Daily Horoscope: ವೃಷಭಕ್ಕೆ ಅವಮಾನ, ಮಕರಕ್ಕೆ ಕಾಡುವ ನೋವು

Published : Mar 10, 2022, 07:09 AM IST
Daily Horoscope: ವೃಷಭಕ್ಕೆ ಅವಮಾನ, ಮಕರಕ್ಕೆ ಕಾಡುವ ನೋವು

ಸಾರಾಂಶ

10 ಮಾರ್ಚ್ 2022, ಗುರುವಾರದ ಭವಿಷ್ಯ ಹೇಗಿದೆ? ಯಾವ ರಾಶಿಗೆ ಶುಭ ಫಲವಿದೆ? ಮೇಷಕ್ಕೆ ಮಾನಸಿಕ ತುಮುಲ, ನಿಮ್ಮ ರಾಶಿಯ ಇಂದಿನ ಫಲವೇನಿದೆ ನೋಡಿ

ಮೇಷ(Aries): ವಿಚಿತ್ರವಾದ ಕೊರಗು ಮನಸ್ಸನ್ನಾವರಿಸಲಿದೆ. ಯಾಕೆ ಬೇಜಾರಾಗುತ್ತಿದೆ ಎಂಬುದೇ ತಿಳಿಯದೇ ಹೋಗಬಹುದು. ಉದ್ಯೋಗಿಗಳಿಗೆ, ವಿದ್ಯಾರ್ಥಿಗಳಿಗೆ ಏಕಾಗ್ರತೆ ಸಾಧಿಸುವುದು ಕಷ್ಟವಾಗಬಹುದು. ಸಂಗಾತಿಯ ಮಾತು ಮನಸ್ಸಿಗೆ ನೋವು ಉಂಟು ಮಾಡಬಹುದು.  ಗುರು ರಾಯರ ಸ್ಮರಣೆ ಮಾಡಿ. 

ವೃಷಭ(Taurus): ಬೇರೆಯವರ ತಪ್ಪಿಗೆ ನೀವು ತಲೆ ಕೊಡಬೇಕಾದ ಸಾಧ್ಯತೆ ಇದೆ. ನಿಮ್ಮದೊಂದು ತಪ್ಪು ಮಾತಿಗೆ ಕೊರಗುವಂಥ ಸಂದರ್ಭ ಎದುರಾಗಲಿದೆ. ಚಟಗಳು ನಿಮ್ಮ ಅಧಃಪತನಕ್ಕೆ ಕಾರಣವಾಗುತ್ತಿವೆ ಎಂಬುದನ್ನು ಬೇಗ ಅರ್ಥ ಮಾಡಿಕೊಳ್ಳಿ. ಅನೈತಿಕ ಚಟುವಟಿಕೆಗಳಿಂದ ಅವಮಾನ, ರಾಮ ಧ್ಯಾನ ಮಾಡಿ. 

ಮಿಥುನ(Gemini): ಹಳೆಯ ಮಿತ್ರರೊಬ್ಬರ ಜೊತೆ ಮಾತುಕತೆಯಿಂದ ಮನಸ್ಸು ಮುದಗೊಳ್ಳುವುದು. ಹೊಸ ವಾಹನ, ಯಂತ್ರೋಪರಣಗಳ ಖರೀದಿ ಮಾಡಲಿರುವಿರಿ. ವ್ಯಾಪಾರಿಗಳಿಗೆ ಉತ್ತಮ ಲಾಭ. ಅವಿವಾಹಿತರಿಗೆ ಶುಭ ಫಲ, ಸಂತಾನ ನಿರೀಕ್ಷೆಯಲ್ಲಿರುವ ದಂಪತಿಗೆ ಶುಭ ಸುದ್ದಿ, ನವಗ್ರಹ ಆರಾಧನೆ ಮಾಡಿ. 

ಕಟಕ(Cancer): ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗುವವರಿಗೆ ಮಾನ, ಸಮ್ಮಾನಗಳಿಂದ ಸಂತಸ, ಬೇಡದ ರಾಜಕೀಯದಲ್ಲಿ ಮೂಗು ತೂರಿಸಿ ಹೆಸರು ಹಾಳು ಮಾಡಿಕೊಳ್ಳಬೇಡಿ. ಕುಟುಂಬದಲ್ಲಿ ಹಿರಿಯರ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗದೆ ಅಸಮಾಧಾನ ಕಾಡಬಹುದು. ವಿಷ್ಣು ಸಹಸ್ರನಾಮ ಪಠಣ ಮಾಡಿ. 

ಸಿಂಹ(Leo): ಕೈ ಹಾಕಿದ ಕೆಲಸಗಳಲ್ಲೆಲ್ಲ ವಿಘ್ನಗಳು ಎದುರಾಗುತ್ತಿವೆ ಎಂದೆನಿಸಬಹುದು. ಮಕ್ಕಳ ಶಾಲಾ ವಿಷಯಗಳು ತಲೆನೋವು ತರಬಹುದು. ಉದರ ಸಂಬಂಧಿ ಸಮಸ್ಯೆಗಳು ಹೆಚ್ಚಲಿವೆ. ಕ್ರೀಡೆಯಲ್ಲಿ ಸಣ್ಣಪುಟ್ಟ ಗಾಯಗಳಾಗುವ ಸಾಧ್ಯತೆ, ಎಚ್ಚರಿಕೆ ಅಗತ್ಯ. ರಾಯರ ಮಠಕ್ಕೆ ಭೇಟಿ ನೀಡಿ. 

Astrology 2022: ಆರೋಗ್ಯ ಚೆನ್ನಾಗಿರ್ಬೇಕು ಅಂದ್ರೆ ಹೀಗೆ ನಿಮ್ಮ ಗ್ರಹಗಳನ್ನು ಬಲಪಡಿಸಿಕೊಳ್ಳಿ..

ಕನ್ಯಾ(Virgo): ಮಕ್ಕಳ ಬೆಳವಣಿಗೆ ಸಂತೋಷ ತರಲಿದೆ. ಉದ್ಯೋಗದಲ್ಲಿ ಪ್ರಗತಿ ಇದೆ. ವ್ಯಾಪಾರ, ಸ್ವಂತ ಉದ್ದಿಮೆಯಲ್ಲಿ ಹೊಸ ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಆರೋಗ್ಯ ಸುಧಾರಿಸಲಿದೆ. ಪತ್ನಿಯೊಂದಿಗೆ ಸುಂದರ ಸಮಯ ಕಳೆಯುವಿರಿ. ಲಕ್ಷ್ಮೀ ವೆಂಕಟೇಶ್ವರ ಸ್ಮರಣೆ ಮಾಡಿ. 

ತುಲಾ(Libra): ಇನ್ನೊಬ್ಬರನ್ನು ಮೆಚ್ಚಿಸುವ ಭರದಲ್ಲಿ ನಿಮ್ಮತನ ಬಲಿ ಕೊಡಬೇಡಿ. ಪ್ರಾಮಾಣಿಕ ಹಾದಿಯನ್ನಷ್ಟೇ ತುಳಿಯಿರಿ. ಸುಳ್ಳುಗಳು ನಿಮ್ಮ ಕೈ ಹಿಡಿಯುವುದಿಲ್ಲ. ಆಪ್ತರನ್ನು ಮಾತಿನಿಂದ ಕಳೆದುಕೊಳ್ಳಬೇಕಾದ ಸಾಧ್ಯತೆ, ಉದ್ಯೋಗದಲ್ಲಿ ಏರುಪೇರಿಲ್ಲ, ಕೃಷ್ಣನಿಗೆ ತುಳಸಿ ಅರ್ಪಿಸಿ. 

ವೃಶ್ಚಿಕ(Scorpio): ಸ್ನೇಹಿತರ ಭೇಟಿಯಿಂದ ಸಂತಸ. ಹೊಸ ಉದ್ಯಮಗಳಿಗೆ ಕೈ ಹಾಕಲಿರುವಿರಿ. ದೂರ ಪ್ರಯಾಣಗಳಿಂದ ಕಾರ್ಯ ಸಿದ್ಧಿ. ಕಾಲು ನೋವು ಕಾಡಬಹುದು. ಸಾಮಾಜಿಕವಾಗಿ ಆಕರ್ಷಣೆಯ ಕೇಂದ್ರಬಿಂದುವಾಗಿರುತ್ತೀರಿ. ನೆಂಟರಿಷ್ಟರ ಸಹಾಯ ಒದಗಲಿದೆ. ಗೋಧಿ ದಾನ ಮಾಡಿ.

Putin Kundli: ಅಣ್ವಸ್ತ್ರ ಮಹಾಯುದ್ಧ ನಡೆಯುತ್ತಾ? ಪುಟಿನ್ ಜಾತಕ ಏನನ್ನುತ್ತೆ?

ಧನುಸ್ಸು(Sagittarius): ನೀವು ಮಾಡುವ ಕೆಲಸಕ್ಕೆ ಸಂಗಾತಿ ಹಾಗೂ ಪೋಷಕರ ಸಹಕಾರ ಸಿಕ್ಕಿ ಯಶಸ್ಸು ಸುಲಭವಾಗುವುದು. ಮಕ್ಕಳ ಪ್ರಗತಿ ಸಂತಸ ತರಲಿದೆ. ಹೊಸ ಜವಾಬ್ದಾರಿಗಳು ಹೆಗಲೇರುವುವು. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ವಿಷ್ಣು ಸಹಸ್ರನಾಮ ಪಠಣ ಮಾಡಿ. 

ಮಕರ(Capricorn): ಕುಟುಂಬಕ್ಕಾಗಿ ಎಷ್ಟು ಶ್ರಮಿಸಿದರೂ ಅದನ್ನು ಯಾರೂ ಗುರುತಿಸುತ್ತಿಲ್ಲ ಎಂಬ ನೋವು ಕಾಡಬಹುದು. ಹೂಡಿಕೆಗಳು ಫಲ ನೀಡಲಿವೆ. ಕೋರ್ಟ್ ವ್ಯಾಜ್ಯಗಳು ಮುಂದೂಡಲಿವೆ. ಉದ್ಯೋಗಿಗಳಿಗೆ ಅಂದುಕೊಂಡಷ್ಟು ಫಲ ಸಿಗದೆ ನಿರಾಸೆಯಾಗುವುದು. ರಾಮ ಸ್ಮರಣೆ ಮಾಡಿ. 

ಕುಂಭ(Aquarius): ಕಮಿಶನ್ ಆಧಾರದ ಮೇಲೆ ಕೆಲಸ ಮಾಡುವವರಿಗೆ ಉತ್ತಮ ಆದಾಯ ಸಿಗಲಿದೆ. ಷೇರು ವ್ಯವಹಾರಗಳಲ್ಲಿ ಧನಲಾಭವಿದೆ. ಬೆನ್ನುನೋವು, ಕೈ ನೋವು ಕಾಡಬಹುದು. ನರಸಂಬಂದಿ ಸಮಸ್ಯೆಗಳು ಹೆಚ್ಚಲಿವೆ. ಸೂಕ್ತ ಔಷಧೋಪಚಾರ ಮಾಡಿಕೊಳ್ಳಿ. ರಾಘವೇಂದ್ರ ಶತನಾಮಾವಳಿ ಹೇಳಿಕೊಳ್ಳಿ. 

ಮೀನ(Pisces): ನಿಮ್ಮ ಉತ್ತಮ ಕೆಲಸಗಳಿಗೆ ಸಾಮಾಜಿಕವಾಗಿ ಮನ್ನಣೆ ದೊರೆಯಲಿದೆ. ವೈವಾಹಿಕವಾಗಿ ನೆಮ್ಮದಿ ಕಳೆದು ಹೋಗಬಹುದು. ಎಷ್ಟು ಒದ್ದಾಡಿದರೂ ಆದಾಯ ಸಾಲುತ್ತಿಲ್ಲ ಎನಿಸಬಹುದು. ಸಾಲ ಮಾಡಲು ಹೋಗಬೇಡಿ. ಲಕ್ಷ್ಮೀ ವೆಂಕಟೇಶ್ವರ ಸ್ಮರಣೆ ಮಾಡಿ. 

PREV
Read more Articles on
click me!

Recommended Stories

ಇಂದು ಬುಧವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಮಂಗಳವಾರ ಈ ರಾಶಿಗೆ ಶುಭ, ಅದೃಷ್ಟ