ಪ್ರತಿಸ್ಪರ್ಧಿ ಟಾಟಾ ಮೋಟಾರ್ಸ್ ಕುರಿತು ಜಗ ಮೆಚ್ಚುವ ಉತ್ತರ ನೀಡಿದ ಆನಂದ್ ಮಹೀಂದ್ರ!

By Suvarna News  |  First Published Jul 14, 2022, 1:03 PM IST

ಟಾಟಾ ಮೋಟಾರ್ಸ್ ಕಾರಿನ ಕುರಿತು ನಿಮ್ಮ ಅಭಿಪ್ರಾಯವೇನು? ಪ್ರತಿಸ್ಪರ್ಧಿ ಕುರಿತು ಪ್ರಶ್ನೆಗೆ ಉದ್ಯಮಿ ಆನಂದ್ ಮಹೀಂದ್ರ ಉತ್ತರಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಪ್ರತಿಸ್ಪರ್ಧಿ ಕುರಿತು ಆನಂದ್ ಮಹೀಂದ್ರ ಹೇಳಿದ್ದೇನು? ಸಾಮಾನ್ಯನ ಟ್ವೀಟ್‌ಗೆ ಆನಂದ್ ಮಹೀಂದ್ರ ಉತ್ತರ ಇದೀಗ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. 


ಮುಂಬೈ(ಜು.14): ಉದ್ಯಮಿ, ಮಹೀಂದ್ರ ಚೇರ್ಮೆನ್ ಆನಂದ್ ಮಹೀಂದ್ರ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರೀಯ. ಆನಂದ್ ಮಹೀಂದ್ರ ಪ್ರತಿ ಟ್ವೀಟ್ ಕೂಡ ವೈರಲ್ ಆಗುತ್ತದೆ. ಇದೀಗ ಟಾಟಾ ಮೋಟಾರ್ಸ್ ಕುರಿತು ಕೇಳಲಾದ ಪ್ರಶ್ನೆಗೆ ಆನಂದ್ ಮಹೀಂದ್ರ ನೀಡಿದ ಉತ್ತರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಟಾಟಾ ಮೋಟಾರ್ಸ್ ಕುರಿತು ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಗೆ, ಟಾಟಾ ಮೋಟಾರ್ಸ್‌ನಂತಹ ಪ್ರಬಲ ಪ್ರತಿಸ್ಪರ್ಧಿಗಳು ಇರವುದರಿಂದ ಹೊಸ ಹೊಸ ಸಂಶೋಧನೆಗೆ ನೆರವಾಗುತ್ತಿದೆ. ಇಷ್ಟೇ ಅಲ್ಲ ನಮ್ಮನ್ನೂ ಮತ್ತಷ್ಟು ಉತ್ತಮಪಡಿಸಲು ಪ್ರೇರೇಪಿಸುತ್ತದೆ ಎಂದಿದ್ದಾರೆ. ಭಾರತದ ಎರಡು ಅತ್ಯುತ್ತಮ ಬ್ರ್ಯಾಂಡ್ ಕಾರುಗಳ ನಡುವೆ ಆರೋಗ್ಯಕರ ಸ್ಪರ್ಧೆಯನ್ನು ಭಾರತೀಯರು ಮೆಚ್ಚಿಕೊಂಡಿದ್ದಾರೆ. ಇಷ್ಟೇ ಅಲ್ಲ ಇತರ ವಿದೇಶಿ ಕಾರುಗಳಿಗಿಂತ ಅತ್ಯುತ್ತಮ ಹಾಗೂ ಕೈಗೆಟುಕುವ ದರದಲ್ಲಿ ಕಾರುಗಳನ್ನು ನೀಡುತ್ತಿರುವ ಟಾಟಾ ಹಾಗೂ ಮಹೀಂದ್ರ ಬೇಡಿಕೆಯೂ ದುಪ್ಪಟ್ಟವಾಗಿದೆ ಅನ್ನೋದು ಗಮನಿಸಲೇಬೇಕು. ಟ್ವಿಟರ್‌ನಲ್ಲಿ ಆನಂದ್ ಮಹೀಂದ್ರ ಪ್ರತಿ ಪೋಸ್ಟ್, ಟ್ವೀಟ್‌ಗಳು ದೇಶದ ಗಮನಸೆಳೆಯುತ್ತದೆ.  ಆನಂದ್ ಮಹೀಂದ್ರಗೆ ಸಾಮಾನ್ಯರು ಹಲವು ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಾರೆ. ಸೂಕ್ತ ಹಾಗೂ ಉಪಯುಕ್ತ ಪ್ರಶ್ನೆಗಳಿಗೆ ಆನಂದ್ ಮಹೀಂದ್ರ ತಾಳ್ಮೆಯಿಂದಲೇ ಉತ್ತರಿಸುತ್ತಾರೆ.  ಟಾಟಾ ಮೋಟಾರ್ಸ್ ಕಾರುಗಳ ಕುರಿತು ನಿಮ್ಮ ಅಭಿಪ್ರಾಯವೇನು ಎಂದು ಟ್ವಿಟರ್ ಮೂಲಕ ಕೇಳಲಾಗಿದೆ. ಈ ಪ್ರಶ್ನೆಗೆ ಆನಂದ್ ಮಹೀಂದ್ರ ಜಗ ಮೆಚ್ಚುವ ಉತ್ತರ ನೀಡಿದ್ದಾರೆ. 

ಆನಂದ್ ಮಹೀಂದ್ರ ಟಾಟಾ ಮೋಟಾರ್ಸ್ ಕುರಿತು ಅಥವಾ ದೇಶಿ ಬ್ರ್ಯಾಂಡ್‌ಗಳ ಕುರಿತು ಮಾತನಾಡುತ್ತಿರುವುದು, ಮೆಚ್ಚುಗೆ ವ್ಯಕ್ತಪಡಿಸುತ್ತಿರುವುದು ಇದೇ ಮೊದಲ್ಲ.  ಕಳೆದ ವರ್ಷ NCAP ವಾಹನ ಸುರಕ್ಷತಾ ರೇಟಿಂಗ್ ಪ್ರಕಟವಾದಾಗ ಟಾಟಾ ಹಾಗೂ ಮಹೀಂದ್ರ ಕಾರುಗಳೇ ಟಾಪ್ 10 ಲಿಸ್ಟ್‌ನಲ್ಲಿ ಅಗ್ರಸ್ಥಾನದಿಂದ ಹಿಡಿದು ಬಹುತೇಕ ಸ್ಥಾನ ಅಲಂಕರಿಸಿತ್ತು. ಈ ವೇಳೆ ಮಹೀಂದ್ರ, ಭಾರತದ ಕಾರುಗಳು NCAP ಟಾಪ್ 10 ಲಿಸ್ಟ್‌ನಲ್ಲಿ ಬಹುತೇಕ ಪಾಲು ಪಡೆದಿರುವುದು ಸಂತಸ ತಂದಿದೆ. ಗ್ರಾಹಕರ ಅಗತ್ಯಕ್ಕೆ ತಕ್ಕಂತೆ, ಗರಿಷ್ಠ ಸುರಕ್ಷತೆಯ ಕಾರುಗಳನ್ನು ನೀಡುವುದು ನಮ್ಮ ಬದ್ಧತೆಯಾಗಿದೆ ಎಂದಿದ್ದರು.

Tap to resize

Latest Videos

ಅಂಬಾರಿ ಅಲ್ಲ ಇದು ಸ್ಕೂಟರ್... ಕ್ರಿಯೇಟಿವಿಟಿಗೆ ಬೆರಗಾದ ಆನಂದ್ ಮಹೀಂದ್ರಾ

ಟಾಟಾ ಮೋಟಾರ್ಸ್ ಹಾಗೂ ಮಹೀಂದ್ರ ಎರಡು ಆಟೋ ಬ್ರ್ಯಾಂಡ್ ಭಾರತದಲ್ಲಿ ಮಾತ್ರವಲ್ಲಿ ವಿದೇಶದಲ್ಲೂ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಇಷ್ಟೇ ಅಲ್ಲ ಅತ್ಯಂತ ಬೇಡಿಕೆ ಇರುವ ವಾಹನಗಳಾಗಿವೆ. ಈ ಎರಡು ವಾಹನಗಳು ಕೈಗೆಟುಕುವ ಬೆಲೆಯಲ್ಲಿ ವಾಹನಗಳನ್ನು ನೀಡುತ್ತದೆ. ಇದಕ್ಕಿಂತ ಮುಖ್ಯವಾಗಿ ಎಲ್ಲಾ ವಾಹನಗಳು ಗರಿಷ್ಠ ಸುರಕ್ಷತೆ ಹೊಂದಿದೆ. NCAP ಸುರಕ್ಷತಾ ಪರೀಕ್ಷೆಯಲ್ಲಿ ಟಾಟಾ ಹಾಗೂ ಮಹೀಂದ್ರ ಕಾರುಗಳು 5 ಸ್ಟಾರ್ ರೇಟಿಂಗ್ ಪಡೆದಿದೆ.  5 ಸ್ಟಾರ್ ರೇಟಿಂಗ್ ಐಷಾರಾಮಿ ಕಾರುಗಳಲ್ಲಿ ಮಾತ್ರ ಲಭ್ಯವಿತ್ತು. ಆದರೆ ಇದೀಗ ಅತೀ ಕಡಿಮೆ ಬೆಲೆಯ ಟಾಟಾ ಹಾಗೂ ಮಹೀಂದ್ರ ಕಾರುಗಳು ಕೂಡ 5 ಸ್ಟಾರ್ ರೇಟಿಂಗ್ ಪಡೆದಿದೆ. 

 

It’s a privilege to have strong competitors like They keep reinventing themselves and that inspires us to do even better… Competition spurs Innovation.. https://t.co/MwpBYsMOWZ

— anand mahindra (@anandmahindra)

 

 

ಮಹೀಂದ್ರಾದ ಸ್ವರಾಜ್‌ ಟ್ರಾಕ್ಟರ್‌ ಓಡಿಸಿದ ವಧು: ಫುಲ್ ಖುಷಿಯಾದ ಆನಂದ್ ಮಹೀಂದ್ರಾ

ಪರ್ಫಾಮೆನ್ಸ್, ಆಕರ್ಷಕ, ವಿನ್ಯಾಸ ಸೇರಿದಂತೆ ಎಲ್ಲಾ ವಿಚಾರದಲ್ಲೂ ಟಾಟಾ ಹಾಗೂ ಮಹೀಂದ್ರ ಕಾರುಗಳು ಇತರ ಕಾರುಗಳನ್ನು ಹಿಂದಿಕ್ಕಿದೆ. ಹೀಗಾಗಿ ಈ ಎರಡು ಬ್ರ್ಯಾಂಡ್‌ ವಾಹನಗಳು ಭಾರತದಲ್ಲಿ ಮಾರಾಟದಲ್ಲೂ ದಾಖಲೆ ಬರೆದಿದೆ. ಜನರ ಬೇಡಿಕೆ ಹೆಚ್ಚಾಗುತ್ತಿರುವ ಕಾರಣ ಇದೀಗ ಟಾಟಾ ಹಾಗೂ ಮಹೀಂದ್ರ ಕಾರುಗಳನ್ನು ಬುಕ್ ಮಾಡಿ ಕಾಯಬೇಕಾಗಿದೆ.  ಇನ್ನು ದೇಸಿ ಕಂಪನಿಗಳು ಸೂಕ್ತ ಸಮಯದಲ್ಲಿ ಗ್ರಾಹಕರಿಗೆ ಕಾರು ವಿತರಣೆ ಮಾಡುತ್ತಿದೆ. 
 

click me!