2017-2021ರ ವರೆಗಿನ ಎಲ್ಲಾ ಟ್ರಾಫಿಕ್ ದಂಡದ ಚಲನ್ ರದ್ದು, ಯೋಗಿ ಸರ್ಕಾರದ ಮಹತ್ವದ ನಿರ್ಧಾರ!

By Suvarna NewsFirst Published Jun 9, 2023, 8:44 PM IST
Highlights

ಉತ್ತರ ಪ್ರದೇಶ ಸರ್ಕಾರ ಟ್ರಾಫಿಕ್ ದಂಡ ಬಾಕಿ ಉಳಿಸಿಕೊಂಡವರಿಗೆ ಗುಡ್ ನ್ಯೂಸ್ ನೀಡಿದೆ. 2017ರಿಂದ 2021ರ ವರೆಗಿನ ಎಲ್ಲಾ ಟ್ರಾಫಿಕ್ ದಂಡದ ಚಲನ್ ರದ್ದುಗೊಳಿಸಿದೆ.

ಲಖನೌ(ಜೂ.09): ಟ್ರಾಫಿಕ್ ನಿಯಮ ಉಲ್ಲಂಘಿಸಿ ಇತ್ತ ದಂಡವೂ ಬಾಕಿ ಉಳಿಸಿಕೊಂಡ ಹಲವರು ಬೃಹತ್ ಮೊತ್ತ ನೋಡಿ ದಂಗಾದ ಹಲವು ಉದಾಹರಣೆಗಳಿವೆ. ಇದೀಗ ಉತ್ತರ ಪ್ರದೇಶದ ಸರ್ಕಾರ ಮಹತ್ವದ ನಿರ್ಧಾರ ಘೋಷಿಸಿದೆ. 20217ರಿಂದ 2021ರ ವರೆಗೆ ಬಾಕಿ ಉಳಿಸಿಕೊಂಡಿರುವ ಎಲ್ಲಾ ಚಲನ್ ರದ್ದುಗೊಳಿಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ಆದೇಶಿದೆ. ಇದು ಖಾಸಗಿ ಹಾಗೂ ವಾಣಿಜ್ಯ ವಾಹನಗಳಿಗ ಅನ್ವಯಿಸಲಿದೆ. ಸರ್ಕಾರದ ಈ ಆದೇಶದಿಂದ ಜನವರಿ 1, 2017 ರಿಂದ ಡಿಸೆಂಬರ್ 31, 2021ರ ವರೆಗಿನ ಎಲ್ಲಾ ಬಾಕಿ ಇರುವ ಚಲನ್ ರದ್ದುಗೊಳ್ಳಲಿದೆ. ಇದು ಕೋರ್ಟ್‌ನಲ್ಲಿ ಕೇಸ್ ನಡೆಯುತ್ತಿರುವ ಪ್ರಕರಣಗಳಿಗೂ ಅನ್ವಯವಾಗಲಿದೆ.

ಖಾಸಗಿ ಹಾಗೂ ವಾಣಿಜ್ಯ ವಾಹನ ಮಾಲೀಕರಿಗೆ ರಿಲೀಫ್ ನೀಡಲು ಉತ್ತರ ಪ್ರದೇಶ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಯೋಗಿ ಆದಿತ್ಯನಾಥ್ ಸರ್ಕಾರದ ಈ ನಿರ್ಧಾರವನ್ನು ದಂಡ ಬಾಕಿ ಉಳಿಸಿಕೊಂಡಿದ್ದ ಲಕ್ಷಕ್ಕೂ ಅಧಿಕ ವಾಹನ ಮಾಲೀಕರು ಸ್ವಾಗತಿಸಿದ್ದಾರೆ. ಇದೇ ವೇಳೆ ದಂಡ ಪಾವತಿಸಿರುವ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

57 ಪ್ರಕರಣಗಳಿಗೆ ದಂಡ ಪಾವತಿಸಿದ ಹುಬ್ಳಿ ಹೈದ : ಕೊನೆ ದಿನ 31 ಕೋಟಿ ಸಂಗ್ರಹ

ಸಾರಿಗೆ ಆಯುಕ್ತ ಚಂದ್ರಭೂಷಣ್ ಸಿಂಗ್ ಈ ಕರಿತು ಅಧಿಸೂಚನೆ ಹೊರಡಿಸಿದ್ದಾರೆ. ಇದೇ ವೇಳೆ ಎಲ್ಲಾ ಡಿವಿಶನ್ ಸಾರಿಗೆ ಅಧಿಕಾರಿಗಳಿಗೆ ಈ ಕುರಿತು ಸೂಚನೆ ನೀಡಿದ್ದಾರೆ. 2022ರ ಜನವರಿ 1 ರಿಂದ  ಹೊರಡಿಸಿರುವ ಚಲನ್ ದಂಡ ಹಾಗೂ ಪ್ರಕರಣಗಳು ಹಾಗೇ ಇರಲಿದೆ. ಈ ಪ್ರಕರಣಗಳಲ್ಲಿ ವಾಹನ ಮಾಲೀಕರು ದಂಡ ಪಾವತಿಸಿ ಪ್ರಕರಣಕ್ಕೆ ಅಂತ್ಯ ಹಾಡಬಹುದು.

2021ರಲ್ಲಿ ನೋಯ್ಡಾದಲ್ಲಿ ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ಮಾಡಿದ್ದ ರೈತ ಸಂಘಟನೆಗಳು, ತಮ್ಮ ವಾಹನಗಳ ಮೇಲೆ ದಾಖಲಾಗಿದ್ದ ಟ್ರಾಫಿಕ್ ನಿಯಮ ಉಲ್ಲಂಘನೆ ರದ್ದು ಮಾಡುವಂತೆ ಬೇಡಿಕೆ ಇಟ್ಟಿದ್ದರು. ಕೃಷಿ ಕಾಯ್ದೆ ಹಿಂಪಡೆಯುವ ಬೇಡಿಕೆ ಜೊತೆಗೆ ಈ ಬೇಡಿಕೆಯನ್ನೂ ಇಡಲಾಗಿತ್ತು. 2021ರ ಡಿಸೆಂಬರ್ ವರೆಗಿನ ಚಲನ್ ರದ್ದುಗೊಳಿಸಿರವ ಕಾರಣ ರೈತ ಪ್ರತಿಭಟನೆಯಲ್ಲಿ ದಾಖಲಾಗಿದ್ದ ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣಗಳು ಖುಲಾಸೆಗೊಳ್ಳಲಿದೆ.

9 ದಿನದಲ್ಲಿ 122 ಕೋಟಿ ಟ್ರಾಫಿಕ್‌ ದಂಡ ಸಂಗ್ರಹ: ರಾಜ್ಯಾದ್ಯಂತ 52.49 ಲಕ್ಷ ಕೇಸು ಇತ್ಯರ್ಥ

ಕರ್ನಾಟಕದಲ್ಲಿ ಕೆಲ ತಿಂಗಳ ಹಿಂದೆ  ಇ-ಚಲನ್‌ನಲ್ಲಿ ದಾಖಲಾಗಿರುವ ಬಾಕಿ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ. 50ರಷ್ಟುರಿಯಾಯಿತಿ ನೀಡಲಾಗಿತ್ತು. ಇದು ಕೂಡ ಪರ ವಿರೋಧಕ್ಕೆ ಕಾರಣವಾಗಿತ್ತು. ಈ ವೇಳೆ ಬಾಕಿ ಉಳಿಸಿಕೊಂಡಿದ್ದ ಹಲವು ಮಾಲೀಕರು ಶೇಕಡಾ 50 ರಷ್ಟು ರಿಯಾಯಿತಿ ಪಡೆದು ದಂಡ ಪಾವತಿ ಮಾಡಿದ್ದರು. ಆರ್‌ಟಿಒ ಕಚೇರಿ ಸೇರಿದಂತೆ ಹಲೆವೆಡೆ ದಂಡ ಕಟ್ಟಲು ಭಾರಿ ಜನ ಸೇರಿದ್ದರು.

click me!