Daily Horoscope: ವೃಷಭಕ್ಕೆ ಆದಾಯ ಹೆಚ್ಚಳ, ಮೇಷಕ್ಕೆ ಒತ್ತಡ

Published : Jan 21, 2022, 07:04 AM IST
Daily Horoscope: ವೃಷಭಕ್ಕೆ ಆದಾಯ ಹೆಚ್ಚಳ, ಮೇಷಕ್ಕೆ ಒತ್ತಡ

ಸಾರಾಂಶ

21 ಜನವರಿ 2022, ಶುಕ್ರವಾರದ ಭವಿಷ್ಯ ಹೇಗಿದೆ? ಯಾವ ರಾಶಿಗೆ ಶುಭ ಫಲವಿದೆ? ತುಲಾ ರಾಶಿಗೆ ಪಾಲುದಾರಿಕೆಯಲ್ಲಿ ಭಿನ್ನಾಭಿಪ್ರಾಯ, ಕಟಕಕ್ಕೆ ಪಾಲುದಾರಿಕೆಯಿಂದ ಲಾಭ

ಮೇಷ(Aries): ಸ್ನೇಹಿತವರ್ಗದವರ ಆಮಿಷಗಳಿಗೆ ಬಲಿಯಾಗಿ ಬೇಡದ ಚಟ ರೂಢಿಸಿಕೊಳ್ಳಬೇಡಿ. ಎಣಿಸಿದ ಕಾರ್ಯ ವಿಧಾನಗಳಿಂದ ಹಣದ ಆದಾಯ ಹೆಚ್ಚಲಿದೆ. ಮನೆಯ ಕೆಲವು ಸದಸ್ಯರು ಇಂದು ನಿಮ್ಮನ್ನು ತಪ್ಪಾಗಿ ಗ್ರಹಿಸಬಹುದು. ಅತಿಯಾದ ಒತ್ತಡದಿಂದಾಗಿ, ನಿಮ್ಮ ಆರೋಗ್ಯ ಕ್ಷೀಣಿಸಬಹುದು. ಧನ್ವಂತರಿ ಸ್ಮರಣೆ ಮಾಡಿ. 

ವೃಷಭ(Taurus): ಶೇರು, ಇನ್ಶೂರೆನ್ಸ್ ಮುಂತಾದ ಹಣ ಉಳಿತಾಯ ಹಾಗೂ ಹಣದ ಸಂಬಂಧಿ ಯೋಜನೆಗಳು ಲಾಭ ತರಲಿವೆ. ನಿರೀಕ್ಷೆಗಳನ್ನು ಕಡಿಮೆ ಮಾಡಿಕೊಂಡರೆ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಅವಿವಾಹಿತರಿಗೆ ಶುಭ ಸುದ್ಧಿ ಇದೆ. ಮಹಾಲಕ್ಷ್ಮೀ ಆರಾಧನೆ ಮಾಡಿ. 

ಮಿಥುನ(Gemini): ಸದಾ ಮತ್ತೊಬ್ಬರ  ಸಖ್ಯ ಬಯಸುವ ನಿಮಗೆ ಒಂಟಿತನ ಕಾಡಬಹುದು. ಆಧ್ಯಾತ್ಮದ ಕಡೆ ಆಸಕ್ತಿ ಹೆಚ್ಚಬಹುದು. ಹವ್ಯಾಸಗಳಿಗೆ ಸಮಯ ಮಾಡಿಕೊಳ್ಳಿ. ಉದ್ಯೋಗದಲ್ಲಿ ಶ್ರಮ ಕಡಿಮೆ ಇರಲಿದೆ. ವಿದ್ಯಾರ್ಥಿಗಳಿಗೆ ಸಾಧಾರಣ ದಿನ. ಶಾರದಾ ದೇವಿ ಪ್ರಾರ್ಥನೆ ಮಾಡಿ.

ಕಟಕ(Cancer): ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವ ಜನರಿಗೆ ಈ ದಿನ ತುಂಬಾ ಶುಭವಾಗಲಿದೆ. ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದರೆ ನೀವು ಬಯಸಿದ್ದೆಲ್ಲ ತಾನಾಗೇ ದೊರಕುತ್ತದೆ. ವ್ಯಾಪಾರ- ವ್ಯವಹಾರದಲ್ಲಿ ಅಭಿವೃದ್ಧಿದಾಯಕ ಆದಾಯ. ಲಲಿತಾ ಸಹಸ್ರನಾಮ ಪಠಣ ಮಾಡಿ. 

ಸಿಂಹ(Leo): ಬಹಳ ಹಿಂದೆ ನೀವು ತೆಗೆದುಕೊಂಡ ದೊಡ್ಡ ನಿರ್ಧಾರವೊಂದು ಬದಲಾಗಲಿದೆ. ಇದೂ ತಾತ್ಕಾಲಿಕವಾಗಿರಲಿದೆ. ಮನಸ್ಸು ಚಂಚಲವಾಗಿದ್ದಾಗ ಯಾವುದನ್ನೂ ನಿರ್ಧರಿಸಬೇಡಿ. ಸಂಗಾತಿಯ ಸಹಕಾರ ಸಿಕ್ಕು ಮನಸ್ಸು ಸಂತೋಷದಿಂದಿರಲಿದೆ. ಪ್ರಾಣಿಗಳಿಗೆ ಆಹಾರ ನೀಡಿ. 

Vastu Tips: ಕನ್ನಡಿಯಿಂದ ಮನೆಯ ಆಸ್ತಿ ಆರೋಗ್ಯ ಹೆಚ್ಚಿಸುವುದು ಹೀಗೆ..

ಕನ್ಯಾ(Virgo): ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳ ಕಿರಿಕಿರಿ ಇರಲಿದೆ. ನೀವು ಮಾಡಿದ ಕೆಲಸದಲ್ಲೆಲ್ಲ ತಪ್ಪು ಹುಡುಕಬಹುದು. ಮನೆಯಲ್ಲಿ ಪೋಷಕರು, ಸಂಗಾತಿ, ಮಕ್ಕಳ ಸಹಕಾರ ಚೆನ್ನಾಗಿದೆ. ಚಿಕ್ಕ ಪುಟ್ಟ ಪ್ರಯಾಣಗಳಿಂದ ಕೆಲಸಗಳು ಕೈಗೂಡಬಹುದು. ಇರುವೆಗಳಿಗೆ ಸಿಹಿ ತಿನ್ನಿಸಿ. 

ತುಲಾ(Libra): ಕೆಲವು ವಿಚಾರಗಳಲ್ಲಿ ಪಾಲುದಾರರೊಂದಿಗೆ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆಯಿದೆ. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳೊಂದಿಗೆ ರಾಜತಾಂತ್ರಿಕವಾಗಿ ವ್ಯವಹರಿಸಿ. ಆರೋಗ್ಯದ ವಿಚಾರದಲ್ಲಿ ಅಸಡ್ಡೆ ಬೇಡ. ಧೀರ್ಘಕಾಲದ ಆರೋಗ್ಯ ಸಮಸ್ಯೆಗಳು ಕಂಗಾಲಾಗಿಸಲಿವೆ. ಮನೆ ದೇವರ ಪ್ರಾರ್ಥನೆ ಮಾಡಿ. 

Children And Zodiacs: ರಾಶಿ ಪ್ರಕಾರ ನಿಮ್ಮ ಮಗುವಿನ ಅಗತ್ಯಗಳೇನು ತಿಳಿಯಿರಿ

ವೃಶ್ಚಿಕ(Scorpio): ದುಡುಕು ವರ್ತನೆಯಿಂದ ಧನ ನಷ್ಟ. ಸ್ಥಿರಾಸ್ತಿ ವಿಚಾರದಲ್ಲಿ ವಂಚನೆ ಸಾಧ್ಯತೆ. ವಿವೇಚನಾ ಶಕ್ತಿ ಕಳೆದುಕೊಳ್ಳಬೇಡಿ. ಮನೆ ಹಿರಿಯರಿಂದ ಕಿರಿಕಿರಿ ಹೆಚ್ಚಿ ಬೇಸತ್ತು ಹೋಗುವಿರಿ. ನಿರುದ್ಯೋಗಿಗಳು ಹೆಚ್ಚು ಪ್ರಯತ್ನ ಹಾಕಿದರೆ ಕೆಲಸ ಸಿಕ್ಕೀತು. ಕುಲ ದೇವರಿಗೆ ತುಪ್ಪದ ದೀಪ ಹಚ್ಚಿ. 

ಧನುಸ್ಸು(Sagittarius): ಕೆಲಸದಿಂದ ಕೊಂಚ ವಿಶ್ರಾಂತಿ ಸಿಗಲಿದೆ. ಮಕ್ಕಳಿಗೆ ಹೆಚ್ಚು ಸಮಯ ವ್ಯಯಿಸುವಿರಿ. ಸಂಗಾತಿಯ ಆರೋಗ್ಯದ ಚೇತರಿಕೆ ನೆಮ್ಮದಿ ತರುವುದು. ಮನೆಗಾಗಿ ಹೊಸ ವಸ್ತುಗಳನ್ನು ಖರೀದಿಸುವಿರಿ. ಶಿವ ಶಕ್ತಿಯರ ಪ್ರಾರ್ಥನೆ ಮಾಡಿ. 

ಮಕರ(Capricorn): ನಿಮಗೆ ಸಂಬಂಧಿಸಿದ ವಸ್ತುಗಳ ಸ್ಥಳಾಂತರ ನಡೆಯಲಿದೆ. ಎಷ್ಟೇ ನಂಬಿಕೆಯ ಜನರಾದರೂ ಗುಟ್ಟುಗಳನ್ನು ಬಿಟ್ಟು ಕೊಡಬೇಡಿ. ಕೋರ್ಟು ಕಚೇರಿ ಕೆಲಸಗಳು ಸುಗಮವಾಗಿ ಸಾಗುತ್ತವೆ. ಮನೆಯಲ್ಲಿ ಧಾರ್ಮಿಕ ಕಾರ್ಯಗಳು ಜರುಗಬಹುದು. ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ. 

ಕುಂಭ(Aquarius): ಪ್ರಯತ್ನಬಲದಿಂದ ಯೋಜಿಸಿದ ಕೆಲಸ ಕಾರ್ಯಗಳಲ್ಲಿ ಯಶಸ್ಸು ತೋರಿ ಬರುವುದು. ವಿವಾಹಿತರಿಗೆ ನೂತನ ಸಂತಾನ ಸೌಖ್ಯ ತೋರಿಬರುವುದು.  ಆಸ್ತಿಯಲ್ಲಿ ಪಾಲು ಸಿಗಬಹುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಇರಲಿದೆ. ಮಹಾಲಕ್ಷ್ಮೀ ಆರಾಧನೆ ಮಾಡಿ. 

ಮೀನ(Pisces): ವೃತ್ತಿ ಬದುಕಿನಲ್ಲಿ ಬೆಳವಣಿಗೆಗೆ ಸಾಕಷ್ಟು ಅವಕಾಶಗಳು ಎದುರಾಗಲಿವೆ. ಅವುಗಳ ಸದ್ಬಳಕೆ ಮಾಡಿಕೊಳ್ಳಿ. ಪ್ರೀತಿ ಪ್ರೇಮ ವ್ಯವಹಾರಗಳಿಗೆ ಮನೆಯವರ ಬೆಂಬಲ ದೊರೆತು ಸಂತಸ ಹೆಚ್ಚುವುದು. ಮನೆಯ ಸದಸ್ಯರ ಅನಾರೋಗ್ಯ ಆತಂಕ ತರುವುದು. ದುರ್ಗೆಯನ್ನು ಸ್ಮರಿಸಿ. 

PREV
Read more Articles on
click me!

Recommended Stories

ಇಂದು ಶುಕ್ರವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಗುರುವಾರ ಈ ರಾಶಿಗೆ ಶುಭ, ಅದೃಷ್ಟ