Daily Horoscope: ವೃಷಭಕ್ಕೆ ಆಸ್ತಿ ವ್ಯವಹಾರದಲ್ಲಿ ಜಯ, ಧನಸ್ಸಿಗೆ ಅನಿರೀಕ್ಷಿತ ಆದಾಯ

Published : Mar 11, 2022, 05:05 AM IST
Daily Horoscope: ವೃಷಭಕ್ಕೆ ಆಸ್ತಿ ವ್ಯವಹಾರದಲ್ಲಿ ಜಯ, ಧನಸ್ಸಿಗೆ ಅನಿರೀಕ್ಷಿತ ಆದಾಯ

ಸಾರಾಂಶ

11 ಮಾರ್ಚ್ 2022, ಶುಕ್ರವಾರದ ಭವಿಷ್ಯ ಹೇಗಿದೆ? ಯಾವ ರಾಶಿಗೆ ಶುಭ ಫಲವಿದೆ? ಮಿಥುನಕ್ಕೆ ಸಂತೋಷಕ್ಕಾಗಿ ಹೆಚ್ಚುವ ಖರ್ಚು

ಮೇಷ(Aries): ಆಲಸ್ಯ ನಿಯಂತ್ರಿಸಿಕೊಂಡರೆ ದಿನವು ಉತ್ತಮವಾಗಿರುತ್ತದೆ. ಉದ್ಯೋಗದಲ್ಲಿ ಹೊಸ ವ್ಯಕ್ತಿಗಳ ಪರಿಚಯವಾಗುವುದು. ಕಾರ್ಯನಿಮಿತ್ತ ಪ್ರಯಾಣ ಮಾಡಬೇಕಾಗಬಹುದು. ಮನೆಯಲ್ಲಿ ಹೆಂಡತಿ ಮಕ್ಕಳ ಜೊತೆ ಕಳೆಯಲು ಸಮಯ ಸಾಲದೆ ಕಿರಿಕಿರಿಯಾಗಲಿದೆ. ಲಲಿತಾ ಸಹಸ್ರನಾಮ ಪಠಣ ಮಾಡಿ.

ವೃಷಭ(Taurus): ನಿಮ್ಮೆಲ್ಲ ಸಾಹಸಗಳಿಗೆ ಸಂಗಾತಿಯ ಒತ್ತಾಸೆ ಸಿಕ್ಕು ಸಂತಸವಾಗುವುದು. ಆಸ್ತಿ ವ್ಯವಹಾರಗಳಲ್ಲಿ ಜಯ ನಿಮ್ಮದಾಗುವುದು. ಆರೋಗ್ಯ ಸಮಸ್ಯೆಗಳು ಕಾಡಬಹುದು. ಮಕ್ಕಳಲ್ಲಿ ಮೌಲ್ಯಗಳನ್ನು ಮೈಗೂಡಿಸುವ ಕಡೆ ಗಮನ ಹರಿಸಿ. ಅಮ್ಮನವರಿಗೆ ಕುಂಕುಮಾರ್ಚನೆ ಮಾಡಿಸಿ. 

ಮಿಥುನ(Gemini): ಸಂತೋಷಕ್ಕಾಗಿ ಹಾಗೂ ಮನೆಯ ಒಳಾಂಗಣ ಸೌಂದರ್ಯ ಹೆಚ್ಚಿಸಲು ಖರ್ಚು ಮಾಡುವಿರಿ. ಉದ್ಯೋಗ ಸ್ಥಳದಲ್ಲಿ ನಿಮ್ಮ ಕೆಲಸಕ್ಕೆ ಹೆಚ್ಚಿನ ಮನ್ನಣೆ ದೊರಕುವುದು. ದೈವ ಕೃಪೆ ಇರಲಿದೆ. ನಿರುದ್ಯೋಗಿಗಳಿಗೆ ಅವಕಾಶ ಒಲಿಯುತ್ತದೆ. ಮನೆ ದೇವರಿಗೆ ತುಪ್ಪದ ದೀಪ ಹಚ್ಚಿ.

ಕಟಕ(Cancer): ಮಕ್ಕಳಿಂದ ಉತ್ತಮ ಸುದ್ದಿ ಕೇಳುವ ಭಾಗ್ಯವಿದೆ. ದಾಂಪತ್ಯ ಸುಧಾರಿಸಲಿದೆ. ಹೂಡಿಕೆಯಲ್ಲಿ ಅಪಾರ ಲಾಭವಿರಲಿದೆ. ಕೋರ್ಟ್ ವ್ಯಾಜ್ಯಗಳು ನಿಮ್ಮ ಪರ ತೀರ್ಪು ನೀಡಲಿವೆ. ಯಾರಿಗೂ ಕೇಡು ಬಯಸಬೇಡಿ. ಅವಿವಾಹಿತರಿಗೆ ಸಂಬಂಧ ಅರಸಿ ಬರಲಿದೆ. ದುರ್ಗಾಷ್ಟೋತ್ತರ ಹೇಳಿಕೊಳ್ಳಿ.

ಸಿಂಹ(Leo): ಬಿಡುವಿಲ್ಲದ ದಿನ. ನಿಮ್ಮ ಆಹಾರ ಕ್ರಮಗಳ ಬಗ್ಗೆ ಹೆಚ್ಚಿನ ಜಾಗರೂಕತೆ ವಹಿಸಿದರೆ ಆರೋಗ್ಯ ಕಾಪಾಡಿಕೊಳ್ಳಬಹುದು. ಸಹೋದರರ ಸಹಕಾರ ಸಿಗದೆ ಕೋಪ ಬರುವುದು. ಮನೆಯಲ್ಲಿ ಧಾರ್ಮಿಕ ಕಾರ್ಯಗಳನ್ನು ನಡೆಸಲು ಸಿದ್ಧತೆ ಮಾಡುವಿರಿ. ಶಾರದಾಂಬೆ ಸ್ಮರಣೆ ಮಾಡಿ. 

ಕನ್ಯಾ(Virgo): ಹಣದ ಹರಿವು ಚೆನ್ನಾಗಿದ್ದು, ಕೆಲ ಬಿಕ್ಕಟ್ಟುಗಳು ಶಮನವಾಗಲಿವೆ. ಮೊದಲು ಸಾಲ ಕೊಟ್ಟವರಿಗೆ ಹಣ ಹಿಂದಿರುಗಿಸಿ. ಇಲ್ಲದಿದ್ದರೆ ನೆಮ್ಮದಿ ಅಸಾಧ್ಯ. ಮಕ್ಕಳ ಕೆಲಸಗಳು ಆತಂಕಕ್ಕೆ ದೂಡುತ್ತವೆ. ವ್ಯಾಪಾರದಲ್ಲಿ ಲಾಭವಿದೆ. ಪಾಲುದಾರಿಕೆ ವ್ಯವಹಾರಗಳು ಧನಾತ್ಮಕ ಫಲಿತಾಂಶ ನೀಡಲಿವೆ. ಅನ್ನಪೂರ್ಣೇಶ್ವರಿಯ ಶ್ಲೋಕ ಹೇಳಿ.

Holi 2022: ಈ ನಗರದಲ್ಲಿ 12 ದಿನ ನಡೆಯುತ್ತೆ ಬಣ್ಣದೋಕುಳಿ, ಇಲ್ಲಾಗಲೇ ಶುರುವಾಗಿದೆ ಹೋಳಿ!

ತುಲಾ(Libra): ಶೈಕ್ಷಣಿಕ ಕ್ಷೇತ್ರದಲ್ಲಿರುವವರು, ಸರ್ಕಾರಿ ಉದ್ಯೋಗಿಗಳಿಗೆ ವರ್ಗಾವಣೆ ಸಾಧ್ಯತೆ ಹೆಚ್ಚಿದೆ. ವ್ಯಾಪಾರ, ವ್ಯವಹಾರಗಳಲ್ಲಿ ಲಾಭವಿರಲಿದೆ. ಉದರ ಸಂಬಂಧಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಲಿವೆ. ಪತಿ ಪತ್ನಿಯರ ನಡುವೆ ಸಮನ್ವಯ ಚೆನ್ನಾಗಿರಲಿದೆ. ಬಡವರಿಗೆ ವಸ್ತ್ರ, ದವಸ ಧಾನ್ಯ ದಾನ ಮಾಡಿ. 

ವೃಶ್ಚಿಕ(Scorpio): ಔದ್ಯೋಗಿಕ ಕ್ಷೇತ್ರದಲ್ಲಿ ನಿಮ್ಮ ಕೆಲಸ ಹಿರಿಯ ಉದ್ಯೋಗಿಗಳಿಂದ ಮೆಚ್ಚುಗೆಗೆ ಪಾತ್ರವಾಗುವುದು. ಮನೆಯಲ್ಲಿ ಮಂಗಳ ಕಾರ್ಯಗಳು ನಡೆದು ಮನಸ್ಸಿಗೆ ನೆಮ್ಮದಿ ಎನಿಸುವುದು. ಆಹಾರದಲ್ಲಿ ಪಥ್ಯ ತಪ್ಪಿದರೆ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಲಲಿತಾ ಸಹಸ್ರನಾಮ ಪಠಣ ಮಾಡಿ.

ಧನುಸ್ಸು(Sagittarius): ಸ್ನೇಹಿತರ ಭೇಟಿಯಿಂದ ಸಂತಸ. ಕುಟುಂಬದೊಡನೆ ದೂರ ಪ್ರಯಾಣ ಕೈಗೊಳ್ಳುವಿರಿ. ಸಂಗಾತಿಯ ಸಹಕಾರದಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು. ಅನಿರೀಕ್ಷಿತ ಮೂಲಗಳಿಂದ ಆದಾಯ ಹೆಚ್ಚಲಿದೆ. ಮನೆಯಲ್ಲಿ ಶುಭ ಕಾರ್ಯಕ್ಕೆ ಮುನ್ನುಡಿ ಇಡಲಿದ್ದೀರಿ. ಮಹಾಲಕ್ಷ್ಮೀ ಆರಾಧನೆ ಮಾಡಿ. 

Sun Transit: ಈ ನಾಲ್ಕು ರಾಶಿಗಳಿಗೆ ಅದೃಷ್ಟ ಬದಲಾಗೋಕೆ ಇನ್ನೈದೇ ದಿನ!

ಮಕರ(Capricorn): ಲೇವಾದೇವಿ ವ್ಯವಹಾರ, ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಸಾಕಷ್ಟು ಲಾಭ ಗಳಿಸುವಿರಿ. ಚಿನ್ನ ಬೆಳ್ಳಿ ವ್ಯಾಪಾರಸ್ಥರಿಗೆ ಶುಭ ಸುದ್ದಿ, ದಾಂಪತ್ಯ ಜೀವನದಲ್ಲಿ ಸಂಯಮ ಅಗತ್ಯ. ಬಾಕಿ ಉಳಿದ ಗೃಹ ಕಾರ್ಯಗಳು ಪೂರ್ಣಗೊಳ್ಳಲಿವೆ. ದುರ್ಗಾ ಅಷ್ಟೋತ್ತರ ಹೇಳಿಕೊಳ್ಳಿ.

ಕುಂಭ(Aquarius): ವಾಹನಗಳು ದುರಸ್ಥಿಗೆ ಬರುವ ಸಾಧ್ಯತೆ ಇದೆ. ಬಹುಕಾಲದಿಂದ ಬಾಧಿಸುತ್ತಿರುವ ಆರೋಗ್ಯ ತೊಡಕುಗಳಲ್ಲಿ ಕೊಂಚ ಸುಧಾರಣೆ. ವೈದ್ಯರ ಭೇಟಿ ಮಾಡುವಿರಿ. ಹಿಂದೆ ತೆಗೆದುಕೊಂಡ ನಿರ್ಧಾರವೊಂದು ತದ್ವಿರುದ್ಧವಾಗಿ ಬದಲಾಗಬಹುದು. ಕುಲದೇವರ ಸ್ಮರಣೆ ಮಾಡಿ. 

ಮೀನ(Pisces): ಷೇರು ವ್ಯವಹಾರದಲ್ಲಿ ಧನನಷ್ಟವಾಗುವುದು. ವ್ಯಾಪಾರದಲ್ಲಿ ಮಿಶ್ರಫಲ. ಕುಟುಂಬ ಸದಸ್ಯರ ಜೊತೆ ಹೆಚ್ಚು ಸಮಯ ಕಳೆಯಿರಿ. ಕಚೇರಿ ಕಾರ್ಯಾಲಯಗಳ ಕೆಲಸಗಳಿಂದ ತಾಳ್ಮೆಗೆಡುವಂತಾಗಬಹುದು.  ಅಮ್ಮನವರನ್ನು ಪ್ರಾರ್ಥಿಸಿ. 

PREV
Read more Articles on
click me!

Recommended Stories

ಫೆಬ್ರವರಿ 26 ಇಂದು ಬೆಳಗಿನ ಜಾವ 12:54 ಕ್ಕೆ ಚಂದ್ರನು ಮಿಥುನ ರಾಶಿಯಲ್ಲಿ, ಈ ರಾಶಿಗೆ ರಾಜಯೋಗದ ಭಾಗ್ಯ, ಸಂಪತ್ತು