ಮಂಗಳೂರು: ಸುಬ್ರಮಣ್ಯದಲ್ಲಿ ನಿಖಿಲ್ ರಹಸ್ಯ ತ್ರಿಕಾಲ ಪೂಜೆ..!

Published : Oct 12, 2019, 10:30 AM IST
ಮಂಗಳೂರು: ಸುಬ್ರಮಣ್ಯದಲ್ಲಿ ನಿಖಿಲ್ ರಹಸ್ಯ ತ್ರಿಕಾಲ ಪೂಜೆ..!

ಸಾರಾಂಶ

ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಅವರ ಪುತ್ರ ಸಿಖಿಲ್ ಕುಮಾರಸ್ವಾಮಿ ಅವರು ರಹಸ್ಯವಾಗಿ ಕುಕ್ಕೆ ಶ್ರೀ ಸುಬ್ರಮಣ್ಯ ದೇವಸ್ಥಾನಕ್ಕೆ ಭೆಟಿ ನೀಡಿದ್ದಾರೆ. ಗುರುವಾರ ರಾತ್ರಿ ಸ್ನೇಹಿತರ ಜೊತೆಗೆ ಕುಕ್ಕೆ ಕ್ಷೇತ್ರಕ್ಕೆ ಆಗಮಿಸಿದ ನಿಖಿಲ್‌ ಕುಮಾರಸ್ವಾಮಿ ಅವರು ಮರುದಿನ ಸ್ಥಳೀಯ ಅರ್ಚಕರೊಬ್ಬರ ಮನೆಯಲ್ಲಿ ತ್ರಿಕಾಲ ಪೂಜೆ ನೆರವೇರಿಸಿದ್ದಾರೆ.

ಮಂಗಳೂರು(ಅ.12): ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ಕುಮಾರಸ್ವಾಮಿ ಅವರು ಶುಕ್ರವಾರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿ ಅರ್ಚಕರೊಬ್ಬರ ಮನೆಯಲ್ಲಿ ಖಾಸಗಿಯಾಗಿ ರಹಸ್ಯ ಪೂಜೆ ನೆರವೇರಿಸಿದ್ದಾರೆ.

ಗುರುವಾರ ರಾತ್ರಿ ಸ್ನೇಹಿತರ ಜೊತೆಗೆ ಕುಕ್ಕೆ ಕ್ಷೇತ್ರಕ್ಕೆ ಆಗಮಿಸಿದ ನಿಖಿಲ್‌ ಕುಮಾರಸ್ವಾಮಿ ಅವರು ಮರುದಿನ ಸ್ಥಳೀಯ ಅರ್ಚಕರೊಬ್ಬರ ಮನೆಯಲ್ಲಿ ತ್ರಿಕಾಲ ಪೂಜೆ ನೆರವೇರಿಸಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಕಾಂಗ್ರೆಸ್ ಕಚೇರಿಗೆ ಸುಮಲತಾ, 'ಕರೆದರೆ JDS ಕಚೇರಿಗೂ ಹೋಗ್ತೀನಿ'..!

ಮಂಡ್ಯದಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‌ ಎದುರು ಸೋಲುಂಡ ಬಳಿಕ ಕುಕ್ಕೆ ಕ್ಷೇತ್ರಕ್ಕೆ ಆಗಮಿಸಿ ಖಾಸಗಿಯಾಗಿ ರಹಸ್ಯ ಪೂಜೆ ನೆರವೇರಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಬಲ್ಲ ಮೂಲಗಳ ಪ್ರಕಾರ, ಆಪ್ತ ಜ್ಯೋತಿಷಿಯೊಬ್ಬರ ಸಲಹೆ ಮೇರೆಗೆ ಉತ್ತಮ ರಾಜಕೀಯ ಭವಿಷ್ಯಕ್ಕಾಗಿ ತ್ರಿಕಾಲ ಪೂಜೆ ನೆರವೇರಿಸಿದ್ದಾರೆ ಎಂದು ಹೇಳಲಾಗಿದೆ.

ಮಂಗಳೂರು: ನೈತಿಕ ಪೊಲೀಸ್‌ಗಿರಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಿದ ಕೋರ್ಟ್

ತ್ರಿಕಾಲ ಪೂಜೆಯ ಮಧ್ಯೆ ನಿಖಿಲ್‌ ಕುಮಾರಸ್ವಾಮಿ ಅವರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡಿದ್ದಾರೆ. ಇವರ ಜೊತೆಗೆ ಜೆಡಿಎಸ್‌ ಮುಖಂಡ ಎಂ.ಬಿ.ಸದಾಶಿವ ಇದ್ದರು.

ಬಳಿಕ ಸುಬ್ರಹ್ಮಣ್ಯ ಮಠಾಧೀಶ ಶ್ರೀವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರಲ್ಲಿಗೆ ತೆರಳಿ ಆಶೀರ್ವಾದ ಪಡೆದುಕೊಂಡು ರಾತ್ರಿ ಪೂಜೆಗೆ ತೆರಳಿದ್ದರು. ಕುಕ್ಕೆಯಲ್ಲಿ ಶುಕ್ರವಾರ ರಾತ್ರಿ ತಂಗಿರುವ ನಿಖಿಲ್‌ ಕುಮಾರಸ್ವಾಮಿ ಅವರು ಶನಿವಾರ ಬೆಂಗಳೂರಿಗೆ ಮರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಡಿಕೇರಿಯಲ್ಲಿ ಖೋಟಾ ನೋಟು ಜಾಲ, ಮೂವರ ಬಂಧನ

PREV
click me!

Recommended Stories

ರಿಷಬ್‌ ಶೆಟ್ಟಿ, ವಿಜಯ್ ಕಿರಗಂದೂರು ವ್ಯಾಪಾರಿಗಳು, ದೈವಾರಾಧನೆಯನ್ನ ವ್ಯಾಪಾರಕ್ಕೆ ಹಾಕಿದ್ದಾರೆ: ದೈವಾರಾಧಕ ಬೇಸರ
ಗಡೀಪಾರು ಸಂಕಷ್ಟದಲ್ಲಿ Mahesh Shetty Timarodi: ಎಸಿ ಕೋರ್ಟ್‌ಗೆ ಹಾಜರಾಗುವ ಮುನ್ನ ಮಹಾಲಿಂಗೇಶ್ವರ ದೇಗುಲದಲ್ಲಿ ಪ್ರಾರ್ಥನೆ