ಶಿರಾಡಿ ಘಾಟ್ ಬಳಿ ಗ್ಯಾಸ್ ಟ್ಯಾಂಕರ್‌ನಿಂದ ಅನಿಲ ಸೋರಿಕೆ; ಸಂಚಾರ ಮಾರ್ಗ ಬದಲು!

By Suvarna NewsFirst Published Feb 5, 2021, 7:27 PM IST
Highlights

ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಡುವೆ ಸಿಗುವ ಶಿರಾಡಿ ಘಾಟ್ ಹಲವು ಕಾರಣಗಳಿಂದ ಅಪಾಯಕಾರಿಯಾಗಿದೆ. ಇದೀಗ ಇದೇ ಶಿರಾಡಿ ಘಾಟ್ ಡಬಲ್ ತಿರುವು ಬಳಿ ಗ್ಯಾಸ್ ಟ್ಯಾಂಕರ್‌ನಿಂದ ಅನಿಲ ಸೋರಿಕೆಯಾದ ಘಟನೆ ನಡೆದಿದೆ.

ಸಕಲೇಶಪುರ(ಫೆ.05):  ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬರುವ ಶಿರಾಡಿ ಘಾಟ್ ಬಳಿ ಅನಿಲ ಸೋರಿಕೆಯಿಂದಾಗಿ ಸಂಚಾರ ಕೆಲ ಗಂಟೆಗಳ ಬಂದ್ ಆಗಿವೆ. ಮಂಗಳೂರು-ಬೆಂಗಳೂರು ಹೆದ್ದಾರಿ ನಡುವೆ ಸಿಗುವು ಶಿರಾಡಿ ಘಾಟಿ ಡಬಲ್ ತಿರುವು ಬಳಿ ಗ್ಯಾಸ್ ಟ್ಯಾಂಕರ್‌ನಿಂದ ಅನಿಲ್ ಸೋರಿಕೆಯಾಗಿದೆ.

ಶಿರಾಡಿ ಸುರಂಗದಿಂದ ಪಶ್ಚಿಮಘಟ್ಟಕ್ಕೆ ಹಾನಿ..!.

ಇಂದು(ಫೆ.05) ಬೆಳಗ್ಗೆ ಈ ಘಟನೆ ನಡಿದೆ.  ಚಾಲಕನ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ. ಸೋರಿಯಾಗುತ್ತಿರುವುದನ್ನು ತಕ್ಷಣವೇ ಅರಿತ ಚಾಲಕ, ಟ್ಯಾಂಕ್ ರಸ್ತೆ ಬದಿ ನಿಲ್ಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.  ಇತ್ತ ಕಾರ್ಯಪ್ರವೃತ್ತರಾದ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದಾರೆ.

ಶಿರಾಡಿ ಘಾಟಿಯಲ್ಲಿ ಶೋಧ ಕಾರ್ಯಾಚರಣೆ

ಘಾಟಿ ರಸ್ತೆಯ ಎರಡೂ ಬದಿಗಳ ಸುಮಾರು 200 ಮೀಟರ್ ಅಂತರದಲ್ಲಿ ವಾಹನಗಳನ್ನು ನಿಲ್ಲಿಸಲಾಗಿದೆ. ವಾರಾಂತ್ಯದಲ್ಲಿ ಶಿರಾಡಿ ಘಾಟ್ ಹೆಚ್ಚಿನ ವಾಹನ ಸಂಚಾರವಿರುತ್ತದೆ. ಶಿರಾಡಿ ಘಾಟ್ ಪ್ರವೇಶಿಸಿದ ವಾಹನಗಳಿಂದ ಇದೀಗ ಸಂಪೂರ್ಣ ಟ್ರಾಫಿಕ್ ಜಾಮ್ ಆಗಿದೆ. 

ದಿಡೀರ್ ರಸ್ತೆ ಬಂದ್ ನಿಂದ ಸಾವಿರಾರು ವಾಹನಗಳು ರಸ್ತೆಯಲ್ಲೇ ಸಾಲುಗಟ್ಟಿ ನಿಲ್ಲುವಂತಾಗಿದೆ ಸಂಜೆ ವೇಳೆಗೆ ಅನಿಲ ಸೋರಿಕೆಯನ್ನು ತಜ್ಞರು ಬಂದ ನಂತರ ನಿಲ್ಲಿಸಿ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಅಲ್ಲಿಯವರೆಗೂ ಹಾಸನ ಕಡಯಿಂದ ಬರುವ ವಾಹನಗಳನ್ನು ಚಾರ್ಮಾಡಿ ಘಾಟ್ ಮಾರ್ಗವಾಗಿ ಮಂಗಳೂರು ಕಡೆಯಿಂದ ಬರುವ ವಾಹನಗಳಿಗೆ ಬಿಸ್ಲೆ ಮಾರ್ಗವಾಗಿ ಚಲಿಸುವಂತೆ ವಾಹನ ಸವಾರರಿಗೆ ಸೂಚನೆ ನೀಡಲಾಗುತ್ತಿದೆ ಎಂದು ಗ್ರಾಮಾಂತರ ಸಬ್ ಇನ್ಸ್ ಪೆಕ್ಟರ್ ಚಂದ್ರಶೇಖರ್ ಸುವರ್ಣನ್ಯೂಸ್.ಕಾಂಗೆ ತಿಳಿಸಿದ್ದಾರೆ.

click me!