Electric Vehicle Fire ಎಲೆಕ್ಟ್ರಿಕ್ ವಾಹನಗಳ ಶೋ ರೂಂನಲ್ಲಿ ದಿಢೀರ್ ಕಾಣಿಸಿಕೊಂಡ ಬೆಂಕಿ, ಹೆಚ್ಚಾಯ್ತು ಆತಂಕ!

By Suvarna News  |  First Published Apr 2, 2022, 3:32 PM IST
  • ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ಸ್ಫೋಟ, ಬೆಂಕಿ ಪ್ರಕರಣ
  • ಈ ಘಟನೆ ಬೆನ್ನಲ್ಲೇ ಇದೀಗ ಎಲೆಕ್ಟ್ರಿಕ್ ವಾಹನ ಶೋ ರೂಂನಲ್ಲಿ ಬೆಂಕಿ
  • ಸಿಬ್ಬಂದಿ ಸಮಯ ಪ್ರಜ್ಞೆಯಿಂದ ವಾಹನಗಳ ಸ್ಥಳಾಂತರ
     

ಜಬಲ್‌ಪುರ(ಏ.02): ಭಾರತದಲ್ಲಿ ಇತ್ತೀಚೆಗೆ ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಸ್ಫೋಟಿಸಿದ, ಹೊತ್ತಿ ಉರಿದ ಕೆಲ ಘಟನೆಗಳು ಗ್ರಾಹಕರಿ ಭಾರಿ ಆತಂಕ ಮೂಡಿಸಿತ್ತು. ಇದ್ದಕ್ಕಿದ್ದಂತೆ ಎಲೆಕ್ಟ್ರಿಕ್ ಸ್ಕೂಟರ್ ಹೊತ್ತಿ ಉರಿದ ವಿಡಿಯೋಗಳು ವೈರಲ್ ಆಗಿತ್ತು. ಇದು ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಸುರಕ್ಷತೆಯನ್ನು ಪ್ರಶ್ನಿಸಿತ್ತು. ಇದರ ಬೆನ್ನಲ್ಲೇ ಇದೀಗ ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಎಲೆಕ್ಟ್ರಿಕ್ ರಿಕ್ಷಾ ವಾಹನಗಳ ಶೋ ರೂಂನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡು ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಜಬಲ್‌ಪುರದ ಬಾಲಾಘಾಟ್‌ನಲ್ಲಿರುವ ಇ ಅಶ್ವ ಆಟೋಮೇಟಿವ್ ಶೋ ರೂಂ ಬೆಂಕಿಗೆ ಆಹುತಿಯಾಗಿದೆ.ದಿಢೀರ್ ಬೆಂಕಿ ಕಾಣಿಸಿಕೊಂಡ ಬೆನ್ನಲ್ಲೋ ಸಣ್ಣ ಸ್ಫೋಟದ ಶಬ್ದ ಕೇಳಿಸಿದೆ. ತಕ್ಷಣವೇ ಸಿಬ್ಬಂದಿಗಳು ಶೋ ರೂಂನಲ್ಲಿದ್ದ ವಾಹನಗಳನ್ನು ಸ್ಥಳಾಂತರಿಸಿದ್ದಾರೆ. ಘಟನೆಯಲ್ಲಿ ಅದೃಷ್ಠವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.

Tap to resize

Latest Videos

ಪುಣೆಯಲ್ಲಿ ಓಲಾ ಇಲೆಕ್ಟ್ರಿಕ್‌ ಸ್ಕೂಟರ್‌ಗೆ ಬೆಂಕಿ: ವಿಡಿಯೋ ವೈರಲ್

ಶೋ ರೂಂನಲ್ಲಿ ಕಾಣಿಸಿಕೊಂಡ ಬೆಂಕಿಗೆ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಶೋ ರೂಂ ಮಾಲೀಕರು ಹೇಳಿದ್ದಾರೆ. ಯಾವುದೇ ಎಲೆಕ್ಟ್ರಿಕ್ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡಿಲ್ಲ. ಎಲ್ಲಾ ವಾಹನಗಳು ಸುರಕ್ಷಿತವಾಗಿದೆ. ಹೀಗಾಗಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದಿದ್ದಾರೆ.

ಎಲೆಕ್ಟ್ರಿಕ್ ವಾಹನಗಳ ಶೋ ರೂಂನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಭಾರತೀಯರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿತ್ತು. ಆದರೆ ಈ ಘಟನೆ ಎಲೆಕ್ಟ್ರಿಕ್ ವಾಹನಗಳಿಂದ ಅಲ್ಲ ಅನ್ನೋದು ಸ್ಪಷ್ಟವಾಗಿದೆ. ಅದರೂ ಇತ್ತೀಚೆಗೆ ನಡೆದ ಬ್ಯಾಟರಿ ಸ್ಫೋಟ, ಬ್ಯಾಟರಿಯಲ್ಲಿ ಕಾಣಿಸಿಕೊಂಡ ಬೆಂಕಿ ಪ್ರಕರಣಗಳು ಭಾರತದ ಗ್ರೀನ್ ಎನರ್ಜಿ ವಾಹನಗಳ ಅಭಿಯಾನಕ್ಕೆ ಕೊಂಚ ಹಿನ್ನಡೆ ತಂದಿದೆ. 

ಚಾರ್ಜ್‌ ಹಾಕಿದ್ದ ಬೈಕ್‌ ಸ್ಫೋಟ.. ತಂದೆ-ಮಗಳ ದಾರುಣ ಸಾವು

ಚೆನ್ನೈಯಲ್ಲಿ ಇ-ವಾಹನಕ್ಕೆ ಬೆಂಕಿ: 4 ದಿನದಲ್ಲಿ 4ನೇ ಘಟನೆ
ಹೈದರಾಬಾದ್‌ನ ಸ್ಟಾರ್ಟಪ್‌ ಕಂಪನಿ ಪ್ಯೂರ್‌ ತಯಾರಿಸಿದ ಎಲೆಕ್ಟ್ರಾನಿಕ್‌ ವಾಹನಕ್ಕೆ ಬೆಂಕಿ ತಗುಲಿದ ಘಟನೆ ತಮಿಳುನಾಡಿನ ಚೆನ್ನೈಯಲ್ಲಿ ವರದಿಯಾಗಿದೆ. ಕೆಲ ದಿನಗಳ ಹಿಂದೇ ಓಲಾ ಹಾಗೂ ಒಕಿನಾವಾ ಆಟೋಟೆಕ್‌ ಎಲೆಕ್ಟ್ರಿಕ್‌ ವಾಹನಗಳಿಗೆ ಬೆಂಕಿ ತಗುಲಿದ ಘಟನೆ ವರದಿಯಾದ ಬೆನ್ನಲ್ಲೇ ಈ ಘಟನೆ ನಡೆದಿದ್ದು, ಇ-ವಾಹನಗಳ ಸುರಕ್ಷತೆಯ ಬಗ್ಗೆ ಶಂಕೆಯನ್ನು ಹುಟ್ಟುಹಾಕಿದೆ.ಚೆನ್ನೈಯ ಉತ್ತರದಲ್ಲಿರುವ ಮಂಜಾಮ್‌ಪಕ್ಕಂನಲ್ಲಿ ಈ ಘಟನೆ ನಡೆದಿದ್ದು, ರಸ್ತೆ ಬದಿಯಲ್ಲಿ ನಿಲ್ಲಿಸಿದ ಇ-ಸ್ಕೂಟರ್‌ನಿಂದ ಹೊಗೆಯು ರಭಸದಿಂದ ಬರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಕಳೆದ 4 ದಿನಗಳಲ್ಲೇ ನಾಲ್ಕನೇ ಬಾರಿ ಇಂತಹ ಘಟನೆ ವರದಿಯಾಗಿದೆ.

ಈ ಮೊದಲು ಪುಣೆಯಲ್ಲಿ ಮಾಚ್‌ರ್‍ 28 ರಂದು ರಸ್ತೆ ಬದಿಯಲ್ಲಿ ನಿಲ್ಲಿಸಿದ ಓಲಾ ಎಸ್‌-1 ಎಲೆಕ್ಟ್ರಿಕ್‌ ಸ್ಕೂಟರ್‌ಗೆ ಬೆಂಕಿ ತಗುಲಿತ್ತು. ತಮಿಳುನಾಡಿನ ವೆಲ್ಲೂರಿನಲ್ಲಿ ಒಕಿನಾವಾ ಇ-ವಾಹನವೂ ಕೂಡಾ ಇದೇ ರೀತಿಯಲ್ಲಿ ಬೆಂಕಿಗೆ ಹಿಡಿದಿದ್ದು ವರದಿಯಾಗಿತ್ತು.

ಪುಣೆಯಲ್ಲಿ ಓಲಾ ಇ-ಸ್ಕೂಟರ್‌ಗೆ ಬೆಂಕಿ: ತನಿಖೆಗೆ ಸರ್ಕಾರ ಆದೇಶ
ಪುಣೆಯಲ್ಲಿ ಕಳೆದ ವಾರ ಓಲಾ ಎಲೆಕ್ಟ್ರಿಕ್‌ ಸ್ಕೂಟರಿಗೆ ಬೆಂಕಿ ತಗುಲಿದ ಘಟನೆಯ ಕುರಿತು ತನಿಖೆ ನಡೆಸುವಂತೆ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಈ ಘಟನೆಗೆ ಕಾರಣಗಳನ್ನು ಪತ್ತೆ ಹಚ್ಚಿ, ಮುಂದಿನ ದಿನಗಳಲ್ಲಿ ಇಂತಹ ಅವಘಡಗಳು ಸಂಭವಿಸದಂತೇ ಪರಿಹಾರ ಕ್ರಮಗಳನ್ನು ಸೂಚಿಸಲು ಅಗ್ನಿ ಸ್ಫೋಟಕ ಮತ್ತು ಪರಿಸರ ಸುರಕ್ಷತಾ ಕೇಂದ್ರಕ್ಕೆ ತಿಳಿಸಿದೆ.

ಶನಿವಾರ ಪುಣೆಯಲ್ಲಿ ಓಲಾ ಎಲೆಕ್ಟ್ರಿಕ್‌ ಸ್ಕೂಟರಿಗೆ ಬೆಂಕಿ ತಗುಲಿತ್ತು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ವಾಹನ ಸುರಕ್ಷತಾ ಮಾನದಂಡಗಳ ಬಗ್ಗೆ ಸಾಮಾಜಿಕ ಜಾಲತಾಣಗಳ ಬಳಕೆದಾರರು ಶಂಕೆ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಓಲಾ ಕಂಪನಿಯ ಸಹ ಸಂಸ್ಥಾಪಕ ಭವೀಶ್‌ ಅರ್ಗವಾಲ್‌ ‘ಸುರಕ್ಷತೆ ನಮ್ಮ ಮೊದಲ ಆದ್ಯತೆಯಾಗಿದೆ. ಘಟನೆಗೆ ಸಂಬಂಧಿಸಿದ ಕಾರಣಗಳ ಬಗ್ಗೆ ತನಿಖೆ ನಡೆಸಿ, ಸರಿಪಡಿಸುತ್ತೇವೆ ಎಂದು ಹೇಳಿಕೆ ನೀಡಿದ್ದರು.

click me!