ಅರಮನೆಯಲ್ಲಿ ಹುಟ್ಟಿರುವ ಮೂಲ್ಕಿಯ ಯುವಕನೋರ್ವ ಹೈನುಗಾರಿಕೆಯಲ್ಲಿ ತನ್ನನ್ನು ತೊಡಗಿಸಿಕೊಂಡು ಹಲವಾರು ಉತ್ಪನ್ನಗಳನ್ನು ತಯಾರಿಸಿ ಕ್ರಾಂತಿ ಮಾಡುತ್ತಿದ್ದು ಉದ್ಯೋಗಕ್ಕೆ ಕಾಯುತ್ತಿರುವ ಇಂದಿನ ಯುವ ಪೀಳಿಗೆಗೆ ಆದರ್ಶರಾಗಿದ್ದಾರೆ. ಮೂಲ್ಕಿಯ ಒಂಭತ್ತು ಮಾಗಣೆಯ ಸೀಮೆಗೆ ಒಳಪಟ್ಟಮೂಲ್ಕಿ ಸಮೀಪದ ಪಡುಪಣಂಬೂರಿನ ಮೂಲ್ಕಿ ಸೀಮೆ ಅರಮನೆಯ ಅರಸರಾದ ದುಗ್ಗಣ್ಣ ಸಾವಂತರ ಪುತ್ರ ಗೌತಮ್ ಜೈನ್ (31) ಮಾದರಿ ಸಾಧಕ.
ಪ್ರಕಾಶ್ ಎಂ.ಸುವ
ಗೌತಮ್ ಬಿಬಿಎಂ ಪದವಿ ಪಡೆದಿದ್ದು, ಮೂಲ್ಕಿ ಅರಮನೆಯಲ್ಲಿ ವಾಸವಾಗಿದ್ದಾರೆ. ಕಲಿತ ವಿದ್ಯೆಗೆ ಪೂರಕ ಉದ್ಯೋಗ ಅರಸುವ ಬದಲಿಗೆ ಕೃಷಿಯ ಜೊತೆಗೆ ಹೈನುಗಾರಿಕೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಕೃಷಿ ಭೂಮಿಯಲ್ಲಿ ಕೃಷಿ ಚಟುವಟಿಕೆ ಜೊತೆಗೆ ವಿವಿಧ ತಳಿಯ ಸುಮಾರು 17 ಹಸುಗಳನ್ನು ಹೊಂದಿದ್ದು ‘ಅರಸು ಡೈರಿ ಫಾಮ್‌ರ್’ ಮೂಲಕ ಮೂಲ್ಕಿ, ಪಡುಪಣಂಬೂರು, ಹಳೆಯಂಗಡಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ ಡೋರ್ ಡೆಲಿವರಿ ಮೂಲಕ ಪ್ರತಿದಿನ ಸುಮಾರು 150 ಲೀಟರ್ ಹಾಲು ವಿತರಿಸುತ್ತಿದ್ದಾರೆ.
undefined
ವ್ಯಾಸಂಗದ ಬಳಿಕ ಗೌತಮ್ಗೆ ಕೃಷಿ ಬಗ್ಗೆ ಆಸಕ್ತಿ ಹುಟ್ಟಿ1 ವರ್ಷದಿಂದ ಹೈನುಗಾರಿಕೆಯಲ್ಲಿ ತೊಡಗಿದ್ದಾರೆ. ಮೂಲ್ಕಿ ಸೀಮೆ ಅರಸರ ಕುಟುಂಬವೇ ಕೃಷಿ ಹಿನ್ನೆಲೆಯನ್ನು ಹೊಂದಿದ್ದು ಅದೇ ಆಸಕ್ತಿ ಗೌತಮ್ಗೂ ಮೈಗೂಡಿದೆ. ಇವರ ಕೃಷಿ ಕಾಯಕಕ್ಕೆ ತಂದೆ ಮೂಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು ಪ್ರೇರಣೆ .
ಬೇಸಿಗೆಯಲ್ಲಿ ಟೊಮಾಟೊ ಬೆಳೆಯುವವರಿಗಾಗಿ ಒಂದಿಷ್ಟುಮಾಹಿತಿ!
ಇವರ ಹಟ್ಟಿಯಲ್ಲಿ 17 ದನಗಳ ಪೈಕಿ 15 ಜೆರ್ಸಿ ದನಗಳು, 2 ಎಚ್‌ಎಫ್, ಗೀರ್ ಜಾತಿಯ 1 ವರ್ಷ ಪ್ರಾಯದ 1 ಗಂಡು, 1 ಹೆಣ್ಣು ಕರುವನ್ನು ಸಾಕುತ್ತಿದ್ದಾರೆ. ಹಸುಗಳನ್ನು ನೋಡಿಕೊಳ್ಳಲು ಇಬ್ಬರು ಸಹಾಯಕರಿದ್ದಾರೆ.
ಹೈನುಗಾರಿಕೆಯಲ್ಲಿ ಒಳ್ಳೆಯ ಭವಿಷ್ಯವಿದ್ದು ಯುವ ಸಮುದಾಯ ಶಿಕ್ಷಣ ಪಡೆದು ಉದ್ಯೋಗಕ್ಕಾಗಿ ಕಾಯುವ ಬದಲಿಗೆ ಹೈನುಗಾರಿಕೆ, ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಂಶೋಧನೆ ಮೂಲಕ ವಿವಿಧ ರೀತಿಯ ಉತ್ಪನ್ನಗಳನ್ನು ತಯಾರಿಸಲು ಅವಕಾಶವಿದೆ. ಸಮಯವನ್ನು ವ್ಯರ್ಥ ಮಾಡುವ ಬದಲಿಗೆ ಸದುಪಯೋಗಪಡಿಸಿಕೊಳ್ಳಬೇಕು.-ಗೌತಮ್ ಜೈನ್
ಇವರು ಹೈನುಗಾರಿಕೆಯಿಂದಲೇ ಮಾಸಿಕ ಸುಮಾರು 30,000 ರು. ಆದಾಯ ಗಳಿಸುತ್ತಿದ್ದಾರೆ. ದನದ ಕೊಟ್ಟಿಗೆಯನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಿದ್ದಾರೆ. ಕೊಟ್ಟಿಗೆಯಲ್ಲಿ ಫ್ಯಾನ್ ಅಳವಡಿಸಿದ್ದು ಹಾಲು ಕರೆಯಲು ಮೆಷಿನ್ ಹಾಗೂ ಸ್ವಚ್ಛತೆ ಮಾಡಲು ಕೂಡಾ ಯಂತ್ರಗಳನ್ನು ಉಪಯೋಗಿಸಲಾಗುತ್ತಿದೆ. ಮೇವಿಗೆ ಮೂರು ಎಕ್ರೆ ಜಾಗದಲ್ಲಿ ಜೋಳ, ಹುಲ್ಲು ಬೆಳೆಸುತ್ತಿದ್ದು ಮೇವಿಗೆ ಹೈಡ್ರೋಫೋನಿಕ್ ವ್ಯವಸ್ಥೆ ಕಲ್ಪಿಸಲಾಗಿದೆ. ಬೈಹುಲ್ಲು, ಫೀಡ್ ತಂದು ಹಾಕಲಾಗುತ್ತಿದೆ.
ಮೂಲ್ಕಿಯ ಕಾರ್ನಾಡಿನ ಫ್ರೆಶ್ ಬಾಸ್ಕೆಟ್ ಮಾಲ್‌ಗೆ ಕೂಡಾ ಹಾಲು ವಿತರಿಸುತ್ತಿದ್ದಾರೆ. ದೇಶೀಯ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವ ಅರಸು ಡೈರಿ ಫಾಮ್‌ರ್‍್ಸ ಕಳೆದ ಒಂದು ವರ್ಷದಿಂದ ಹಾಲಿನ ಜೊತೆಗೆ ಗೋಮೂತ್ರವನ್ನು ಕೂಡ ಮಾರಾಟ ಮಾಡುತ್ತಿದೆ. 250 ಮಿ.ಲೀಟರ್‌ನ ಚಿಕ್ಕ ಬಾಟಲ್‌ನಲ್ಲಿ ಅರಸು ಪ್ರಾಡಕ್ಟ್ ಹೆಸರಿನಲ್ಲಿ ಗೋಮೂತ್ರ ವಿತರಿಸುತ್ತಿದ್ದಾರೆ.
ತರಕಾರಿ ಬೆಳೆದು ವರ್ಷಕ್ಕೆ 5.50 ಲಕ್ಷ ರೂ ಸಂಪಾದಿಸುತ್ತಿರುವ ರೈತ!
ಇದೀಗ ಗೋಮೂತ್ರದ ಜೊತೆಗೆ ಈಗ ಗೋವಿನ ಮೂತ್ರವನ್ನು ಬಳಸಿ ತಯಾರಿಸಿದ ‘ಗೋಮೂತ್ರ ಫಿನಾಯಿಲ್’ ಉತ್ಪನ್ನ ಬಿಡುಗಡೆ ಮಾಡಿದೆ. ಅತಿ ಕಡಿಮೆ ಬೆಲೆಯಲ್ಲಿ 1 ಲೀಟರ್ ಗೆ 85 ರು. ದರದಲ್ಲಿ ಸಿಗುವ ಫಿನಾಯಿಲ್ ಇದು.
ಮುಂದಿನ ದಿನಗಳಲ್ಲಿ ಸೆಗಣಿಯಿಂದ ಅಗರ ಬತ್ತಿ, ಲೋಭಾನ ಮುಂತಾದ ಉತ್ಪನ್ನಗಳನ್ನು ತಯಾರಿಸುವ ಉದ್ದೇಶವನ್ನಿಟ್ಟುಕೊಂಡಿದ್ದಾರೆ.
ಇವರ ಜಾಗದಲ್ಲಿರುವ ತೆಂಗಿನ ತೋಟ, ಅಡಕೆ ತೋಟದ ಹೊಣೆಯೂ ಇದೆ. ಮೂಲ್ಕಿ ಸೀಮೆ ಕಂಬಳ ನಡೆಯುವ ಗದ್ದೆಯ ಜೊತೆಗೆ ಅರಮನೆಯ ಗದ್ದೆಯಲ್ಲೂ ಬೇಸಾಯ ಮಾಡುತ್ತಾರೆ.
ಗೌತಮ್ ಜೈನ್ ಮೂಲ್ಕಿ ಅರಮನೆಯಲ್ಲಿ ಪ್ರತಿ ವರ್ಷ ಕಂಬಳ ಆಯೋಜನೆ, ಗೋವಿನ ಸಂರಕ್ಷಣೆ, ಸ್ಥಳೀಯ ಯುವಕರ ತಂಡದೊಂದಿಗೆ ಕ್ರೀಡಾ ಕೂಟಗಳನ್ನು ಆಯೋಜಿಸುವುದು, ಸ್ವಚ್ಚತಾ ಕಾರ್ಯಕ್ರಮWಳ ಆಯೋಜನೆ ಸೇರಿದಂತೆ ದಿನವಿಡಿ ಚಟುವಟಿಕೆಯಿಂದ ನಿರತರಾಗಿರುತ್ತಾರೆ. ತಂದೆ, ಮೂಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರ ಪ್ರೋತ್ಸಾಹದಿಂದ ಸಾಮಾನ್ಯ ವ್ಯಕ್ತಿಯಂತೆ ಜೀವನ ಸಾಗಿಸುತ್ತಿದ್ದು ಪಡುಪಣಂಬೂರು ಪರಿಸರದಲ್ಲಿ ಎಲ್ಲರ ಜನಮನ್ನಣೆಯನ್ನು ಪಡೆದುಕೊಂಡಿದ್ದಾರೆ.