ಥಿಗಳಿಗೆ ನೆರವಾಗಿದ್ದಾರೆ. ಮಲೆನಾಡು ಪ್ರದೇಶ, ಕರಾವಳಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಳೆ ಸುರಿಯುತ್ತಿದ್ದರೂ ಸಹ ಯಾವುದೇ ರೀತಿಯಲ್ಲೂ ತೊಂದರೆಯಾಗದಂತೆ ಪರೀಕ್ಷೆಗಳು ಸುಸೂತ್ರವಾಗಿ ಸಂಪನ್ನಗೊಂಡಿವೆ.

ಮಂಗಳೂರು: ಬೋಟ್‌ ಮೂಲಕ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ

ಅಸಾಧ್ಯವನ್ನು ಸಾಧ್ಯವಾಗಿಸಿದ ಸುರೇಶ್ ಕುಮಾರ್

ಕೊರೋನಾಕ್ಕೆ ಹೆದರಿ ಬೇರೆ ರಾಜ್ಯಗಳಲ್ಲಿ ಪರೀಕ್ಷೆಗಳನ್ನ ಕ್ಯಾನ್ಸಲ್ ಮಾಡಿದ್ರೂ, ಸಚಿವ ಸುರೇಶ್ ಕುಮಾರ್ ಮಾತ್ರ ಹಿಂಜರಿಯದೇ ವಿವಿಧ ಇಲಾಖೆಗಳ ಸಹಾಯದೊಂದಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಗೆದ್ದು ತೋರಿಸಿದ್ದಾರೆ. ಈ ಪರೀಕ್ಷೆಗೆ ಕೈಜೋಡಿಸಿದ್ದು ಗೃಹ ಇಲಾಖೆ, ಸಾರಿಗೆ ಮತ್ತು ಆರೋಗ್ಯ ಇಲಾಖೆ ಮಹತ್ವದ ಕಾರ್ಯನಿರ್ವಹಿಸಿವೆ.  ಈ ಬಗ್ಗೆ ಅವರೇ ಟ್ವೀಟ್ ಮಾಡಿದ್ದರು, ಸರ್ಕಾರದ ವಿವಿಧ ಇಲಾಖೆಗಳು ಸಮನ್ವಯದಿಂದ ಕಾರ್ಯ ಮಾಡಿದರೆ ಯಾವುದೂ ಸಾಧ್ಯ ಎಂಬುದನ್ನು ಈ ಪರೀಕ್ಷೆಗಳು ರುಜುವಾತು ಮಾಡಿವೆ. ಅಸಾಧ್ಯವನ್ನು ಸಾಧ್ಯವಾಗಿಸಿದ ಎಲ್ಲಾ ಶಿಕ್ಷಕ ಬಂಧುಗಳಿಗೆ ಹೃತ್ಪೂರ್ವಕ  ಧನ್ಯವಾದಗಳು ಎಂದಿದ್ದಾರೆ.

ಸಾಮಾಜಿಕ ಅಂತರ ಕಾಪಾಡುವಲ್ಲಿ PUC ವಿದ್ಯಾರ್ಥಿಗಳನ್ನು ಮೀರಿಸಿದ SSLC ಮಕ್ಕಳು! 

ಸಂಚಾರಕ್ಕೆ ಅನುವು ಮಾಡಿಕೊಟ್ಟ ಸಾರಿಗೆ ಇಲಾಖೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸಾರಿಗೆ ಇಲಾಖೆ ಉಚಿತ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಮಾಡಿತ್ತು. ಆಯಾ ಕ್ಷೇತ್ರ ಶಿಕ್ಷಣಾಧಿಕಾರಿ ಮಟ್ಟದಲ್ಲಿ ವಿದ್ಯಾರ್ಥಿಗಳ ಲೆಕ್ಕಾಚಾರ ಅನುಗುಣವಾಗಿ ಬಸ್ ಕಲ್ಪಿಸಲಾಗಿತ್ತು. ದೂರದ ಊರಿನಿಂದ ಬರುವ ವಿದ್ಯಾರ್ಥಿಗಳನ್ನ ಪರೀಕ್ಷೆ ಕೇಂದ್ರ ಕರೆತಂದು ಬಳಿಕ ಸೇಫ್ ಆಗಿ ಅವರವರ ಮನೆಗಳಿಗೆ ತಲುಪಿಸುವಲ್ಲಿ ಕೆಎಸ್‌ಆರ್‌ಟಿಸಿ ಯಶಸ್ವಿಯಾಗಿವೆ.

ಪಿಯುಸಿ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್....!

ಆರೋಗ್ಯ ಇಲಾಖೆಯದ್ದೇ ದೊಡ್ಡ ಪಾಲು

ಹೌದು.. ಆರೋಗ್ಯ ಇಲಾಖೆ ಒಂದು ಕಡೆ ಆಸ್ಪತ್ರೆಗಳಲ್ಲಿ ಕೊರೋನಾ ವಿರುದ್ಧ ಹೋರಾಟ ನಡೆಸಿದ್ರೆ, ಮತ್ತೊಂದೆಡೆ ಎಸ್ಎಸ್‌ಎಲ್‌ಸಿ ಪರೀಕ್ಷೆಯಲ್ಲೂ ಯಶಸ್ವಿಯಾಗಿ ಕಾರ್ಯನಿರ್ವಹಿಸಿದೆ. ಇದರಲ್ಲಿ ಎರಡು ಮಾತಿಲ್ಲ.  ಪ್ರತಿದಿನ ಪ್ರತಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಯನ್ನ ಮಾಡಿದೆ. ಅಲ್ಲದೇ ಮಾಸ್ಕ್ ಮತ್ತು ಸಾಮಾಜಿಕ ಅಂತರ ಮೆಂಟೇನ್ ಮಾಡಿಸಿ ವಿದ್ಯಾರ್ಥಿಗಳಲ್ಲಿ ಆರೋಗ್ಯದ ಜಾಗೃತಿ ಮೂಡಿಸುವಲ್ಲಿ ಸಕ್ಸಸ್ ಕಂಡಿದೆ.

ವಿದ್ಯಾರ್ಥಿಗಳಿಗೆ ಕಾವಲಾಗಿ ನಿಂತ ಪೊಲೀಸ್

ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ಗೃಹ ಇಲಾಖೆ ಮಹತ್ವದ ಕಾರ್ಯನಿರ್ವಹಿಸಿದೆ. ಪರೀಕ್ಷೆಗಳು ಆರಂಭವಾಗಿ ಮುಗಿಯುವವರಿಗೆ ಪೊಲೀಸ್ ಇಲಾಖೆ ವಿದ್ಯಾರ್ಥಿಗಳ ಕಾವಲಾಗಿ ನಿಂತಿದೆ. ಅಲ್ಲದೇ ಯಾವುದೇ ಗಲಾಟೆ, ಅಡಚಣೆ ಮತ್ತು ಕಾಪಿ ಚೀಟಿ ಕೊಡಲು ಬಂದವರಿಗೆ ಆಸ್ಪದ ನೀಡದೇ ಪರೀಕ್ಷೆಗಳನ್ನ ಯಶಸ್ವಿಗೊಳಿಸುವಲ್ಲಿ ಗೃಹ ಇಲಾಖೆ ಪ್ರಮುಖ ಪಾತ್ರವಹಿಸಿದೆ.

 ಸ್ಕೌಟ್ಸ್ ಮತ್ತು ಗೈಡ್ಸ್‌ ಕೊಡುಗೆ ಅಪಾರ

ಈ  ಪರೀಕ್ಷೆಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಗಳ ಸಂಸ್ಥೆಯ ಕೊಡುಗೆ ಅಪಾರವಾಗಿದೆ. ಸುಮಾರು 8000 ಸ್ವಯಂಸೇವಕರು ಈ ಪರೀಕ್ಷೆಗಳಲ್ಲಿ   ವಿದ್ಯಾರ್ಥಿಗಳಿಗೆ ಸುಸೂತ್ರವಾದ ವಾತಾವರಣ ಕಲ್ಪಿಸುವಲ್ಲಿ ದೊಡ್ಡ ಯೋಗದಾನ ನೀಡಿದ್ದಾರೆ. ಈ ಬಗ್ಗೆ ಸತಃ ಸಚಿವ ಸುರೇಶ್ ಕುಮಾರ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಒಟ್ಟಿನಲ್ಲಿ ಈ ಕೊರೋನಾ ಎಂಬ ಮಾಹಾಮಾರಿ ನಡುವೆಯೂ ರಾಜ್ಯ ಸರ್ಕಾರದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣವಾಗಿದೆ. ಇನ್ನು ಕೊರೋನಾ ಭೀತಿ ನಡುವೆಯೂ ಧೈರ್ಯವಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಉಜ್ವಲವಾಗಲಿ. 

click me!