ಫಾಸ್ಟ್‌ಟ್ಯಾಗ್‌ ಕಡ್ಡಾಯ ಜ.1ರಿಂದಲ್ಲ ಫೆ.15ರಿಂದ: ಗಡುವು ವಿಸ್ತರಿಸಿದ ಸರ್ಕಾರ

Kannadaprabha News   | Asianet News
Published : Jan 01, 2021, 01:41 PM IST
ಫಾಸ್ಟ್‌ಟ್ಯಾಗ್‌ ಕಡ್ಡಾಯ ಜ.1ರಿಂದಲ್ಲ ಫೆ.15ರಿಂದ: ಗಡುವು ವಿಸ್ತರಿಸಿದ ಸರ್ಕಾರ

ಸಾರಾಂಶ

ಈ ಹಿಂದೆ ಫಾಸ್ಟ್‌ಟ್ಯಾಗ್‌ ಕಡ್ಡಾಯದ ಗಡುವನ್ನು ಫೆಬ್ರವರಿ 15ರವರೆಗೆ ವಿಸ್ತರಿಸಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ.

ನವದೆಹಲಿ(ಜ.01): ಆನ್‌ಲೈನ್‌ ಮೂಲಕ ಹೆದ್ದಾರಿ ಟೋಲ್‌ ಪಾವತಿಸುವ ವ್ಯವಸ್ಥೆಯಾಗಿರುವ ಫಾಸ್ಟ್‌ಟ್ಯಾಗ್‌ ಅಳವಡಿಕೆಗೆ ವಿಧಿಸಲಾಗಿದ್ದ 2021ರ ಜನವರಿ 1ರ ಗಡುವನ್ನು ಫೆಬ್ರವರಿ 15ರವರೆಗೆ ವಿಸ್ತರಿಸಲಾಗಿದೆ. 

ಇದರೊಂದಿಗೆ ವಾಹನಗಳ ಮೇಲೆ ಕಡ್ಡಾಯವಾಗಿ ಫಾಸ್ಟ್‌ಟ್ಯಾಗ್‌ ಅಳವಡಿಕೆಗೆ ಇದ್ದ ಗಡುವು 45 ದಿನಗಳವರೆಗೆ ವಿಸ್ತರಣೆಯಾದಂತಾಗಿದೆ. ಹೊಸ ವರ್ಷದ ಆರಂಭದಿಂದಲೇ ಎಲ್ಲಾ ವಾಹನಗಳಿಗೆ ಫಾಸ್ಟ್‌ಟ್ಯಾಗ್‌ ಕಡ್ಡಾಯವಾಗಿಸುವ ಅಧಿಸೂಚನೆಯನ್ನು ಕಳೆದ ತಿಂಗಳಷ್ಟೇ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆ ಹೊರಡಿಸಿತ್ತು. 

Fastag ರಿಚಾರ್ಜ್, ಸ್ಟೇಟಸ್ ಚೆಕ್ ಸರಳ, ಹೊಸ ಫೀಚರ್ಸ್ ಪರಿಚಯಿಸಿದ ಕೇಂದ್ರ!

ಅಲ್ಲದೆ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು ಸಹ 2021ರ ಜನವರಿ 1ರಿಂದಲೇ ಫಾಸ್ಟ್‌ಟ್ಯಾಗ್‌ ಕಡ್ಡಾಯವಾಗಲಿದೆ ಎಂದಿದ್ದರು. ಆದರೆ ಇದೀಗ ಈ ಗಡುವನ್ನು ಫೆ.15ರವರೆಗೆ ವಿಸ್ತರಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

Fastag ನೂತನ ಫೀಚರ್ಸ್‌ಗಳನ್ನು ಪರಿಚಯಿಸಿದ್ದು, ಈ ಪೈಕಿ ರೀಚಾರ್ಜ್‌ ಮಾಡಿ ಕೇವಲ 3 ನಿಮಿಷಕ್ಕೆ ಆಕ್ಟೀವೇಟ್‌ ಆಗುವುದು ಗ್ರಾಹಕರಿಗೆ ಸಾಕಷ್ಟು ಅನುಕೂಲವಾಗಿ ಪರಿಣಮಿಸಿದೆ.

PREV
click me!

Recommended Stories

ಭಾರತದ ಅತೀ ದುಬಾರಿ ನಂಬರ್ ಪ್ಲೇಟ್, ₹1.17 ಕೋಟಿಗೆ 8888 ಖರೀದಿಸಿದ ಯುವ ಉದ್ಯಮಿ ಯಾರು?
Hero Splendor ಬೈಕ್‌ಗಳಿಗಿಂತ ಕಡಿಮೆ ಬೆಲೆಗೆ ಸಿಗುವ ಎಲೆಕ್ಟ್ರಿಕ್ ಸ್ಕೂಟರ್‌ಗಳು