ಏಪ್ರಿಲ್ 1 ರಿಂದ ಹೊಸ ಟೋಲ್ ಪಾಲಿಸಿ, ಸಿಗಲಿದೆ ಭರ್ಜರಿ ವಿನಾಯಿತಿ

ಏಪ್ರಿಲ್ 1 ರಿಂದ ಹೊಸ ಟೋಲ್ ಪಾಲಿಸಿ ಜಾರಿಯಾಗುತ್ತಿದೆ. ನೂತನ ಟೋಲ್ ಪಾಲಿಸಿ ವಾಹನ ಮಾಲೀಕರಿಗೆ ಹೆಚ್ಚಿನ ವಿನಾಯಿತಿ ಸಿಗಲಿದೆ. ನಿತಿನ್ ಗಡ್ಕರ್ ಘೋಷಿಸಿದ ಹೊಸ ಟೋಲ್ ಪಾಲಿಸಿ ಏನು?

Nitin Gadkari set to announce new toll policy from April with concession

ನವದೆಹಲಿ(ಮಾ.25) ಭಾರತದಲ್ಲಿ ರಸ್ತೆ ಸಂಪರ್ಕ ಅಭಿವೃದ್ಧಿಪಡಿಸಲಾಗುತ್ತದೆ. ಎಲ್ಲೆಡೆ ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಹೆದ್ದಾರಿ, ಎಕ್ಸ್‌ಪ್ರೆಸ್‌ವೇ ಸೇರಿದಂತೆ ಹಲವು ಹೊಸ ರಸ್ತೆಗಳು ನಿರ್ಮಾಣಗೊಂಡಿದೆ. ದೇಶದ ಮೂಲೆ ಮೂಲೆಗೂ ರಸ್ತೆ ನಿರ್ಮಾಣ ಮಾಡಲಾಗುತ್ತದೆ. ಬಹುತೇಕ ಎಲ್ಲಾ ರಸ್ತೆಗಳಲ್ಲಿ ಟೋಲ್ ಪಾವತಿ ವ್ಯವಸ್ಥೆ. ಟೋಲ್ ದರ ಕುರಿತು ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಇದರ ನಡುವೆ ನಿತಿನ್ ಗಡ್ಕರಿ ಮಹತ್ವದ ಘೋಷಣೆ ಮಾಡಿದ್ದಾರೆ. ಏಪ್ರಿಲ್ 1 ರಿಂದ ಹೊಸ ಟೋಲ್ ಪಾಲಿಸಿ ಘೋಷಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಹೊಸ ಟೋಲ್ ಪಾಲಿಸಿಯಲ್ಲಿ ವಾಹನ ಮಾಲೀಕರಿಗೆ ರಿಯಾಯಿತಿ ಸಿಗಲಿದೆ ಎಂದು ಗಡ್ಕರಿ ಹೇಳಿದ್ದಾರೆ. 

ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ (ಮುಂಬೈ ಬಿಕೆಸಿ) ನಡೆದ ಬಿಸಿನೆಸ್ ಟುಡೇದ ಬಿಟಿ ಮೈಂಡ್ ರಶ್ 2025 ಕಾರ್ಯಕ್ರಮದಲ್ಲಿ ಮಾತನಾಡಿದ ನಿತಿನ್ ಗಡ್ಕರಿ ಹೊಸ ಟೋಲ್ ನೀತಿ ಕುರಿತು ಹೇಳಿದ್ದಾರೆ. ರಾಜ್ಯದ ಹೆದ್ದಾರಿಗಳಲ್ಲಿನ ಟೋಲ್ ತೆರಿಗೆ ಮತ್ತು ಟೋಲ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಾಯಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದಿದ್ದಾರೆ. 

Latest Videos

ಜಾರಿಯಾಗುತ್ತಿದೆ ಹೊಸ ಟೋಲ್ ಟ್ಯಾಕ್ಸ್ ಸ್ಮಾರ್ಟ್ ಕಾರ್ಡ್; ಇದು ವರವೋ? ಹೊಸ ರೀತಿಯ ತೆರಿಗೆಯೋ?

ನಿತಿನ್ ಗಡ್ಕರಿ ಘೋಷಣೆ

ಏಪ್ರಿಲ್ ಒಂದರ ಮೊದಲು ಟೋಲ್ ಬಗ್ಗೆ ಹೊಸ ನೀತಿಯನ್ನು ನಾವು ಪ್ರಕಟಿಸುತ್ತೇವೆ. ಇದು ಪ್ರಯಾಣಿಕರಿಗೆ ಸೂಕ್ತ ರಿಯಾಯಿತಿಗಳನ್ನು ನೀಡಲಿದೆ ಎಂದು ಗಡ್ಕರಿ ಹೇಳಿದ್ದಾರೆ. ಟೋಲ್ ದರಗಳ ಬಗ್ಗೆ ಇರುವ ಸಮಸ್ಯೆಗಳನ್ನು ಪರಿಹರಿಸುವುದು ಮತ್ತು ರಸ್ತೆ ಮೂಲಸೌಕರ್ಯಕ್ಕೆ ಹಣಕಾಸು ಒದಗಿಸುವುದು ಈ ಕ್ರಮದ ಉದ್ದೇಶವಾಗಿದೆ. ಈಗ ಸಂಸತ್ ಅಧಿವೇಶನ ನಡೆಯುತ್ತಿದೆ, ಹೀಗಾಗಿ ಇದರ ಬಗ್ಗೆ ಹೆಚ್ಚು ಹೇಳಲು ಸಾಧ್ಯವಿಲ್ಲ. ಆದರೆ 2025 ಏಪ್ರಿಲ್ ಒಂದರಿಂದ ಇಂತಹ ನೀತಿಯನ್ನು ತರಲಾಗುತ್ತದೆ. ಇದು ಟೋಲ್ ಪಾವತಿಸುವರಿಗೆ ರಿಲೀಫ್ ನೀಡಲಿದೆ ಎಂದಿದ್ದಾರೆ.  

ಇದರ ಬಗ್ಗೆ ಹೆಚ್ಚಿನ ವಿವರ ನೀಡಲು ಅವರು ನಿರಾಕರಿಸಿದರು. ಆದರೆ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್ ದರಗಳ ಬಗ್ಗೆ ಜನರು ಇನ್ನು ಮುಂದೆ ಜಗಳವಾಡುವುದಿಲ್ಲ ಎಂದು ಅವರು ಹೇಳಿದರು. ಇದರ ಜೊತೆಗೆ, ಪ್ರಸ್ತುತ ಎನ್‌ಎಚ್‌ಎಐ ಟೋಲ್ ಆದಾಯ 55,000 ಕೋಟಿ ರೂಪಾಯಿಗಳಷ್ಟಿದ್ದು, ಮುಂದಿನ ಎರಡು ವರ್ಷಗಳಲ್ಲಿ ಇದು 1.40 ಲಕ್ಷ ಕೋಟಿ ರೂಪಾಯಿಗಳಿಗೆ ತಲುಪಲಿದೆ ಎಂದು ಅವರು ಹೇಳಿದರು.

ಸರತಿ ಸಾಲು ತಪ್ಪಿಸಲು ಹೊಸ ಯೋಜನೆ

ಟೋಲ್ ಪಾವತಿಸಲು ಫಾಸ್ಟ್‌ಟ್ಯಾಗ್ ವ್ಯವಸ್ಥೆ ಜಾರಿಗೆ ತಂದ ನಂತರವೂ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳಲ್ಲಿ ಉದ್ದನೆಯ ಸರತಿ ಸಾಲುಗಳನ್ನು ತಪ್ಪಿಸಲು, ಕೇಂದ್ರ ಸರ್ಕಾರ ವಾರ್ಷಿಕ ಪಾಸ್ ನೀಡುವ ಬಗ್ಗೆ ಪರಿಗಣಿಸುತ್ತಿದೆ ಎಂದು ವರದಿಯಾಗಿದೆ. ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ನಿತಿನ್ ಗಡ್ಕರಿ ಈ ವಿಷಯವನ್ನು ಸ್ಪಷ್ಟಪಡಿಸಿದ್ದರು. ಇದು ಪ್ರಯಾಣಿಕರ ಸಮಯವನ್ನು ಉಳಿಸುತ್ತದೆ ಮತ್ತು ಅನಗತ್ಯವಾಗಿ ಉದ್ದನೆಯ ಕ್ಯೂನಲ್ಲಿ ನಿಲ್ಲುವುದನ್ನು ತಪ್ಪಿಸುತ್ತದೆ ಎಂದು ಅವರು ಸಂಸತ್ತಿನಲ್ಲಿ ಹೇಳಿದರು. ಇದರ ಜೊತೆಗೆ ಕೆಲವು ಸ್ಥಳಗಳಲ್ಲಿ ಉಪಗ್ರಹ ಆಧಾರಿತ ಬ್ಯಾರಿಯರ್ ಫ್ರೀ ಟೋಲ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ಅವರು ಹೇಳಿದರು. ಪ್ರಸ್ತುತ, ಇದನ್ನು ಪ್ರಾಯೋಗಿಕ ಯೋಜನೆಯಾಗಿ ಜಾರಿಗೆ ತರಲಾಗುತ್ತಿದೆ. ಈ ಯೋಜನೆ ಯಶಸ್ವಿಯಾದರೆ, ಭವಿಷ್ಯದಲ್ಲಿ ಇದನ್ನು ವಿಸ್ತರಿಸುವ ಬಗ್ಗೆ ಚರ್ಚೆಗಳು ನಡೆಯುತ್ತವೆ.

ಘರೌಂಡ, ಚೊರ್ಯಾಸಿ, ನೆಮ್ಲಿ, ದ್ವಾರಕಾ ಎಕ್ಸ್‌ಪ್ರೆಸ್‌ವೇಗಳಲ್ಲಿ ಪ್ರಸ್ತುತ ಮುಂಗಡ ಟೋಲ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು. ಇಲ್ಲಿ ಆಟೋಮ್ಯಾಟಿಕ್ ನಂಬರ್ ಪ್ಲೇಟ್ ಗುರುತಿಸುವಿಕೆ ವ್ಯವಸ್ಥೆ ಜಾರಿಯಲ್ಲಿದೆ. ಇದರಿಂದ ಜನರು ನಿಲ್ಲಿಸದೆ ಟೋಲ್ ದಾಟಲು ಅನುಕೂಲವಾಗುತ್ತದೆ. ಅಲ್ಲದೆ ಶುಲ್ಕವನ್ನು ಸಹ ಕಡಿಮೆ ಮಾಡಬಹುದು. ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಿಧಿಸುವ ಟೋಲ್ ಶುಲ್ಕದ ಬಗ್ಗೆ ಮಾಹಿತಿಯನ್ನು ಪ್ಲಾಜಾಗಳಲ್ಲಿ ವಿವರವಾಗಿ ನೀಡಲಾಗಿದೆ ಎಂದು ಅವರು ಹೇಳಿದರು. ಇದರ ಜೊತೆಗೆ, ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾದ ವೆಬ್‌ಸೈಟ್‌ನಲ್ಲಿಯೂ ಶುಲ್ಕದ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ. ಶುಲ್ಕ ಹೆಚ್ಚಳ ಅಥವಾ ಯಾವುದೇ ಬದಲಾವಣೆಗಳಿದ್ದರೆ, ಪತ್ರಿಕೆಗಳಲ್ಲಿ ಪ್ರಕಟಿಸುವ ಮೂಲಕ ಅದರ ಬಗ್ಗೆ ಮಾಹಿತಿಯನ್ನು ನೀಡಲಾಗುವುದು ಎಂದು ಅವರು ಹೇಳಿದರು. ಟೋಲ್ ಶುಲ್ಕ ವ್ಯವಸ್ಥೆ ಸಂಪೂರ್ಣವಾಗಿ ಪಾರದರ್ಶಕವಾಗಿದೆ ಎಂದು ಅವರು ಹೇಳಿದರು.

ಟ್ರಾಪಿಕ್ ಮ್ಯಾನೇಜ್ಮೆಂಟ್

ದೇಶದ 325 ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಿಸ್ತಾರವಾದ ಟ್ರಾಫಿಕ್ ಮ್ಯಾನೇಜ್ಮೆಂಟ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ನಿತಿನ್ ಗಡ್ಕರಿ ಹೇಳಿದರು. ಇವುಗಳ ಅಡಿಯಲ್ಲಿ ಒಟ್ಟು 20,000 ಕಿಲೋಮೀಟರ್ ಮಾರ್ಗವನ್ನು ಒಳಗೊಂಡಿದೆ. ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಎ.ಟಿ.ಎಂ.ಎಸ್. ವ್ಯಾಪ್ತಿಯಲ್ಲಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಮಾರ್ಗಗಳನ್ನು ಸೇರಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಹೇಳಿದರು. ಎಂಪಿ ರಾಜಕುಮಾರ್ ಚಾಹರ್ ಕೇಳಿದ ಪ್ರಶ್ನೆಗೆ ನಿತಿನ್ ಗಡ್ಕರಿ ಸಂಪೂರ್ಣ ಮಾಹಿತಿಯನ್ನು ನೀಡಿದರು. ಪ್ರಸ್ತುತ ಉಪಗ್ರಹ ಆಧಾರಿತ ಟೋಲ್ ವ್ಯವಸ್ಥೆಗೆ ಹೋಗಲು ಪ್ರಯತ್ನಗಳು ನಡೆಯುತ್ತಿವೆ, ಆದರೆ ಅದಕ್ಕೆ ಸಮಯ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು. ಏಕೆಂದರೆ ಇದಕ್ಕಾಗಿ ಹೆಚ್ಚಿನ ಉಪಗ್ರಹಗಳು ಬೇಕಾಗುತ್ತವೆ. ಅದು ಇಲ್ಲದೆ ವಾಹನಗಳ ನಿಖರವಾದ ಸ್ಥಾನವನ್ನು ನಿರ್ಧರಿಸುವುದು ಕಷ್ಟವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಆ ಯೋಜನೆ ಪ್ರಸ್ತುತ ಪರಿಗಣನೆಯಲ್ಲಿದೆ ಎಂದು ವರದಿಯಾಗಿದೆ.

ಫಾಸ್ಟಾಗ್‌ ಬೇಡ, ಟೂಲ್ ಬೂತ್ ಇಲ್ಲ, ಭಾರತದಲ್ಲಿ ಟೋಲ್ ಸಂಗ್ರಹಕ್ಕೆ GNSS ಕ್ರಾಂತಿ!
 

vuukle one pixel image
click me!