ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಮಂಗಳೂರು ಹುಡುಗಿ ಅಪೇಕ್ಷಾ ಕೊಟ್ಟಾರಿ!

Published : Oct 22, 2019, 11:33 AM IST
ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಮಂಗಳೂರು ಹುಡುಗಿ ಅಪೇಕ್ಷಾ ಕೊಟ್ಟಾರಿ!

ಸಾರಾಂಶ

25*25ಸೆಂ.ಮೀ. ಅಳತೆಯ ಪೆಟ್ಟಿಗೆ. ಪೆಟ್ಟಿಗೆಯನ್ನು ತೆರೆದರೆ ಇಡೀ ಭಾರತದ ಚಿತ್ರಣ ಕಣ್ಣಮುಂದೆ ತೆರೆದುಕೊಳ್ಳುತ್ತದೆ. ಬಿಡಿಸಿದಂತೆಲ್ಲಾ ಬಿಡಿಸಿಕೊಳ್ಳುತ್ತಾ ಒಂದು ಸಾವಿರ ಸೆಂ.ಮೀವರೆಗೆ ಭವ್ಯ ಭಾರತದ ಸಚಿತ್ರ ಮಾಹಿತಿಪಟ್ಟಿಯೊಂದು ಅನಾವರಣ ಗೊಳ್ಳುತ್ತದೆ.

ಪಟ್ಟಿಯ ಕೊನೆಗೆ ಗಾಂಧಿ ತಾತ ಕೋಲು ಹಿಡಿದು ನಿಂತುಕೊಂಡಂತಿರುವ ರಚನೆ ವಿಶೇಷವಾದದ್ದು. ಭಾರತದ ರಾಜ್ಯಗಳು ಮತ್ತವುಗಳ ವೈಶಿಷ್ಟ್ಯ, ಕೇಂದ್ರಾಡಳಿತ ಪ್ರದೇಶಗಳು, ಮಹಾನ್ ನಾಯಕರು, ಸ್ವಾತಂತ್ರ್ಯ ಹೋರಾಟಗಾರರು, ಕ್ರೀಡಾ ಸಾಧಕರು ಹೀಗೇ ಅನೇಕಾನೇಕ ಚಿತ್ರ ಹಾಗೂ ಮಾಹಿತಿಗಳುಳ್ಳ ಈ ಎಕ್ಸ್‌ಪ್ಲೋಶನ್ ಗಿಫ್ಟ್ ಬಾಕ್ಸ್ ಅರ್ಹವಾಗಿಯೇ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ 2019’ಗೂ ಸೇರಿಕೊಂಡಿದೆ. ಇನ್ ಕ್ರೆಡಿಬಲ್ ಇಂಡಿಯಾ ಪರಿಕಲ್ಪನೆಯಲ್ಲಿ ಈ ಅಚ್ಚರಿಯ ವೈಶಿಷ್ಟ್ಯಪೂರ್ಣ ಗಿಫ್ಟ್ ಬಾಕ್ಸ್ ರಚನೆಗೊಂಡಿದ್ದು ಮಂಗಳೂರಿನ ಮಣ್ಣಗುಡ್ಡೆಯ ಅಪೇಕ್ಷಾ ಕೊಟ್ಟಾರಿ ಅವರಿಂದ.

ಪ್ರಸ್ತುತ ಸಿ.ಎ. ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಅಪೇಕ್ಷಾ ಕೊಟ್ಟಾರಿ ಅವರು ಸಂಜೆ ಕಾಲೇಜಿನಲ್ಲಿ ಎಂ.ಕಾಂ. ವ್ಯಾಸಂಗ ಮಾಡುತ್ತಿದ್ದಾರೆ. ಬಾಲ್ಯದಲ್ಲಿಯೇ ಕಲೆಯಲ್ಲಿ ಆಸಕ್ತರಾಗಿದ್ದ ಇವರು, ಜನವರಿಯಿಂದ ಎಕ್ಸ್‌ಪ್ಲೋಶನ್ ಬಾಕ್ಸ್ ಮಾಡುವ ಕೆಲಸಕ್ಕೆ ಕೈ ಹಾಕಿದ್ದರು. ಇದರಲ್ಲಿ ಸೃಜನಶೀಲತೆ ಮೆರೆದ ಅಪೇಕ್ಷಾ ಎಂಟೇ ತಿಂಗಳಲ್ಲಿ ಅಂದರೆ ಸೆ. 9ರಂದು ಅತೀ ಉದ್ದನೆಯ ಎಕ್ಸ್ ಪ್ಲೋಶನ್ ಗಿಫ್ಟ್ ಬಾಕ್ಸ್ ಮಾಡುವ ಮೂಲಕ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ -2019’ ದಾಖಲೆ ಮಾಡಿದ್ದಾರೆ.

ನಡೆಯುತ್ತಾ ಓಡುತ್ತಾ ನಾಡು ಸುತ್ತುವ ಮ್ಯಾರಥಾನ್ ರನ್ನರ್!

ಇದೀಗ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್‌ಗೂ ಪ್ರಯತ್ನಿಸುವ ಇಚ್ಛೆಯನ್ನು ಹೊಂದಿದ್ದಾರೆ. ಅಪೇಕ್ಷಾ ಅವರು ಎಕ್ಸ್‌ಪ್ಲೋಶನ್ ಬಾಕ್ಸ್, ಚೌಕಾಕಾರದ ಗಿಫ್ಟ್ ಬಾಕ್ಸ್, ಹಾರ್ಟ್ ಶೇಪ್, ಕಾರ್ಟೂನ್ ಪಾತ್ರಗಳನ್ನು ಬಳಸಿಕೊಂಡು ತ್ರೀ ಡಿ ಬಾಕ್ಸ್, ಚಾಕಲೇಟ್ ಬಾಕ್ಸ್, ಟವರ್ ಬಾಕ್ಸ್ ಹಾಗೂ ಗ್ರೀಟಿಂಗ್ ಕಾಡ್ ಗರ್ಳು ಸೇರಿದಂತೆ 15 ವಿಧದ ಉಡುಗೊರೆಗಳನ್ನು ತಯಾರಿ ಸುತ್ತಾರೆ. ಈ ಉಡುಗೊರೆಗಳು ಹುಟ್ಟಿದ ದಿನ, ವಿಶೇಷ ಭೇಟಿ, ವಾರ್ಷಿಕ ದಿನಗಳು ಹಾಗೂ ವಿಶೇಷ ದಿನಗಳ ನೆನಪುಗಳನ್ನು ಭದ್ರಗೊಳಿಸುತ್ತವೆ.

ನೀರಿಲ್ಲದ ಜಾಗದಲ್ಲಿ 15 ಎಕರೆ ಕಾಡು ಬೆಳೆಸಿದ ಹೀರೋ!

ಅಪೇಕ್ಷಾ ಅವರು ಈವರೆಗೆ ಬೇಡಿಕೆಯ ಮೇರೆಗೆ ಮಂಗಳೂರು ಮಾತ್ರವಲ್ಲದೆ ಬೆಂಗಳೂರಿಗೂ 25ಕ್ಕೂ ಅಧಿಕ ಗಿಫ್ಟ್ ಬಾಕ್ಸ್‌ಗಳನ್ನು ಮಾಡಿಕೊಟ್ಟಿರುವ ಅಪೇಕ್ಷಾ, ಬಿಡುವಿನ ಸಮಯದಲ್ಲಿ ತನ್ನ ಕರಕುಶಲತೆಯನ್ನು ಮುಂದುವರಿಸುವ ಇಚ್ಛೆಯನ್ನು ಹೊಂದಿದ್ದು, ಬಯಸಿದರೆ ಬೇಡಿಕೆಗೆ ಅನುಗುಣವಾಗಿ ಗಿಫ್ಟ್ ಬಾಕ್ಸ್‌ಗಳನ್ನು ತಯಾರಿಸಿ ಕೊಡುತ್ತಾರೆ. ಗ್ರೀಟಿಂಗ್ ಕಾಡ್ಗರ್ಳ ಬೆಲೆ 100ರಿಂದ ಆರಂಭವಾದರೆ, ಎಕ್ಸ್‌ಪ್ಲೋಶನ್ ಗಿಫ್ಟ್ ಬಾಕ್ಸ್ ಬೆಲೆ 500 ರು.ನಿಂದ ಬೇಡಿಕೆಗೆ ತಕ್ಕಂತೆ ಬದಲಾಗುತ್ತದೆ.

PREV
click me!

Recommended Stories

ರಿಷಬ್‌ ಶೆಟ್ಟಿ, ವಿಜಯ್ ಕಿರಗಂದೂರು ವ್ಯಾಪಾರಿಗಳು, ದೈವಾರಾಧನೆಯನ್ನ ವ್ಯಾಪಾರಕ್ಕೆ ಹಾಕಿದ್ದಾರೆ: ದೈವಾರಾಧಕ ಬೇಸರ
ಗಡೀಪಾರು ಸಂಕಷ್ಟದಲ್ಲಿ Mahesh Shetty Timarodi: ಎಸಿ ಕೋರ್ಟ್‌ಗೆ ಹಾಜರಾಗುವ ಮುನ್ನ ಮಹಾಲಿಂಗೇಶ್ವರ ದೇಗುಲದಲ್ಲಿ ಪ್ರಾರ್ಥನೆ