GPS Toll: ಶೀಘ್ರದಲ್ಲಿ Fastag ವ್ಯವಸ್ಥೆ ಅಂತ್ಯ, ಜಿಪಿಎಸ್ ಟೋಲ್ ಸಿಸ್ಟಮ್ ಆರಂಭ!

By Suvarna News  |  First Published May 4, 2022, 3:33 PM IST
  • ಹೊಸ ವ್ಯವಸ್ಥೆ ಮೂಲಕ ಟೋಲ್ ಸಂಗ್ರಹಕ್ಕೆ ಕೇಂದ್ರ ಸರ್ಕಾರ ನಿರ್ಧಾರ
  • ಫಾಸ್ಟ್ಯಾಗ್ ಟೋಲ್ ಸಂಗ್ರಹಕ್ಕ ಅಂತ್ಯ ಹಾಡಿ ಹೊಸ ವಿಧಾನ ಪರಿಚಯ
  • ಜಿಪಿಎಸ್ ಸಿಸ್ಟಮ್ ಮೂಲಕ ಟೋಲ್ ಸಂಗ್ರಹ, ಸರ್ಕಾರಕ್ಕೆ ಹೆಚ್ಚಿನ ಆದಾಯ
     

ನವದೆಹಲಿ(ಮೇ.04): ಭಾರತದಲ್ಲಿ ಟೋಲ್ ಸಂಗ್ರಹಕ್ಕೆ ಫಾಸ್ಟ್ಯಾಗ್ ಕಡ್ಡಾಯ ಮಾಡಲಾಗಿದೆ.  ಟೋಲ್ ಬೂತ್‌ಗಳಲ್ಲಿ ನಗದು ವ್ಯವಹಾರಗಳಿಲ್ಲ. ಇದರಿಂದ ವಾಹನಗಳು ಸಾಲುಗಟ್ಟಿ ನಿಲ್ಲಬೇಕಿಲ್ಲ, ಕಾಯಬೇಕಿಲ್ಲ, ಎಲ್ಲವೂ ಡಿಜಿಟಲ್ ಮೂಲಕ ಪಾವತಿಯಾಗಲಿದೆ. ಇದೀಗ ಇದನ್ನು ಮೀರಿಸಬಲ್ಲ ಹೊಸ ವಿಧಾನದ ಮೂಲಕ ಟೋಲ್ ಸಂಗ್ರಹಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಇದುವೇ ಜಿಪಿಎಸ್ ಟೋಲ್.

ಟೋಲ್ ರಸ್ತೆಗಳಲ್ಲಿ ಶೀಘ್ರದಲ್ಲೇ ಫಾಸ್ಟ್ಯಾಗ್ ಅಂತ್ಯಗೊಳ್ಳಲಿದೆ. ಇದರ ಬದಲಾಗಿ ಜಿಪಿಎಸ್ ಟೋಲ್ ಜಾರಿಗೆ ಬರಲಿದೆ. ನೂತನ ವಿಧಾನದಿಂದ ವಾಹನ ಸವಾರರಿಗೆ ಟೋಲ್ ಸಂಗ್ರಹ ಜಿಪಿಎಸ್ ಮೂಲಕ ಆಗಲಿದೆ. ಟೋಲ್ ರಸ್ತೆಗಳ ಬಳಕೆ ಆರಂಭ ಹಾಗೂ ಟೋಲ್ ರಸ್ತೆಯಿಂದ ನಿರ್ಗಮನದವರೆಗಿನ ಶುಲ್ಕ ವಿಧಿಸಲಾಗುತ್ತಿದೆ. ಅಂದರೆ ಎಷ್ಟು ಕಿಲೋಮೀಟರ್ ಹೆದ್ದಾರಿ ಅಥವಾ ಟೋಲ್ ರಸ್ತೆಯನ್ನು ಬಳಕೆ ಮಾಡುವ ಆಧಾರ ಮೇಲೆ ಶುಲ್ಕ ನಿಗಧಿಯಾಗುತ್ತಿದೆ. ಹೆಚ್ಚು ಕಿಲೋಮೀಟರ್ ಟೋಲ್ ರಸ್ತೆ ಬಳಕೆ ಮಾಡಿದರೆ ಹೆಚ್ಚು ಹಣ ಪಾವತಿಸಬೇಕು.

Tap to resize

Latest Videos

100 ಮೀ. ಕ್ಯೂ ಇದ್ದರೆ ಟೋಲ್ ಕಟ್ಟಬೇಕಾಗಿಲ್ಲ, ಹೊಸ ರೂಲ್ಸ್!

ಸದ್ಯ ಟೋಲ್ ಬೂತ್ ಪ್ರವೇಶಿಸಿ ಫಾಸ್ಟ್ಯಾಗ್ ಮೂಲಕ ಹಣಪಾವತಿಸಿ ಮುಂದೆ ಹೋಗಬಹುದು. ಪ್ರವೇಶದ ವೇಳೆಯೇ ಟೋಲ್ ಹಣ ಸಂಗ್ರಹ ಮಾಡಲಾಗುತ್ತಿದೆ. ಆದರೆ ಜಿಪಿಎಸ್ ವಿಧಾನದಲ್ಲಿ ವಾಹನ ಹೆದ್ದಾರಿ ಅಥವಾ ಟೋಲ್ ರಸ್ತೆ ಪ್ರವೇಶಿಸುತ್ತಿದ್ದಂತೆ ಜಿಪಿಎಸ್ ಮೂಲಕ ಕಾರಿನ ಎಂಟ್ರಿ ನೋಂದಾಯಿಸಲಿದೆ. ಬಳಿಕ ಟೋಲ್ ರಸ್ತೆಯಿಂದ ನಿರ್ಗಮಿಸುವ ವೇಳೆ ಎಷ್ಟು ಕಿಲೋಮೀಟರ್ ರಸ್ತೆ ಬಳಕೆ ಮಾಡಿದ್ದೀರಿ ಅನ್ನೋ ಆಧಾರದಲ್ಲಿ ಖಾತೆಯಿಂದ ಹಣ ಕಡಿತಗೊಳ್ಳಲಿದೆ.

ಜಿಪಿಎಸ್ ಟೋಲ್ ಸಿಸ್ಟಮ್‌ನಲ್ಲಿ ವಾಹನ ಟೋಲ್ ಬೂತ‌್‌ಗಳಿಂದ ಸಾಗಬೇಕಾದ ಅವಶ್ಯಕತೆಯೂ ಇಲ್ಲ. ಎಲ್ಲವೂ ಸ್ಯಾಟಲೈಟ್ ಕಂಟ್ರೋಲ್ ಜಿಪಿಎಸ್ ಮೂಲಕವೇ ನಡೆಯಲಿದೆ. ಇದರಿಂದ ಟೋಲ್ ಸಂಗ್ರಹ ಮಾತ್ರವಲ್ಲ, ಪ್ರತಿ ವಾಹನ ಯಾವ ದಿಕ್ಕಿನಲ್ಲಿ  ಸಂಚರಿಸುತ್ತಿದೆ. ಯಾವ ರಸ್ತೆ ಬಳಕೆ ಮಾಡಿದ್ದಾರೆ ಅನ್ನೋ ಸಂಪೂರ್ಣ ಮಾಹಿತಿಯೂ ಸಿಗಲಿದೆ.

ಜಿಪಿಎಸ್ ಸಿಸ್ಟಮ್ ಟೋಲ್ ಪಾವತಿಗೆ ಖಾತೆಯಲ್ಲಿ ಹಣವಿದ್ದರೆ ಸಾಕು, ಸ್ಕ್ಯಾನ್ ಆಗಬೇಕು, ಟೋಲ್ ಬೂತ್ ಸ್ಕ್ಯಾನರ್ ಮೂಲಕ ಸಾಗಬೇಕು ಅನ್ನೋ ಯಾವುದೇ ನಿರ್ಬಂಧವಿಲ್ಲ. ಟೋಲ್ ರಸ್ತೆ ಪ್ರವೇಶಿಸುವಾಗಲೇ ಜಿಪಿಎಸ್ ಮೂಲಕ ಹೆದ್ದಾರಿ ಬಳಕೆ ಆರಂಭಗೊಳ್ಳುತ್ತಿದೆ. ನಿರ್ಗಮನದ ವೇಳೆ ತಾನಾಗಿ ಖಾತೆಯಿಂದ ಹಣ ಕಡಿತಗೊಳ್ಳಲಿದೆ. ಇದರಿಂದ ಕಡಿಮೆ ಹೆದ್ದಾರಿ ಅಥವಾ ಟೋಲ್ ರಸ್ತೆ ಬಳಕೆ ಮಾಡುವವರು ಹೆಚ್ಚಿನ ಹಣ ಪಾವತಿ ಮಾಡಬೇಕಿಲ್ಲ. ಸದ್ಯ ಟೋಲ್ ಬೂತ್ ಎಂಟ್ರಿಯಾದ  ಕಲವೆ ಕ್ಷಣಗಳಲ್ಲಿ ನಿರ್ಗಮಿಸುತ್ತಿದ್ದರೂ ಫಾಸ್ಟ್ಯಾಗ್ ಮೂಲಕ ಸಂಪೂರ್ಣ ಹಣ ಪಾವತಿಸಬೇಕು. ಜಿಪಿಎಸ್‌ನಲ್ಲಿ ಅವರವರ ಬಳಕೆಗೆ ತಕ್ಕಂತೆ ಹಣ ಪಾವತಿಸಿದರೇ ಸಾಕು

FASTag Toll Collection ಟೋಲ್ ಸಂಗ್ರಹದಲ್ಲಿ ದಾಖಲೆ, ಪ್ರತಿ ದಿನ 119 ಕೋಟಿ ರೂಪಾಯಿ!

ಫಾಸ್ಟ್ಯಾಗ್‌ ಕಡ್ಡಾಯ ಪ್ರಶ್ನಿಸಿದ್ದ ಅರ್ಜಿ ವಜಾ
 ಹೆದ್ದಾರಿಯ ಟೋಲ್‌ಗಳಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಫೆ.15ರಿಂದ ಫಾಸ್ಟ್‌ ಟ್ಯಾಗ್‌ ಕಡ್ಡಾಯಗೊಳಿಸಿದ ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಾರಿಗೆ ಸಚಿವಾಲಯದ ಕ್ರಮ ಪ್ರಶ್ನಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಾಯ್ದೆ (ಎನ್‌ಎಚ್‌ಎಐ) ನಿಯಮಗಳು ಮತ್ತು ರಾಷ್ಟ್ರೀಯ ಹೆದ್ದಾರಿ ಶುಲ್ಕ (ನಿಗದಿ ಮತ್ತು ಸಂಗ್ರಹ) ನಿಯಮಗಳನ್ನು ಪ್ರಶ್ನಿಸಿ ಬೆಂಗಳೂರಿನ ಗೀತಾ ಮಿಶ್ರಾ, ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ಅವರ ನೇತೃತ್ವದ ವಿಭಾಗೀಯಪೀಠ, ಕೇಂದ್ರ ಮೋಟಾರು ವಾಹನ ಕಾಯ್ದೆ-1988ರಡಿಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ನಿಯಮಗಳನ್ನು ರೂಪಿಸುವ ಅಧಿಕಾರ ಕೇಂದ್ರ ಸರ್ಕಾರ ಹೊಂದಿದೆ. ಹೀಗಾಗಿ ಅರ್ಜಿದಾರರು ಕೇಂದ್ರಕ್ಕೆ ನಿಯಮಗಳನ್ನು ರೂಪಿಸಲು ಅಧಿಕಾರವಿಲ್ಲವೆಂಬ ವಾದವನ್ನು ಒಪ್ಪಲಾಗದು ಎಂದು ತಿಳಿಸಿ ಅರ್ಜಿ ವಜಾಗೊಳಿಸಿತು.
 

click me!