ಪ್ರತಿಭಟನಾಕಾರರಿಗೆ ನೆರವಾಗಲು ಕಂಟೈನರ್ ಟ್ರಕ್‌ನ್ನು ಮನೆಯಾಗಿ ಪರಿವರ್ತಿಸಿದ ರೈತ!

Published : Jan 04, 2021, 03:47 PM ISTUpdated : Jan 04, 2021, 03:48 PM IST
ಪ್ರತಿಭಟನಾಕಾರರಿಗೆ ನೆರವಾಗಲು ಕಂಟೈನರ್ ಟ್ರಕ್‌ನ್ನು ಮನೆಯಾಗಿ ಪರಿವರ್ತಿಸಿದ ರೈತ!

ಸಾರಾಂಶ

ಕಂಟೈನರ್ ಟ್ರಕ್‌ನ್ನು ಮನೆಯಾಗಿ ಪರಿವರ್ತಿಸಿರುವ ರೈತನ ಐಡಿಯಾಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.  ಬೆಡ್, ಸೋಫಾ, ಟಾಯ್ಲೆಟ್, ಟಿವಿ, ಮೊಬೈಲ್ ಚಾರ್ಚಿಂಗ್ ಸೇರಿದಂತೆ  ಎಲ್ಲಾ ಸೌಲಭ್ಯಗಳು ಈ ಟ್ರಕ್ ಒಳಗೆಡೆ ಇದೆ. ಸದ್ಯ ಸಿಂಘು ಗಡಿಯಲ್ಲಿ ಈ ಟ್ರಕ್ ಭಾರಿ ಉಪಯೋಗವಾಗುತ್ತಿದೆ. 

ದೆಹಲಿ(ಜ.04): ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ರೈತರು ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಒಂದು ತಿಂಗಳಿನಿಂದ ನಿರಂತರ ಪ್ರತಿಭಟನೆ ನಡೆಯುತ್ತಿದೆ. ರಸ್ತೆಯಲ್ಲೇ ಠಿಕಾಣಿ ಹೂಡಿರುವ ರೈತರು, ತೀವ್ರ ಚಳಿಯಲ್ಲೂ ಪ್ರತಿಭಟನೆ ಮುಂದುವರಿಸಿದ್ದಾರೆ. ಹೀಗಾಗಿ ಜಲಂಧರ್ ರೈತ ಹರ್ಪ್ರೀತ್ ಸಿಂಗ್ ಮಟ್ಟು ತನ್ನ ಬೆಳೆಗಳನ್ನು ಸಾಗಿಸಲು ಬಳಸುತ್ತಿದ್ದ ಟ್ರಕ್‌ನ್ನು ಇದೀಗ ಮನೆಯಾಗಿ ಪರಿವರ್ತಿಸಿ ಹಲವು ಪ್ರತಿಭಟನಾ ನಿರತ ರೈತರಿಗೆ ನೆರವಾಗಿದ್ದಾರೆ.

ಮೋದಿಯದ್ದು ಬ್ರಿಟೀಷ್ ಆಳ್ವಿಕೆ, ರೈತ ಪ್ರತಿಭಟನೆ ಚಂಪಾರನ್ ಸತ್ಯಾಗ್ರಹ ಎಂದ ರಾಹುಲ್ ಗಾಂಧಿ!..

ದೆಹಲಿಯ ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಸ್ಥಳದಲ್ಲಿ ಈ ಟ್ರಕ್ ನಿಲ್ಲಿಸಲಾಗಿದೆ. ಪ್ರತಿಭಟನೆ ನಡುವೆ ರೈತರಿಗೆ ವಿಶ್ರಾಂತಿ ಪಡೆಯಲು, ಮಲಗಲು, ಶೌಚಾಲಯಕ್ಕಾಗಿ ಈ ಟ್ರಕ್ ಬಳಕೆಯಾಗುತ್ತಿದೆ. ಈ ಟ್ರಕನ್ನು ದಿನಬಳಕೆಗೆ, ರೈತರ ಅಗತ್ಯಕ್ಕೆ ತಕ್ಕಂತೆ ಪರಿವರ್ತಿಸಲಾಗಿದೆ. ಟ್ರಕ್ ಒಳಭಾಗದಲ್ಲಿ ಹಾಲ್, ಹಾಗೂ ಟಾಯ್ಲೆಟ್ ಎಂಬ ಎರಡು ವಿಭಾಗ ಮಾಡಲಾಗಿದೆ.

ಪ್ರತಿಭಟನಾ ನಿರತ ರೈತರ ಒಂದು ನಿರ್ಧಾರ, ಸಂಕಷ್ಟದಲ್ಲಿ ಒಂದು ರಾಜ್ಯದ ಜನ!

ಹಾಲ್ ರೂಂನಲ್ಲಿ ಸೋಫಾ, ಮಲಗಲು ಬೆಡ್, ಟಿವಿ, ಮೊಬೈಲ್ ಚಾರ್ಜಿಂಗ್ ಸೇರಿದಂತೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಪ್ರತಿಭಟನಾ ನಿರತ ರೈತರು ಈ ಟ್ರಕ್‌ನೊಳಗೆ ವಿಶ್ರಾಂತಿ ಪಡೆಯುತ್ತಿದ್ದಾರೆ.  ಡಿಸೆಂಬರ್ 2 ರಂದು ಹರ್ಪ್ರೀತ್ ಸಿಂಗ್ ದೆಹಲಿಯ ಸಿಂಘು ಗಡಿಗೆ ಆಗಮಿಸಿ ಪ್ರತಿಭಟನಾ ರೈತರಿಗೆ ಈ ರೀತಿಯಾಗಿ ನೆರವು ನೀಡಲು ಮುಂದಾಗಿದ್ದಾರೆ.

 

ಹರ್ಪ್ರೀತ್ ಸಿಂಗ್ ಸಹೋದರ ಅಮೇರಿಕದಲ್ಲಿ ಉದ್ಯೋಗದಲ್ಲಿದ್ದಾರೆ. ರೈತ ಪ್ರತಿಭಟನೆ ಆರಂಭವಾದ ಬೆನ್ನಲ್ಲೇ, ಸಿಂಘು ಗಡಿಗೆ ತೆರಳಿ ರೈತರಿಗೆ ಪ್ರತಿಭಟನೆ ನೆರವು ನೀಡಲು ಅಮೆರಿಕದಲ್ಲಿರುವ ಸಹೋದರ ಹರ್ಪ್ರೀತ್ ಸಿಂಗ್‌ಗೆ ಸೂಚಿಸಿದ್ದಾರೆ. ಹೀಗಾಗಿ ತನ್ನ ಟ್ರಕ್‌ನ್ನು ಮನೆಯನ್ನಾಗಿ ಪರಿವರ್ತಿಸಿ ಡಿಸೆಂಬರ್ 2 ರಂದು ಹರ್ಪ್ರೀತ್ ಸಿಂಗ್ ದೆಹಲಿ ತಲುಪಿದ್ದಾರೆ.  ಇದೀಗ ರೈತರ ಜೊತೆ ಹರ್ಪ್ರೀತ್ ಸಿಂಗ್ ಕೂಡ ಪ್ರತಭಟನೆ ನಡೆಸುತ್ತಿದ್ದಾರೆ. 
 

PREV
click me!

Recommended Stories

ಭಾರತದ ಅತೀ ದುಬಾರಿ ನಂಬರ್ ಪ್ಲೇಟ್, ₹1.17 ಕೋಟಿಗೆ 8888 ಖರೀದಿಸಿದ ಯುವ ಉದ್ಯಮಿ ಯಾರು?
Hero Splendor ಬೈಕ್‌ಗಳಿಗಿಂತ ಕಡಿಮೆ ಬೆಲೆಗೆ ಸಿಗುವ ಎಲೆಕ್ಟ್ರಿಕ್ ಸ್ಕೂಟರ್‌ಗಳು