ವಾಹನ ಮಾಲೀಕರೆ ಗಮನಿಸಿ/ ಫಾಸ್ಟ್ ಟ್ಯಾಗ್ ಕಡ್ಡಾಯ ಮಿತಿ ವಿಸ್ತರಣೆ/ ಜನವರಿ ಒಂದರಿಂದಲೇ ಕಡ್ಡಾಯ ಮಾಡಲಾಗಿತ್ತು/ ಫೆ. 15 ರ ವರೆಗೆ ಅವಕಾಶ ನೀಡಿದ ಸರ್ಕಾರ
ನವದೆಹಲಿ(ಡಿ. 31) ರಾಷ್ಟ್ರೀಯ ಹೆದ್ದಾರಿಗಳ ಟೋಲ್ ನಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡುವ ಡೆಡ್ ಲೈನ್ ವಿಸ್ತರಿಸಲಾಗಿದೆ. 2021 ಫೆಬ್ರವರಿ 15 ರವೆರೆಗೆ ವಿಸ್ತರಣೆ ಮಾಡಲಾಗಿದೆ.
ಜನವರಿ ಒಂದರಿಂದಲೇ ಫಾಸ್ಟ್ ಟ್ಯಾಗ್ ಕಡ್ಡಾಯ ಎಂದು ಹೇಳಲಾಗಿತ್ತು. ಎಲ್ಲಾ ವಾಣಿಜ್ಯ ಮತ್ತು ನಾಲ್ಕು ಚಕ್ರದ ವಾಹನಗಳಿಗೆ ಫಾಸ್ಟ್ ಟ್ಯಾಗ್ ಇರಬೇಕು ಎಂದು ತಿಳಿಸಿತ್ತು.
undefined
ಶೇ. 75 ರಷ್ಟು ಟೋಲ್ ಫಾಸ್ಟ್ ಟ್ಯಾಗ್ ಮಾದರಿಯಲ್ಲಿ ಪಾವತಿಯಾಗುತ್ತಿದೆ. ಸರ್ಕಾರ ಕಡ್ಡಾಯ ಮಾಡಿರುವುದರಿಂದ ಇನ್ನು ಮುಂದೆ ಅಂದರೆ ಫೆ. 15 ರಿಂದ ಪೂರ್ಣ ಹಣ ಡಿಜಿಟಲ್ ಮಯವಾಗಲಿದೆ. ಒಂದು ವೇಳೆ ಡಿಜಿಟಲೀಕರಣಕ್ಕೆ ಬದ್ಧವಾಗದೆ ಫಾಸ್ಟ್ ಟ್ಯಾಗ್ ಅಳವಡಿಕೆ ಮಾಡಿಕೊಳ್ಳದಿದ್ದರೆ ಡಬಲ್ ಟೋಲ್ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಫಾಸ್ಟ್ ಟ್ಯಾಗ್ ಹೊಸ ಫೀಚರ್ ತಿಳಿದುಕೊಳ್ಳಿ
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಪ್ರಾಧಿಕಾರ ಫಾಸ್ಟ್ ಟ್ಯಾಗ್ ಆ್ಯಪ್ ಬಳೆಕಯನ್ನು ಮತ್ತಷ್ಟು ಸುಲಭಗೊಳಿಸಿತ್ತು. ಹೊಸ ಫೀಚರ್ಸ್ ಮೂಲಕ ಫಾಸ್ಟ್ ಟ್ಯಾಗ್ ಖಾತೆಯಲ್ಲಿ ಉಳಿದಿರುವ ಹಣವನ್ನು ಸುಲಭವಾಗಿ ಪರಿಶೀಲಿಸಬಹುದು. ಹಣ ಇದ್ದಲ್ಲಿ ಹಸಿರು ಬಣ್ಣ, ಹಣ ಕಡಿಮೆ ಇದ್ದಲ್ಲಿ ಆರೇಂಜ್ ಹಾಗೂ ನಿಗದಿತ ಮಟ್ಟಕ್ಕಿಂತ ಕಡಿಮೆ ಇದ್ದರೆ ಕೆಂಪು ಬಣ್ಣದಲ್ಲಿ ತೋರಿಸಲಿದೆ ಎಂಬುದನ್ನು ತಿಳಿಸಿತ್ತು.