ದುಃಖದಲ್ಲೇ ಪರೀಕ್ಷೆ ಬರೆದು ಬಳಿಕ ತಾಯಿ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡ SSLC ವಿದ್ಯಾರ್ಥಿನಿ

By Suvarna NewsFirst Published Jul 3, 2020, 3:09 PM IST
Highlights

ಇಂದು (ಶುಕ್ರವಾರ)  ಓರ್ವ ವಿದ್ಯಾರ್ಥಿಯೊಬ್ಬ ತನ್ನ ತಂದೆ ಸಾವಿನ ದುಃಖದ ನಡುವೆಯೂ ಅಂತಿಮ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದಾನೆ. ಮತ್ತೊಂದೆಡೆ ಓರ್ವ ವಿದ್ಯಾರ್ಥಿನಿ ತಾಯಿ ಸಾವಿನ ನಡುವೆ ಪರೀಕ್ಷೆ ಬರೆದಿದ್ದಾಳೆ. ಬಳಿಕ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದಾಳೆ.

ಮೈಸೂರು, (ಜುಲೈ.03): ತನ್ನ ಹತ್ತೆ ತಾಯಿಯ ಸಾವಿನ ನೋವಿನಲ್ಲಿಯೂ ವಿದ್ಯಾರ್ಥಿನಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಬಳಿಕ ಅಂತ್ಯಸಂಸ್ಕಾರಲ್ಲಿ ಪಾಲ್ಗೊಂಡಿದ್ದಾಳೆ.

ಇಂದು (ಶುಕ್ರವಾರ) ಮೈಸೂರಿನ ರೂಪಾ ನಗರದ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿನಿ ದೀಪು ಪರೀಕ್ಷೆಗೆ ಬರೆದಿದ್ದಾಳೆ. ಅನಾರೋಗ್ಯದ ಹಿನ್ನಲೆಯಲ್ಲಿ ಗುರುವಾರವಷ್ಟೇ ಬೀರಿಹುಂಡಿ ಗ್ರಾಮದ ಬಾಲಕಿಯ ತಾಯಿ ಲಕ್ಷ್ಮಮ್ಮ ಕ್ಯಾನ್ಸರ್‌ನಿಂದ  ಮೃತಪಟ್ಟಿದ್ದರು. 

ಹಾವೇರಿ: ತಂದೆಯ ಸಾವಿನ ದುಃಖದ ಮಧ್ಯೆಯೂ SSLC ಪರೀಕ್ಷೆ ಬರೆದ ವಿದ್ಯಾರ್ಥಿ

  ಈ ಹಿನ್ನೆಲೆಯಲ್ಲಿ ತನ್ನ ತಾಯಿಯ ಸಾವಿನ ನೋವಿನಲ್ಲಿದ್ದ ಬಾಲಕಿ ಪರೀಕ್ಷೆ ಬರೆಯಲು ನಿರಾಕರಿಸಿದ್ದಾಳೆ. ಆದ್ರೆ, ಕುಟುಂಬಸ್ಥರು ಹಾಗೂ ಗ್ರಾಮದವರು ವಿದ್ಯಾರ್ಥಿಯ ಮನವೊಲಿಸಿ, ಧೈರ್ಯ ತುಂಬಿದ ಶಿವಣ್ಣ, ತಮ್ಮ ಕಾರಿನಲ್ಲಿ ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದರು..

 ವಿದ್ಯಾರ್ಥಿನಿ ದೀಪು ತನ್ನ ತಾಯಿ ಸಾವಿನ ದುಃಖದಲ್ಲಿ ಇಂದು (ಶುಕ್ರವಾರ) ಕೊನೆ ಹಿಂದಿ ಪರೀಕ್ಷೆ ಬರೆದಳು. ಪರೀಕ್ಷೆ ಬರೆದ ಬಳಿಕ ತಾಯಿಯ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದಾರೆ.

ತಂದೆ ಸಾವಿನಲ್ಲೂ ಪರೀಕ್ಷೆ ಬರೆದ ವಿದ್ಯಾರ್ಥಿ
ಹೌದು..ತಾಯಿ ಇನ್ಮುಂದೆ ಇರಲ್ಲ ಎನ್ನುವ ದುಃಖವನ್ನ ತಡೆದುಕೊಂಡು ದೀಪು ಪರೀಕ್ಷೆ ಬರೆದರೆ, ಮತ್ತೊಂದೆಡೆ ಹಾವೇರಿಯಲ್ಲಿ ವಿದ್ಯಾರ್ಥಿಯೊಬ್ಬ ತನ್ನ ತಂದೆ ಸಾವಿನ ಮಧ್ಯೆಯೂ ಇವತ್ತು ಪರೀಕ್ಷೆ ಬರೆದಿದ್ದಾರೆ. 

ತಂದೆ-ತಾಯಿ ಸಾವಿನ ದುಃಖವನ್ನ ಕಂಟ್ರೋಲ್ ಮಾಡಿಕೊಂಡು ಪರೀಕ್ಷೆ ಬರೆದು ಈ ಇಬ್ಬರು ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸೋಣ. 

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾಗಿದೆ. ಇದರಿಂದ ರಾಜ್ಯ ಸರ್ಕಾರ ಕೊರೋನಾ ಭೀತಿ ನಡುವೆಯೂ ಬಹಳಷ್ಟು ಮುಂಜಾಗ್ರತಾ ಕ್ರಮಗಳನ್ನ ವಹಿಸಿ ಯಶಸ್ವಿಯಾಗಿ ಪರಿಕ್ಷೆ ಮುಗಿಸಿದೆ.

#NewsIn100Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"

click me!