ಮಂಗಳೂರು: ನೈತಿಕ ಪೊಲೀಸ್‌ಗಿರಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಿದ ಕೋರ್ಟ್

By Web Desk  |  First Published Oct 11, 2019, 10:00 PM IST

ನೈತಿಕ ಪೊಲೀಸ್ ಗಿರಿ ಮಾಡಿದ್ದವರಿಗೆ ಶಿಕ್ಷೆ/ ಮಂಗಳೂರು ನ್ಯಾಯಾಲಯದ ಮಹತ್ವದ ಆದೇಶ/ 2016ರ ಎಪ್ರಿಲ್ 4ರಂದು ಫೋರಂ ಮಾಲ್‌ನಲ್ಲಿ ನಡೆದಿದ್ದ ಘಟನೆ/ ತಲಾ 21 ಸಾವಿರ ದಂಡ ವಿಧಿಸಿದ ಕೋರ್ಟ್


ಮಂಗಳೂರು(ಅ. 11)  ಅನೈತಿಕ ಪೊಲೀಸ್ ಗಿರಿ ಪ್ರಕರಣದಲ್ಲಿ ಐವರು ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲಾಗಿದೆ. ಮಂಗಳೂರು ಜಿಲ್ಲಾ ಆರನೇ ಸೆಷನ್ಸ್ ನ್ಯಾಯಾಲಯದ ಮಹತ್ವದ ತೀರ್ಪು ನೀಡಿದೆ.

2016ರ ಎಪ್ರಿಲ್ 4ರಂದು ಫೋರಂ ಮಾಲ್‌ನಲ್ಲಿ ನಡೆದಿದ್ದ ಘಟನೆಯ ವಿಚಾರಣೆ ನಡೆದು ತೀರ್ಪು ಹೊರ ಬಂದಿದೆ. ವಿದ್ಯಾರ್ಥಿನಿ‌ ಜೊತೆಗಿದ್ದ ಅನ್ಯಕೋಮಿನ ಯುವಕನಿಗೆ ಹಲ್ಲೆ ನಡೆಸಿದ್ದ ಐವರಿಗೆ ಶಿಕ್ಷೆಯಾಗಿದೆ.

Tap to resize

Latest Videos

ಚೇತನ್(23), ರಕ್ಷತ್ ಕುಮಾರ್(21), ಅಶ್ವಿನ್ ರಾಜ್(23), ಸಂತೋಷ್ ಶೆಟ್ಟಿ(21). ಮತ್ತು ಶರತ್ ಕುಮಾರ್(20) ಅವರನ್ನು ಅಪರಾಧಿಗಳು ಎಂದು ಪರಿಗಣಿಸಿ ತಲಾ 21 ಸಾವಿರ ದಂಡ ವಿಧಿಸಲಾಗಿದೆ. ತಪ್ಪಿದ್ದಲ್ಲಿ  8 ತಿಂಗಳ ಸಜೆಗೂ ಕೋರ್ಟ್ ಆದೇಶ ನೀಡಿದೆ.

ಶಿವಮೊಗ್ಗದಲ್ಲಿಯೂ ನೈತಿಕ ಪೊಲೀಸ್ ಗಿರಿ

ದೂರುದಾರ ಯುವತಿ ಪ್ರತಿಕೂಲ ಸಾಕ್ಷಿ ನುಡಿದ ಪರಿಣಾಮ ಕೊಲೆಯತ್ನ ಪ್ರಕರಣ ಸಾಬೀತಾಗಿಲ್ಲ. ಒಟ್ಟಿನಲ್ಲಿ  2016  ರಲ್ಲಿ ದೊಡ್ಡ ಸುದ್ದಿ ಮಾಡಿದ್ದ ಪ್ರಕರಣಕ್ಕೆ ಮೂರು ವರ್ಷಗಳ ವಿಚಾರಣೆ ಬಳಿಕ ಆದೇಶ ಹೊರಬಂದಿದೆ.

click me!