Daily Horoscope: ಈ ರಾಶಿಯವರ ಪ್ರೇಮ ಜೀವನಕ್ಕೆ ಸಮಸ್ಯೆಯ ಮೇಲೆ ಸಮಸ್ಯೆ

By Suvarna News  |  First Published Jan 9, 2022, 5:10 AM IST

9 ಜನವರಿ 2022, ಭಾನುವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಮಿಥುನಕ್ಕೆ ಕಡಿವಾಣವಿಲ್ಲದ ಖರ್ಚಿನಿಂದ ಅಸಂತೋಷ


ಮೇಷ(Aries): ಎಲ್ಲವೂ ನಿಮ್ಮ ಮಾತಿನಂತೆಯೇ ನಡೆಯಬೇಕು ಎಂಬ ಹಟ ಬಿಡಿ. ಜೊತೆಗಿರುವವರ ಮಾತನ್ನೂ ಆಲಿಸುವ ಅಭ್ಯಾಸ ಮಾಡಿಕೊಳ್ಳಿ. ಇಲ್ಲದಿದ್ದಲ್ಲಿ ಹತ್ತಿರದ ಸಂಬಂಧ ದೂರಾಗಬಹುದು. ನಿಮ್ಮ ಮನೋಭಾವಕ್ಕೆ ಕುಟುಂಬವರ್ಗದಿಂದ ವಿರೋಧಗಳು ಕೇಳಿಬರಬಹುದು. ವಿಷ್ಣು ಸಹಸ್ರನಾಮ ಶ್ರವಣ ಮಾಡಿ.

ವೃಷಭ(Taurus): ಕಾಯುತ್ತಿರುವ ಯೋಜನೆಗಳು ಕೈ ತಪ್ಪಬಹುದು. ಕೆಲಸದಲ್ಲಿ ಪ್ರತಿಭೆಯನ್ನು ತೋರಿಸುವ ಅಗತ್ಯವಿದೆ. ಅದಕ್ಕಾಗಿ ಹೆಚ್ಚಿನ ಏಕಾಗ್ರತೆಯಿಂದ ಶ್ರಮ ಹಾಕಿ. ಅವಿವಾಹಿತರಿಗೆ ಮಾಂಗಲ್ಯಭಾಗ್ಯಕ್ಕೆ ಸಮಯ ಒದಗಿ ಬರುವುದು. ಕುಲದೇವರಿಗೆ ತುಪ್ಪದ ದೀಪ ಹಚ್ಚಿ.

Latest Videos

undefined

ಮಿಥುನ(Gemini): ವಿನಾ ಕಾರಣ ಇನ್ನೊಬ್ಬರನ್ನು ಚುಚ್ಚಿ ಮಾತಾಡಿ ನೋಯಿಸಬೇಡಿ. ನಿಮ್ಮ ಈ ಅಸ್ತ್ರ ನಿಮಗೇ ತಿರುಗುಬಾಣವಾಗಬಹುದು. ಕಡಿವಾಣವಿಲ್ಲದ ಖರ್ಚಿನಿಂದ ಮನಸ್ಸು ವ್ಯಾಕುಲಗೊಳ್ಳುವುದು.  ಮನರಂಜನೆಗಾಗಿ ಸಮಯ ವ್ಯಯಿಸುವಿರಿ. ಹಸುವಿಗೆ ಆಹಾರ ನೀಡಿ. 

ಕಟಕ(Cancer): ಪ್ರಬಲರ ಸಹಕಾರ ಸಿಕ್ಕು ಬಹಳ ಸಮಯದಿಂದ ಮುಂದೂಡಿಕೊಂಡು ಬಂದ ಕಾರ್ಯಗಳು ಸುಲಲಿತವಾಗಿ ನೆರವೇರುವುವು. ಹೊಸ ಆದಾಯದ ಮೂಲಗಳನ್ನು ಕಂಡುಕೊಳ್ಳಲಿರುವಿರಿ. ದೇವರ ವಿಚಾರಗಳಲ್ಲಿ ಹೆಚ್ಚಿನ ಆಸಕ್ತಿ. ಕುಟುಂಬಸ್ಥರೊಡನೆ ಸ್ನೇಹಮಯವಾಗಿ ದಿನ ಕಳೆಯುವಿರಿ. ಆದಿತ್ಯ ಹೃದಯ ಪಠಿಸಿ. 

Chakras And Strength: ರಾಶಿ ಪ್ರಕಾರ, ಯಾವ ಚಕ್ರ ನಿಮಗೆ ಬಲ ತಂದು ಕೊಡಲಿದೆ?

ಸಿಂಹ(Leo): ಬಂದದ್ದೆಲ್ಲ ಬರಲಿ, ಆ ದೇವರ ದಯೆಯೊಂದಿರಲಿ ಎಂದುಕೊಂಡು ಮುನ್ನಡಿ ಇಡಿ. ಜೀವನ ಸರಳವಾಗುವುದು. ಮಕ್ಕಳ ಸಮಸ್ಯೆ ಬಗೆಹರಿದು ನಿರಾಳವೆನಿಸುವುದು. ಸಾಮಾಜಿಕವಾಗಿ, ಧಾರ್ಮಿಕವಾಗಿ, ದಾನ-ಧರ್ಮಾದಿ ಸದ್ವಿನಿಯೋಗದಿಂದ ಹೆಚ್ಚುವ ನೆಮ್ಮದಿ. ಗಣಪತಿಗೆ ದರ್ಬೆ ಅರ್ಪಿಸಿ. 

ಕನ್ಯಾ(Virgo): ತೆಗೆದುಕೊಂಡ ಸಾಲ ಹಿಂದೆ ಕೊಡದಿರುವ ಯೋಚನೆಯೇ ಮುಳುವಾದೀತು. ಮೊದಲು ಅದನ್ನು ಹಿಂದೆ ಕೊಟ್ಟು ನಂತರ ನಿಮ್ಮ ಪ್ರಗತಿಯ ಯೋಜನೆಗಳನ್ನು ಮುಂದುವರಿಸಿ. ಆಸ್ತಿ ಸಂಬಂಧ ಸಂಘರ್ಷಗಳಿಂದ ಮನಸ್ಸಿಗೆ ಕಸಿವಿಸಿ. ಬಂಧುಗಳೊಂದಿಗೆ ಮುನಿಸು. ಮಾತಿನ ಮೇಲೆ ಹಿಡಿತವಿರಲಿ. ಮನೆ ದೇವರ ಪ್ರಾರ್ಥನೆ ಮಾಡಿ.

ತುಲಾ(Libra): ಪ್ರೇಮ ಜೀವನದ ಸಮಸ್ಯೆಗಳೇನು ಮುಗಿಯುವಂತೆ ಕಾಣುವುದಿಲ್ಲ. ಆರ್ಥಿಕ ಸಂಕಷ್ಟಗಳೂ ಇರುವ ಸಮಸ್ಯೆಗೆ ಜೊತೆಯಾಗಲಿವೆ. ಉದ್ಯೋಗ, ವ್ಯಾಪಾರದ ಕಡೆ ಹೆಚ್ಚಿನ ಸಮಯ, ಶ್ರಮ ಅಗತ್ಯ. ಆರೋಗ್ಯದ ವಿಚಾರದಲ್ಲಿ ಅಸಡ್ಡೆ ಬೇಡ. ಧೀರ್ಘಕಾಲದ ಆರೋಗ್ಯ ಸಮಸ್ಯೆಗಳು ಕಂಗಾಲಾಗಿಸಲಿವೆ. ಸೂರ್ಯ ಪ್ರಾರ್ಥನೆ ಮಾಡಿ. 

Makar Sankranti : ಸುಗ್ಗಿ ಹಬ್ಬದಂದು ಖಿಚಡಿ ಯಾಕೆ ಮಾಡ್ತಾರೆ?

ವೃಶ್ಚಿಕ(Scorpio): ವೃತ್ತಿ ಸಂಬಂಧ ಸಂಶಯಗಳಿದ್ದರೆ, ಗೊಂದಲದಲ್ಲಿದ್ದರೆ, ಇಂದು ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಕಾದು ನೋಡುವ ತಂತ್ರಕ್ಕೆ ಮೊರೆ ಹೋಗುವುದೇ ಉತ್ತಮ. ಹತ್ತಿರದವರು ಮನೆಗೆ ಭೇಟಿ ನೀಡುವುದರಿಂದ ಸಂತಸ. ಉಳಿದಂತೆ ಉದಾಸೀನವಾಗಿ ದಿನ ಕಳೆಯುವಿರಿ. ಕೃಷ್ಣನಿಗೆ ತುಳಸಿ ಅರ್ಪಿಸಿ. 

ಧನುಸ್ಸು(Sagittarius): ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿದೆ. ನಿಮ್ಮ ವೈಯಕ್ತಿಕ ವಿಷಯಗಳಲ್ಲಿ ಮೂರನೇ ವ್ಯಕ್ತಿ ಮಧ್ಯ ಪ್ರವೇಶಿಸಲು ಬಿಡಬೇಡಿ. ಹಿರಿಯರ ಚುಚ್ಚು ಮಾತುಗಳಿಗೆ ಉದಾಸೀನವೇ ಮದ್ದು. ಸಂತಾನ ಆಪೇಕ್ಷಿಸುತ್ತಿರುವ ದಂಪತಿಗೆ ಫಲ ಸಿದ್ಧಿ.  ಮಕ್ಕಳ ಆರೋಗ್ಯ ಸಮಸ್ಯೆಗಳು ಕೊಂಚ ದಿಗಿಲು ಹುಟ್ಟಿಸಬಹುದು. ಧನ್ವಂತರಿ ಪ್ರಾರ್ಥನೆ ಮಾಡಿ.

ಮಕರ(Capricorn): ಕಿವಿ, ಕಣ್ಣಿನ ಸಮಸ್ಯೆಗಳು ಕಾಡಬಹುದು. ಮಕ್ಕಳ ಮಾತುಗಳು ಮನಸ್ಸಿಗೆ ಗಾಸಿ ಉಂಟು ಮಾಡಲಿವೆ. ಸಹಾಯ ಕೋರಿ ಬಂದವರ ನೆರವಿಗೆ ನಿಲ್ಲಿ. ವ್ಯಾಪಾರ ವಹಿವಾಟು ಸಾಮಾನ್ಯವಾಗಿರಲಿವೆ. ಸಾಲ ಕೊಡಲು ಹೋಗಬೇಡಿ. ಆದಿತ್ಯ ಹೃದಯ ಪಠಣ ಮಾಡಿ.

ಕುಂಭ(Aquarius): ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗಿಗಳಿಗೆ ಏಕಾಗ್ರತೆ ಭಂಗವಾಗುತ್ತದೆ. ಇದರಿಂದ ಕೆಲಸಗಳು ಅಪೂರ್ಣವಾಗುತ್ತವೆ. ಆರೋಗ್ಯದಲ್ಲಿ ಕೆಮ್ಮು, ಶೀತದಂತ ಕಿರಿಕಿರಿಗಳು ಕಾಣಬಹುದು. ಮನೆಯವರ ಸಮಸ್ಯೆಗಳಿಗೆ ನಿಮ್ಮಿಂದ ಪರಿಹಾರ ದೊರೆಯಬಹುದು. ಇರುವೆಗಳಿಗೆ ಸಿಹಿ ನೀಡಿ. 

ಮೀನ(Pisces): ಇದೊಂಥರಾ ಅದೃಷ್ಟದ ದಿನ. ವಿವಾಹಾಕಾಂಕ್ಷಿಗಳಿಗೆ ಶುಭ ಸಂಬಂಧ ಕೂಡಿ ಬರಲಿದೆ. ವ್ಯಾಪಾರದಲ್ಲಿ ಲಾಭ. ಮನೆಯ ಸದಸ್ಯರೆಲ್ಲರೊಂದಿಗೆ ಕುಳಿತು ಮಾತನಾಡುವುದರಿಂದ ಮನಸ್ಸಿನ ಸಂತೋಷ ಹೆಚ್ಚುತ್ತದೆ. ಹೊಸ ಕಲಿಕೆಯಿಂದ ಸಂತಸ. ಬಡವರಿಗೆ ವಸ್ತ್ರ ದಾನ ಮಾಡಿ.

click me!