ದಶಕಗಳ ಕನಸು ನನಸು, ಯಶಸ್ವಿಯಾಗಿ ಹಾರಾಟ ನಡೆಸಿದ ಹಾರುವ ಕಾರು!

By Suvarna NewsFirst Published Aug 29, 2020, 2:30 PM IST
Highlights

ತಂತ್ರಜ್ಞಾನ, ಆಧುನಿಕತೆ ಬದುಕಿನಲ್ಲಿ ಕಳೆದೊಂದು ದಶಕಗಳಿಂದ ಸಾರಿಗೆ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳಾಗುತ್ತಿದೆ. ಇದರಲ್ಲಿ ಪ್ರಮುಖವಾಗಿ ಹಾರುವ ಕಾರು ಕುರಿತು ಸಂಶೋಧನೆಗಳಾಗುತ್ತಿದೆ. ಕಳೆದೊಂದು ದಶಕದಿಂದ ನಡೆಯುತ್ತಿದ್ದ ಸತತ ಪ್ರಯತ್ನಕ್ಕೆ ಫಲ ಸಿಕ್ಕಿದೆ. ಹಾರುವ ಕಾರು ಪ್ರಾಯೋಗಿಕ ಹಂತದ ಹಾರಾಟ ಯಶಸ್ವಿಯಾಗಿದೆ. 

ಜಪಾನ್(ಆ.29): ದಶಕಗಳ ಸಂಶೋಧನೆ ಪ್ರಯತ್ನ ನನಸಾಗಿದೆ. ಶೀಘ್ರದಲ್ಲೇ ಹಾರುವ ಕಾರುಗಳು ಹಾರಾಟ ಆರಂಭಿಸಲಿದೆ. ಜಪಾನ್‌ನ ಸ್ಕೈ ಡ್ರೈವ್ ಇನ್ಸ್ ಇದೀಗ ನೂತನ ಹಾರುವ ಕಾರನ್ನ ಅನಾವರಣ ಮಾಡಿದೆ. ಇಷ್ಟೇ ಅಲ್ಲ ಪ್ರಾಯೋಗಿಕ ಹಂತದ ಹಾರಾಟವನ್ನು ನಡೆಸಿ ಯಶಸ್ವಿಯಾಗಿದೆ. ಒರ್ವ ವ್ಯಕ್ತಿ ಆರಾಮಾಗಿ ಹಾರಾಟ ನಡೆಸಿದ ಈ ನೂತನ ಹಾರುವ ಕಾರು ಇದೀಗ ಬಾರಿ ಸಂಚಲನ ಸೃಷ್ಟಿಸಿದೆ.

ಇನ್ನೈದು ವರ್ಷದಲ್ಲಿ ಟ್ರಾಫಿಕ್ ಸಮಸ್ಯೆಗೆ ಮುಕ್ತಿ!

ನೂತನ ಹಾರುವ ಕಾರು 2023ರಲ್ಲಿ ಮಾರುಕಟ್ಟೆ  ಪ್ರವೇಶಿಸಲಿದ ಎಂದು ಜಪಾನ್ ಸ್ಕೈ ಡ್ರೈವ್ ಹೇಳಿದೆ. ಆದರೆ ಸುರಕ್ಷತೆ ಕುರಿತು ಇನ್ನಷ್ಟು ಅಭಿವೃದ್ಧಿ ಹಾಗೂ ಸಂಶೋಧನೆಗಳು ಆಗಬೇಕಿದೆ ಎಂದು ಕಂಪನಿ ಹೇಳಿದೆ. 

 

Japan's Skydive Inc developed a single seat flying drone and it has undergone flight test 👍 pic.twitter.com/YYsyyzyt9Z

— WINAY (@VinayBhasckar)

ವಿಶ್ವದಲ್ಲಿ 100ಕ್ಕೂ ಹೆಚ್ಚು ಫ್ಲೈಯಿಂಗ್ ಕಾರು ಪ್ರಾಜೆಕ್ಟ್ ಚಾಲ್ತಿಯಲ್ಲಿದೆ. ಸದ್ಯ ಆವಿಷ್ಕರಿಸುವ ಫ್ಲೈಯಿಂಗ್ ಕಾರು  ಹೆಚ್ಚಿನ ಸಮಯ ಹಾರಾಟ ನಡೆಸಬಲ್ಲ ಸಾಮರ್ಥ್ಯವನ್ನು ಅಭಿವೃದ್ಧಿ ಪಡಿಸಬೇಕಿದೆ. VTOL ಏರ್‌ಕ್ರಾಫ್ಟ್ ಅಭಿವೃದ್ಧಿ ನಿರಂತರವಾಗಿ ನಡೆಯುತ್ತಿದೆ. 

ಹೊಸ ವರ್ಷಕ್ಕೆ ಬಂಪರ್; ಹ್ಯುಂಡೈ ಬಿಡುಗಡೆ ಮಾಡಲಿದೆ ಹಾರುವ ಕಾರು!.

ಹೆಚ್ಚು ಹೊತ್ತು ಹಾರಾಟ ಮಾಡಬಲ್ಲ ಸಾಮರ್ಥ್ಯದ ಎಂಜಿನ್ ಅಭಿವೃದ್ಧಿಯಾಗಬೇಕಿದೆ. ಅರ್ಧ ಗಂಟೆ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿದ್ದರೆ, ಯಾರೂ ಕೂಡ ಖರೀದಿಸುವುದಿಲ್ಲ. ಇದರ ಜೊತೆಗೆ ಹಾರಾಟದ ವೇಳೆ ಸುರಕ್ಷತೆ ಕುರಿತು ಮಾರ್ಗಸೂಚಿಯ ಅಗತ್ಯವಿದೆ. ಅದೆಷ್ಟೇ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದರೂ ಖಾಸಗಿ ವ್ಯಕ್ತಿಗಳು ಹಾರುವ ಕಾರಿನಲ್ಲಿ ಹಾರಾಟ ಆರಂಭಿಸಿದರೆ ಸುರಕ್ಷತೆ ಗಂಭೀರವ ಸವಾಲಾಗಿ ಪರಿಣಮಿಸಲಿದೆ ಅನ್ನೋದು ಜಪಾನ್ ಫ್ಲೈ ಡ್ರೈವ್ ಇನ್ಸ್ ಕಂಪನಿಯ ಅಭಿಮತ.

click me!