ಬುಧವಾರ ನೋ ಹಾರ್ನ್ ಡೇ, ಶಬ್ದ ಮಾಲಿನ್ಯ ನಿಯಂತ್ರಣಕ್ಕೆ ಟ್ರಾಫಿಕ್ ಪೊಲೀಸರ ವಿಶೇಷ ಆಂದೋಲನ!

By Suvarna News  |  First Published Jun 13, 2023, 3:18 PM IST

ವಾಹನ ಶಬ್ದ, ಹಾರ್ನ್ ಶಬ್ದ, ಟ್ರಾಫಿಕ್ ಕಿರಿಕಿರಿ ನಗರ ಪ್ರದೇಶದಲ್ಲಿ ಜನರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಇದೀಗ 17 ವರ್ಷಗಳ ಬಳಿಕ ಮತ್ತೆ ನೋ ಹಾರ್ನ್ ಡೇ ಆಚರಿಸಲು ಟ್ರಾಫಿಕ್ ಪೊಲೀಸರು ಸಜ್ಜಾಗಿದ್ದಾರೆ. ವಾಹನ ಚಾಲಕರು ಬುಧವಾರ  ಹಾರ್ನ್ ಹೊಡೆಯುವಂತಿಲ್ಲ. ಏನಿದು ನೋ ಹಾರ್ನ್ ಡೇ?


ಮುಂಬೈ(ಜೂ.13): ನಗರ ಪ್ರದೇಶದಲ್ಲಿ  ವಿಪರೀತ ವಾಹನ, ಹಾರ್ನ್ ಶಬ್ದ, ಟ್ರಾಫಿಕ್ ಕಿರಿಕಿರಿ ಸಾಮಾನ್ಯ. ಇತ್ತೀಚಿನ ದಿನಗಳಲ್ಲಿ ವಾಹನಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. ನಗರ ಪ್ರದೇಶದಲ್ಲಿನ ವಾಹನಗಳ ಶಬ್ದ ಮಾಲಿನ್ಯ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಇದೀಗ ಮುಂಬೈ ಪೊಲೀಸರು 17 ವರ್ಷಗಳ ಬಳಿಕ ಮತ್ತೆ ನೋ ಹಾರ್ನ್ ಡೇ ಆಚರಣೆ ಜಾರಿಗೆ ಬರುತ್ತಿದೆ. ಜೂನ್ 14ರ ಬುಧವಾರ ನೋ ಹಾರ್ನ್ ಡೇ ಆಚರಿಸಲಾಗುತ್ತಿದೆ. ಈ ದಿನ ವಾಹನ ಸವಾರರು ಹಾರ್ನ್ ಹಾಕುವಂತಿಲ್ಲ. ಈ ಮೂಲಕ ಪರಿಸರಕ್ಕೆ ಪೂರಕವಾಗಿ ಸಾಗುವ ವಿಶೇಷ ಪ್ರಯತ್ನಕ್ಕೆ ಮುಂಬೈ ಪೊಲೀಸರು ಮುಂದಾಗಿದ್ದಾರೆ.

ನಗರ ಪ್ರದೇಶದಲ್ಲಿ ಹಲವು ವಾಹನ ಸವಾರರು ಅನಗತ್ಯ ಹಾರ್ನ್ ಬಳಕೆ ಮಾಡಿ ಮತ್ತಷ್ಟು ಶಬ್ದ ಮಾಲಿನ್ಯಕ್ಕೆ ಕಾರಣರಾಗುತ್ತಾರೆ. ಹೀಗಾಗಿ ಮುಂಬೈ ಟ್ರಾಫಿಕ್ ಪೊಲೀಸರು ನೋ ಹಾರ್ನ್ ಡೇ ಆಚರಣೆಗೆ ಮುಂದಾಗಿದ್ದಾರೆ. ಜೂನ್ 14 ರಂದು ನೋ ಹಾರ್ನ್ ಡೇ ಪ್ರಯೋಗ ಜಾರಿಯಾಗುತ್ತಿದೆ. ಈ ದಿನ ಎಲ್ಲಾ ವಾಹನ ಸವಾರರು ಹಾರ್ನ್ ಬಳಕೆ ಮಾಡದಂತೆ ಸಹಕರಿಸಲು ಪೊಲೀಸರು ಮನವಿ ಮಾಡಿದ್ದಾರೆ.

Tap to resize

Latest Videos

undefined

ಹಾರ್ನ್ ಮಾಡದೆ 42 ಸಾವಿರ ಕಿಮೀ ಕ್ರಮಿಸಿದ ಬೆಂಗಳೂರು ಯುವಕ!

ಜೂನ್ 14 ರಂದು ಎಲ್ಲಾ ಕಾರು, ಬಸ್, ಬೈಕ್, ಮಿನಿ ಟ್ರಕ್ ಸೇರಿದಂತೆ ಎಲ್ಲಾ ವಾಹನ ಚಾಲಕರು ಹಾರ್ನ್ ಬಳಕೆ ಮಾಡಬೇಡಿ. ಆದರೆ ಆ್ಯಂಬುಲೆನ್ಸ್,  ಅಗ್ನಿಶಾಮಕ ದಳ ಹಾಗೂ ತುರ್ತು ವಾಹನ ಹೊರತುಪಡಿಸಿ ಇನ್ನುಳಿದ ಎಲ್ಲಾ ವಾಹನಗಳು ಹಾರ್ನ್ ಬಳಕೆ ಮಾಡದಂತೆ ಪೊಲೀಸರು ಮನವಿ ಮಾಡಿದ್ದಾರೆ. ಹಲವು ಪರಿಸರ ಹೋರಾಟ ಸಂಘಟನೆಗಳು ಮುಂಬೈ ಟ್ರಾಫಿಕ್ ಪೊಲೀಸರು ಈ ನಿರ್ಧಾರವನ್ನು ಸ್ವಾಗತಿಸಿದೆ. ಮುಂಬೈನಲ್ಲಿ ಇದೀಗ ನೋ ಹಾರ್ನ್ ಡೇ ಆಚರಿಸಲಾಗುತ್ತದೆ. ಆರಂಭಿಕ ಹಂತದಲ್ಲಿ ಒಂದು ದಿನ ನೋ ಹಾರ್ನ್ ಡೇ ಆಚರಣೆ ಇದೆ. ಇದು ವಾರದ ಎಲ್ಲಾ ದಿನ ಬರುವಂತಾಗಲಿ. ಜಾಗರೂಕತೆಯಿಂದ, ಟ್ರಾಫಿಕ್ ನಿಮಯ ಪಾಲಸಿ ವಾಹನ ಚಲಾಯಿಸಿ, ಶಬ್ದ ಮಾಲಿನ್ಯ ತಗ್ಗಿಸಿ ಎಂದು ಪರಿಸರ ಹೋರಾಟ ಸಂಘಟನೆಗಳು ಮನವಿ ಮಾಡಿದೆ.

ಇದೇ ವೇಳೆ ಮುಂಬೈ ಪೊಲೀಸರು ನಿಗದಿತ ಡಿಸಿಮೆಲ್‌ಗಿಂತ ಹೆಚ್ಚಿನ ಶಬ್ದವಿರುವ ಹಾರ್ನ್ ಬಳಕೆ ಮಾಡಿದರೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ವಾರ್ನಿಂಗ್ ಮಾಡಿದ್ದಾರೆ. 1989ರ ಕೇಂದ್ರ ಮೋಟಾರು ವಾಹನ ಕಾಯ್ದೆ ಅನ್ವಯದಂತೆ ಹಾರ್ನ್ ಶಬ್ದದಲ್ಲಿ ನಿಯಮ ಉಲ್ಲಂಘನೆ ಮಾಡಬಾರದು. ಮುಂಬೈ ನಗರದಲ್ಲಿನ ವಾಹನಗಳ ಶಬ್ದವೇ ವಿಪರೀತವಾಗಿದೆ. ಇದರ ಜೊತೆಗೆ ಹಾರ್ನ್ ಶಬ್ದದಿಂದ ಶಬ್ದ ಮಾಲಿನ್ಯದ ತೀವ್ರತೆ ಹೆಚ್ಚಾಗಿದೆ. ಹೀಗಾಗಿ ವಾಹನ ಸವಾರರು ನಿಯಮ ಪಾಲನೆಯತ್ತ ಗಮನಹರಿಸಬೇಕು ಎಂದು ಪೊಲೀಸರು ಸೂಚಿಸಿದ್ದಾರೆ.

ಅನಗತ್ಯ ಹಾರ್ನ್‌ ಮಾಡಿದ್ರೆ ಸಿಗ್ನಲ್‌ನಲ್ಲೇ ನಿಲ್ಬೇಕು!

ಮುಂಬೈನಲ್ಲಿ ಪ್ರತಿ ದಿನ 43 ಲಕ್ಷಕ್ಕೂ ಹೆಚ್ಚು ವಾಹನಗಳು ಓಡಾಡುತ್ತದೆ. ಹೀಗಾಗಿ  ವಾಹನ ಶಬ್ದ ಮಾಲಿನ್ಯ ಅತೀಯಾಗಿದೆ. ಬೆಂಗಳೂರು, ದೆಹಲಿ ಸೇರಿದಂತೆ ಬಹುತೇಕ ನಗರದಲ್ಲಿ ಶಬ್ದ ಮಾಲಿನ್ಯ ಪ್ರಮಾಣ ಅತೀಯಾಗುತ್ತಿದೆ. ಹೀಗಾಗಿ ಮುಂಬೈ ಪೊಲೀಸರು 17 ವರ್ಷಗಳ ಬಳಿಕ ಮತ್ತೆ ನೋ ಹಾರ್ನ್ ಡೇ ಆಚರಣೆಗೆ ಚಾಲನೆ ನೀಡುತ್ತಿದ್ದಾರೆ. 2006ರಲ್ಲಿ ಮುಂಬೈನಲ್ಲಿ ನೋ ಹಾರ್ನ್ ಡೇ ಆಂದೋಲನ ಆರಂಭಿಸಲಾಗಿತ್ತು. ಆದರೆ ಈ ಆಂದೋಲನ ಯಶಶಸ್ವಿಯಾಗಿ ಮುನ್ನಡೆಯಲಿಲ್ಲ. 

click me!