ಭಾರತದಲ್ಲಿ ವಾಹನ ಮಾಡಿಫಿಕೇಶನ್ ಮಾಡುವುದು ನಿಯಮ ಉಲ್ಲಂಘನೆಯಾಗಿದೆ. ಮೋಟಾರು ವಾಹನ ತಿದ್ದುಪಡಿಯಲ್ಲಿ ವಾಹನ ಮಾಡಿಫಿಕೇಶನ್ ನಿಯಮ ಉಲ್ಲಂಘಿಸಿದರೆ ದುಬಾರಿ ದಂಡಕ್ಕೆ ಅವಕಾಶ ನೀಡಲಾಗಿದೆ. ಇದೀಗ ಇಸುಜು ವಿ ಮ್ಯಾಕ್ಸ್ ಕಾರನ್ನು ಮಾಡಿಫಿಕೇಶನ್ ಮಾಡಿದ ಮಾಲೀಕನಿಗೆ 48,000 ರೂಪಾಯಿ ದಂಡ ಹಾಕಲಾಗಿದೆ ಆದರೆ ಇದರ ವಿರುದ್ಧ ಮಾಲೀಕ ಕೋರ್ಟ್ ಮೆಟ್ಟಿಲೇರಿದ್ದಾನೆ.
ಕೇರಳ(ಆ.14): ಭಾರತದಲ್ಲಿ ಅತೀ ಹೆಚ್ಚು ಮಾಡಿಫಿಕೇಶನ್ ವಾಹನಗಳಿರುವುದು ಕೇರಳದಲ್ಲಿ. ಇಷ್ಟೇ ಅಲ್ಲ ಅತೀ ಹೆಚ್ಚು ಮಾಡಿಫೈ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿರುವುದು ಕೂಡ ಕೇರಳದಲ್ಲಿ. ಕಳೆದ ವರ್ಷ ಕೇಂದ್ರದ ಮೋಟಾರು ವಾಹನ ತಿದ್ದುಪಡಿ ಬೆನ್ನಲ್ಲೇ ಕೇರಳದಲ್ಲಿ ಹಲವು ವಾಹನಗಳಿಗೆ ದಂಡ ಹಾಕಲಾಗಿತ್ತು. ಇದರಲ್ಲಿ ಪ್ರವಾಹದ ವೇಳೆ ಜನರನ್ನು ರಕ್ಷಿಸಿಲು ಪೊಲೀಸರು ಬಳಸಿದ್ದ ಖಾಸಗಿ ವಾಹನಕ್ಕೂ ದಂಡ ಹಾಕಲಾಗಿತ್ತು. ಇದು ಚರ್ಚೆಗೂ ಕಾರಣವಾಗಿತ್ತು. ಇದೀಗ ಕೇರಳದಲ್ಲಿ ಮಾಡಿಫೈ ಮಾಡಿದ Isuzu V Max ಕಾರು ಮಾಲೀಕನಿಗೆ ಬರೋಬ್ಬರಿ 48,000 ರೂಪಾಯಿ ದಂಡ ಹಾಕಲಾಗಿದೆ.
ಪ್ರವಾಹ ಸಂತ್ರಸ್ತರನ್ನು ಕಾಪಾಡಿದ ಜೀಪ್‌ಗೆ ಹಾಕಿದ್ರು ದಂಡ!
ಅಭಿನ್ ಅಬ್ರಾಹಾಂ ಅನ್ನೋ ವ್ಯಕ್ತಿ ತನ್ನು Isuzu V Max ಕಾರನ್ನು ಮಾಡಿಫೈ ಮಾಡಿದ್ದ. ಈ ಕುರಿತು ಸ್ಥಳೀಯರೊಬ್ಬರ ಮಾಹಿತಿ ಆಧರಿಸಿ ಕೇರಳ ಮೋಟಾರು ವಾಹನ ವಿಭಾಗದ ಪೊಲೀಸರು Isuzu V Max ಮಾಲೀಕನ ಕಾರು ಗ್ಯಾರೇಜಿಗೆ ಆಗಮಿಸಿದ್ದಾರೆ. ಬಳಿಕ ಗ್ಯಾರೇಜಿನಲ್ಲಿದ್ದ ಮಾಡಿಫೈಡ್ Isuzu V Max ಕಾರಿಗೆ, ಮೋಟಾರು ವಾಹನ ನಿಯದನ್ವಯ 48,000 ರೂಪಾಯಿ ದಂಡ ಹಾಕಲಾಗಿದೆ.
ವಾಹನ ಮಾಡಿಫಿಕೇಶನ್ ನಿಯಮ: ಪ್ರತಿಭಟನೆ ಮಾಡಿದ 15 ಯುವಕರು ಅರೆಸ್ಟ್!...
ದುಬಾರಿ ದಂಡವನ್ನು ಮಾಲೀಕ ಪ್ರಶ್ನಿಸಿದ್ದಾನೆ. ಇಷ್ಟೇ ಅಲ್ಲ ಪೊಲೀಸರು ನಿಯಮ ಮೀರಿ ದಂಡ ಹಾಕಿದ್ದಾನೆ ಎಂದು ಆರೋಪಿಸಿ ಕೋರ್ಟ್ ಮೆಟ್ಟಿಲೇರಿದ್ದಾನೆ. ಮಾಡಿಫಿಕೇಶನ್ ವಾಹನ ದಂಡಕ್ಕೆ ವಾಹನ ಸಾರ್ವಜನಿಕ ರಸ್ತೆಯಲ್ಲಿ ಓಡಾಡುತ್ತಿರುವಾಗ ಪೊಲೀಸರು ದಂಡ ಹಾಕಬಹುದು. ಆದರೆ ಗ್ಯಾರೇಜಿನಲ್ಲಿ ನಿಲ್ಲಿಸಿದ ಅಥವಾ ಹೊರಗಡೆ ತೆಗೆಯದ ವಾಹನಗಳಿಗೆ ದಂಡ ಹಾಕುವಂತಿಲ್ಲ ಎಂದು ಮಾಲೀಕ ಕೋರ್ಟ್ ಮೆಟ್ಟಿಲೇರಿದ್ದಾನೆ.
ಇತ್ತ ಪೊಲೀಸರು Isuzu V Max ಕಾರು ಹಲವು ಬಾರಿ ಪಟ್ಟಣಗಳಲ್ಲಿ ತಿರುಗಾಡಿದೆ. ಈ ಕುರಿತು ಮಾಲೀಕನ ಸಾಮಾಜಿಕ ಜಾಲತಾಣದಲ್ಲಿನ ಪೋಸ್ಟ್‌ಗಳು ಹೇಳುತ್ತಿದೆ. ಸಾರ್ವಜನಿಕ ರಸ್ತೆಯಲ್ಲಿ Isuzu V Max ಕಾರು ಓಡಾಡಿದೆ. ಆದರೆ ಪೊಲೀಸರ ಕಣ್ತಪ್ಪಿಸಿ ಓಡಾಡಿದ್ದ ಈ ಕಾರಿಗೆ ಇದೀಗ ದಂಡ ಹಾಕಲಾಗಿದೆ ಎಂದು ಪೊಲೀಸರು ವಾದಿಸುತ್ತಿದ್ದಾರೆ. ಪ್ರಕರಣ ಕೋರ್ಟ್‌ನಲ್ಲಿದ್ದು ಶೀಘ್ರದಲ್ಲೇ ಸರಿ ತಪ್ಪುಗಳು ಸ್ಪಷ್ಟವಾಗಲಿದೆ.