ಮಡಿಕೇರಿಯಲ್ಲಿ ಖೋಟಾ ನೋಟು ಜಾಲ, ಮೂವರ ಬಂಧನ

By Web DeskFirst Published Oct 11, 2019, 5:38 PM IST
Highlights

ಖೋಟಾ ನೋಟು ಚಲಾವಣೆ/ ಮಡಿಕೇರಿಯಲ್ಲಿ ಮೂವರ ಬಂಧನ/ ದೊಡ್ಡ ಜಾಲದ ಹಿಂದಿರುವ ಶಂಕೆ/ ಎಸ್‌ಪಿ ಡಾ ಸುಮನ್ ಡಿ ಪನ್ನೇಕರ್ ಮಾಹಿತಿ

ಕೊಡಗು(ಅ.11 )  ಕೊಡಗು ಜಿಲ್ಲೆಯ ಮಡಿಕೇರಿ ನಗರದಲ್ಲಿ ಖೋಟಾ ನೋಟು ಪತ್ತೆಯಾಗಿದೆ. ಖೋಟಾ ನೋಟು ಚಲಾವಣೆಗೆ ಯತ್ನಿಸಿದ 3 ಯುವಕರ ಬಂಧನ ಮಾಡಲಾಗಿದ್ದು  ಎರಡು ಸಾವಿರ ಮುಖ ಬೆಲೆಯ 5 ಖೋಟಾ ನೋಟು ಪತ್ತೆಯಾಗಿದೆ.

ಕರೆನ್ಸಿ ಸೆಂಟರ್ ಗೆ ಕರೆನ್ಸಿ ಹಾಕುವ ನೆಪದಲ್ಲಿ ಭೇಟಿ  ನೀಡಿದ್ದ ಯುವಕರ ತಂಡ  ಹಣ ಹಾಕಲು ಮುಂದಾಗಿತ್ತು. ಮಡಿಕೇರಿ ಕಾಲೇಜು ರಸ್ತೆಯಲ್ಲಿರುವ ಅರುಣ್ ಮಾರ್ಕೆಟಿಂಗ್ ಕರೆನ್ಸಿ ಸೆಂಟರ್‌ಗೆ ಭೇಟಿ ನೀಡಿದ್ದ ವೇಳೆ ಖೋಟಾ ನೋಟು ಪತ್ತೆಯಾಗಿದೆ.

ವಿಜಯಪುರ ಪಾನ್ ಶಾಪ್ ಗೆ ಖೋಟಾ ನೋಟಿನ ಕಂತೆ ಬಂತು!

ಯುವಕ ನೀಡಿದ ನೋಟಿನ ಬಗ್ಗೆ ಸಂಶಯ ಬಂದ ಕಾರಣ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಅರುಣ್ ಮಾರ್ಕೆಟಿಂಗ್ ಕರೆನ್ಸಿ ಸೆಂಟರ್  ಮಾಹಿತಿ ಮೇರೆಗೆ ತನಿಖೆ ನಡೆಸಿದ ಮಡಿಕೇರಿ ನಗರ ಪೋಲಿಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಕಕ್ಕಬ್ಬೆ ನಿವಾಸಿ ಅಮೀರ್ ಸೋಹೈಲ್, ಭೇತ್ರಿ ನಿವಾಸಿ ಯೂನೀಸ್ ಮತ್ತು  ಅಪ್ರಾಪ್ತ ಯುವಕನನೊಬ್ಬನನ್ನು ಬಂಧಿಸಲಾಗಿದ್ದು ಆರೋಪಿಗಳ ಹಿಂದೆ ದೊಡ್ಡ ಮಟ್ಟದ ಖೋಟಾ ನೋಟು ಜಾಲ ಇದೆ ಎಂದು ಶಂಕಿಸಲಾಗಿದೆ.

ಶಂಕೆ ಹಿನ್ನೆಲೆಯಲ್ಲಿ ಮತ್ತಷ್ಟು ತನಿಖೆ ನಡೆಸುವುದಾಗಿ  ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಡಾ ಸುಮನ್ ಡಿ ಪನ್ನೇಕರ್ ಮಾಹಿತಿ ನೀಡಿದ್ದಾರೆ. ಕೆಲ ದಿನಗಳ ಹಿಂದೆ ವಿಜಯಪುರದ ಪಾನ್ ಶಾಪ್ ಒಂದಕ್ಕೆ ಖೋಟಾ ನೋಟುಗಳು ಬಂದಿದ್ದು ಅನುಮಾನದಿಂದ ಇಬ್ಬರನ್ನು ಬಂಧಿಸಲಾಗಿತ್ತು. ನೋಟ್ ಬ್ಯಾನ್ ನಂತರ ದೇಶದಲ್ಲಿ ಸಂಪೂರ್ಣವಾಗಿ ಹೊಸ ಕರೆನ್ಸಿ ಚಲಾವಣೆಯಲ್ಲಿ ಇದ್ದರೂ ಅಲ್ಲಲ್ಲಿ ಖೋಟಾ ನೋಟುಗಳು ಕಂಡುಬರುತ್ತಿರುವುದು ನಿಜಕ್ಕೂ ಆತಂಕಕಾರಿ ಸಂಗತಿ.

 

 

click me!