ಟೋಲ್ ಇದೀಗ ಫಾಸ್ಟಾಗ್ ಮೂಲಕವೇ ಪಾವತಿ ಮಾಡಲಾಗುತ್ತದೆ. ಇದರಿಂದ ಸಮಯವೂ ಉಳಿತಾಯ. ಇತ್ತೀಚೆಗೆ ಟೋಲ್ ದರ ಹೆಚ್ಚಳ ಮಾಡಲಾಗಿದೆ. ಆದರೂ ಗರಿಷ್ಠ ಟೋಲ್ ಅಂದರೆ 100, 200 ಅಥವಾ 300 ರೂಪಾಯಿ. ಆದರೆ ಇಲ್ಲೊಬ್ಬ ವಾಹನ ಮಾಲೀಕ ಒಂದು ಟೋಲ್ ದಾಟಿದ ಬೆನ್ನಲ್ಲೇ 9 ಕೋಟಿ ರೂಪಾಯಿ ಚಾರ್ಜ್ ಮಾಡಲಾಗಿದೆ. ಜೊತೆ ಖಾತೆಯಲ್ಲಿ ಸೂಕ್ತ ಹಣವಿಲ್ಲದ ಕಾರಣ ಖಾತೆಯನ್ನು ಬ್ಲಾಕ್ ಲಿಸ್ಟ್‌ಗೆ ಸೇರಿಸಲಾಗಿದೆ.
ಹರ್ಯಾಣ(ಜೂ.16): ಡಿಜಿಟಲ್ ಇಂಡಿಯಾದಿಂದ ಭಾರತದ ಬಹುತೇಕ ಎಲ್ಲಾ ವ್ಯವಸ್ಥೆಗಳು ಡಿಜಿಟಲ್ ಆಗಿದೆ. ಪಾವತಿಗಳಂತೂ ಸಂಪೂರ್ಣ ಡಿಜಿಟಲ್. ಇದರಲ್ಲಿ ಟೋಲ್ ಪಾವತಿ ಫಾಸ್ಟಾಗ್ ಮೂಲಕವೇ ಪಾವತಿ ಮಾಡಲಾಗುತ್ತಿದೆ. ಎಲ್ಲಾ ಟೋಲ್ ಬಳಿ ನಗದು ವ್ಯವಹಾರವಿಲ್ಲ. ಖಾತೆಯಲ್ಲಿ ಬ್ಯಾಲೆನ್ಸ್ ಇಲ್ಲದಿದ್ದರೆ ಬ್ಲಾಕ್ ಲಿಸ್ಟ್, ಹೆಚ್ಚುವರಿ ಚಾರ್ಜ್ ಮಾಡಲಾಗುತ್ತದೆ. ಇನ್ನು ಟೋಲ್ ಬೆಲೆ ಹೆಚ್ಚಳ ಮಾಡಿದರೆ ಪ್ರತಿಭಟನೆಯೂ ಖಚಿತ. ಫಾಸ್ಟಾಗ್ ದರ ಹೆಚ್ಚೆಂದರೆ 100, 200 ಅಥವಾ 300 ರೂಪಾಯಿ ಅಥವಾ 500 ರೂಪಾಯಿ ಇರಬಹುದು. ಆದರೆ ಇಲ್ಲೊಬ್ಬ ವಾಹನ ಮಾಲೀಕ ಟೋಲ್ ದಾಟಿದ ಬೆನ್ನಲ್ಲೇ ಆತನಿಗೆ ಬರೋಬ್ಬರಿ 9 ಕೋಟಿ ರೂಪಾಯಿ ಚಾರ್ಜ್ ಮಾಡಲಾಗಿದೆ. ಇಷ್ಟೇ ಅಲ್ಲ ಈತನ ಖಾತೆಯಲ್ಲಿ 9 ಕೋಟಿ ರೂಪಾಯಿ ಇಲ್ಲದ ಕಾರಣ ಫಾಸ್ಟಾಗ್‌ನ್ನು ಬ್ಲಾಕ್ ಲಿಸ್ಟ್‌ಗೆ ಸೇರ್ಪಡೆ ಮಾಡಿದ ಘಟನೆ ಹರ್ಯಾಣದಲ್ಲಿ ನಡೆದಿದೆ.
ಟೀಂ ಬಿಹೆಚ್‌ಪಿ ಫೋರಮ್ gsratta ಹೆಸರಿನ ಖಾತೆಯಲ್ಲಿ ಈ ದುಬಾರಿ ಟೋಲ್ ಚಾರ್ಜ್ ಘಟನೆಯ ಮಾಹಿತಿಯನ್ನು ನೀಡಿದ್ದಾರೆ. ಹರ್ಯಾಣದಿಂದ ಪ್ರಯಾಣ ಆರಭಿಸಿದ ವಾಹನ ಮಾಲೀಕ ಟೋಲ್ ದಾಟಿ ಮನೆ ಸೇರಿಕೊಂಡಿದ್ದಾನೆ. ಈ ವಾಹನದ ಪೇಟಿಎಂ ಫಾಸ್ಟಾಗ್‌ನಿಂದ ಸಂದೇಶವೊಂದು ಬಂದಿದೆ. ನಿಮ್ಮ ಫಾಸ್ಟಾಗ್ ಖಾತೆಯಲ್ಲಿ ಸೂಕ್ತ ಬ್ಯಾಲೆನ್ಸ್ ಇಲ್ಲದ ಕಾರಣ ಖಾತೆಯನ್ನು ಬ್ಲಾಕ್ ಲಿಸ್ಟ್‌ಗೆ ಸೇರಿಲಾಗಿದೆ ಅನ್ನೋ ಸಂದೇಶ ಬಂದಿದೆ.
undefined
ಟೋಲ್ ಪ್ಲಾಜಾದಲ್ಲಿ ಕ್ಯೂ ತಡೆಯಲು ಇನ್ನು 6 ತಿಂಗಳಲ್ಲಿ ಹೊಸ ತಂತ್ರಜ್ಞಾನ: ನಿತಿನ್ ಗಡ್ಕರಿ
ಇದು ಹೇಗೆ ಸಾಧ್ಯ ಎಂದು ವಾಹನ ಮಾಲೀಕ ಫಾಸ್ಟಾಗ್ ಖಾತೆಯನ್ನು ಪರಿಶೀಲನೆ ನಡೆಸಿದ್ದಾನೆ. ಈ ವೇಳೆ ಹರ್ಯಾಣ ಎಕ್ಸ್‌ಪ್ರೆಸ್ ರಸ್ತೆಯಲ್ಲಿ ಟೋಲ್ ಬೆಲೆ 90 ರೂಪಾಯಿ. ಆದರೆ 90 ರೂಪಾಯಿ ಚಾರ್ಜ್ ಮಾಡುವ ಬದಲು 9,00,00,000 ರೂಪಾಯಿ ಚಾರ್ಜ್ ಮಾಡಲಾಗಿದೆ. ಇಷ್ಟು ಮೊತ್ತ ಖಾತೆಯಲ್ಲಿ ಇಲ್ಲದ ಕಾರಣ ಬ್ಲಾಕ್ ಲಿಸ್ಟ್‌ಗೆ ಸೇರಿಸಲಾಗಿದೆ.
ಈ ಕುರಿತು ಪೇಟಿಎಂ ಫಾಸ್ಟಾಗ್ ಸಹಾಯವಾಣಿ ನಂಬರ್‌ಗೆ ಕರೆ ಮಾಡಿದರೆ ಸಂಪರ್ಕ ಸಾಧ್ಯವಾಗಿಲ್ಲ. ಆನ್‌ಲೈನ್ ಮೂಲಕ ದೂರು ನೀಡಿದರೂ ಸಾಧ್ಯವಿಲ್ಲ. ಹೀಗಾಗಿ ಟೀಂ ಬಿಹೆಚ್‌ಪಿ ಫೋರಮ್ ಮೂಲಕ ತನ್ನ ಅಳಲು ತೋಡಿಕೊಂಡಿದ್ದಾನೆ. 90 ರೂಪಾಯಿ ಬದಲು 9 ಕೋಟಿ ರೂಪಾಯಿ ಚಾರ್ಜ್ ಮಾಡಲಾಗಿದೆ. ಇದು ತಾಂತ್ರಿಕ ದೋಷವೇ ಆಗಿರಬಹುದು. ಆದರೆ ಪೇಟಿಎಂ ಸಹಾಯವಾಣಿ, ದೂರು ಆಲಿಸುವ ವ್ಯವಸ್ಥೆಯೂ ಇಲ್ಲ. ಸಮಸ್ಯೆಗೆ ಪರಿಹಾರವೂ ಸಿಕ್ಕಿಲ್ಲ. ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಲಾಗಿದೆ.
FASTag Toll Collection ಟೋಲ್ ಸಂಗ್ರಹದಲ್ಲಿ ದಾಖಲೆ, ಪ್ರತಿ ದಿನ 119 ಕೋಟಿ ರೂಪಾಯಿ!
ಇದೇ ವೇಳೆ ಟೀಂ ಬಿಹೆಚ್‌ಪಿ ಈ ಹಿಂದೆ ನಡೆದ ಘಟನೆಯನ್ನು ವಿವರಿಸಿದೆ. ಈ ಹಿಂದೆ 150 ರೂಪಾಯಿ ಬದಲು 1.5 ಕೋಟಿ ರೂಪಾಯಿ ಚಾರ್ಜ್ ಮಾಡಲಾಗಿತ್ತು. ಆದರೆ ಈ ಕರುತಿ ದೂರು ನೀಡಿದ ಬಳಿಕ ಸಮಸ್ಯೆ ಪರಿಹರವಾಗಿದೆ. ಇದು ತಾಂತ್ರಿಕ ದೋಷದಿಂದ ಆಗಿದೆ ಎಂದು ಫಾಸ್ಟಾಗ್ ಕಂಪನಿ ವಿಷಾಧ ವ್ಯಕ್ತಪಡಿಸಿತ್ತು.