13 ವರ್ಷಗಳ ಹಿಂದಿನ ಕುಕ್ಕೆ ಚಿನ್ನದ ರಥ ಯೋಜನೆಗೆ ಕೂಡಿ ಬರುತ್ತಿಲ್ಲ ಕಾಲ!

By Kannadaprabha NewsFirst Published Oct 22, 2019, 10:25 AM IST
Highlights

13 ವರ್ಷಗಳ ಹಿಂದೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವಧಿಯಲ್ಲಿ ಚಾಲನೆ ಪಡೆದಿದ್ದ ಕುಕ್ಕೆ ಸುಬ್ರಹ್ಮಣ್ಯದ ಚಿನ್ನದ ರಥ ನಿರ್ಮಾಣ ಕಾರ್ಯಕ್ಕೆ ಇನ್ನೂ ಕಾಲ ಕೂಡಿ ಬಂದಿಲ್ಲ. ಸರ್ಕಾರಗಳು ಬದಲಾಗುತ್ತಿದ್ದು ಚಿನ್ನಡ ರಥ ನಿರ್ಮಿಸುವ ಕೆಲಸ ಮಾತ್ರ ಕುಂಟುತ್ತಲೇ ಸಾಗಿದೆ.

ಮಂಗಳೂರು(ಅ.22): 13 ವರ್ಷಗಳ ಹಿಂದೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವಧಿಯಲ್ಲಿ ಚಾಲನೆ ಪಡೆದಿದ್ದ ಕುಕ್ಕೆ ಸುಬ್ರಹ್ಮಣ್ಯದ ಚಿನ್ನದ ರಥ ನಿರ್ಮಾಣ ಕಾರ್ಯಕ್ಕೆ ಇನ್ನೂ ಕಾಲ ಕೂಡಿ ಬಂದಿಲ್ಲ.

ಈ ಬಾರಿ ಸಮ್ಮಿಶ್ರ ಸರ್ಕಾರದಲ್ಲಿ ಮತ್ತೆ ಮುಖ್ಯಮಂತ್ರಿಯಾದ ಮೇಲೆ ಕುಮಾರಸ್ವಾಮಿ ಚಿನ್ನದ ರಥ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋಧನೆ ನೀಡಿದ್ದರೂ ಸರ್ಕಾರ ಪತನದ ಬಳಿಕ ಆ ಕಾರ್ಯ ಮತ್ತಷ್ಟು ವಿಳಂಬವಾಗಿದೆ. 

ಬಂಟ್ವಾಳದ ಹರೀಶ್‌ ಪೂಜಾರಿ ಕೊಲೆ ಸಾಕ್ಷಿಗೆ ಜೀವ ಬೆದರಿಕೆ..!

ರಾಜ್ಯದ ಶ್ರೀಮಂತ ದೇಗುಲ ಕುಕ್ಕೆ ಸುಬ್ರಹ್ಮಣ್ಯಕ್ಕೆ ಚಿನ್ನದ ರಥವನ್ನ ನಿರ್ಮಾಣ ಮಾಡಬೇಕು ಎಂಬ ಯೋಜನೆಯೊಂದನ್ನು 2006ರಲ್ಲಿ ಆಗಿನ ಆಡಳಿತ ಮಂಡಳಿ ಹಾಕಿಕೊಂಡಿತ್ತು. ಅಲ್ಲದೇ ಆಗ ಮುಖ್ಯಮಂತ್ರಿಯಾಗಿದ್ದ ಧರಂ ಸಿಂಗ್ ಅವರ ಬಳಿ ಬಗ್ಗೆ ಬೇಡಿಕೆ ಇಟ್ಟಿತ್ತು.

ಇದಾಗಿ ಕೆಲವೇ ತಿಂಗಳಲ್ಲಿ ಧರಂ ಸಿಂಗ್ ಅಧಿಕಾರ ಮುಗಿದು ಕುಮಾರಸ್ವಾಮಿ ಸರ್ಕಾರ ಅಧಿಕಾರ ವಹಿಸಿಕೊಂಡಿತ್ತು. ಹೀಗಾಗಿ ಆಗಿನ ಆಡಳಿತ ಮಂಡಳಿ ನೀಡಿದ್ದ ಪ್ರಸ್ತಾವನೆಯಂತೆ 2006ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಸರ್ಕಾರ 240 ಕೆ.ಜಿ ಚಿನ್ನವನ್ನ ಬಳಸಿ ಸುಮಾರು 15 ಕೋಟಿ ವೆಚ್ಚದಲ್ಲಿ ಚಿನ್ನದ ರಥ ನಿರ್ಮಾಣಕ್ಕೆ ಅನುಮತಿ ಕೊಟ್ಟಿತ್ತು.

ಸಿದ್ದರಾಮಯ್ಯಗೆ ತಲೆ ಸರಿಯಿಲ್ಲ: ಅಶೋಕ್‌

ಆದರೆ ಇದಾದ ಬೆನ್ನಲ್ಲೇ ಕುಮಾರಸ್ವಾಮಿ ಸರ್ಕಾರ ಪತನವಾಗಿತ್ತು. ಹೀಗಾಗಿ ಇದಾದ ಮೇಲೆ ಮುಖ್ಯಮಂತ್ರಿಯಾಗಿ ಬಂದ ಯಡಿಯೂರಪ್ಪ, ಜಗದೀಶ್ ಶೆಟ್ಟಿರ್, ಸದಾನಂದ ಗೌಡ ಮತ್ತು ಸಿದ್ದರಾಮಯ್ಯ ಅವರು ಚಿನ್ನದ ರಥ ನಿರ್ಮಾಣಕ್ಕೆ ಅಷ್ಟಾಗಿ ಉತ್ಸುಕತೆ ತೋರದೇ ಇಡೀ ಯೋಜನೆ ನೆನೆಗುದಿಗೆ ಬಿದ್ದಿತ್ತು. ಆ ಬಳಿಕ ಈ ಬಾರಿ ಅಂದರೆ 2019ರಲ್ಲಿ ಮತ್ತೆ ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾದರು.

ಈ ಮಧ್ಯೆ ಲೋಕಸಭಾ ಚುನಾವಣೆ ಅವಧಿಯಲ್ಲಿ ದ್ವಾರಕನಾಥ್ ಗುರೂಜಿ ಈ ಬಗ್ಗೆ ಎಚ್​ಡಿಕೆಗೆ ಚಿನ್ನದ ರಥದ ಬಗ್ಗೆ ನೆನಪಿಸಿದ ಕಾರಣದಿಂದ ಕುಮಾರಸ್ವಾಮಿ ಮತ್ತೆ ಆ ಯೋಜನೆಗೆ ಮರು ಜೀವ ನೀಡಿದ್ದರು. ಬರೋಬ್ಬರಿ 240 ಕೆ.ಜಿ ಚಿನ್ನವನ್ನ ಬಳಸಿ ಈಗಿನ ಚಿನ್ನದ ವೆಚ್ಚಕ್ಕೆ ಅನುಗುಣವಾಗಿ 15 ಕೋಟಿಯಿಂದ 80 ಕೋಟಿಗೆ ಅಂದಾಜು ಪಟ್ಟಿ ಹೆಚ್ಚಳವಾಯ್ತು. ಹೀಗಾಗಿ ಕುಕ್ಕೆ ಆಡಳಿತ ಮಂಡಳಿ ಪ್ರಸ್ತಾವನೆಯಂತೆ 80 ಕೋಟಿ ವೆಚ್ಚದಲ್ಲಿ ನೂತನ ಚಿನ್ನದ ರಥ ನಿರ್ಮಾಣಕ್ಕೆ ಕುಮಾರಸ್ವಾಮಿ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿತ್ತು. 

ಬಿಜೆಪಿ ಸರ್ಕಾರದಲ್ಲಿ ಮತ್ತೆ ರಥ ನಿರ್ಮಾಣ ವಿಳಂಬ!

ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ರಥ ನಿರ್ಮಾಣಕ್ಕೆ ಒಪ್ಪಿಗೆ ನೀಡಿ ಆದೇಶ ಮಾಡಿದ್ದರು. ಆದರೆ ಈ ಆಡಳಿತಾತ್ಮಕ ಅನುಮೋಧನೆ ಬೆನ್ನಲ್ಲೇ ಮತ್ತೆ ಕುಮಾರಸ್ವಾಮಿ ಸರ್ಕಾರ ಪತನಗೊಂಡಿದೆ. ಸದ್ಯ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಆಡಳಿತಕ್ಕೆ ಬಂದಿದೆ. ಎಲ್ಲಾ ಅಂದುಕೊಂಡದಂತೆ ಆಗಿದ್ರೆ ಮೊನ್ನೆ ಕುಕ್ಕೆ ಬ್ರಹ್ಮರಥದ ಆಗಮನದ ವೇಳೆಯೇ ಕೋಟೇಶ್ವರದಿಂದ ಚಿನ್ನದ ಲೇಪನ ಮಾಡಬೇಕಿದ್ದ ಮರದ ರಥವೂ ಕುಕ್ಕೆಗೆ ಆಗಮಿಸಬೇಕಿತ್ತು.

ಮಂಗಳೂರು: ಆಟೋ ನಿಲ್ದಾಣದ ಬಳಿ ಪೈರು ಕಟಾವಿಗೆ ಸಿದ್ಧ!

ಆದರೆ ನೂತನ ಸರ್ಕಾರ ಬಂದ ಮೇಲೆ ಚಿನ್ನದ ರಥದ ಯೋಜನೆ ಮತ್ತೆ ವಿಳಂಬವಾಗಿದೆ. 2006ರಲ್ಲಿ ಭಕ್ತರಿಂದಲೇ ದೇಣಿಗೆ ಪಡೆದು ರಥ ನಿರ್ಮಾಣ ಮಾಡಲು ಯೋಜನೆ ಹಾಕಿದ್ದರೂ ಈ ಬಾರಿ ಕುಮಾರಸ್ವಾಮಿಯವರು ದೇವಸ್ಥಾನದ ಬ್ಯಾಂಕ್ ಖಾತೆಯ ದುಡ್ಡಿನಿಂದಲೇ ರಥ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿದ್ದರು. ಅದ್ರಂತೆ ದೇವಸ್ಥಾನದ ಖಾತೆಯಲ್ಲಿ 300 ಕೋಟಿಗೂ ಮಿಕ್ಕಿದ ಠೇವಣಿಯಿದ್ದು, ಅದ್ರಿಂದಲೇ 80 ಕೋಟಿ ಪಡೆದು ರಥ ನಿರ್ಮಾಣಕ್ಕೆ ಆಧೇಶ ನೀಡಲಾಗಿತ್ತು.

ಅದರಂತೆ ಸರ್ಕಾರಿ ಸ್ವಾಮ್ಯದ ಚಿನ್ನಾಭರಣ ವಹಿವಾಟು ಕಂಪೆನಿ ಎಂಎಂಟಿಸಿಗೆ ಮರದ ರಥಕ್ಕೆ ಚಿನ್ನದ ಲೇಪನ ಮಾಡೋ ಜವಾಬ್ದಾರಿ ವಹಿಸಿಕೊಡಲು ಕುಮಾರಸ್ವಾಮಿ ಸರ್ಕಾರ ನಿರ್ಧರಿಸಿತ್ತು ಎನ್ನಲಾಗಿದೆ. ಆದ್ರೆ ನೂತನವಾಗಿ ಬಂದ ಬಿಜೆಪಿ ಸರ್ಕಾರ ಈ ಯೋಜನೆಯನ್ನ ಮತ್ತೆ ಪರಿಶೀಲನೆ ನಡೆಸಲು ಮುಂದಾಗಿದೆ. ನೂತನ ಮುಜುರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಈ ಬಗ್ಗೆ ಸಭೆ ಕೂಡ ನಡೆದಿದ್ದು, ಹೊಸತಾಗಿ ರಾಜ್ಯ ಮಟ್ಟದ ಚಿನ್ನದ ರಥ ನಿರ್ಮಾಣ ಸಮಿತಿ ರಚಿಸಲು ಸರ್ಕಾರ ಮುಂದಾಗಿದೆ ಎನ್ನಲಾಗಿದೆ.

ರಥ ನಿರ್ಮಾಣ ಆದೇಶಕ್ಕೆ ಕಾಯುತ್ತಿದ್ದಾರೆ ಶಿಲ್ಪಿ!

ಕುಮಾರಸ್ವಾಮಿ ಸರ್ಕಾರ ಸರ್ಕಾರಿ ಸ್ವಾಮ್ಯದ ಎಂಎಂಟಿಸಿ ಮೂಲಕ ಮರದ ರಥಕ್ಕೆ ಚಿನ್ನದ ಲೇಪನ ಮಾಡಲು ಮುಂದಾಗಿತ್ತು. ಅಲ್ಲದೇ ಈಗಿನ ಕುಕ್ಕೆ ವ್ಯವಸ್ಥಾಪನ ಮಂಡಳಿ ಮತ್ತು ಚಿನ್ನದ ರಥ ನಿರ್ಮಾಣ ಸಮಿತಿ ಕೂಡ ತನ್ನ ಪ್ರಸ್ತಾವನೆಯಲ್ಲಿ ಇದನ್ನೇ ಉಲ್ಲೇಖ ಮಾಡಿತ್ತು. ಆದರೆ ಬಿಜೆಪಿ ಸರ್ಕಾರ ಇದಕ್ಕೆ ಆಕ್ಷೇಪ ಎತ್ತಿದ್ದು, ಎಂಎಂಟಿಸಿಗೆ ಕೊಡುವ ಬದಲು ಟೆಂಡರ್ ಮೂಲಕ ವಹಿಸಿಕೊಡಲು ಮುಂದಾಗಿದೆ ಎನ್ನಲಾಗಿದೆ. ಹೀಗಾಗಿ ಚಿನ್ನದ ರಥ ನಿರ್ಮಾಣ ಕಾರ್ಯ ಮತ್ತಷ್ಟು ವಿಳಂಬವಾಗಿದೆ.

'ಓಟ್ ಬೇಕಾ, ರಸ್ತೆ ಸರಿ ಮಾಡಿ ಬನ್ನಿ', ಕೆಲ್ಸ ಮಾಡ್ಸೋಕೆ ಬ್ಯಾನರ್ ಹಾಕಿದ್ರು ಜನ..!

ಕುಂದಾಪುರದ ಕೋಟೇಶ್ವರದ ರಾಜಗೋಪಾಲ ಆಚಾರ್ಯರು ಕುಕ್ಕೆಗೆ ಬ್ರಹ್ಮ ರಥ ನಿರ್ಮಿಸಿದ್ದು, 2006ರಲ್ಲೇ ಇವರಿಗೆ ಚಿನ್ನದ ರಥ ನಿರ್ಮಾಣದ ಆದೇಶವೂ ಬಂದಿತ್ತು. ಆದರೆ ಬಳಿಕ ಸರ್ಕಾರ ಬದಲಾಗಿ ಅದು ಸಾಧ್ಯವಾಗಿಲ್ಲ. ಈಗಲೂ ಚಿನ್ನದ ರಥದ ಸ್ಕೆಚ್ ಶಿಲ್ಪಿ ರಾಜಗೋಪಾಲ ಆಚಾರ್ಯರ ಕೈಯ್ಯಲ್ಲೇ ಇದ್ದು, ಮರಮುಟ್ಟುಗಳು ಕೂಡ ಬಂದು ಬಿದ್ದಿದೆ. ಆದ್ರೆ ಆದೇಶ ಮಾತ್ರ ಬಂದಿಲ್ಲವಾದ ಕಾರಣ ಕೆಲಸ ಅರ್ಧಕ್ಕೇ ನಿಂತಿದೆ. ಈ ಮಧ್ಯೆ ಈಗಿದ್ದ ವ್ಯವಸ್ಥಾಪನಾ ಸಮಿತಿ ಕೂಡ ರದ್ದಾಗಿದ್ದು, ನೂತನ ಸಮಿತಿ ರಚನೆ ಆಗುವವರೆಗೂ ಚಿನ್ನದ ರಥ ನಿರ್ಮಾಣ ಯೋಜನೆ ವಿಳಂಬವಾಗುವುದು ನಿಶ್ವಿತ.

ಕುಕ್ಕೆಗೆ ಚಿನ್ನದ ರಥ ನಿರ್ಮಿಸಲು ಆಡಳಿತ ಮಂಡಳಿ ಧಾರ್ಮಿಕ ದತ್ತಿ ಇಲಾಖೆಗೆ ಪ್ರಸ್ತಾವನೆ ಕಳುಹಿಸಿದೆ. ಮೊನ್ನೆ ‌ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದೆ. ಪಾರದರ್ಶಕವಾಗಿ ಮತ್ತು ಯೋಜನಾ ಬದ್ದವಾಗಿ ನಿಯಮ ರೂಪಿಸಿ ಆಡಳಿತ ಮಂಡಳಿಗೆ ಅನುಮೋಧನೆ ಕೊಡಲಾಗುವುದು. ಮುಂದಿನ ದಿನಗಳಲ್ಲಿ ಕುಕ್ಕೆ ಚಿನ್ನದ ರಥ ನಿರ್ಮಾಣ ಆಗುತ್ತದೆ ಎಂದು ಮುಜರಾಯಿ ಖಾತೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಗಾಂಜಾ ಸೇವಿಸಿದ್ದ ಮಣಿಪಾಲದ 9 ವಿದ್ಯಾರ್ಥಿಗಳ ಬಂಧನ

ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಚಿನ್ನದ ರಥ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋಧನೆ ಕೊಟ್ಟಿದ್ದಾರೆ. ಅದರಂತೆ ಬಹುತೇಕ ಕೆಲಸ ಕೈಗೆತ್ತಿಕೊಳ್ಳಲು ಸಿದ್ದತೆ ನಡೆದಿತ್ತು. ಆದರೆ ಇದೀಗ ಹೊಸ ಸರ್ಕಾರ ಬಂದಿದ್ದು, ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ. ಆದಷ್ಟು ಶೀಘ್ರ ಕುಕ್ಕೆಗೆ ಚಿನ್ನದ ರಥ ಬರಲಿ ಎನ್ನುವುದು ಎಲ್ಲರ ಆಶಯ ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಹೇಳಿದ್ದಾರೆ.

click me!