Re Registration ಹಳೆ ವಾಹನ ಮರು ನೋಂದಣಿ ಶುಲ್ಕ 8 ಪಟ್ಟು ಹೆಚ್ಚಳ, ಎಪ್ರಿಲ್ 1 ರಿಂದ ಹೊಸ ನಿಯಮ ಜಾರಿ!

By Suvarna News  |  First Published Mar 14, 2022, 3:59 PM IST
  • ಏಪ್ರಿಲ್ 1 ರಿಂದ 15 ವರ್ಷಕ್ಕಿಂತ ಹಳೇ ವಾಹನ ರಿ ರಿಜಿಸ್ಟ್ರೇಶನ್ ದುಬಾರಿ
  • ಶುಲ್ಕ ಮೊತ್ತ 8 ಪಟ್ಟು ಹೆಚ್ಚಿಸಿದ ಕೇಂದ್ರ ರಸ್ತೆ ಸಾರಿಗೆ ಇಲಾಖೆ
  • ವಾಹನ ಗುಜುರಿ ನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೆ ನಿರ್ಧಾರ
     

ನವದೆಹಲಿ(ಮಾ.14): ಭಾರತದಲ್ಲಿ ನಿಗದಿತ ವರ್ಷಕ್ಕಿಂತ ಹಳೇ ವಾಹನಗಳನ್ನು ಗುಜುರಿಗೆ ಹಾಕುವ ನೀತಿಯನ್ನು ತರಲಾಗಿದೆ. ಈ ಮೂಲಕ ನಗರ ಪ್ರದೇಶಗಳಲ್ಲಿನ ವಾಯು ಮಾಲಿನ್ಯ ತಗ್ಗಿಸಲು ಹಾಗೂ ಇಂಧನ ಪೋಲಾಗುವುದನ್ನು ತಪ್ಪಿಸಲು ಮಹತ್ವದ ಹೆಜ್ಜೆ ಇಡಲಾಗಿದೆ. ನಿಗದಿತ ವರ್ಷಕ್ಕಿಂತ ಹಳೇ ವಾಹನಗಳನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಆದರೆ ಇದೀಗ ಈ ವಾಹನಗಳ ಮರು ನೋಂದಣಿ ಶುಲ್ಕವನ್ನು 8 ಪಟ್ಟು ಹೆಚ್ಚಿಸಲಾಗಿದೆ. ಹೊಸ ನಿಯಮ ಎಪ್ರಿಲ್ 1 ರಿಂದ ಜಾರಿಗೆ ಬರಲಿದೆ.

ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಹೊಸ ನೀತಿ ಜಾರಿಗೆ ತರುತ್ತಿದೆ. ಇದು ಎಲ್ಲಾ ರಾಜ್ಯಗಳಲ್ಲಿ ಶುಲ್ಕ ಹೆಚ್ಚಳವಾಗಲಿದೆ. ಸದ್ಯ ನಾಲ್ಕು ಚಕ್ರದ ಹಳೇ ವಾಹನ ಮರು ನೋಂದಣಿಗೆ ಶುಲ್ಕ 600 ರೂಪಾಯಿ. ಎಪ್ರಿಲ್ 1 ರಿಂದ ಈ ಬೆಲೆ 5,000 ರೂಪಾಯಿಗೆ ಏರಿಕೆಯಾಗುತ್ತಿದೆ. ಇನ್ನು ದ್ವಿಚಕ್ರ ವಾಹನ ಮರು ನೋಂದಣಿ ಶುಲ್ಕ 300 ರೂಪಾಯಿ, ಎಪ್ರಿಲ್ 1 ರಿಂದ ಈ ಬೆಲೆ 1,000 ರೂಪಾಯಿ. 15,000 ರೂಪಾಯಿ ಇದ್ದ ಆಮದು ಮಾಡಿಕೊಂಡ ಕಾರಿನ ಮರು ನೋಂದಣಿ ಶುಲ್ಕ ಎಪ್ರಿಲ್ 1 ರಿಂದ 40,000 ರೂಪಾಯಿಗೆ ಎರಿಕೆಯಾಗಲಿದೆ. 

Tap to resize

Latest Videos

Vehicles Fitness Test ವಾಹನ ಫಿಟ್ನೆಸ್ ಟೆಸ್ಟ್‌ಗೆ ಮತ್ತಷ್ಟು ಕಠಿಣ ನೀತಿ, ಆಟೋಮೆಟೆಡ್ ವಿಧಾನ ಶೀಘ್ರದಲ್ಲೇ ಜಾರಿ!

ಕಾರು ಮರು ನೋಂದಣಿಯಲ್ಲಿ ವಿಳಂಬವಾದರೆ ಖಾಸಗಿ ವಾಹನ ಮಾಲೀಕರು ಪ್ರತಿ ತಿಂಗಳು 300 ರೂಪಾಯಿಯಂತೆ ದಂಡ ಹೆಚ್ಚುವರಿಯಾಗಿ ಕಟ್ಟಬೇಕು. ಇನ್ನು ವಾಣಿಜ್ಯ ವಾಹನಗಳ ಮಾಲೀಕರು 500 ರೂಪಾಯಿ ದಂಡ ಕಟ್ಟಬೇಕು. 15 ವರ್ಷಕ್ಕಿಂತ ಮೇಲ್ಪಟ್ಟ ವಾಹನಗಳು ಪ್ರತಿ ವರ್ಷಕ್ಕೊಮ್ಮೆ ವಾಹಮ ರಿ ರಿಜಿಸ್ಟ್ರೇಶನ್ ಮಾಡಿಸಿಕೊಳ್ಳಬೇಕು.

ಮರು ನೋಂದಣಿ ಮಾತ್ರವಲ್ಲ, ಫಿಟ್ನೆಸ್ ಸರ್ಟಿಫಿಕೇಟ್ ದರ ಕೂಡ ಹೆಚ್ಚಿಸಲಾಗಿದೆ. ಸದ್ಯ ವಾಣಿಜ್ಯ ವಾಹನಗಳ ಫಿಟ್ನೆಸ್ ಸರ್ಟಿಫಿಕೇಟ್ ಬೆಲೆ 1,000 ರೂಪಾಯಿ. ಆದರೆ ಎಪ್ರಿಲ್ 1 ರಿಂದ ಈ ಬೆಲೆ 7,000 ರೂಪಾಯಿಗೆ ಏರಿಕೆಯಾಗಲಿದೆ. ಬಸ್ ಹಾಗೂ ಟ್ರಕ್ ಫಿಟ್ನೆಸ್ ಸರ್ಟಿಫಿಕೇಟ್ ಬೆಲೆ ಸದ್ಯ 1,500 ರೂಪಾಯಿ. ಎಪ್ರಿಲ್ 1 ರಿಂದ 12,500 ರೂಪಾಯಿಗೆ ಎರಿಕೆಯಾಗಲಿದೆ. 8 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ವಾಣಿಜ್ಯ ವಾಹನಗಳಿಗೆ ಫಿಟ್ನೆಸ್ ಸರ್ಟಿಫಿಕೇಟ್ ಅತ್ಯವಶ್ಯಕವಾಗಿದೆ.

Drink and Drive ಅಪಘಾತ ಸಣ್ಣದಾದರೂ ಕುಡಿದು ವಾಹನ ಚಲಾಯಿಸಿದ್ದರೆ ಗಂಭೀರ ಪ್ರಕರಣ, ಸುಪ್ರೀಂ ಕೋರ್ಟ್!

ದೆಹಲಿಯಲ್ಲಿ 10 ವರ್ಷ ಮೇಲ್ಪಟ್ಟ1 ಲಕ್ಷ ಡೀಸೆಲ್‌ ವಾಹನ ನೋಂದಣಿ ರದ್ದು
ಹಸಿರು ನ್ಯಾಯಾಧಿಕರಣದ ಆದೇಶದಂತೆ ದೆಹಲಿಯಲ್ಲಿ 10 ವರ್ಷ ಮೀರಿದ 1 ಲಕ್ಷ ವಾಹನಗಳ ನೋಂದಣಿಯನ್ನು ರದ್ದು ಮಾಡಲಾಗಿದೆ. ಹೀಗಾಗಿ ಈ ವಾಹನಗಳು ದೆಹಲಿಯಲ್ಲಿ ಇನ್ನು ಬಳಕೆಗೆ ನಿಷ್ಕಿ್ರಯವಾಗಲಿದೆ. ಆದರೆ ಇವುಗಳನ್ನು ಎಲೆಕ್ಟ್ರಿಕ್‌ ಮಾದರಿಗೆ ಬದಲಾಯಿಸಬಹುದು ಅಥವಾ ಇತರೆ ರಾಜ್ಯಗಳ ಜನರಿಗೆ ಮಾರಾಟ ಮಾಡಬಹುದು. ರದ್ದಾದ ವಾಹನಗಳ ಪೈಕಿ 87000 ಕಾರು, ಉಳಿದವು ವಾಣಿಜ್ಯ ವಾಹನಗಳಾಗಿವೆ. ಜೊತೆಗೆ 15 ವರ್ಷ ಮೀರಿದ ಪೆಟ್ರೋಲ್‌ ವಾಹನಗಳ ನೋಂದಣಿಯನ್ನು ರದ್ದು ಮಾಡುವ ಯೋಜನೆ ಇದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 15 ವರ್ಷ ಮೀರಿದ 32 ಲಕ್ಷ ದ್ವಿಚಕ್ರ ವಾಹನಗಳು ಮತ್ತು 11 ಲಕ್ಷ ಕಾರುಗಳು ಸೇರಿದಂತೆ 43 ಲಕ್ಷಕ್ಕೂ ಅಧಿಕ ಪೆಟ್ರೋಲ್‌ ವಾಹನಗಳನ್ನು ಗುರುತಿಸಲಾಗಿದೆ.

ಎಲೆಕ್ಟ್ರಿಕ್‌ ವಾಹನಗಳ ನೋಂದಣಿ, ಮರು ನೋಂದಣಿ ಶುಲ್ಕ ರದ್ದು
ಎಲೆಕ್ಟ್ರಿಕ್‌ ವಾಹನಗಳ ಮಾರಾಟಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಿಂದ ಬ್ಯಾಟರಿ ಚಾಲಿತ ವಾಹನಗಳಿಗೆ ನೋಂದಣಿ ಮತ್ತು ನೋಂದಣಿ ಪ್ರಮಾಣಪತ್ರ ಪರಿಷ್ಕರಣೆ ಶುಲ್ಕದಿಂದ ವಿನಾಯಿತಿ ನೀಡಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಗುರುವಾರ ಅಧಿಸೂಚನೆ ಹೋರಡಿಸಿದೆ. ಸದ್ಯ ಎಲೆಕ್ಟ್ರಿಕ್‌ ವಾಹನಗಳಿಗೆ ಒಂದೊಂದು ರಾಜ್ಯಗಳಲ್ಲಿ ಒಂದೊಂದು ರೀತಿಯ ನೋಂದಣಿ ಶುಲ್ಕವನ್ನು ವಿಧಿಸಲಾಗುತ್ತಿದೆ. ಹೀಗಾಗಿ ನೂತನ ಅಧಿಸೂಚನೆ ಎಲೆಕ್ಟ್ರಿಕ್‌ ವಾಹನಗಳ ದರವನ್ನು ಕಡಿಮೆ ಮಾಡುವುದರ ಜೊತೆ ದೇಶದಲ್ಲಿ ಏಕರೂಪದ ದರವನ್ನು ನಿಗದಿಪಡಿಸಲು ನೆರವಾಗಲಿದೆ. ಈ ಸಂಬಂಧ ಸಚಿವಾಲಯ 2021ರ ಮೇನಲ್ಲಿ ಕರಡು ಪ್ರಸ್ತಾವನೆಯನ್ನು ಸಿದ್ಧಪಡಿಸಿತ್ತು. ಇದೀಗ ಈ ಪ್ರಸ್ತಾವನೆ ಜಾರಿಗೆ ಬಂದಿದೆ.
 

click me!