Daily Horoscope: ಈ ರಾಶಿಯ ಹಣಕಾಸಿನ ವಂಚನೆ ಬೆಳಕಿಗೆ

Published : Jan 20, 2022, 07:15 AM IST
Daily Horoscope: ಈ ರಾಶಿಯ ಹಣಕಾಸಿನ ವಂಚನೆ ಬೆಳಕಿಗೆ

ಸಾರಾಂಶ

20 ಜನವರಿ 2022, ಗುರುವಾರದ ಭವಿಷ್ಯ ಹೇಗಿದೆ? ಯಾವ ರಾಶಿಗೆ ಶುಭ ಫಲವಿದೆ? ಕನ್ಯಾ ರಾಶಿಗೆ ಧನ ಲಾಭ, ತುಲಾಗೆ ಹಿತಶತ್ರುಗಳ ಕಾಟ

ಮೇಷ(Aries): ನಿಮ್ಮ ಮಾತಿನಿಂದ ಇತರರಿಗೆ ಬೇಜಾರಾಗಬಹುದು. ಹೇಳುವುದನ್ನು ನಯವಾಗೂ ಹೇಳಬಹುದು ಎಂಬುದು ನಿಮ್ಮ ಗಮನದಲ್ಲಿರಲಿ. ಭೂ ವ್ಯವಹಾರಗಳಿಂದ ಲಾಭವಿದೆ. ಇದ್ದಕ್ಕಿದ್ದಂತೆ ಪ್ರಯಾಣ ಯೋಗವೂ ಒದಗಿ ಬರಬಹುದು. ವಿಷ್ಣು ಸಹಸ್ರನಾಮ ಹೇಳಿಕೊಳ್ಳಿ. 

ವೃಷಭ(Taurus): ಖರ್ಚುಗಳು ಹೆಚ್ಚಿ ಚಿಂತೆಯಾಗಲಿದೆ. ಆರೋಗ್ಯ ಯತಾಸ್ಥಿತಿಯಲ್ಲಿರುವುದು. ಸ್ತ್ರೀಯರನ್ನು ಅವಮಾನಿಸಿ ಪಶ್ಚಾತ್ತಾಪ ಪಡುವ ಸ್ಥಿತಿ ಬರಬಹುದು. ಯಾರೊಡನೆಯೂ ವೃಥಾ ವಾದ, ಜಗಳ ಬೇಡ. ಲಲಿತಾ ಸಹಸ್ರನಾಮ ಶ್ರವಣ ಮಾಡಿ. 

ಮಿಥುನ(Gemini): ಆರೋಗ್ಯದಲ್ಲಿ ಸುಧಾರಣೆ ಕಾಣಲಿದೆ. ಕಾಡುತ್ತಿರುವ ಒತ್ತಡಗಳಿಂದ ಮುಕ್ತಿಯಿದೆ. ಹೊಸ ವ್ಯವಹಾರಗಳಿಗೆ ಕೈ ಹಾಕುವ ಮುನ್ನ ಕೂಲಂಕುಷವಾಗಿ ಅದರ ಪರಿಶೀಲನೆ ಮಾಡಿ. ಮಕ್ಕಳ ಮನೋವೇದನೆಗಳಿಗೆ ಕಿವಿ ಕೊಡಿ. ಕೃಷ್ಣನಿಗೆ ತುಳಸಿ ಸಮರ್ಪಣೆ ಮಾಡಿ. 

ಕಟಕ(Cancer): ವೃತ್ತಿರಂಗದಲ್ಲಿ ವಂಚನೆಗೆ ಆಸ್ಪದವಿದೆ. ಕೈ ಕೆಳಗಿನವರನ್ನು ಚೆನ್ನಾಗಿಟ್ಟುಕೊಳ್ಳಿ. ನ್ಯಾಯ ತಕರಾರುಗಳಲ್ಲಿ ವಿಳಂಬ. ಗೃಹಿಣಿಯರಿಗೆ ಬಿಡುವಿಲ್ಲದ ಕಾರ್ಯದಿಂದ ದೇಹಾಯಾಸ ಹೆಚ್ಚಲಿದೆ. ರೈತರಿಗೆ ಲಾಭವಿದೆ. ರಾಘವೇಂದ್ರ ಶತನಾಮಾವಳಿ ಹೇಳಿ. 

ಸಿಂಹ(Leo): ಸಂಗಾತಿ ಹಾಗೂ ಮಕ್ಕಳ ಸಹಕಾರವಿದ್ದರೂ ಉದ್ವೇಗಕ್ಕೊಳಗಾಗುವ ಪರಿಸ್ಥಿತಿಗಳು ಎದುರಾಗಬಹುದು. ಹಣಕಾಸಿನ ವಿಚಾರದ ವಂಚನೆ ಬೆಳಕಿಗೆ ಬರಬಹುದು. ವಿದ್ಯಾರ್ಥಿಗಳಿಗೆ ಏಕಾಗ್ರತೆಗೆ ಭಂಗ ಉಂಟಾಗುವುದು. ರಾಮ ನಾಮ ಜಪ ಮಾಡಿ. 

ಕನ್ಯಾ(Virgo): ಬ್ಯಾಂಕ್ ವ್ಯವಹಾರ ಹಾಗೂ ಶೇರು ವ್ಯವಹಾರಗಳಲ್ಲಿ ಲಾಭವಿರಲಿದೆ. ಮನೆಯಲ್ಲಿ ಮಂಗಲ ಕಾರ್ಯಕ್ಕೆ ನಾಂದಿ ಹಾಡಲಿದ್ದೀರಿ. ಶುಭ ಕಾರ್ಯ ನಿಮಿತ್ತ ದೂರ ಪ್ರಯಾಣ ಕೈಗೊಳ್ಳಬೇಕಾಗಬಹುದು. ಸಂಧಿ ವಾತ, ಕಫ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ರಾಘವೇಂದ್ರ ಸ್ವಾಮಿ ಸ್ಮರಣೆ ಮಾಡಿ. 

ತುಲಾ(Libra): ವೃತ್ತಿಯಲ್ಲಿ ಸಹೋದ್ಯೋಗಿಗಳ ಹೊಟ್ಟೆಕಿಚ್ಚು, ಅಪವಾದ ಭೀತಿ, ಗಾಸಿಪ್ ಹೆಚ್ಚಲಿದೆ. ಸರಕಾರಿ ಕೆಲಸಗಳಿಗೆ ತಡೆಗಳು ಎದುರಾಗಿ ಮನಸ್ಸಿಗೆ ಕಿರಿಕಿರಿ ಹೆಚ್ಚಲಿದೆ. ಬ್ಯಾಂಕ್ ಕೆಲಸಗಳು ಹಿಂದುಳಿಯಲಿವೆ. ಅಧಿಕಾರಿ ವರ್ಗಕ್ಕೆ ಸ್ಥಾನ ಬದಲಾವಣೆ ಆಗಬಹುದು. ಗಣಪತಿಗೆ ಪ್ರಾರ್ಥನೆ ಮಾಡಿ. 

ವೃಶ್ಚಿಕ(Scorpio): ಪ್ರಯತ್ನಕ್ಕೆ ಮೀರಿದ ಫಲವಿರಲಿದೆ. ಪ್ರಗತಿ ಪಥದಲ್ಲಿ ಸಾಗುವಿರಿ. ನಿರುದ್ಯೋಗಿಗಳು, ಅವಿವಾಹಿತರು, ಉನ್ನತ ಶಿಕ್ಷಣಕ್ಕೆ ಪರೀಕ್ಷೆಗೆ ಸಿದ್ಧರಾಗುತ್ತಿರುವವರು ಇಂದು ಹೆಚ್ಚಿನ ಪ್ರಯತ್ನ ಹಾಕಿ ನೋಡಬಹುದು. ವ್ಯವಸಾಯ ಹಾಗೂ ರಾಜಕೀಯ ಜೀವನದಲ್ಲಿ ಏರುಪೇರಿಲ್ಲ. ರಾಮ ಸ್ಮರಣೆ ಮಾಡಿ. 

Numerology Prediction: ಪಾದಾಂಕ ಮೂರು, ಎದುರಿಸಬೇಕು ಹಲವು ಏರುಪೇರು

ಧನುಸ್ಸು(Sagittarius): ಹಿರಿಯರೊಡನೆ ಮನಸ್ತಾಪ ಹೆಚ್ಚಿ ಮನಸ್ಸು ಕದಡುವುದು. ಮನೆಯಲ್ಲಿ ಧಾರ್ಮಿಕ ಕಾರ್ಯಗಳು ನಡೆಯಬಹುದು. ಮಕ್ಕಳ ಶೈಕ್ಷಣಿಕ ಪ್ರಗತಿ ಸಮಾಧಾನ ತರಲಿದೆ. ಪ್ರಯಾಣದಿಂದ ಆದಾಯ ಹೆಚ್ಚಲಿದೆ. ಕುಲದೇವತಾ ಸ್ಮರಣೆ ಮಾಡಿ. 

ಮಕರ(Capricorn): ಕೈಗೊಂಡ ದೊಡ್ಡ ಯೋಜನೆಗಳಿಗೆ ದೈವಾನುಗ್ರಹ ಕೂಡಿ ಬರಲಿದೆ. ಹಿರಿಯರ ಸಹಕಾರವೂ ದೊರೆಯಲಿದೆ. ಶತ್ರುಪೀಡೆ ಕಡಿಮೆ ಇದ್ದು, ಮಾನಸಿಕ ನೆಮ್ಮದಿ ಹೆಚ್ಚಲಿದೆ. ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಿಸಿ. ಮನೆ ದೇವರನ್ನು ಸ್ಮರಿಸಿ. 

Empathetic Zodiacs: ಈ ನಾಲ್ಕು ರಾಶಿಯ ಸ್ನೇಹಿತರಿದ್ದರೆ ನೀವೇ ಅದೃಷ್ಟವಂತರು!

ಕುಂಭ(Aquarius): ಮನೆಗೆ ಹೊಸ ಪೀಠೋಪಕರಣಗಳ ಖರೀದಿ ಮಾಡಲಿರುವಿರಿ. ಕಚೇರಿಯಲ್ಲಿ ಜವಾಬ್ದಾರಿಗಳು ಹೆಚ್ಚಲಿವೆ. ಬೇರೆಯವರ ಅಸೂಯೆಯ ಮಾತುಗಳನ್ನು ಕಡೆಗಣಿಸಿ. ಅವಿವಾಹಿತರಿಗೆ ವಿವಾಹಯೋಗ ಕೂಡಿಬಂದೀತು. ಶಿವ ಶಕ್ತಿಯರ ಸ್ಮರಣೆ ಮಾಡಿ. 

ಮೀನ(Pisces): ನಿಮ್ಮ ಮನೆಯ ಸಮಸ್ಯೆಗಳು ಮೂರನೆಯವರ ಮೂಗು ತೂರಿಸುವಿಕೆಯಿಂದ ಹೆಚ್ಚಾದಾವು. ಅವರನ್ನು ದೂರವಿಡುವ ಕಡೆ ಗಮನ ಕೊಡಿ. ವಾಹನ ಸಂಚಾರಗಳಲ್ಲಿ ಎಚ್ಚರಿಕೆ ಅಗತ್ಯ. ಸಾಮಾಜಿಕವಾಗಿ ಗೌರವ ದೊರೆಯಲಿದೆ. ಭಗವದ್ಗೀತೆ ಶ್ರವಣ ಮಾಡಿ. 

PREV
Read more Articles on
click me!

Recommended Stories

ಇಂದು ಶುಕ್ರವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಗುರುವಾರ ಈ ರಾಶಿಗೆ ಶುಭ, ಅದೃಷ್ಟ