Daily Horoscope: ಧನಸ್ಸಿನ ವೈವಾಹಿಕ ಸಮಸ್ಯೆಗಳಿಗೆ ತಾತ್ಕಾಲಿಕ ಅಂತ್ಯ

Published : Jan 10, 2022, 07:25 AM IST
Daily Horoscope: ಧನಸ್ಸಿನ ವೈವಾಹಿಕ ಸಮಸ್ಯೆಗಳಿಗೆ ತಾತ್ಕಾಲಿಕ ಅಂತ್ಯ

ಸಾರಾಂಶ

10 ಜನವರಿ 2022, ಸೋಮವಾರದ ಭವಿಷ್ಯ ಹೇಗಿದೆ? ಯಾವ ರಾಶಿಗೆ ಶುಭ ಫಲವಿದೆ? ಮೇಷದ ಕೆಲಸ ಅರ್ಧಕ್ಕೇ ನಿಂತು ಆತಂಕ, ಉಳಿದ ರಾಶಿಗಳ ಫಲವೇನು?

ಮೇಷ(Aries): ಆರಂಭವಾದ ಕೆಲಸವೊಂದು ಅರ್ಧಕ್ಕೇ ನಿಲ್ಲಲಿದೆ. ಮಕ್ಕಳ ಕಲಿಕೆ ವಿಷಯದಲ್ಲಿ ಆತಂಕ ಹೆಚ್ಚಬಹುದು. ಬೃಹತ್ ಕೈಗಾರಿಕೆ, ರಿಯಲ್ ಎಸ್ಟೇಟ್ ಮುಂತಾದ ಉದ್ಯಮದಲ್ಲಿರುವವರು ನಷ್ಟದಿಂದ ಕಂಗಾಲಾಗಬಹುದು. ಅವಿವಾಹಿತರಿಗೆ ನಿರಾಶೆ. ಶಿವ ಶಕ್ತಿಯರ ಪ್ರಾರ್ಥನೆ ಮಾಡಿ. 

ವೃಷಭ(Taurus): ಪ್ರಯಾಣಗಳಲ್ಲಿ ಅಡೆತಡೆಗಳು ಉಂಟಾಗಬಹುದು. ವೃಥಾ ಖರ್ಚು ವೆಚ್ಚಗಳು ಹೆಚ್ಚಲಿವೆ. ಉದ್ಯೋಗ ಸ್ಥಳದಲ್ಲಿ ಸಹೋದ್ಯೋಗಿಗಳ ಕಿರಿಕಿರಿಯಿಂದ ಬೇಸತ್ತು ಹೋಗುವಿರಿ. ವ್ಯಾಪಾರಿಗಳಿಗೆ ಪ್ರತಿಸ್ಪರ್ಧಿಗಳಿಂದ ಆರ್ಥಿಕ ಹೊಡೆತ ಹೆಚ್ಚಲಿದೆ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ. 

ಮಿಥುನ(Gemini): ನೀವು ಮನೆಯವರ ಬಗ್ಗೆ ತೋರುತ್ತಿರುವ ಅಸಡ್ಡೆಯ ಪರಿಣಾಮಗಳನ್ನು ಎದುರಿಸುವಿರಿ. ಗಡಿಬಿಡಿಯಲ್ಲಿ ಕೆಲಸ ಮುಗಿಸಲು ಹೋಗಿ ಎಡವಟ್ಟಾಗಬಹುದು. ರಾಜಕೀಯ ರಂಗದಲ್ಲಿರುವವರಿಗೆ ಹಿರಿಯರ ಪಿತೂರಿ ಅರಿವಾಗಿ ಅಸಮಾಧಾನ ಆಗಬಹುದು. ನವಗ್ರಹ ಶ್ಲೋಕ ಹೇಳಿಕೊಳ್ಳಿ. 

ಕಟಕ(Cancer): ಸ್ಥಿರಾಸ್ಥಿ ಇಲ್ಲವೇ ವಾಹನ ಮೇಲೆ ಸಾಲ ಮಾಡಿ ಚಿಂತಿತರಾಗುವಿರಿ. ರೋಗಗಳ ಕುರಿತ ಆತಂಕ ಹೆಚ್ಚಲಿದೆ. ಪಾಲುದಾರಿಕೆ ಕೆಲಸಗಳಲ್ಲಿ ಮನಸ್ತಾಪ ಎದುರಾಗಬಹುದು. ತಂದೆಯ ಸಹಾಯ ನಿರೀಕ್ಷೆ ಮಾಡಬಹುದು. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ಇರುವೆಗಳಿಗೆ ಸಿಹಿ ತಿನ್ನಿಸಿ ಗಣಪತಿಯಲ್ಲಿ ಪ್ರಾರ್ಥಿಸಿ. 

Personality Traits: ಈ 4 ರಾಶಿಯವರು ತುಂಬಾ ಎಮೋಷನಲ್ ..!

ಸಿಂಹ(Leo): ಸಂಗಾತಿಯ ನಡೆ ಮನಸ್ಸಿಗೆ ಹಿತ ತರಲಿದೆ. ಉದ್ಯೋಗದಲ್ಲಿ ಕೆಲಸಗಳು ಹೆಚ್ಚಿ ಸಮಯ ಸಾಲದೆ ಹೋಗಬಹುದು. ಸಂಜೆಯ ವೇಳೆಗೆ ತಲೆಶೂಲೆ, ಬೆನ್ನುನೋವಿನಂಥ ಕಿರಿಕಿರಿಗಳು ಬಾಧಿಸಲಿವೆ. ಮಕ್ಕಳ ಪ್ರಗತಿ ಕಂಡು ಸಮಾಧಾನವಾಗುವುದು. ಶಿವ ಶತನಾಮಾವಳಿ ಹೇಳಿಕೊಳ್ಳಿ. 

ಕನ್ಯಾ(Virgo): ಆರೋಗ್ಯ ಸಂಬಂಧಿ ಖರ್ಚು ವೆಚ್ಚಗಳು ಹೆಚ್ಚಲಿವೆ. ಆಸ್ಪತ್ರೆಗೆ ಅಲೆದಾಡಲಿದ್ದೀರಿ. ಇನ್ಶೂರೆನ್ಸ್‌ಗಳು ಸಹಾಯವಾಗಲಿವೆ. ಮಾತು ನಯವಾಗಿರಲಿ. ಕೆಲಸದಲ್ಲಿ ತಾಳ್ಮೆಯಿರಲಿ. ದಾಂಪತ್ಯದಲ್ಲಿ ಜಗಳಗಳು ಹೆಚ್ಚಿ ನಿದ್ದೆ ಕೆಡಬೇಕಾಗಬಹುದು. ಧನ್ವಂತರಿ ಸ್ಮರಣೆ ಮಾಡಿ. 

ತುಲಾ(Libra): ಅಕ್ಕಪಕ್ಕದ ಮನೆಯವರಿಂದ ಕೆಲ ವಿಷಯಗಳಲ್ಲಿ ಕಿರಿಕಿರಿ ಹೆಚ್ಚಿ ಜಗಳಕ್ಕೆಡೆ ಮಾಡಿಕೊಡಬಹುದು. ಆದಷ್ಟು ಮಾತಿನ ಮೇಲೆ ಹಿಡಿತವಿರಲಿ. ಸಾಲ ಕೊಟ್ಟು ಕೈ ಸುಟ್ಟುಕೊಳ್ಳಲಿರುವಿರಿ. ಶೇರು ವ್ಯವಹಾರಗಳು ನಷ್ಟ ಕಾಣಲಿವೆ. ಹೊಸ ಮನೆಯ ಕೆಲಸ ಅರ್ಧಕ್ಕೇ ನಿಲ್ಲಬಹುದು. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ. 

Weekly Horoscope: ಕುಂಭ ರಾಶಿಗೆ ಈ ವಾರ ಅನಿರೀಕ್ಷಿತ ಧನ ಲಾಭ

ವೃಶ್ಚಿಕ(Scorpio): ನಿಮ್ಮ ಅತಿಯಾದ ಆತ್ಮಪ್ರತಿಷ್ಠೆ ಬಿಟ್ಟರೆ ಮಾತ್ರ ಪ್ರಗತಿ ಸಾಧ್ಯ. ಇದರಿಂದ ಜನರನ್ನು ಕಳೆದುಕೊಳ್ಳುವ ಜೊತೆಗೆ ಅವಕಾಶಗಳನ್ನೂ ಕೈ ಚೆಲ್ಲುವಿರಿ. ಆರ್ಥಿಕ ಲಾಭಗಳಿವೆ. ಪ್ರತಿಭಾ ರಂಗದಲ್ಲಿರುವವರು ಪ್ರಯತ್ನಿಸಿದರೆ ಉತ್ತಮ ಅವಕಾಶ ಸಿಗಲಿದೆ. ನಾಗರ ಕಲ್ಲಿಗೆ ಸುತ್ತು ಬಂದು ಪ್ರಾರ್ಥಿಸಿ. 

ಧನುಸ್ಸು(Sagittarius): ಸಂಗಾತಿಯ ವಿಚಾರದಲ್ಲಿ ನೀವು ತೋರುತ್ತಿರುವ ತಾಳ್ಮೆ ಮೆಚ್ಚುವಂಥದ್ದೇ. ಅದರಿಂದ ಬದಲಾವಣೆಗಳನ್ನು ಕಾಣಬಹುದು. ವಿವಾಹ ಜೀವನ ಉತ್ತಮಗೊಳ್ಳಲಿದೆ. ಮಕ್ಕಳ ಮಾನಸಿಕ ಆರೋಗ್ಯ ವಿಚಾರದಲ್ಲಿ ಹೆಚ್ಚಿನ ಕಾಳಜಿ ಅಗತ್ಯ. ಶಿವ ಪಾರ್ವತಿಯ ಪೂಜೆ ಮಾಡಿ. 

ಮಕರ(Capricorn): ಹೊಸ ಯೋಚನೆಗಳನ್ನು ಮಾಡದೆ ಹೊಸದೊಂದು ಜೀವನದಲ್ಲಿ ಜರುಗಬೇಕೆಂದು ಬಯಸಿದರೆ ಏನೊಂದು ಸಿಗುವುದಿಲ್ಲ. ನೀವೇ ತಲೆ ಖರ್ಚು ಮಾಡಬೇಕು. ವಿದ್ಯಾರ್ಥಿಗಳಿಗೆ ಓದಿನಲ್ಲಿ ಏಕಾಗ್ರತೆ ಇರಲಿದೆ. ಸ್ತ್ರೀಯರಿಗೆ ಗೃಹಕೃತ್ಯಗಳಿಂದ ದೇಹಾಯಾಸ. ಕುಲದೇವರಿಗೆ ತುಪ್ಪದ ದೀಪ ಹಚ್ಚಿ. 

Makar Sankranti : ಸುಗ್ಗಿ ಹಬ್ಬದಂದು ಖಿಚಡಿ ಯಾಕೆ ಮಾಡ್ತಾರೆ?

ಕುಂಭ(Aquarius): ನಿರುದ್ಯೋಗಿಗಳಿಗೆ ಅವಕಾಶಗಳು ಬರಲಿವೆ. ಅದನ್ನು ಸಂಪೂರ್ಣ ಸದುಪಯೋಗ ಪಡಿಸಿಕೊಳ್ಳಿ. ವ್ಯಾಪಾರಿಗಳಿಗೆ ಲಾಭ ಹೆಚ್ಚಲಿದೆ. ಶೇರು ವ್ಯವಹಾರಗಳಲ್ಲಿ ಅಲ್ಪ ಲಾಭವಿರಲಿದೆ. ಕೋರ್ಟ್ ವ್ಯಾಜ್ಯಗಳಲ್ಲಿ ಗೆಲುವು ದೊರಕಬಹುದು. ಧನ ನಷ್ಟ. ಬಡವರಿಗೆ ಹೊಟ್ಟೆ ತುಂಬಿಸಿ.

ಮೀನ(Pisces): ಕಚೇರಿಯಲ್ಲಿ ಜವಾಬ್ದಾರಿಗಳು ಹೆಚ್ಚಿದರೂ ಅದನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಿ ಸೈ ಎನಿಸಿಕೊಳ್ಳುವಿರಿ. ಕುಟುಂಬ ಸದಸ್ಯರ ಅನಾರೋಗ್ಯ ಆತಂಕ ತರಬಹುದು. ಗೃಹಕೃತ್ಯಗಳಲ್ಲಿ ಆಸಕ್ತಿ. ಹೊಸ ವಿಷಯಗಳ ಕಲಿಕೆ ಇರಲಿದೆ. ಮನೆ ದೇವರ ಸ್ಮರಣೆ ಮಾಡಿ. 
 

PREV
Read more Articles on
click me!

Recommended Stories

ಇಂದು ಶುಕ್ರವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಗುರುವಾರ ಈ ರಾಶಿಗೆ ಶುಭ, ಅದೃಷ್ಟ