ಕರ್ನಾಟಕದಲ್ಲಿ ಒಂದರ ಮೇಲೊಂದರಂತೆ ಬೆಲೆ ಏರಿಕೆಯಾಗುತ್ತಿದೆ. ಇದೀಗ ಜನತೆಗೆ ಮತ್ತೊಂದು ಶಾಕ್ ಎದುರಾಗಿದೆ. ಏಪ್ರಿಲ್ ತಿಂಗಳಿನಿಂದ ವಾಹನ ಖರೀದಿ ಬಲು ದುಬಾರಿಯಾಗುತ್ತಿದೆ. ರಾಜ್ಯ ಸರ್ಕಾರದ ಸೆಸ್, ಮತ್ತೊಂದೆಡೆ ಬಿಡಿ ಭಾಗ ಆಮದು ಸುಂಕ ಹೆಚ್ಚಳದಿಂದ ವಾಹನ ಕೈಗೆಟುಕದ ದ್ರಾಕ್ಷಿಯಾಗಲಿದೆ.
ಬೆಂಗಳೂರು(ಮಾ.25) ಕರ್ನಾಟಕದಲ್ಲಿ ಬೆಲೆ ಏರಿಕೆಯಿಂದ ಜನರು ಹೈರಾಣಾಗಿದ್ದಾರೆ. ಅಗತ್ಯ ವಸ್ತುಗಳು ಬೆಲೆ ಏರಿಕೆಯಿಂದ ಹಿಡಿದು ಪ್ರತಿ ವಸ್ತುಗಳ ಬೆಲೆ ಏರಿಕೆಯಾಗಿದೆ. ಇದರ ಬೆನ್ನಲ್ಲೇ ರಾಜ್ಯದ ಜನತೆಗೆ ಮತ್ತೊಂದು ದರ ಏರಿಕೆ ಬಿಸಿ ಕಾಡುತ್ತಿದೆ. ಏಪ್ರಿಲ್ ತಿಂಗಳಿನಿಂದ ಕರ್ನಾಟಕದಲ್ಲಿ ಹೊಸ ವಾಹನ ಬೆಲೆ ದುಬಾರಿಯಾಗುತ್ತಿದೆ. ಒಂದೆಡೆ ರಾಜ್ಯ ಸರ್ಕಾರ ಎಪ್ರಿಲ್ ತಿಂಗಳಿನಿಂದ ಹೆಚ್ಚುವರಿ ಸೆಸ್ ಹಾಕುತ್ತಿದೆ. ಇದರ ಜೊತೆಗೆ ಬಿಡಿ ಭಾಗ, ಉಕ್ಕುಗಳ ಆಮದು ದರ ಕೂಡ ಏಪ್ರಿಲ್‌ನಿಂದ ಏರಿಕೆಯಾಗುತ್ತಿದೆ. ಇದರ ಪರಿಣಾಮ ಏಪ್ರಿಲ್ 1 ರಿಂದ ವಾಹನ ಬೆಲೆ ದುಬಾರಿಯಾಗುತ್ತಿದೆ.
ಪ್ರತಿ ವಾಹನದ ಮೇಲೆ ಶೇಕಡಾ 3 ರಿಂದ 4 ರಷ್ಟು ಬೆಲೆ ಏರಿಕೆಯಾಗುತ್ತಿದೆ. ರಾಜ್ಯ ಸರ್ಕಾರ ಮಾರ್ಚ್ ತಿಂಗಳಿನಿಂದಲೇ ಸೆಸ್ ಹೆಚ್ಚಿಸಲಾಗಿದೆ. ಇದರ ಜೊತೆಗೆ ಏಪ್ರಿಲ್ ತಿಂಗಳಿನಿಂದ ಉಕ್ಕಿನ ದರ,ಬಿಡಿ ಭಾಗಗಳ ಆಮದು ದರ ಏರಿಕೆ, ಆಟೋ ಮೊಬೈಲ್ಸ್ ದರ ಹೆಚ್ಚಳದ ಪರಿಣಾಮ ವಾಹನ ಬೆಲೆ ಏರಿಕೆಯಾಗುತ್ತಿದೆ.
ಉತ್ತರವೋ, ದಕ್ಷಿಣ ಭಾರತವೋ? ಎಲೆಕ್ಟ್ರಿಕ್ ಕಾರು ಖರೀದಿಯಲ್ಲಿ ಯಾರ ಕೊಡುಗೆ ಎಷ್ಟು?
ಏಪ್ರಿಲ್ ತಿಂಗಳಿನಿಂದ ರಾಜ್ಯದಲ್ಲಿ ವಾಹನ ಖರೀದಿ ಸವಾಲಾಗಲಿದೆ. ಜನಸಾಮಾನ್ಯರಿಗೆ ವಾಹನ ಕೈಗೆಟುಕದ ದ್ರಾಕ್ಷಿಯಾಗಲಿದೆ. ದ್ವಿಚಕ್ರವಾಹನಗಳ ಬೆಲೆ 2,000 ರೂಪಾಯಿಯಿಂದ 3000 ರೂಪಾಯಿ ವರೆಗೆ ಏರಿಕೆಯಾಗಲಿದೆ. ಇನ್ನು ಆಟೋ ರಿಕ್ಷಾ ಬೆಲೆ ಮೇಲೆ 5,000 ರೂಪಾಯಿ ಏರಿಕೆಯಾಗುವ ಸಾಧ್ಯತೆ ಇದೆ. ಸದ್ಯ ಆಟೋ ರಿಕ್ಷಾ ಬೆಲೆ 2 ಲಕ್ಷದ 73 ಸಾವಿರದ 200 ರೂಪಾಯಿ, ಏರಿಕೆ ಬಳಿಕ
ಸದ್ಯ ಒಂದು ಆಟೋ ಎಕ್ಸ್ ಷೋ ರೂಮ್ ಪ್ರೈಸ್- 2 ಲಕ್ಷದ 73 ಸಾವಿರದ 200 ರೂಪಾಯಿ ಇದೆ.2 ಲಕ್ಷದ 78 ಸಾವಿರದ 200 ಆಗಲಿದೆ. ಕಾರುಗಳ ಬೆಲೆಯಲ್ಲಿ ಶೇಕಡಾ 2 ರಿಂದ 3 ರಷ್ಟು ದರ ಏರಿಕೆಯಾಗಲಿದೆ. ಉದಾಹರಣೆಗೆ 5 ಲಕ್ಷ ರೂಪಾಯಿ ಎಕ್ಸ್ ಶೋ ರೂಂ ಕಾರು ದರದಲ್ಲಿ 15,000 ರೂಪಾಯಿ ಏರಿಕೆಯಾಗಲಿದೆ. 10 ಲಕ್ಷ ರೂಪಾಯಿ ಎಕ್ಸ್ ಶೋ ರೂಂ ಕಾರಿನ ಬೆಲೆ ಮೇಲೆ 30,000 ರೂಪಾಯಿ ಏರಿಕೆಯಾಗಲಿದೆ.
ರಾಜ್ಯ ಸರ್ಕಾರ ಮಾರ್ಚ್ ತಿಂಗಳಿನಿಂದಲೇ ಸೆಸ್ ಏರಿಕೆ ಮಾಡಿದೆ. ಇದರ ಪರಿಣಾಮ ದ್ವಿಚಕ್ರ ವಾಹನ ಬೆಲೆ 500 ರೂಪಾಯಿ ಸರ್ಕಾರ ವಸೂಲಿ ಮಾಡುತ್ತಿದೆ. ಇನ್ನು ಕಾರುಗಳ ಮೇಲೆ 1000 ರೂಪಾಯಿ ಸೆಸ್ ರೂಪದಲ್ಲಿ ತೆಗೆದುಕೊಳ್ಳುತ್ತಿದೆ. ಇದರಿಂದ ವಾಹನ ಮಾರಾಟ ಕುಸಿತ ಕಾಣಲಿದೆ. ವಾಹನ ಖರೀದಿಗೆ ಜನರು ಹಿಂದೇಟು ಹಾಕಲಿದ್ದಾರೆ ಎಂದು ಕರ್ನಾಟಕ ರಾಜ್ಯ ಟ್ಯಾಕ್ಸಿ ಓನರ್ ಅಸೋಸಿಯೇಷನ್ ಅಧ್ಯಕ್ಷ ರಾಮಕೃಷ್ಣ ಹೊಳ್ಳ ಹೇಳಿದ್ದಾರೆ.
ಹೊಸ ವಾಹನ ಖರೀದಿಗೆ ಮುಂದಾಗಿರುವ ಜನ, ಇದೇ ತಿಂಗಳಲ್ಲಿ ವಾಹನ ಬುಕ್ ಮಾಡಲು ಮುಂದಾಗುತ್ತಿದ್ದಾರೆ. ಮುಂದಿನ ತಿಂಗಳ ಬುಕಿಂಗ್‌ನಲ್ಲಿ ಬೆಲೆ ಏರಿಕೆಯಾಗುತ್ತಿರುವ ಕಾರಣ ಜನರು ಆರ್ಥಿಕ ವರ್ಷದ ಅಂತ್ಯಕ್ಕೆ ಕ್ಲಿಯರೆನ್ಸ್ ಆಫರ್ ಘೋಷಣೆಗಾಗಿ ಕಾಯುತ್ತಿದ್ದಾರೆ.
ಅಲ್ಟ್ರವೈಲೆಟ್ ಇವಿ ಸ್ಕೂಟರ್ ಲಾಂಚ್, 100ರೂಗೆ 500km ಮೈಲೇಜ್, 14 ದಿನದಲ್ಲಿ 50000 ಬುಕಿಂಗ್