ತಮಗಿಷ್ಟದ ಫ್ಯಾನ್ಸಿ ನಂಬರ್ ಪ್ಲೇಟ್ ಪಡೆಯಲು ಜನ ಸಾಮಾನ್ಯರು ಕೂಡ ಏನೆಲ್ಲಾ ಕರಾಮತ್ತು ಮಾಡುತ್ತಾರೆ. ಈಗ ಉತ್ತರಾಖಂಡ್‌ನ ಕಾರೊಂದರ ನಂಬರ್ ಪ್ಲೇಟೊಂದು ವೈರಲ್ ಆಗಿದೆ.
ಉತ್ತರಾಖಂಡ್: ಅನೇಕರಿಗೆ ತಮ್ಮ ವಾಹನಕ್ಕಿಂತ ಅದರ ನಂಬರ್ ಪ್ಲೇಟ್ ಮೇಲೆ ಅದೇನೋ ಹುಚ್ಚಿರುತ್ತದೆ. ಕೆಲವು ಸಿನಿಮಾ ತಾರೆಯರು ಕೇವಲ ಒಂದು ತಮ್ಮಿಷ್ಟದ ಫ್ಯಾನ್ಸಿ ನಂಬರ್ ಪ್ಲೇಟ್‌ಗಾಗಿ ಲಕ್ಷ ಲಕ್ಷ ಸುರಿದಿದ್ದನ್ನು ನಾವು ಕೇಳಿದ್ದೇವೆ. ಹೀಗೆ ತಮಗಿಷ್ಟದ ಫ್ಯಾನ್ಸಿ ನಂಬರ್ ಪ್ಲೇಟ್ ಪಡೆಯಲು ಜನ ಸಾಮಾನ್ಯರು ಕೂಡ ಏನೆಲ್ಲಾ ಕರಾಮತ್ತು ಮಾಡುತ್ತಾರೆ. ಈಗ ಉತ್ತರಾಖಂಡ್‌ನ ಕಾರೊಂದರ ನಂಬರ್ ಪ್ಲೇಟೊಂದು ವೈರಲ್ ಆಗಿದೆ. ಹಿಂದಿಯಲ್ಲಿ ಓದುವುದಕ್ಕೆ ಪಪ್ಪ ಎಂದು ಕಾಣಿಸುವ ನಂಬರ್ ಪ್ಲೇಟ್ ಹಾಕಿದ್ದ ಕಾರಿಗೆ ಪೊಲೀಸರು ದಂಡ ವಿಧಿಸಿದ್ದಾರೆ.
ಇದರಲ್ಲಿ 4141 ಬರೆಯುವ ಬದಲು ಸ್ಟೈಲಿಶ್ ಆಗಿ ಪಪ್ಪ ಎಂದು ಬರೆಯಲಾಗಿತ್ತು. ಅಂದರೆ 4141 ಎಂಬ ಸಂಖ್ಯೆಯೇ ಹಿಂದಿಯಲ್ಲಿ ಪಪ್ಪ (पापा) ಹೇಗೆ ಬರೆಯುತ್ತಾರೋ ಹಾಗೆ ಕಾಣುವಂತೆ ಬರೆಯಲಾಗಿತ್ತು. ಇದನ್ನು ನೋಡಿದ ಉತ್ತರಾಖಂಡ್ ಪೊಲೀಸರು ದಂಡ ವಿಧಿಸಿದ್ದು, ಜೊತೆಗೆ ನಂಬರ್ ಪ್ಲೇಟ್ ಅನ್ನು ಬದಲಾಯಿಸಿದ್ದಾರೆ. ಅಲ್ಲದೇ ಮೊದಲು ಹಾಗೂ ನಂತರದ ನಂಬರ್ ಪ್ಲೇಟ್ ಫೋಟೋವನ್ನು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
पापा कहते हैं बड़ा नाम करेगा,
गाड़ी के प्लेट पर पापा लिखेगा,
मगर ये तो कोई न जाने,
कि ऐसी प्लेट पर होता है चालान..
ट्वीट पर शिकायत प्राप्त करने के बाद ने गाड़ी मालिक को यातायात ऑफिस बुलाकर नम्बर प्लेट बदलवाई और चालान किया। pic.twitter.com/oL4E3jJFAV
undefined
ಇದರೊಂದಿಗೆ 1987ರ ಖಯಾಮತ್ ಖಯಾಮತ್ ತಕ್ ಎಂಬ ಸಿನಿಮಾದ ಪಪ್ಪ ಕೆಹ್ತೆ ಹೆ ಬಡಾ ನಾಮ್ ಕರೆಗಾ ಎಂಬ ಹಾಡನ್ನು ಬರೆದುಕೊಂಡಿದ್ದಾರೆ. ನನ್ನ ತಂದೆ ಹೇಳುತ್ತಾರೆ ದೊಡ್ಡ ಹೆಸರು ಮಾಡ್ಬೇಕು ಅಂತ, ಹಾಗಾಗಿ ನಾನು ಅವರ ಹೆಸರನ್ನು ನನ್ನ ಕಾರಿನ ನಂಬರ್ ಪ್ಲೇಟ್ ಮೇಲೆ ಬರೆಯುವೆ. ಆದರೆ ಯಾರಿಗೂ ಗೊತ್ತಿಲ್ಲ. ಈ ರೀತಿ ಬರೆದರೆ ದಂಡ ವಿಧಿಸಲಾಗುತ್ತದೆ ಎಂದು ಹಿಂದಿಯಲ್ಲಿ ಬರೆದು ಪೊಲೀಸರು ಫೋಟೋ ಪೋಸ್ಟ್ ಮಾಡಿದ್ದಾರೆ.
ನಂಬರ್‌ಪ್ಲೇಟ್‌ನಲ್ಲಿ ನಂಬರ್ ಬದಲು ಶಾಸಕನ ಮೊಮ್ಮಗ ಎಂಬ ಬರಹ: ಅತ್ತ ಶಾಸಕ ಅವಿವಾಹಿತ
ಪೊಲೀಸರ ಈ ಪೋಸ್ಟ್‌ಗೆ ಅನೇಕರು ಪ್ರತಿಕ್ರಿಯಿಸಿದ್ದಾರೆ. ಕೆಲವರು ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರೆ, ಮತ್ತೆ ಕೆಲವರು ತಮ್ಮ ವಾಹನಗಳ ಸಮಸ್ಯೆಗಳ ಬಗ್ಗೆ ಅಲ್ಲಿ ಚರ್ಚಿಸಿದ್ದಾರೆ. ಒಟ್ಟಿನಲ್ಲಿ ಉತ್ತರಾಖಂಡ್ ಪೊಲೀಸರು ತಮಾಷೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಜಾಗೃತಿ ಮೂಡಿಸಿದ್ದಾರೆ. ವಾಹನಗಳ ನೋಂದಣಿ ಸಂಖ್ಯೆಯ ಪ್ಲೇಟ್‌ಗಳು ಭಾರತದಲ್ಲಿ 1989ರ ಮೋಟಾರ್ ವಾಹನ ಕಾಯಿದೆಗೆ ಒಳಪಟ್ಟಿದ್ದು, ಇದು ಸ್ಪಷ್ಟವಾಗಿ ವಾಹನಗಳ ಮೇಲೆ ನಂಬರ್‌ಗಳ ಹೊರತಾಗಿ ಬೇರೇನೂ ಇರಬಾರದು. ಸ್ವಂತ ಕಾರುಗಳಿಗೆ ಬಿಳಿ ಹಿನ್ನೆಲೆಯ ನಂಬರ್ ಪ್ಲೇಟ್ ಮೇಲೆ ಕಪ್ಪು ಬಣ್ಣದಲ್ಲಿ ಬರೆದಿರಬೇಕು. ವಾಣಿಜ್ಯ ಉದ್ದೇಶಕ್ಕೆ ಬಳಸುವ ವಾಹನಗಳಿಗೆ ಹಳದಿ ಬಣ್ಣದ ಬೋರ್ಡ್ ಇರಬೇಕು ಎಂದು ಬರೆಯಲಾಗಿದೆ.
ತರಲೆ ಮಾಡಲು ಹೋಗಿ ತಗಲಾಕೊಂಡ ಗೆಳೆಯರು... ನಂಬರ್ ಪ್ಲೇಟ್‌ನಲ್ಲಿ ಬರೆದಿದ್ದೇನು?