Flying bike launch ವಿಶ್ವದ ಮೊದಲ ಹಾರುವ ಹೋವರ್ ಬೈಕ್ ಬಿಡುಗಡೆ, ಬೆಲೆ 5.1 ಕೋಟಿ ರೂ!

By Suvarna News  |  First Published Dec 18, 2021, 9:56 PM IST
  • XTURISMO ಲಿಮಿಟೆಡ್ ಎಡಿಶನ್ ಹೋವರ್ ಬೈಕ್
  • ವಿಶ್ವದ ಮೊದಲ ಹೋವರ್ ಬೈಕ್ ಬುಕಿಂಗ್ ಆರಂಭ
  • ಸದ್ಯ ಬಿಡುಗಡೆಯಾಗುತ್ತಿರುವುದು ಪೆಟ್ರೋಲ್ ಎಂಜಿನ್ ಬೈಕ್

ಜಪಾನ್(ಡಿ.18):  ವಿಶ್ವದಲ್ಲಿ ಸಾರಿಗೆ ರೂಪವೇ(Transport) ಬದಲಾಗುತ್ತಿದೆ. ಒಂದೆಡೆ ಎಲೆಕ್ಟ್ರಿಕ್ ವಾಹನಗಳತ್ತ ವಿಶ್ವ ಪರಿವರ್ತನೆಗೊಳ್ಳುತ್ತಿದೆ. ಇದರ ನಡುವೆ ಸಾರಿಗೆ ರೂಪವನ್ನೇ ಬದಲಾಯಿಸುವ ಕೆಲಸಗಳು ಕೆಲ ವರ್ಷಗಳಿಂದ ನಡೆಯುತ್ತಲೇ ಇದೆ. ಇದೀಗ ಸಾಕಾರಗೊಳ್ಳುತ್ತಿದೆ. ವಿಶ್ವದ ಮೊದಲ ಹಾರುವ ಬೈಕ್(Flying Bike) ಬಿಡುಗಡೆಯಾಗಿದೆ. ಇಷ್ಟೇ ಅಲ್ಲ ಬುಕಿಂಗ್ ಕೂಡ ಆರಂಭಗೊಂಡಿದೆ.

ಜಪಾನ್‌ನ(Japan) ಆಲಿ ಟೆಕ್ನಾಲಜಿ ಕಂಪನಿ  XTURISMO ಹಾರುವ ಬೈಕ್(ಹೋವರ್ ಬೈಕ್) ಬಿಡುಗಡೆ ಮಾಡಿದೆ.  XTURISMO ಲಿಮಿಟೆಡ್ ಎಡಿಶನ್ ಹಾರುವ ಬೈಕ್ ಆಗಿದ್ದು, ಮೊದಲ ಹಂತದಲ್ಲಿ 200 ಬೈಕ್ ಮಾತ್ರ ಉತ್ಪಾದನೆ ಮಾಡಲಾಗುತ್ತಿದೆ. ಜಪಾನ್‌ನಲ್ಲಿ ಬಿಡುಗಡೆಯಾಗಿರುವ ಹಾರುವ ಬೈಕ್ ಬೆಲೆ 77.7 ಯೆನ್. ಭಾರತೀಯ ರೂಪಾಯಿಗಳಲ್ಲಿ 5.1 ಕೋಟಿ ರೂಪಾಯಿ. 

Latest Videos

undefined

ಭಾರತದಲ್ಲಿ ನಿರ್ಮಾಣವಾಗಲಿದೆ ವಿಶ್ವದ ಮೊಟ್ಟ ಮೊದಲ ಹಾರುವ ಕಾರು!

ವಿಶೇಷ ಅಂದರೆ ಸದ್ಯ ಬಿಡುಗಡೆಯಾಗಿರುವ  XTURISMO ಹಾರುವ ಬೈಕ್ ಪೆಟ್ರೋಲ್ ಎಂಜಿನ್(Petron Engine) ಹೊಂದಿದೆ. ಆದರೆ ಆಪರೇಟ್ ಎಲೆಕ್ಟ್ರಿಕ್‌ಫೈ ಮಾಡಲಾಗಿದೆ. 2025ಕ್ಕೆ ಎಲೆಕ್ಟ್ರಿಕ್ ಹಾರುವ ಬೈಕ್ ಬಿಡುಗಡೆ ಮಾಡಲು ಆಲಿ ಟೆಕ್ನಾಲಜಿ ಕಂಪನಿ ನಿರ್ಧರಿಸಿದೆ. 

XTURISMO ಹಾರುವ ಬೈಕ್  3.7 ಮೀಟರ್ ಉದ್ದ, 2.4 ಮೀಟರ್ ಅಗಲ ಹಾಗೂ 1.5 ಮೀಟರ್ ಎತ್ತರವಿದೆ. ಈ ಬೈಕ್ ತೂಕ 300 ಕೆ.ಜಿ.  ಓರ್ವ ವ್ಯಕ್ತಿ ಕುಳಿತುಕೊಳ್ಳಲು ಸಾಧ್ಯವಿದೆ. ಒಂದು ಸೀಟಿನ ಹೋವರ್ ಬೈಕ್ 30 ರಿಂದ 40 ನಿಮಿಷಗಳ ಕಾಲ ಹಾರಾಟ ಮಾಡಲಿದೆ.  2022ರ ಮೊದಲ ಭಾಗದಿಂದಲೇ ಬುಕಿಂಗ್ ಮಾಡಿದವರಿಗೆ ಹೋವರ್ ಬೈಕಿ ಡೆಲಿವರಿ ಆರಂಭಗೊಳ್ಳಲಿದೆ. 

ಕೇವಲ 3 ನಿಮಿಷದಲ್ಲಿ ಕಾರು ವಿಮಾನವಾಗಿ ಬದಲಾಗುತ್ತೆ; ಕ್ಲೈನ್ ವಿಷನ್ ಆವಿಷ್ಕಾರ !

ಹೋವರ್ ಬೈಕ್ 2017 ರಿಂದ ಅಭಿವೃದ್ಧಿ ಮಾಡುತ್ತಿದ್ದೇವೆ. ಇದೀಗ ಅಂತಿಮ ರೂಪ ನೀಡಿದ್ದೇವೆ. ಹಲವು ಪರೀಕ್ಷೆ, ಪ್ರಯೋಗ, ಬದಲಾವಣೆಗಳನ್ನು ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಹಾರುವ ಬೈಕ್‌ಗೆ ಬೇಡಿಕೆ ಬರಲಿದೆ. ಪರ್ವತ ಪ್ರದೇಶ, ಸಮುದ್ರದಲ್ಲಿ, ತುರ್ತು ಸಂದರ್ಭ ಹಾಗೂ ದುರಂತ ಸಂದರ್ಭಗಳಲ್ಲಿ ಬಳಕೆ ಮಾಡಬಹುದು. ನಮ್ಮ ಜೀವನ ಶೈಲಿಗೆ ಹೊಸ ಸಾರಿಗೆಯನ್ನು ಪರಿಚಯಿಸಲು ನಾವು ಸಂತಸ ಪಡುತ್ತಿದ್ದೇವೆ ಎಂದು ಆಲಿ ಟೆಕ್ನಾಲಜಿ CEO ಅಧ್ಯಕ್ಷ ಡೈಸುಕೆ ಕಟಾನೊ ಹೇಳಿದ್ದಾರೆ.

ಹೋವರ್ ಬೈಕ್ ಹಾರಟ ನಡೆಸಲು ತರಬೇತಿ ಅಗತ್ಯವಿದೆ. ಆಲಿ ಟೆಕ್ನಾಲಜಿ(ALI Technologies) ಮತ್ತೊಂದು ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ. ಬುಕಿಂಗ್ ಮಾಡಿದ ಗ್ರಾಹಕರಿಗೆ ತರಬೇತಿ ನೀಡಲು ಮುಂದಾಗಿದೆ. ಹಾರುವ ಬೈಕ್ ಹಾರಾಟ ಮಾಡಲು ಹೆಚ್ಚಿನ ಶ್ರಮ ವಹಿಸಬೇಕಿಲ್ಲ ಅನ್ನೋದು ಆಲಿ ಟೆಕ್ನಾಲಜಿ ಸಂಸ್ಥೆಯ ಮಾತು. 

Flying Carಗಳ ಕನಸು ನನಸಾಗುವತ್ತ : ಸರ್ಕಾರದಿಂದ ಹಾರುವ ಕಾರಿಗೆ ಗ್ರೀನ್ ಸಿಗ್ನಲ್!

ಮುಂದಿನ ವಾರದಲ್ಲಿ ಆಲ್ ಟೆಕ್ನಾಲಜಿ ಕಂಪನಿ ಹೋವರ್ ಬೈಕ್ ಪ್ರಾತ್ಯಕ್ಷಿಕೆ ತೋರಿಸಲಿದೆ. ಈ ಮೂಲಕ ಹೋವರ್ ಬೈಕ್ ಹಾರಾಟ ಹೇಗೆ, ನಿರ್ವಹಣೆ ಹೇಗೆ ಎಂಬುದನ್ನು ಜಗತ್ತಿಗೆ ತೋರಿಸಲಿದೆ. ಹಾರುವ ಬೈಕ್ ಹಾಗೂ ಹಾರುವ ಕಾರುಗಳು ಅಭಿವೃದ್ಧಿ ಹಂತದಲ್ಲಿದೆ. ಹಲವು ಕಂಪನಿಗಳು ಕೆಲಸದಲ್ಲಿ ನಿರತವಾಗಿದೆ. ಆದರೆ ಎಲ್ಲಾ ದೇಶಗಲ್ಲಿ ಸರ್ಕಾರಕ್ಕೆ ಇದೀಗ ತಲೆನೋವು ಶುರುವಾಗಿದೆ. ವಾಯು ಮಾರ್ಗದಲ್ಲಿ ಸಂಚಾರಕ್ಕೆ ಅನುಮತಿ, ನಿಯಮ, ಸಮಯ ರೂಪಿಸುವುದು ಹೇಗೆ ಅನ್ನೋ ಚಿಂತೆ ಹೆಚ್ಚಾಗಿದೆ. ಹೆಚ್ಚು ಮಂದಿ ಹಾರುವ ವಾಹನಗಳ ಬಳಕೆ ಆರಂಭಿಸಿದರೆ, ವಾಯು ವಾರ್ಗದಲ್ಲಿನ ಸಂಚಾರ ದಟ್ಟಣೆ, ಮಾರ್ಗ ಬಳಕೆ ಹೇಗೆ ಸಾಧ್ಯ ಅನ್ನೋದು ಸರ್ಕಾರ ಚರ್ಚಿಸುತ್ತಿದೆ. 

ಟೆಕ್ನಾಲಜಿ ಹಾಗೂ ಆಟೋಮೊಬೈಲ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಜಪಾನ್ ಇದೀಗ ವಿಶ್ವಕ್ಕೆ ಹಾರುವ ಬೈಕ್ ಪರಿಚಯಿಸಿದೆ. ನೂತನ ಸಾರಿಗೆ ಕುರಿತು ವಿಶ್ವದ ಹಲವು ರಾಷ್ಟ್ರಗಳು ಆಸಕ್ತಿ ತೋರಿದೆ. ಹೀಗಾಗಿ ಮುಂಬರವು ದಿನಗಳಲ್ಲಿ ಹಾರುವ ಬೈಕ್ ಅತೀ ಹೆಚ್ಚು ಬೇಡಿಕೆ ಬರುವ ಸಾಧ್ಯತೆಗಳು ಗೋಚರಿಸುತ್ತಿದೆ.

click me!