ಬೆಂಗಳೂರು(ಮಾ.16): ಇಂಧನದ ಬೆಲೆ ಗಗನಕ್ಕೇರುತ್ತಿದೆ. ಎಲೆಕ್ಟ್ರಿಕ್ ವಾಹನಗಳು(Electric Vehicle) ಜನಸಾಮಾನ್ಯರ ಕೈಗೆಟುಕುತ್ತಿಲ್ಲ. ಇದರ ನಡುವೆ ಹಲವು ಸಂಶೋಧನೆಗಳು ಫ್ಲೆಕ್ಸ್ ಫ್ಯೂಯೆಲ್(Flex Fuel) ಬಳಕೆ ಎಂಜಿನ್ ಅಭಿವೃದ್ಧಿಯತ್ತ ಭಾರತ ದಿಟ್ಟ ಹೆಜ್ಜೆ ಇಡುತ್ತಿದೆ. ಇದೀಗ ಟಾಟಾ ಮೋಟಾರ್ಸ್ ಹೈಡ್ರೋಜನ್ ಫ್ಯೂಯಲ್ ಸೆಲ್(Hydrogen Fuel) ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವಲ್ಲಿ ದಾಪುಗಾಲು ಹಾಕುತ್ತಿದೆ. ಇದರ ಮೊದಲ ಹೆಜ್ಜೆಯಾಗಿ, ಹೈಡ್ರೋಜನ್ ಫ್ಯೂಯಲ್ ಸೆಲ್ ಚಾಲಿತ ಬಸ್‍ನ ಆರಂಭಿಕ ಮಾದರಿಯ ಪ್ರದರ್ಶಿಸಿದೆ. ಈ ಬಸ್ ಕಾರ್ಯಾಚರಣೆ ಆರಂಭಿಸಿದೆ.
ಫಾಸಿಲ್ ಫ್ಯೂಯಲ್ ಗಳ ಬದಲಿಕೆಯಲ್ಲಿ ಫ್ಯೂಯಲ್ ಸೆಲ್ ತಂತ್ರಜ್ಞಾನವು ಭರವಸೆಯ ಪರ್ಯಾಯವಾಗಿ ಹೊರಹೊಮ್ಮುತ್ತಿದೆ. ದೇಶಾದ್ಯಂತ ಕೈಗಾರಿಕೆಗಳು ಮತ್ತು ವಲಯಗಳು ಈಗ ಆಟೋಮೊಬೈಲ್ ವಲಯದಲ್ಲಿ ಇಂಧನದ ಮೂಲವಾಗಿ ಹೈಡ್ರೋಜನ್ ಅನ್ನು ಬಳಸಿಕೊಳ್ಳಲು ದಾಪುಗಾಲು ಹಾಕುತ್ತಿರುವುದರೊಂದಿಗೆ, ಟಾಟಾ ಮೋಟಾರ್ಸ್(Tata Motors) ಮಹತ್ವದ ಕ್ರಮಗಳನ್ನು ಕೈಗೊಂಡಿದೆ ಮತ್ತು ಹೈಡ್ರೋಜನ್-ಚಾಲಿತ ವಾಹನಗಳ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ.
ಅತ್ಯುತ್ತಮ ಪರ್ಫಾಮೆನ್ಸ್, ಕೈಗೆಟುಕುವ ದರ, ಟಾಟಾ ಟಿಗೋರ್ ಇವಿ ಟೆಸ್ಟ್ ಡ್ರೈವ್ Review
ಪ್ರಮುಖ ಅಂಶಗಳು:
• ಟಾಟಾ ಮೋಟಾರ್ಸ್ ಫ್ಯೂಯಲ್ ಸೆಲ್ ತಂತ್ರಜ್ಞಾನ ನಿರೂಪಣಾ ವಾಹನ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದು, ತಂತ್ರಜ್ಞಾನ ಅಭಿವೃದ್ಧಿ ಮತ್ತು ನಿರೂಪಣಾ ಕಾರ್ಯಕ್ರಮದ (TDDP) ಭಾಗವಾಗಿ ಭಾರತ ಸರ್ಕಾರದ ಸಹಯೋಗದೊಂದಿಗೆ ಪರಿಕಲ್ಪನೆ ಮಾಡಲಾಗಿದೆ. ವ್ಯವಸ್ಥೆಯ ಏಕೀಕರಣ, ಪರೀಕ್ಷೆ ಮತ್ತು ಪ್ರಮಾಣೀಕರಣಕ್ಕಾಗಿ ಅದರ ಅಭಿವೃದ್ಧಿಯ ಸಮಯದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನೊಂದಿಗೆ ಸಹಯೋಗ ಮಾಡಿಕೊಂಡಿದೆ.
• ಟಾಟಾ ಮೋಟಾರ್ಸ್, ಈ ತಂತ್ರಜ್ಞಾನಕ್ಕಾಗಿ ಪುಣೆಯಲ್ಲಿ ಮೀಸಲು ಪ್ರಯೋಗಾಲಯವನ್ನು ಸ್ಥಾಪಿಸಿದೆ. ಇದಕ್ಕೂ ಮೊದಲು, ಪ್ರಯೋಗಾಲಯವು ಬೆಂಗಳೂರಿನಲ್ಲಿತ್ತು, ಹಾಗೂ ಅಲ್ಲಿ ಕಂಪನಿಯು ಈ ತಂತ್ರಜ್ಞಾನದ ಮೇಲೆ ಕೆಲಸ ಮಾಡಲು ಇಸ್ರೋ ಮತ್ತು ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‍ಸಿ) ನೊಂದಿಗೆ ಸಹಯೋಗವನ್ನು ಹೊಂದಿತ್ತು.
• ಆಟೋ ಎಕ್ಸ್‍ಪೋದಂತಹ ವಿವಿಧ ಪ್ರಮುಖ ಸಾರ್ವಜನಿಕ ವೇದಿಕೆಗಳಲ್ಲಿ ಭಾರತದ ಮೊದಲ ಫ್ಯೂಯಲ್ ಸೆಲ್ ಚಾಲಿತ ಬಸ್ ಅನ್ನು ಪ್ರದರ್ಶಿಸಲಾಯಿತು.
• ಟಾಟಾ ಮೋಟಾರ್ಸ್ ತನ್ನ ಹೈಡ್ರೋಜನ್ ನಿರ್ವಹಣೆ ಮತ್ತು ಸಂಯೋಜಿತ ಸುರಕ್ಷತಾ ವ್ಯವಸ್ಥೆಯ ಜೊತೆಗೆ ಆನ್‍ಬೋರ್ಡ್ ಶೇಖರಣಾ ಸಾಮಥ್ರ್ಯವನ್ನು ಅಭಿವೃದ್ಧಿಪಡಿಸಿದೆ. ಇದನ್ನು ನಿಖರವಾದ ವಿನ್ಯಾಸ, ಏಕೀಕರಣ, ಸಿಮ್ಯುಲೇಶನ್‍ಗಳು, ಪರೀಕ್ಷೆಯ ಮೂಲಕ ಮಾಡಲಾಗಿದೆ ಮತ್ತು ಈ ಕಾರ್ಯಕ್ರಮದ ವಿವಿಧ ಮೂಲಮಾದರಿಗಳು ದೇಶಾದ್ಯಂತ ವಿವಿಧ ಮೌಲ್ಯಮಾಪನಗಳಿಗೆ ಒಳಪಟ್ಟಿವೆ.
• ಫ್ಯೂಯಲ್ ಸೆಲ್ ಬಸ್‍ಗಳನ್ನು ಪರೀಕ್ಷಿಸಲು ಸಾನಂದ್‍ನಲ್ಲಿ ಮೀಸಲಾದ ಹೈಡ್ರೋಜನ್ ವಿತರಣಾ ಕೇಂದ್ರ ಮತ್ತು ಪರೀಕ್ಷಾ ಟ್ರ್ಯಾಕ್ ಅನ್ನು ನಿರ್ಮಿಸಿದೆ.
• ಜೂನ್ 2021 ರಲ್ಲಿ, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ನಿಂದ 15 ಹೈಡ್ರೋಜನ್ ಆಧಾರಿತ ಪ್ರೋಟಾನ್ ಎಕ್ಸ್ಚೇಂಜ್ ಮೆಂಬ್ರೇನ್ (PEM) ಫ್ಯೂಯಲ್ ಸೆಲ್ ಬಸ್ಸುಗಳ ಪೂರೈಕೆಗಾಗಿ ಕಂಪನಿಗೆ ಟೆಂಡರ್ ನೀಡಲಾಯಿತು. ಈ ಟೆಂಡರ್ ತಿಳುವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಮಾಡಿದ ದಿನಾಂಕದಿಂದ 144 ವಾರಗಳಲ್ಲಿ ಬಸ್‍ಗಳನ್ನು ತಲುಪಿಸುವ ಬದ್ಧತೆಗೆ ಒಳಪಟ್ಟಿದೆ.
Tata Cars ಗ್ರಾಮೀಣ ಭಾಗದ ಜನರಿಗೆ ಕಾರು ಖರೀದಿಗೆ ಹೊಸ ಯೋಜನೆ,ಟಾಟಾ ಅನುಭವ್ ಶೋ ರೂಂ ಲಾಂಚ್!
ಉದ್ಯಮದಲ್ಲಿನ ಪ್ರವರ್ತಕರಾಗಿ, ಟಾಟಾ ಮೋಟಾರ್ಸ್ ಶುದ್ಧ ಮತ್ತು ಹಸಿರು ಹೊರಸೂಸುವಿಕೆಯ ಕಡೆಗೆ ಭಾರತೀಯ ವಾಹನ ವಲಯದ ಡ್ರೈವ್‍ನಲ್ಲಿ ಮುಂಚೂಣಿಯಲ್ಲಿದೆ ಮತ್ತು ಎಂಜಿನಿಯರಿಂಗ್ ಸಂಶೋಧನಾ ಕೇಂದ್ರ (ERC) ಕಳೆದ ಹಲವು ವರ್ಷಗಳಿಂದ ಫ್ಯೂಯಲ್ ಸೆಲ್ ತಂತ್ರಜ್ಞಾನದ ಮೇಲೆ ತೀವ್ರವಾದ ಗಮನವನ್ನು ಹೊಂದಿದೆ. ನಮ್ಮ ಕಾರ್ಯತಂತ್ರದ ಪಾಲುದಾರರೊಂದಿಗೆ ನಿಕಟವಾಗಿ ಕೆಲಸ ಮಾಡಿಕೊಂಡು ನಾವು ಹೈಡ್ರೋಜನ್ ಫ್ಯೂಯಲ್ ಸೆಲ್ ತಂತ್ರಜ್ಞಾನವನ್ನು ವ್ಯವಸ್ಥಿತವಾಗಿ ಸಂಶೋಧಿಸುತ್ತಿದ್ದೇವೆ, ಅಭಿವೃದ್ಧಿಪಡಿಸುತ್ತಿದ್ದೇವೆ ಮತ್ತು ಮೌಲ್ಯಮಾಪನ ಮಾಡುತ್ತಿದ್ದೇವೆ ಎಂದು ಟಾಟಾ ಮೋಟಾರ್ಸ್‍ನ ಅಧ್ಯಕ್ಷ ರಾಜೇಂದ್ರ ಪೇಟ್ಕರ್ ಹೇಳಿದ್ದಾರೆ.
ಕಂಪನಿಯಲ್ಲಿ 40 ಕ್ಕೂ ಹೆಚ್ಚು ಜನರು ಪ್ರಸ್ತುತ ಈ ತಂತ್ರಜ್ಞಾನದ ಮೇಲೆ ಕೆಲಸ ಮಾಡುತ್ತಿದ್ದಾರೆ ಮತ್ತು IOCL ನೊಂದಿಗೆ ನಮ್ಮ ಕೊನೆಯ ಟೆಂಡರ್ ಗೆಲುವು ಈ ತಂತ್ರಜ್ಞಾನವನ್ನು ಮುಖ್ಯವಾಹಿನಿಗೆ ತರುವಲ್ಲಿ ನಾವು ತೆಗೆದುಕೊಳ್ಳುತ್ತಿರುವ ಪ್ರಭಾವಶಾಲಿ ಮತ್ತು ಸ್ಪಷ್ಟವಾದ ಕ್ರಮಗಳಿಗೆ ಸಾಕ್ಷಿಯಾಗಿದೆ. ಹೈಡ್ರೋಜನ್ ಶೂನ್ಯ-ನಿವ್ವಳ ಮತ್ತು ಸುಸ್ಥಿರತೆಯ ಗುರಿಗಳನ್ನು ಪೂರೈಸುವ ಸಾಮಥ್ರ್ಯವನ್ನು ಹೊಂದಿದೆ ಎಂದು ನಮಗೆ ಖಾತರಿಯಿದೆ ಮತ್ತು ಈ ಕ್ಷೇತ್ರದಲ್ಲಿ ನಮ್ಮ ಪ್ರಯತ್ನಗಳು ಭವಿಷ್ಯದಲ್ಲಿ ಹೈಡ್ರೋಜನ್ ಅನ್ನು ಫ್ಯೂಯಲ್ ಸೆಲ್ ವಾಹನಗಳಿಗೆ ಆದ್ಯತೆಯ ಆಯ್ಕೆಯನ್ನಾಗಿ ಮಾಡುತ್ತದೆ ಎಂದಿದ್ದಾರೆ.