Daily Horoscope: ಸಿಂಹ ರಾಶಿಗೆ ಧನ ಲಾಭ, ಮೀನ ರಾಶಿಯವರಿಗೆ ದಿನ ಅಶುಭ

Published : Mar 12, 2022, 07:19 AM IST
Daily Horoscope: ಸಿಂಹ ರಾಶಿಗೆ ಧನ ಲಾಭ, ಮೀನ ರಾಶಿಯವರಿಗೆ ದಿನ ಅಶುಭ

ಸಾರಾಂಶ

12 ಮಾರ್ಚ್ 2022, ಶನಿವಾರದ ಭವಿಷ್ಯ ಹೇಗಿದೆ? ಯಾವ ರಾಶಿಗೆ ಶುಭ ಫಲವಿದೆ? ಮೇಷಕ್ಕೆ ಹೆಚ್ಚಲಿವೆ ನಕಾರಾತ್ಮಕ ಯೋಚನೆಗಳು..

ಮೇಷ(Aries): ನಕಾರಾತ್ಮಕ ಯೋಚನೆಗಳು ಹೆಚ್ಚಬಹುದು. ಸಂಗಾತಿ ಬಗೆಗೆ ಅನುಮಾನ ಮೂಡುವುದು. ಹೆಚ್ಚು ಎಳೆಯದೆ ಮಾತುಕತೆಯಲ್ಲಿ ನಿಮ್ಮ ಗೊಂದಲಗಳನ್ನು ತಕ್ಷಣ ಪರಿಹರಿಸಿಕೊಳ್ಳಿ. ನಿದ್ರಾಹೀನತೆಯಿಂದ ಆರೋಗ್ಯ ಸಮಸ್ಯೆಗಳು ಎದುರಾಗಲಿವೆ. ಶನಿ ಸ್ಮರಣೆ ಮಾಡಿ. 

ವೃಷಭ(Taurus): ನಿಮ್ಮ ಕೆಲಸ ಕಾರ್ಯದಲ್ಲಿ ಅದರಲ್ಲೂ ಸ್ವಂತ ಉದ್ಯೋಗದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಲಾಭ ಪಡೆಯುವಿರಿ. ಮಕ್ಕಳ ಓದಿನ ಬಗ್ಗೆ ಚಿಂತೆ ಎದುರಾಗುವುದು. ರಕ್ತದೊತ್ತಡ, ತಲೆನೋವು ಇತ್ಯಾದಿ ಬಾಧೆ ಕಾಡಬಹುದು. ಪ್ರೇಮಿಗಳ ನಡುವೆ ಬಿಕ್ಕಟ್ಟು ಹೆಚ್ಚಲಿದೆ. ಕಪ್ಪು ಎಳ್ಳು ದಾನ ಮಾಡಿ. 

ಮಿಥುನ(Gemini): ನಿರೀಕ್ಷೆಗಳನ್ನು ಕಡಿಮೆ ಮಾಡಿಕೊಂಡರೆ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಮನೆ ಹಿರಿಯರಿಂದ ಕಿರಿಕಿರಿ ಹೆಚ್ಚಿ ಬೇಸತ್ತು ಹೋಗುವಿರಿ. ಬಿಪಿ, ಸಕ್ಕರೆ ಕಾಯಿಲೆಯಂಥ ಸಮಸ್ಯೆಗಳು ಉಲ್ಬಣವಾಗಿ ಚಿಂತೆಯಾಗಬಹುದು. ತಪಾಸಣೆ ಮಾಡಿಸಿ. ಶುಭ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿರುವಿರಿ. ಅಶ್ವತ್ಥ ಕಟ್ಟೆಗೆ ಎಳ್ಳೆಣ್ಣೆಯ ದೀಪ ಹಚ್ಚಿ.

ಕಟಕ(Cancer): ಕೆಲಸದಿಂದ ಕೊಂಚ ವಿಶ್ರಾಂತಿ ಸಿಗಲಿದೆ. ಮಕ್ಕಳಿಗೆ ಹೆಚ್ಚು ಸಮಯ ವ್ಯಯಿಸುವಿರಿ. ಕುಟುಂಬದೊಂದಿಗೆ ತಿರುಗಾಟ ಸಾಧ್ಯತೆಗಳಿವೆ. ಸುಸ್ತು ಆವರಿಸಿದರೂ ಸಂತಸ ಮನ ತುಂಬಲಿದೆ. ಆಪ್ತರೊಂದಿಗೆ ಮಾತಾಡುವಾಗ ಮನಸ್ಸಿಗೆ ನೋವಾಗದಂತೆ ಎಚ್ಚರ ವಹಿಸಿ. ಆಂಜನೇಯ ಸ್ಮರಣೆ ಮಾಡಿ. 

Vastu Tips : ಹೀಗೆ ಮಾಡಿದ್ರೆ ವ್ಯವಹಾರದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ

ಸಿಂಹ(Leo): ಚಿನ್ನಾಭರಣ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಲ್ಲಿ ಸಾಕಷ್ಟು ಶುಭ ಫಲಗಳಿವೆ. ಭೂಮಿಯ ವ್ಯವಹಾರದಲ್ಲಿ ಅಭಿವೃದ್ಧಿ ಆಗುತ್ತದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಪ್ರೇಮ ವ್ಯವಹಾರದಲ್ಲಿ ಮನಸ್ಸಿಗೆ ನೋವಾಗಬಹುದು. ಶಿವ ಶತ ನಾಮಾವಳಿ ಹೇಳಿಕೊಳ್ಳಿ. 

ಕನ್ಯಾ(Virgo): ಸ್ವಂತ ಉದ್ಯೋಗದಲ್ಲಿರುವವರು ಅಭಿವೃದ್ಧಿ ಪಡೆಯುವಿರಿ. ಖಾಸಗಿ ಉದ್ಯೋಗಿಗಳಿಗೆ ಒತ್ತಡ ಹೆಚ್ಚುವುದು. ತಂದೆ ತಾಯಿಯ ಮನಸ್ಸಿಗೆ ನೋವುಂಟು ಮಾಡಲು ಹೋಗಬೇಡಿ.  ಒಡಹುಟ್ಟಿದವರೊಂದಿಗಿನ ಜಗಳಗಳಿಂದಾಗಿ ನಿಮ್ಮ ಕುಟುಂಬ ಜೀವನದಲ್ಲಿ ಅಸ್ಥಿರತೆ ಉಂಟಾಗಬಹುದು. ದೇವಾಲಯಕ್ಕೆ ಭೇಟಿ ನೀಡಿ ನವಗ್ರಹಕ್ಕೆ ಸುತ್ತು ಬನ್ನಿ.

ತುಲಾ(Libra): ಪ್ರೇಮ ಸಂಬಂಧಗಳು ನಿಮ್ಮ ಜೀವನೋತ್ಸಾಹ ಹೆಚ್ಚಿಸಲಿವೆ. ಉದ್ಯೋಗ ತೊರೆಯುವ ಯೋಚನೆ ಇರುವವರು ಹೊಸ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಇಂದು ಸೂಕ್ತ ದಿನವಾಗಿದೆ. ಮಕ್ಕಳಿಗೆ ಉತ್ತಮ ಪ್ರತಿಭಾನ್ವೇಷಣೆ ಅವಕಾಶಗಳು ಸಿಗುವುವು. ಆತ್ಮವಿಶ್ವಾಸ ಇರಲಿದೆ. ಕಪ್ಪು ವಸ್ತ್ರ ದಾನ ಮಾಡಿ. 

Bijli Mahadev temple: 12 ವರ್ಷಗಳಿಗೊಮ್ಮೆ ಸಿಡಿಲಿಗೆ ಒಡೆವ ಶಿವಲಿಂಗ!

ವೃಶ್ಚಿಕ(Scorpio): ಎಲ್ಲರೂ ನಿಮ್ಮ ಮಾತಿನಂತೆ ನಡೆಯಬೇಕು ಎಂಬ ಪ್ರವೃತ್ತಿಯಿಂದ ಅಸಹನೆ ಹೆಚ್ಚಬಹುದು. ಸಂಗಾತಿಯೊಂದಿಗೆ ಮೌನ ಯುದ್ಧ ನಡೆಯಬಹುದು. ಭೂಮಿಗೆ ಸಂಬಂಧಿಸಿದ ಕೆಲಸ ಮಾಡುವವರಿಗೆ ಉತ್ತಮ ಫಲಗಳಿವೆ. ಮನೆದೇವರಿಗೆ ತುಪ್ಪದ ದೀಪ ಹಚ್ಚಿ.

ಧನುಸ್ಸು(Sagittarius): ಎಷ್ಟೇ ನಂಬಿಕೆಯ ಜನರಾದರೂ ಕುಟುಂಬದ ಗುಟ್ಟುಗಳನ್ನು ಬಿಟ್ಟು ಕೊಡಬೇಡಿ. ಮನೆ ಹಿರಿಯರ ಚುಚ್ಚು ಮಾತುಗಳಿಗೆ ಅಲಕ್ಷ್ಯವೇ ಉತ್ತಮ ಪ್ರತಿಕ್ರಿಯೆ. ಲೇವಾದೇವಿ ವ್ಯವಹಾರಗಳಲ್ಲಿ ಲಾಭವಿದೆ. ಅಕ್ಕಪಕ್ಕದವರೊಡನೆ ಜಗಳಕ್ಕೆ ಹೋಗಬೇಡಿ. ನಯವಾದ ಮಾತಿನಲ್ಲಿ ಹೇಳಬೇಕಾದ ವಿಚಾರ ತಿಳಿಸಿ. ಹನುಮಾನ್ ಚಾಳೀಸ್ ಹೇಳಿಕೊಳ್ಳಿ. 

ಮಕರ(Capricorn): ಹೆಚ್ಚು ನಗುತ್ತಾ ಕಾಲ ಕಳೆಯುವಿರಿ. ಕಟ್ಟಡ ನಿರ್ಮಾಣ ಕೆಲಸಗಾರರಿಗೆ ಲಾಭ, ಸಂಗಾತಿಯೊಂದಿಗೆ ಅತ್ಯುತ್ತಮ ಸಮಯ ಕಳೆಯಲಿರುವಿರಿ. ಹಳೆ ಸ್ನೇಹಿತರೊಂದಿಗೆ ಮಾತಾಡಿ ಸಂತಸ. ಹೊಸ ವಸ್ತುಗಳ ಖರೀದಿ ಮಾಡಲಿರುವಿರಿ. ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರ. ತಿಲ ಹಾಗೂ ಕ್ಷೀರ ದಾನ ಮಾಡಿ. 

ಕುಂಭ(Aquarius): ಕೆಲಸದಲ್ಲಿ ಏಕಾಗ್ರತೆ ನಿಲ್ಲದೆ ಕಿರಿಕಿರಿಯಾಗಲಿದೆ. ಕಂಡ ಕನಸುಗಳು ನನಸಾಗುವ ಹಾದಿಯಲ್ಲಿ ವಿಘ್ನಗಳೆದುರಾಗಿ ಮನಸ್ಸಿಗೆ ಕಸಿವಿಸಿಯಾಗಲಿದೆ. ಆಗುವುದೆಲ್ಲ ಒಳ್ಳೆಯದಕ್ಕೆ ಎಂಬ ನಿಲುವಿನಿಂದ ಮುಂದುವರಿಯಿರಿ. ಆಸ್ತಿ ಖರೀದಿ ವಿಷಯ ಮುಂದೂಡಿಕೆ. ನವಗ್ರಹ ಶ್ಲೋಕ ಹೇಳಿಕೊಳ್ಳಿ. 

ಮೀನ(Pisces): ತ್ವಚೆಯ ಸಮಸ್ಯೆಗಳು ಕಾಡಬಹುದು. ನೆಂಟರಿಷ್ಟರ ನಡೆಗಳು ಮನಸ್ಸಿನಲ್ಲಿ ಕ್ಲೇಶ ಉಂಟು ಮಾಡಬಹುದು. ಬೇಡದ ಅತಿಥಿಯ ಆಗಮನವಾಗಬಹುದು. ಮನಸ್ಸು ದುರ್ಬಲವಾಗುವುದು. ಯಾವುದೇ ಪ್ರಮುಖ ನಿರ್ಧಾರಗಳನ್ನು ಇಂದು ತೆಗೆದುಕೊಳ್ಳಬೇಡಿ. ಈಶ್ವರನಿಗೆ ಬಿಲ್ವಾರ್ಚನೆ ಮಾಡಿಸಿ. 

PREV
Read more Articles on
click me!

Recommended Stories

ಇಂದು ಬುಧವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಮಂಗಳವಾರ ಈ ರಾಶಿಗೆ ಶುಭ, ಅದೃಷ್ಟ