ವಿದೇಶದಲ್ಲಿ ಸೈಕಲ್ ಮೂಲಕ ಕಚೇರಿಗೆ ತೆರಳುವವರಿಗೆ ವಿಶೇಷ ಸವಲತ್ತುಗಳಿವೆ. ಈ ಮೂಲಕ ಸೈಕಲ್ ಬಳಕೆ ಹೆಚ್ಚಿಸಲು ಹಲವು ಸರ್ಕಾರಗಳು ವಿಶೇಷ ಒತ್ತು ನೀಡುತ್ತಿದೆ. ಭಾರತದಲ್ಲಿ ಮೈಸೂರು ಸೇರಿದಂತೆ ಕೆಲ ಭಾಗದಲ್ಲಿ ಸೈಕಲ್ ಬಳಕೆ ಮಾಡುತ್ತಾರೆ. ಆದರೆ ಪ್ರಮಾಣ ತೀರಾ ಕಡಿಮೆ. ಇದೀಗ ಸೈಕಲ್ ಪ್ರೀಯರಿಗೆ ಶಾಕ್ ಎದುರಾಗಿದೆ. ಕಾರಿನನಲ್ಲಿ ಸೈಕಲ್ ಕೊಂಡೊಯ್ದರೆ ಬರೋಬ್ಬರಿ 5,000 ರೂಪಾಯಿ ದಂಡ ಕಟ್ಟುವ ಪರಿಸ್ಥಿತಿ ಎದುರಾಗಬಹುದು.
ಬೆಂಗಳೂರು(ಅ.15): ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಸೈಕಲ್ ಮಾರಾಟದಲ್ಲಿ ಗಣನೀಯ ಏರಿಕೆ ಕಂಡಿದೆ. ಇದೀಗ ಬಹುತೇಕರು ಉತ್ತಮ ಆರೋಗ್ಯಕ್ಕಾಗಿ ಸೈಕಲ್ ಸವಾರಿ ಮಾಡುತ್ತಿದ್ದಾರೆ. ಹಲವರು ತಮ್ಮ ಕಾರುಗಳ ಹಿಂಭಾಗದಲ್ಲಿ, ಮೇಲ್ಬಾಗದಲ್ಲಿ ಸೈಕಲ್ ಕ್ಯಾರಿಯರ್ ಮೂಲಕ ಬೈಸಿಕಲ್ ಕೊಂಡೊಯ್ಯುತ್ತಿರುವುದನ್ನು ಗಮನಿಸಿರುತ್ತೀರಿ. ನಗರ, ಗ್ರಾಮೀಣ ಪ್ರದೇಶಗಳಲ್ಲಿ ವಾಹನಗಳಲ್ಲಿ ಸೈಕಲ್ ಕ್ಯಾರಿಯರ್ ಸಾಮಾನ್ಯವಾಗಿದೆ. ನಿಮಗಿಷ್ಟದ ರೀತಿಯಲ್ಲಿ ಕಾರಿನಲ್ಲಿ ಸೈಕಲ್ ಕೊಂಡೊಯ್ದರೆ 5,000 ರೂಪಾಯಿ ದಂಡ ಕಟ್ಟಬೇಕಾಗುತ್ತದೆ.
ಮೋಟಾರು ವಾಹನ ಕಾಯ್ದೆ: ಮೊಬೈಲ್ ಬಳಕೆಗೆ ಅವಕಾಶ ಆದರೆ ಷರತ್ತು ಅನ್ವಯ!
ಬೆಂಗಳೂರಿನಲ್ಲಿ ನಡೆದ ಘಟನೆ ಇದೀಗ ಈ ರೀತಿ ಕಾರಿನಲ್ಲಿ ಸೈಕಲ್ ಕೊಂಡೊಯ್ಯುತ್ತಿರುವವರಿಗೆ ಶಾಕ್ ನೀಡಿದೆ. ಎಲೆಕ್ಟ್ರಾನಿಕ್ ಸಿಟಿ ನಿವಾಸಿ ಪ್ರಶಾಂತ್ ಸುಕುಮಾರನ್‌ಗೆ ಬೆಂಗಳೂರು ಪೊಲೀಸ್ 5,000 ರೂಪಾಯಿ ದಂಡ ಹಾಕಿದ್ದಾರೆ.
ಪ್ರಶಾಂತ್ ಪುತ್ರ ಸೈಕಲಿಂಗ್‌ನಲ್ಲಿ ಪದಕ ಗಿಟ್ಟಿಸಿಕೊಂಡ ಸಾಧಕ. ಹೀಗಾಗಿ ಪ್ರಶಾಂತ್ ಕಾರಿನಲ್ಲಿ ಪುತ್ರನನ್ನು ಕರೆದುಕೊಂಡು, ಜೊತೆಗೆ ತಮ್ಮ ಕಾರಿನಲ್ಲಿ ಎರಡು ಸೈಕಲ್ ಇಟ್ಟು ತೆರಳಿದ್ದಾರೆ. ಸೈಕಲ್ ಅಭ್ಯಾಸ ಮುಗಿಸಿ ಹಿಂತಿರುಗುವಾಗ ಪೊಲೀಸರು ತಡೆದು ನಿಲ್ಲಿಸಿ 5,000 ರೂಪಾಯಿ ಫೈನ್ ಹಾಕಿದ್ದಾರೆ. ಇದನ್ನು ಪ್ರಶ್ನಿಸಿದಾಗ, ಆರ್‌ಟಿಓ ದಾಖಲೆ ಇಲ್ಲದೆ ಈ ರೀತಿ ಎರಡೆರಡು ಸೈಕಲ್ ಕೊಂಡೊಯ್ಯುವಂತಿಲ್ಲ ಎಂದಿದ್ದಾರೆ.
ಭಾರತದ ಶೇ.71 ರಷ್ಟು ರಸ್ತೆ ಅಪಘಾತಕ್ಕೆ ಒಂದೇ ಕಾರಣ; 2019ರ ವರದಿ ಬಹಿರಂಗ!
ಇದು ಸೈಕಲ್ ಪ್ರೀಯರಿಗೆ ಅಚ್ಚರಿ ನೀಡಿದೆ. ಇಷ್ಟು ದಿನ ಕಾರಿನಲ್ಲಿ ಸೈಕಲ್ ಕೊಂಡೊಯ್ಯುತ್ತಿರುವುದು ಸಾಮಾನ್ಯವಾಗಿದೆ. ಇಷ್ಟು ದಿನ ಸೈಕಲ್ ಕ್ಯಾರಿಗೆ ದಂಡ ಹಾಕಿಲ್ಲ. ಇದೇ ಮೊದಲ ಬಾರಿಗೆ ದಂಡ ಹಾಕಲಾಗಿದೆ. ಇನ್ನು ಒಂದೇ ಸೈಕಲ್ ಕೊಂಡೊಯ್ಯಲು ಅವಕಾಶವಿದೆ. ಒಂದಕ್ಕಿಂತ ಹೆಚ್ಚು ಸೈಕಲ್ ಕೊಂಡೊಯ್ಯಲು ಅವಕಾಶವಿಲ್ಲ ಎಂದಿದೆ.
ಇಷ್ಟೇ ಅಲ್ಲ ಸೈಕಲ್ ಕ್ಯಾರಿಯರ್‌ಗೆ ಆರ್‌ಟಿಒ ದಾಖಲೆ ಪತ್ರ ಅತ್ಯವಶ್ಯಕವಾಗಿದೆ. ಇನ್ನು ಸೈಕಲ್ ಹಿಂಭಾಗದಲ್ಲಿ ಅಥವಾ ಮೇಲ್ಬಾಗದಲ್ಲಿ ಮಾತ್ರ ಸೈಕಲ್ ಕ್ಯಾರಿ ಮಾಡಲು ಅವಕಾಶವಿದೆ. ಕಾರಿನ ಬದಿಗಳಲ್ಲಿ ಸೈಕಲ್ ಕೊಂಡೊಯ್ಯುವಂತಿಲ್ಲ. ಇದು ನಿಯಮ ಉಲ್ಲಂಘನೆ ಎಂದು ಎಡಿಜಿಪಿ ಭಾಸ್ಕರ್ ರಾವ್ ಹೇಳಿದ್ದಾರೆ.
ಸೈಕಲ್ ಕ್ಯಾರಿಯರ್ ಇತರ ಸವಾರರಿಗೆ ಯಾವುದೇ ಸಮಸ್ಯೆ ತರುವಂತಿರಬಾರದು ಎಂದು ಪೊಲೀಸರು ಹೇಳಿದ್ದಾರೆ.