Vehicle Deregistration ಹೊಸ ವರ್ಷದಿಂದ 10 ವರ್ಷಕ್ಕಿಂತ ಹಳೆಯ ಎಲ್ಲಾ ಡೀಸೆಲ್ ವಾಹನದ ರಿಜಿಸ್ಟ್ರೇಶನ್ ಕ್ಯಾನ್ಸಲ್!

By Suvarna News  |  First Published Dec 18, 2021, 8:08 PM IST
  • ವಾಯು ಮಾಲಿನ್ಯ ನಿಯಂತ್ರಣಕ್ಕೆ ಕಠಿಣ ಕ್ರಮಕ್ಕೆ ಮುಂದಾದ ಸರ್ಕಾರ
  • 10 ವರ್ಷಕ್ಕಿಂತ ಹಳೆಯ ಡೀಸೆಲ್ ವಾಹನದ ನೋಂದಣಿ ರದ್ದು
  • ದೆಹಲಿ ಸರ್ಕಾರದ ನಿರ್ಧಾರಕ್ಕೆ ಭಾರಿ ಪರ ವಿರೋಧ

ನವದೆಹಲಿ(ಡಿ.18):  ಮಾಲಿನ್ಯ ನಿಯಂತ್ರಣ(Air Pollution) ಮಾಡದ ಕೇಂದ್ರ ಹಾಗೂ ದೆಹಲಿ ಸರ್ಕಾರಕ್ಕೆ ಈಗಾಗಲೇ ಸುಪ್ರೀಂ ಕೋರ್ಟ್ ಮಂಗಳಾರತಿ ಮಾಡಿದೆ. ಇದಾದ ಬಳಿಕ ಸರ್ಕಾರ ಮತ್ತಷ್ಟು ಕಠಿಣ ನಿಯಮ ಜಾರಿಗೆ ಮುಂದಾಗಿದೆ. ಇತ್ತ ರಾಷ್ಟ್ರೀಯ ಹಸಿರು ಮಂಡಳಿ(National Green Tribunal) ನಿರ್ದೇಶನದ ಪ್ರಕಾರ 10 ವರ್ಷಕ್ಕಿಂತ ಹಳೇಯ ಎಲ್ಲಾ ಡೀಸೆಲ್(Diesel Vehilce) ವಾಹನದ ರಿಜಿಸ್ಟ್ರೇಶನ್(Registration) ರದ್ದು ಮಾಡಲು ದೆಹಲಿ ಸರ್ಕಾರ ಮುಂದಾಗಿದೆ.  ಜನವರಿ 1 , 2022ರಿಂದ 10 ವರ್ಷ ಹಳೆಯ ಡೀಸೆಲ್ ವಾಹನದ ನೋಂದಣಿ ರದ್ದು ಮಾಡಲಾಗುತ್ತಿದೆ.

ಜನವರಿ 1, 2022ರಿಂದ ಹಳೇ ಡೀಸೆಲ್ ವಾಹನ, ಅಂದರೆ 10 ವರ್ಷಕ್ಕಿಂತ ಹಳೇಯ ವಾಹನವನ್ನು ರಸ್ತೆಗಿಳಿಸಿದರೆ ದಂಡ ಖಚಿತ. ಇನ್ನೂ ಹಳೇಯ ವಾಹನವನ್ನು ರಸ್ತೆಗಳಿಸಲೇಬೇಕು ಎಂದರೆ ಒಂದು ಅವಕಾಶವಿದೆ. ಹಸಿರು ನ್ಯಾಯ ಮ ಮಂಡಳಿಯಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು(NOC) ಪಡೆದಿರಬೇಕು. ಹಾಗಂತ ಹೆಚ್ಚು ಖುಷಿ ಪಡಬೇಕಿಲ್ಲ. ಕಾರಣ NOC ಪಡೆಯುವುದು ಈ ಹಿಂದಿನಷ್ಟು ಸುಲಭವಲ್ಲ. ಇಷ್ಟೇ ಅಲ್ಲ 15 ವರ್ಷಕ್ಕಿಂತ ಹಳೇಯ ಡೀಸೆಲ್ ವಾಹನಕ್ಕೆ NOC ಕೂಡ ಸಿಗುವುದಿಲ್ಲ. ಹೀಗಾಗಿ ಗುಜುರಿಗೆ ಹಾಕಲೇಬೇಕು.

Tap to resize

Latest Videos

undefined

Vehicle Scrap Policy:15 ವರ್ಷಕ್ಕಿಂತ ಹಳೆ ವಾಹನ ಗುಜುರಿಗೆ; ರಸ್ತೆಗಳಿದರೂ, ಪಾರ್ಕ್ ಮಾಡಿದರೂ ದಂಡ!

2016ರಲ್ಲಿ NGT ದೆಹಲಿ(Delhi) ಹಾಗೂ ರಾಷ್ಟ್ರರಾಜಧಾನಿ ವಲಯದಲ್ಲಿ(NCR) 10 ವರ್ಷಕ್ಕಿಂತ ಹಳೆಯ ಡೀಸೆಲೆ್ ವಾಹನ ಹಾಗೂ 15 ವರ್ಷಕ್ಕಿಂತ ಹಳೇಯ ಪೆಟ್ರೋಲ್(Petrol Vehilce) ವಾಹನದ ರಿಜಿಸ್ಟ್ರೇಶನ್ ರದ್ದು ಮಾಡಲು ನಿರ್ದೇಶಿಸಿತ್ತು. ಆದರೆ ಈ ನಿರ್ದೇಶವನ್ನು ದೆಹಲಿ ಸರ್ಕಾರ ಇದೀಗ ಪರಿಣಾಮಕಾರಿಯಾಗಿ ಜಾರಿ ಮಾಡುತ್ತಿದೆ.

ಹೊಸ ವರ್ಷದ ಮೊದಲ ದಿನವೇ ಹಳೇ ವಾಹನ ಮಾಲೀಕರಿಗೆ ಶಾಕ್ ಶಾಕ್ ಮೇಲೆ ಕಾದಿದೆ. ಸರ್ಕಾರ ಜನವರಿ 1, 2022ಕ್ಕೆ 10 ವರ್ಷ ಪೂರೈಸುವ ಹಾಗೂ ಅದಕ್ಕಿಂತ ಹೆಚ್ಚಿನ ವರ್ಷಗಳ ಹಳೇಯ ಡೀಸೆಲ್ ವಾಹನಗಳ ನೋಂದಣಿ ಆಟೋಮ್ಯಾಟಿಕ್ ಆಗಿ ರದ್ದಾಗಲಿದೆ. ಇನ್ನು ಹಳೇ ವಾಹನ ಹೊಂದಿರುವ ಮಾಲೀಕರಲ್ಲಿರುವ ರಿಜಿಸ್ಟ್ರೇಶನ್ ಕಾರ್ಡ್ ಮಾನ್ಯವಾಗಿರುವುದಿಲ್ಲ. 15 ವರ್ಷದೊಳಗಿದ್ದರೆ, ಅಂತಹ ವಾಹನಗಳನ್ನು ರಿ-ರಿಜಿಸ್ಟ್ರೇಶನ್ ಮಾಡಿಸಲು ಅವಕಾಶ ನೀಡಲಾಗಿದೆ. ಇದಕ್ಕೆ ಎಮಿಶನ್ ಟೆಸ್ಟ್ ಸೇರಿದಂತೆ ಹಲವು ಸರ್ಟಿಫಿಕೇಟ್ ಅವಶ್ಯಕತೆ. ವಾಹನದ ಫಿಟ್ನೆಸ್ ಸರ್ಟಿಫಿಕೇಟ್ ಕಡ್ಡಾಯವಾಗಿ ಬೇಕಾಗಿದೆ. ಆದರೆ ಈ ಹಿಂದೆ ವಾಹನಕ್ಕೆ ಮಾಡುತ್ತಿದ್ದ ಫಿಟ್ನೆಸ್ ಸರ್ಟಿಫಿಕೇಟ್ ರೀತಿ ಸುಲಭದಲ್ಲಿ ಕೈಗೆ ಸಿಗುವುದಿಲ್ಲ. ಹೊಸ ನಿಯಮಗಳ ಅಡಿಯಲ್ಲಿ ವಾಹನ ಫಿಟ್ನೆಸ್ ಪಾಸ್ ಮಾಡಬೇಕು. ಹೀಗಾದಲ್ಲಿ ಮಾತ್ರ ಪ್ರಮಾಣ ಪತ್ರ ಸಿಗಲಿದೆ. ಬಳಿಕ ರಿ ರಿಜಿಸ್ಟ್ರೇಶನ್ ಹಣ ಪಾವತಿಸಿ ಪ್ರಮಾಣ ಪತ್ರ ಪಡೆಯಲು ಅವಕಾಶವಿದೆ. 

ಕರ್ನಾಟದಲ್ಲಿವೆ ದೇಶದಲ್ಲೇ ಅತಿ ಹೆಚ್ಚು ಹಳೆಯ ವಾಹನಗಳು!

ದೆಹಲಿ ಸರ್ಕಾರ ಮತ್ತೊಂದು ವಿನಾಯಿತಿ ನೀಡಿದೆ. 10 ವರ್ಷಕ್ಕಿಂತ ಮೇಲ್ಪಟ್ಟ ಡೀಸೆಸ್ ವಾಹನ ಹಾಗೂ 15 ವರ್ಷಕ್ಕಿಂತ ಮೇಲ್ಪಟ್ಟ ಪೆಟ್ರೋಲ್ ವಾಹನವನ್ನು ಎಲೆಕ್ಟ್ರಿಕ್ ವಾಹನಗಳಿಗೆ ಎಲೆಕ್ಟ್ರಿಕ್ ವಾಹನವನ್ನಾಗಿ ಪರಿವರ್ತಿಸುವ ಕಿಟ್ ಬಳಕೆ ಮಾಡುವ ಆಲೋಚನೆ ಇದ್ದರೆ ಅವಕಾಶವಿದೆ. ಎಲೆಕ್ಟ್ರಿಕ್ ಕಿಟ್ ಅಳವಡಿಸಿ ಹೊಸ ರಿಜಿಸ್ಟ್ರೇಶನ್ ಮಾಡಿಸಿಕೊಳ್ಳಲು ಅವಕಾಶವಿದೆ. ಆದರೆ ದೆಹಲಿ ಸರ್ಕಾರದಿಂದ ಮಾನ್ಯತೆ ಪಡೆದ ಎಲೆಕ್ಟ್ರಿಕ್ ಕಿಟ್ ಅಭಿವೃದ್ಧಿ ಕೇಂದ್ರದಿಂದ ಮಾತ್ರ ಇಂಧನ ವಾಹನವನ್ನು ಎಲೆಕ್ಟ್ರಿಕ್ ವಾಹನವನ್ನಾಗಿ ಪರಿವರ್ತಿಸಲು ಅವಕಾಶವಿದೆ.

ಹಳೇ ವಾಹನವಿರುವರಿಗೆ ಇನ್ನಿರುವ ಒಂದು ಆಯ್ಕೆ, ರಾಷ್ಟ್ರೀಯ ಗುಜರಿ ನೀತಿಯ ಅಡಿಯಲ್ಲಿ ವಾಹವನ್ನು ಗುಜುರಿಗೆ ಹಾಕುವುದು. ಗುಜುರಿಗೆ ಹಾಕುವ ವಾಹನದ ಮಾಲೀಕರಿಗೆ ಮಾರುಕಟ್ಟೆ ಮೌಲ್ಯ ಸಿಗಲಿದೆ. ಈಗಾಗಲೇ ಹಳೇ ವಾಹನವನ್ನು ದೆಹಲಿ ಪೊಲೀಸರು ಗುಜುರಿ ನಿರ್ವಹಣಾ ಕೇಂದ್ರಕ್ಕೆ ಕಳುಹಿಸುತ್ತಿದ್ದಾರೆ. 

click me!