Number Plate 70 ಸಾವಿರ ರೂ ಆ್ಯಕ್ಟಿವಾ ಸ್ಕೂಟರ್ ಫ್ಯಾನ್ಸಿ ನಂಬರ್‌ಗಾಗಿ ಮಾಲೀಕನಿಂದ 15.14 ಲಕ್ಷ ರೂ ಖರ್ಚು!

By Suvarna News  |  First Published Apr 19, 2022, 8:46 PM IST
  • ಫ್ಯಾನ್ಸಿ ನಂಬರ್‌ಗಾಗಿ ಬರೋಬ್ಬರಿ 15.14 ಲಕ್ಷ ರೂ ಖರ್ಚು
  • ಹೋಂಡಾ ಆ್ಯಕ್ಟಿವಾ ಸ್ಕೂಟರ್‌ಗೆ ಫ್ಯಾನ್ಸಿ ನಂಬರ್
  • ಅಚ್ಚರಿ ಮೂಡಿಸಿದ ಮಾಲೀಕನ ನಡೆ

ಚಂಡೀಘಡ(ಏ.19): ಲ್ಯಾಂಬೋರ್ಗಿನಿ, ಪೋರ್ಶೆ, ಬೆಂಜ್ ಸೇರಿದಂತೆ ಐಷಾರಾಮಿ ಹಾಗೂ ಸ್ಪೋರ್ಟ್ಸ್ ಕಾರು ಖರೀದಿಸಿ ಬಳಿಕ ದುಬಾರಿ ಮೊತ್ತ ನೀಡಿ ಫ್ಯಾನ್ಸಿ ನಂಬರ್ ಖರೀದಿಸಿದ ಹಲವು ಘಟನೆಗಳು ನಡೆದಿದೆ. ಆದರೆ ಇಲ್ಲೊಂದು ಘಟನೆ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಕಾರಣ 70 ರೂಪಾಯಿ ಹೋಂಡಾ ಆ್ಯಕ್ಟಿವಾ ಸ್ಕೂಟರ್ ಖರೀದಿಸಿದ ಮಾಲೀಕ ಫ್ಯಾನ್ಸಿ ನಂಬರ್ ಪ್ಲೇಟ್‌ಗಾಗಿ ಬರೋಬ್ಬರಿ 15.14 ಲಕ್ಷ ರೂಪಾಯಿ ಖರ್ಚು ಮಾಡಿದ್ದಾನೆ.

ಚಂಡೀಘಡದ ಉದ್ಯಮಿ ಬ್ರಿಜ್ ಮೋಹನ್ ಹೊಸದಾಗಿ ಹೋಂಡಾ ಆಕ್ಟಿವಾ ಸ್ಕೂಟರ್ ಖರೀದಿಸಿದ್ದಾರೆ. ಚಂಡೀಘಡದಲ್ಲಿ ಆ್ಯಕ್ಟಿವಾ ಸ್ಕೂಟರ್ ಎಕ್ಸ್ ಶೋ ರೂಂ ಬೆಲೆ 71,000 ರೂಪಾಯಿ. ಆದರೆ ಮಾಲೀಕನಿಗೆ  CH-01-CJ-0001 ನಂಬರ್‌ ಆಗ್ರಹಿಸಿದ್ದಾರೆ. ಇದೇ ನಂಬರ್‌ಗೆ ಭಾರಿ ಬೇಡಿಕೆ ವ್ಯಕ್ತವಾದ ಕಾರಣ ಆರ್‌ಟಿಒ ಇಲಾಖೆ ಎಂದಿನಂತೆ ಹರಾಜು ಏರ್ಪಡಿಸಿದೆ. 

Tap to resize

Latest Videos

25 ಕೋಟಿ ರೂ ಕಾರಿಗೆ 52 ಕೋಟಿ ರೂ ನಂಬರ್ ಪ್ಲೇಟ್; ದುಬಾರಿ ರಿಜಿಸ್ಟ್ರೇಶನ್‌ಗೆ ದಂಗಾದ ಪೊಲೀಸ್!

ಹರಾಜಿನಲ್ಲಿ ಪಟ್ಟು ಬಿಡದ ಬ್ರಿಜ್ ಮೋಹನ್ ಬರೋಬ್ಬರಿ 15.14 ಲಕ್ಷ ರೂಪಾಯಿ ನೀಡಿ ಫ್ಯಾನ್ಸಿ ನಂಬರ್ ಖರೀದಿಸಿದ್ದಾರೆ. ಈ ಮೂಲಕ ಭಾರತದಲ್ಲೇ ಹೊಸ ದಾಖಲೆ ಬರೆದಿದ್ದಾರೆ. 71 ಸಾವಿರ ರೂಪಾಯಿ ಮೌಲ್ಯದ ವಾಹನಕ್ಕೆ 15.14 ಲಕ್ಷ ರೂಪಾಯಿ ನಂಬರ್ ಖರೀದಿಸಿದ್ದು ಇದೇ ಮೊದಲು.

ಚಂಡೀಘಡದಲ್ಲಿ 0001 ನಂಬರ್‌ಗಾಗಿ 2012ರಲ್ಲಿ 26.05 ಲಕ್ಷ ರೂಪಾಯಿ ನೀಡಲಾಗಿತ್ತು. ಇದು ಕೋಟಿ ರೂಪಾಯಿ ಮೌಲ್ಯದ ಮರ್ಸಿಡೀಸ್ ಬೆಂಜ್ ಕಾರಿಗಾಗಿ ಈ ನಂಬರ್ ಖರೀದಿಸಲಾಗಿತ್ತು.  ಇದೀಗ ಸ್ಕೂಟಿಗಾಗಿ ದುಬಾರಿ ಮೊತ್ತ ನೀಡಿ ಹೊಸ ದಾಖಲೆ ಬರೆಯಲಾಗಿದೆ.

ವಾಹನ ನಂಬರ್‌ ಪ್ಲೇಟ್‌ ಮೇಲೆ ಮನಬಂದಂತೆ ಬರೆಯಿಸಬೇಡಿ
ಸರ್ಕಾರದ ಆದೇಶದಂತೆ ವಾಹನಗಳ ನಂಬರ್‌ ಪ್ಲೇಟ್‌ ಮೇಲೆ ಮನಬಂದಂತೆ ಬರೆಸಿರುವ ನಾಲ್ಕು ಚಕ್ರ ಹಾಗೂ ದ್ವಿಚಕ್ರ ವಾಹನಗಳನ್ನು ನಗರದ ಪೊಲೀಸರು ತಡೆದು ಪ್ಲೇಟ್‌ಗಳನ್ನು ತೆಗೆದು ಹಾಕುವುದರ ಜೊತೆಗೆ ದಂಡವನ್ನು ಹಾಕುವ ಕೆಲಸ ಮಾಡುತ್ತಿದ್ದಾರೆ.

ಕಾರಿನ ನಂಬರ್ ಪ್ಲೇಟ್‌ಗೆ 60 ಕೋಟಿ ರೂ ಖರ್ಚು ಮಾಡಿದ ಭಾರತೀಯ ಉದ್ಯಮಿ!

ಸರ್ಕಾರದ ಆದೇಶದಂತೆ ವಾಹನಗಳ ನಂಬರ್‌ ಪ್ಲೇಟ್‌ ಮೇಲೆ ಮನಬಂದಂತೆ ಬರೆಸಿರುವ ನಾಲ್ಕು ಚಕ್ರ ಹಾಗೂ ದ್ವಿಚಕ್ರ ವಾಹನಗಳನ್ನು ನಗರದ ಪೊಲೀಸರು ತಡೆದು ಪ್ಲೇಟ್‌ಗಳನ್ನು ತೆÜಗೆದು ಹಾಕುವುದರ ಜೊತೆಗೆ ದಂಡವನ್ನು ಹಾಕುವ ಕೆಲಸ ಮಾಡುತ್ತಿದ್ದಾರೆ. ಬನಹಟ್ಟಿಸಿಪಿಐ ಅಶೋಕ ಸದಲಗಿ, ಸ್ಥಳೀಯ ಠಾಣಾಧಿಕಾರಿ ವಿಜಯ ಕಾಂಬಳೆ ಖುದ್ದು ಪೀಲ್ಡಿಗಿಳಿದ್ದು, ವಾಹನದಾರರಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ವಾಹನಗಳ ಮೇಲೆ ಬೇಕಾ ಬಿಟ್ಟಿಯಾಗಿ ಏನು ಬರೆಸಬಾರದು ಹಾಗೂ ವಾಹನದ ನಂಬರನ್ನು ಕೂಡ ಒಂದೇ ಮಾದರಿಯಲ್ಲಿ ಬರೆಸಬೇಕು. ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಹೆಲ್ಮೇಟ್‌ ಧರಿಸುವುದರ ಜೊತೆಗೆ ದಾಖಲೆಗಳನ್ನು ಹೊಂದಿರಬೇಕೆಂದು ಸಿಪಿಐ ಅಶೋಕ ಸದಲಗಿ ಸವಾರರಿಗೆ ತಾಕೀತು ಮಾಡಿದರು.

ಬೇರೆ ರಾಜ್ಯಕ್ಕೆ ಹೋದರೆ ವಾಹನ ನಂಬರ್‌ ಇನ್ನು ಬದಲಿಸಬೇಕಿಲ್ಲ
ವಾಹನ ಖರೀದಿಸಿದ ಬಳಿಕ ಬೇರೆ ಸ್ಥಳ ಅಥವಾ ಅನ್ಯ ರಾಜ್ಯಕ್ಕೆ ಹೋದರೆ, ವಾಹನವನ್ನು ಮರು ನೋಂದಣಿ ಮಾಡಬೇಕು ಎಂಬ ನಿಯಮವನ್ನು ಸಡಿಲಿಸಲು ಕೇಂದ್ರ ಸರ್ಕಾರ ಮುಂದಾಗಿದೆ.ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಸಿದ್ಧಪಡಿಸಿರುವ ಪ್ರಸ್ತಾವನೆಯ ಪ್ರಕಾರ, ವಾಹನ ಮಾಲೀಕರು ಬೇರೆ ಸ್ಥಳ ಅಥವಾ ಅನ್ಯರಾಜ್ಯಕ್ಕೆ ಹೋಗಿ ವಾಸಿಸಿದರೆ ಹಳೆಯ ನಂಬರ್‌ ಪ್ಲೇಟ್‌ ಅನ್ನು ಉಳಿಸಿಕೊಳ್ಳಬಹುದಾಗಿದೆ. ಜೊತೆಗೆ ಆರ್‌ಟಿಒ ಕಚೇರಿಗೆ ತೆರಳಿ ವಾಹನದ ಮರು ನೋಂದಣಿ ಮಾಡುವ ಕಿರಿಕಿರಿ ತಪ್ಪಲಿದೆ. ಇದಕ್ಕಾಗಿ ವಾಹನ ಮಲೀಕರು ವಾಹನ ಖರೀದಿ ವೇಳೆ ಒಂದೇ ಬಾರಿಗೆ ವಾಹನದ ತೆರಿಗೆಯನ್ನು ಪಾವತಿಸಬೇಕು. ಒಂದು ವೇಳೆ ಬೇರೆ ರಾಜ್ಯಕ್ಕೆ ಹೋಗಲು ಬಯಸಿದರೆ ಅಲ್ಲಿ ಪುನಃ ವಾಹನವನ್ನು ಮರು ನೋಂದಣಿ ಮಾಡಿಕೊಂಡು, ತೆರಿಗೆಯನ್ನು ಕಟ್ಟಬೇಕಾಗಿಲ್ಲ. ಬದಲಾಗಿ ಹಳೆಯ ನೋಂದಣಿ ಸಂಖ್ಯೆಯನ್ನೇ ಉಳಿಸಿಕೊಳ್ಳಬಹುದಾಗಿದೆ. ಇದಕ್ಕಾಗಿ ವಾಹನ ಮಾಲೀಕ ವಿಳಾಸ ಬದಲಾವಣೆಗೆ ಅರ್ಜಿಸಲ್ಲಿಸಬೇಕು.

click me!