5000 ಕೋಟಿ ರೂ. ಮೌಲ್ಯದ ಇವಿ ಬಸ್ ಟೆಂಡರ್ ಪಡೆದುಕೊಂಡ ಟಾಟಾ ಮೋಟಾರ್ಸ್

By Suvarna NewsFirst Published Apr 28, 2022, 6:29 PM IST
Highlights

ಈಗ ಟಾಟಾ ಮೋಟಾರ್ಸ್ 5 ಸಾವಿರ ಕೋಟಿ ರೂ. ಮೌಲ್ಯದ ಅತಿ ದೊಡ್ಡ 5,450 ಎಲೆಕ್ಟ್ರಿಕಲ್ ಬಸ್ ಟೆಂಡರ್ (Tender) ಪಡೆದುಕೊಂಡಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ವಾಹನ (Electric Vehicle-EV) ವಲಯದಲ್ಲಿ ಮುಂಚೂಣಿಯಲ್ಲಿರುವ ಟಾಟಾ ಮೋಟಾರ್ಸ್ (Tata Motors) ಈಗ ಮತ್ತೊಂದು ಮೈಲಿಗಲ್ಲು ಸಾಧಿಸಿದ. ಟಾಟಾ ನೆಕ್ಸಾನ್ ಇವಿ (Tata Nexon EV) ಮೂಲಕ ಭಾರತೀಯ ಮಾರಕಟ್ಟೆ ಎಲೆಕ್ಟ್ರಿಕ್ ಎಸ್ಯುವಿಯನ್ನು ಪರಿಚಯಿಸಿದ ನಂತರ, ಅದಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈಗ ಟಾಟಾ ಮೋಟಾರ್ಸ್ 5 ಸಾವಿರ ಕೋಟಿ ರೂ. ಮೌಲ್ಯದ ಅತಿ ದೊಡ್ಡ 5,450 ಎಲೆಕ್ಟ್ರಿಕಲ್ ಬಸ್ ಟೆಂಡರ್ (Tender) ಪಡೆದುಕೊಂಡಿದೆ. ಇದರಿಂದ ಆಟೊಮೊಬೈಲ್ ವೆಚ್ಚ ಶೇ.40ರಷ್ಟು ಕಡಿಮೆಯಾಗಿದೆ. ಮೂಲಗಳ ಪ್ರಕಾರ,  ರಾಜ್ಯ-ಚಾಲಿತ ಎನರ್ಜಿ ಎಫಿಷಿಯನ್ಸಿ ಸರ್ವಿಸಸ್ ಲಿಮಿಟೆಡ್ (Energy efficiency services Limited-EESL) ನ ಅಂಗಸಂಸ್ಥೆಯಾದ ಕನ್ವರ್ಜೆನ್ಸ್ ಎನರ್ಜಿ ಸರ್ವಿಸಸ್ ಲಿಮಿಟೆಡ್ (Convergence Energy Services Limited) ಕರೆ ನೀಡಿದ್ದ ಟೆಂಡರ್ನ ಎಲ್ಲಾ5 ವರ್ಗಗಳಲ್ಲಿ ಟಾಟಾ ಮೋಟಾರ್ಸ್ ಅತಿ ಕಡಿಮೆ ಬಿಡ್ ಮಾಡಿತ್ತು. 
ಸರ್ಕಾರಿ ಸ್ವಾಮ್ಯದ ಕನ್ವರ್ಜೆನ್ಸ್ ಎನರ್ಜಿ ಸರ್ವಿಸಸ್ ಲಿಮಿಟೆಡ್ (CESL) 5000 ಕೋಟಿ ರೂಪಾಯಿ ಮೌಲ್ಯದ ಎಲೆಕ್ಟ್ರಿಕ್ ಬಸ್ ಟೆಂಡರ್ಗೆ ಟಾಟಾ ಮೋಟಾರ್ಸ್ ಅತ್ಯಂತ ಕಡಿಮೆ ಬಿಡ್ಡರ್ ಆಗಿ ಹೊರಹೊಮ್ಮಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ಕೇಂದ್ರದ FAME-II ಯೋಜನೆಯಡಿಯಲ್ಲಿ 5,450 ಎಲೆಕ್ಟ್ರಿಕ್ ಬಸ್ಗಳ ಟೆಂಡರ್ಗಾಗಿ ಸ್ವಿಚ್ ಮೊಬಿಲಿಟಿ (ಅಶೋಕ್ ಲೇಲ್ಯಾಂಡ್ನ ಎಲೆಕ್ಟ್ರಿಕ್ ವೆಹಿಕಲ್ ಆರ್ಮ್), ಒಲೆಕ್ಟ್ರಾ ಗ್ರೂಪ್ನ ಇವಿ ಟ್ರಾನ್ಸ್ ಮತ್ತು ವಿಇಸಿವಿ- VECV (ವೋಲ್ವೋ ಗ್ರೂಪ್ ಮತ್ತು ಐಷರ್ ಮೋಟಾರ್ಸ್ ನಡುವಿನ ಜಂಟಿ ಉದ್ಯಮ) ರೇಸ್ನಲ್ಲಿದ್ದವು.

ಈ ಕುರಿತು ಹೇಳಿಕೆ ನೀಡಿರುವ ಸಿಇಎಸ್ಎಲ್, " ಎಲೆಕ್ಟ್ರಿಕ್ ಬಸ್ಗಳ ವೆಚ್ಚ, ಡೀಸೆಲ್ ಬಸ್ಗಳ ಕಾರ್ಯಾಚರಣೆಯ ವೆಚ್ಚಕ್ಕೆ ಸರಿಸಮಾನವಾಗಿ ಅಥವಾ ಅತ್ಯಂತ ಸಮೀಪದ ಬೆಲೆಯಾಗಿರುವುದ ಮುಖ್ಯವಾಗಿವೆ. 12-ಮೀಟರ್ ಬಸ್ಗೆ ಕಡಿಮೆ ಬೆಲೆಯೆಂದರೆ ಕಿಮೀಗೆ 43.49 ರೂ. ಮತ್ತು 9 ಕಿಮೀಗೆ 39.21 ರೂ.ಗಳಾಗಿವೆ. ಇದು ಬಸ್ಗಳನ್ನು ಚಾರ್ಜ್ ಮಾಡಲು ತಗುಲುವ ವಿದ್ಯುತ್ ವೆಚ್ಚವನ್ನು ಒಳಗೊಂಡಿದೆ” ಎಂದಿದೆ.

ಹರಾಜು ಪ್ರಕ್ರಿಯೆಯು ಐದು ವಿಭಾಗಗಳಲ್ಲಿ ನಡೆಯಿತು - 12 ಮೀಟರ್ ಲೋ ಫ್ಲೋರ್ ಎಸಿ ಮತ್ತು ನಾನ್ ಎಸಿ ಇ-ಬಸ್ಗಳು, 12 ಮೀಟರ್ ಸ್ಟ್ಯಾಂಡರ್ಡ್ ಫ್ಲೋರ್ ನಾನ್ ಎಸಿ ಮತ್ತು 9 ಮೀಟರ್ ಸ್ಟ್ಯಾಂಡರ್ಡ್ ಫ್ಲೋರ್ ಎಸಿ ಮತ್ತು ನಾನ್ ಎಸಿ ಬಸ್ಗಳು.

ಇದನ್ನೂ ಓದಿ: ಟಾಟಾ ಪ್ರಯಾಣಿಕ ವಾಹನಗಳ ದರ ಏರಿಕೆ: ವರ್ಷದಲ್ಲಿ ಎರಡನೇ ಬಾರಿಗೆ ಹೆಚ್ಚಳ

ಬಸ್ಸುಗಳು ಮುಂದಿನ ಹನ್ನೆರಡು ವರ್ಷಗಳಲ್ಲಿ ಸುಮಾರು 4.71 ಶತಕೋಟಿ ಕಿಲೋಮೀಟರ್ಗಳಷ್ಟು ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಇದರಿಂದ 1.88 ಶತಕೋಟಿ ಲೀಟರ್ಗಳಷ್ಟು ಫಾಸಿಲ್ ಇಂಧನ ಉಳಿಯುತ್ತದೆ. ಇದರಿಂದ ಟೈಲ್ ಪೈಪ್ನಿಂದ  ಹೊರಸೂಸುವಿಕೆಯಿಂದ ಉಂಟಾಗುವ 3.31 ಮಿಲಿಯನ್ ಟನ್ ಇಂಗಾಲ ಡೈ ಆಕ್ಸೈಡ್ ಅನ್ನು ತಡೆಯುತ್ತದೆ. ಇದು ಹವಾಮಾನ ಬದಲಾವಣೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ ಎಂದು  ಸಿಇಎಸ್ಎಲ್ (CESL) ಹೇಳಿದೆ.

ಈ ಬಸ್ಗಳು FAME II ಯೋಜನೆಯ ಅಡಿಯಲ್ಲಿ ಒದಗಿಸಲಾದ ಕೇಂದ್ರ ಸರ್ಕಾರದ ಸಬ್ಸಿಡಿಯ ಲಾಭ ಪಡೆಯುತ್ತವೆ. " ಅತ್ಯಂತ ಕಡಿಮೆ ಬೆಲೆಗಳೊಂದಿಗೆ, ರಾಷ್ಟ್ರೀಯ ಸಬ್ಸಿಡಿಯ ಅಂದಾಜು 361 ಕೋಟಿ ರೂಪಾಯಿಗಳ ಉಳಿತಾಯ ಪಡೆಯಬಹುದು ಎಂದು ಅದು ತಿಳಿಸಿದೆ. 

ಇದನ್ನೂ ಓದಿ: ನಾಳೆ ಟಾಟಾ ಮೋಟಾರ್ಸ್ ಹೊಸ ಎಲೆಕ್ಟ್ರಿಕ್‌ ಕಾರು ಅನಾವರಣ: ನಿರೀಕ್ಷೆಗಳೇನು?

ಟಾಟಾ ಕಂಪನಿ ಸಿಇಎಸ್ಎಲ್ನೊಂದಿಗೆ 12 ವರ್ಷಗಳ ಒಪ್ಪಂದ ಮಾಡಿಕೊಳ್ಳಲಿದ್ದು,  ಪ್ರತಿ ಬಸ್ಗೆ 10 ಲಕ್ಷ ಕಿಲೋಮೀಟರ್ಗಳು ಚಲಿಸಲಿವೆ ಎಂದು ಅಂದಾಜಿಸಲಾಗುತ್ತಿದೆಈ ಟೆಂಡರ್ ಪ್ರಕ್ರಿಯೆ 2021ರ ಜುಲೈನಲ್ಲಿ ಆರಂಭಗೊಂಡಿತ್ತು.

click me!