Daily Horoscope: ಸಿಂಹ ರಾಶಿಗೆ ಕಾದಿದೆ ನಿರಾಸೆ, ನಿಮ್ಮ ರಾಶಿಫಲ ಏನಿದೆ ನೋಡಿ..

Published : Dec 29, 2021, 05:02 AM IST
Daily Horoscope: ಸಿಂಹ ರಾಶಿಗೆ ಕಾದಿದೆ ನಿರಾಸೆ, ನಿಮ್ಮ ರಾಶಿಫಲ ಏನಿದೆ ನೋಡಿ..

ಸಾರಾಂಶ

29 ಡಿಸೆಂಬರ್ 2021, ಬುಧವಾರದ ಭವಿಷ್ಯ ಹೇಗಿದೆ? ಯಾವ ರಾಶಿಗೆ ಶುಭ ಫಲವಿದೆ? ಮಿಥುನಕ್ಕೆ ದಿನ ನುಂಗುವ ಉದಾಸೀನ

ಮೇಷ(Aries): ಉದ್ಯೋಗ ರಂಗದಲ್ಲಿ ದೊಡ್ಡ ಯೋಜನೆಗಳನ್ನು ಮುಗಿಸಿ ಸೈ ಎನಿಸಿಕೊಳ್ಳುವಿರಿ. ಮನೆಯಲ್ಲಿ ಮಕ್ಕಳಿಂದ ಸಂತೋಷ. ಸಂತಾನ ನಿರೀಕ್ಷೆಯಲ್ಲಿರುವ ದಂಪತಿಗೆ ಸಿಹಿಸುದ್ದಿ. ಅವಿವಾಹಿತರಿಗೆ ಉತ್ತಮ ಸಂಬಂಧಗಳು ಕೂಡಿ ಬರುವುವು. ಗಣಪತಿಗೆ ದರ್ಬೆ ಅರ್ಪಿಸಿ. 

ವೃಷಭ(Taurus): ಗೃಹದಲ್ಲಿ ಸೌಖ್ಯ ಇರಲಿದೆ. ಹೊರಗೆ ಸುತ್ತಾಟದಿಂದ ಮನಸ್ಸಿಗೆ ಪ್ರಫುಲ್ಲತೆ. ಸ್ನೇಹಿತರ ಸಹಕಾರದಿಂದ ದೊಡ್ಡ ಕನಸುಗಳು ಈಡೇರುವುವು. ಬೇರೊಬ್ಬರು ಹೇಳಿದ್ದೆಲ್ಲ ಕೇಳುವ ಹಿತ್ತಾಳೆ ಕಿವಿ ಇಟ್ಟುಕೊಳ್ಳಬೇಡಿ. ನಿಮ್ಮ ಬುದ್ಧಿಯನ್ನೇ ಬಲವಾಗಿ ಪ್ರಯೋಗಿಸಿ. ಕೃಷ್ಣನಿಗೆ ಅವಲಕ್ಕಿ ನೈವೇದ್ಯ ಮಾಡಿ. 

ಮಿಥುನ(Gemini): ಯಾವ ಕೆಲಸಕ್ಕೂ ಮನೋಬಲ ಕಡಿಮೆ, ಉದಾಸೀನವಾಗಿ ದಿನ ಕಳೆಯುವಿರಿ. ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡಿ ದಿನಾಂತ್ಯದಲ್ಲಿ ಕೊರಗುವರು. ಆಹಾರಕ್ಕಾಗಿ ಖರ್ಚು ಮಾಡಬಹುದು. ಆರೋಗ್ಯ ಸಮಸ್ಯೆಗಳು ಕಿರಿಕಿರಿ ಉಂಟು ಮಾಡಲಿವೆ. ಕೃಷ್ಣನಿಗೆ ತುಳಸಿ ಅರ್ಪಿಸಿ. 

ಕಟಕ(Cancer): ಆಸ್ತಿ ಖರೀದಿ ಸಂಬಂಧ ಮಾತುಕತೆ. ದಾಖಲೆ ಪತ್ರಗಳ ಪರಿಶೀಲನೆ. ಬಹುಕಾಲದಿಂದ ಮುಂದೂಡಿದ್ದ ಕೆಲಸ ಕೈಗೆತ್ತಿಕೊಳ್ಳುವಿರಿ. ದೇವತಾಕಾರ್ಯಗಳಲ್ಲಿ ಭಾಗಿ. ತಂದೆ- ಮಕ್ಕಳಲ್ಲಿ ಸಾಮರಸ್ಯ ಹೆಚ್ಚಲಿದೆ. ಕ್ರೀಡಾಳುಗಳಿಗೆ ಒಳ್ಳೆಯ ದಿನ. ದೇಹ ಬಲ ಇರಲಿದೆ. ಇರುವೆಗೆ ಸಿಹಿ ಹಾಕಿ. 

ಸಿಂಹ(Leo): ಅಂದುಕೊಂಡ ಕೆಲಸಗಳೊಂದೂ ಆಗದೆ ದಿನಾಂತ್ಯಕ್ಕೆ ಮನಸ್ಸಿಗೆ ಕಿರಿಕಿರಿ, ಬಹಳ ನಿರೀಕ್ಷೆಯಿಟ್ಟುಕೊಂಡಿದ್ದ ವಿಷಯವೊಂದು ನಿರಾಸೆ ಮೂಡಿಸುವುದು. ಮುಂದಿನ ಶುಭ ಕಾರ್ಯದ ಕೆಲಸಗಳಲ್ಲಿ ತೊಡಗಿಸಿಕೊಳ್ಳುವಿರಿ. ಅಮ್ಮನವರಿಗೆ ಕ್ಷೀರಾಭಿಷೇಕ ಮಾಡಿಸಿ.

ಕನ್ಯಾ(Virgo): ಕೆಲಸದ ಸ್ಥಳದಲ್ಲಿ ಹಿರಿಯ ಸಹೋದ್ಯೋಗಿಗಳಿಂದ ಪ್ರಶಂಸೆ. ಕೆಲ ದೊಡ್ಡ ಹಣಕಾಸಿನ ಹೊಣೆ ಹೆಗಲೇರುವುದು. ಸಂಗಾತಿಯ ಮೇಲೆ ಅನಗತ್ಯ ಅನುಮಾನದಿಂದ ಯಾವ ಲಾಭವೂ ಇಲ್ಲ. ಮೂರನೆಯವರ ಮಾತಿಗೆ ತಲೆ ಕೆಡಿಸಿಕೊಳ್ಳಬೇಡಿ. ವಿಷ್ಣು ಸಹಸ್ರನಾಮ ಪಠಣ ಮಾಡಿ. 

ತುಲಾ(Libra): ಆರೋಗ್ಯದಲ್ಲಿ ವ್ಯತ್ಯಾಸವಿದ್ದರೂ ಚಿಂತಿಸುವ ಅಗತ್ಯವಿಲ್ಲ. ಸಹೋದರರ ಸಹಕಾರದಿಂದ ಗೃಹಕಾರ್ಯಗಳು ಸುಲಭವಾಗುವುವು. ವ್ಯಾಪಾರಿಗಳಿಗೆ ಉತ್ತಮ ಲಾಭ. ಗೃಹಿಣಿಯರಿಗೆ ಹೊಸ ಉಡುಗೊರೆಯೊಂದು ದೊರೆಯಬಹುದು. ನವಗ್ರಹ ಪ್ರಾರ್ಥನೆ ಮಾಡಿ. 

ವೃಶ್ಚಿಕ(Scorpio): ನಿರುದ್ಯೋಗಿಗಳು ನೀವು ಹುಡುಕದೆ ಇರುವ ಕ್ಷೇತ್ರದಿಂದ ಬರುತ್ತಿರುವ ಅವಕಾಶವನ್ನು ಒಪ್ಪಿಕೊಳ್ಳುವುದರಿಂದ ಒಳಿತಾಗುವುದು. ಕೆಲಸ ಬದಲಿಸಲಿಚ್ಚಿಸುವ ಉದ್ಯೋಗಿಗಳಿಗೆ ಅವಕಾಶ ಬರಬಹುದು. ಮಕ್ಕಳಲ್ಲಿ ಅನಾರೋಗ್ಯ ಕಾಡಬಹುದು. ಧನ್ವಂತರಿ ಪ್ರಾರ್ಥನೆ ಮಾಡಿ. 

ಮಕ್ಕಳ ಏಕಾಗ್ರತೆ ಹೆಚ್ಚಿಸಲು Vaastu tips

ಧನುಸ್ಸು(Sagittarius): ನಿರಾಳದ ದಿನ. ಮನೆಯಲ್ಲಿ ಪತ್ನಿ ಮಕ್ಕಳ ಸಹಕಾರದಿಂದ ಬಹಳಷ್ಟು ನೆಮ್ಮದಿ ಸಿಗುವುದು. ಇನ್ನೊಬ್ಬರನ್ನು ಮೆಚ್ಚಿಸುವ ಸಲುವಾಗಿ ನೀವು ಖರ್ಚು ಮಾಡಬೇಕಿಲ್ಲ. ಅಗತ್ಯವೋ ಅಲ್ಲವೋ ನೋಡಿಯೇ ಖರ್ಚು ಮಾಡಿ. ಉಳಿತಾಯದ ಮಹತ್ವ ಸಧ್ಯದಲ್ಲೇ ಗೊತ್ತಾಗಲಿದೆ. ಗಣಪತಿ ಶತನಾಮಾವಳಿ ಹೇಳಿ. 

ಮಕರ(Capricorn): ಬಹುಕಾಲದಿಂದ ಮುಂದೂಡಿಕೊಂಡು ಬಂದ ಬ್ಯಾಂಕ್ ಕೆಲಸಗಳು ಸರಾಗ. ಧನ ಸಮೃದ್ಧಿಯಿಂದ ಸಂತೋಷ. ವಾಗ್ಬಲ ಇರಲಿದೆ, ಮಾತಿನಿಂದ ಸಾಧನೆ. ವಕೀಲ ವೃತ್ತಿ ಸೇರಿದಂತೆ ಮಾತೇ ಆಯುಧವಾಗಿರುವ ವೃತ್ತಿಯಲ್ಲಿರುವವರಿಗೆ ಗೆಲುವು. ಸಿಹಿ ಸುದ್ದಿ ಕಿವಿಗೆ ಬೀಳಲಿದೆ. ಗಣೇಶನ ದೇವಾಲಯಕ್ಕೆ ಭೇಟಿ ನೀಡಿ. 

ಕುಂಭ(Aquarius): ನೀರಿನ ಸಮೀಪದಲ್ಲಿ ಎಚ್ಚರವಾಗಿರಿ. ರೈತರು, ವ್ಯಾಪಾರಿಗಳು, ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಪ್ರಶಂಸೆ. ಮನಸ್ಸಿನ ಕೊರಗು ಕೊಂಚ ಕಡಿಮೆಯಾಗಲಿದೆ. ಮಕ್ಕಳ ವಿಷಯದಲ್ಲಿ ಹೆಚ್ಚಿನ ಎಚ್ಚರ ಅಗತ್ಯ. ಪ್ರಯಾಣದಲ್ಲಿ ಅನಿರೀಕ್ಷಿತ ಅನುಭವಗಳು ಎದುರಾಗಲಿವೆ. ಗುರು ರಾಯರ ಸ್ಮರಣೆ ಮಾಡಿ. ಶುಭಕ್ಕೆ ಧನ್ಯವಾದ ಅರ್ಪಿಸಿ.

Fertility Astrology: ಗರ್ಭ ಕಟ್ಟುತ್ತಿಲ್ಲವೇ? ಈ ಟಿಪ್ಸ್ ಫಾಲೋ ಮಾಡಿ..

ಮೀನ(Pisces): ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಮೇಲಧಿಕಾರಿಗಳಿಂದ ಕಿರಿಕಿರಿ. ನೂತನ ಗೃಹ ನಿರ್ಮಾಣಕ್ಕೆ, ವಾಹನ ಖರೀದಿಗೆ ಸಕಾಲವಲ್ಲ. ನಿತ್ಯದ ಕೆಲಸ ತುಸು ಶ್ರಮ ಎನಿಸಲಿದೆ. ಶೇರು ವ್ಯವಹಾರಗಳಲ್ಲಿ ನಷ್ಟ. ದೂರ ಪ್ರಯಾಣದಿಂದ ಆಯಾಸ. ವೆಂಕಟೇಶ್ವರ ಸ್ವಾಮಿಯ ಶ್ಲೋಕ ಹೇಳಿಕೊಳ್ಳಿ. 
 

PREV
Read more Articles on
click me!

Recommended Stories

ಇಂದು ಬುಧವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಮಂಗಳವಾರ ಈ ರಾಶಿಗೆ ಶುಭ, ಅದೃಷ್ಟ