Daily Horoscope: ಇಂದು ಮಿಥುನ ರಾಶಿಯವರ ಆರೋಗ್ಯದಲ್ಲಿ ಏರುಪೇರು

Published : Dec 28, 2021, 05:08 AM IST
Daily Horoscope: ಇಂದು ಮಿಥುನ ರಾಶಿಯವರ ಆರೋಗ್ಯದಲ್ಲಿ ಏರುಪೇರು

ಸಾರಾಂಶ

28 ಡಿಸೆಂಬರ್ 2021, ಮಂಗಳವಾರದ ಭವಿಷ್ಯ ಹೇಗಿದೆ? ಯಾವ ರಾಶಿಯ ಫಲ ಏನಿದೆ? ಕಟಕಕ್ಕೆ ಪ್ರೀತಿಯಲ್ಲಿ ಬೀಳುವ ಸಂತೋಷ, ಮೀನಕ್ಕೆ ಹೆಚ್ಚುವ ಚಂಚಲತೆ  

ಮೇಷ(Aries): ಉದ್ಯೋಗ ಕೊಡಿಸುವ, ಬ್ಯಾಂಕ್‌ನಲ್ಲಿ ಸಾಲ ಕೊಡಿಸುವ ವಿಷಯದಲ್ಲಿ ನಿಮ್ಮಿಂದ ಪರಿಚಿತರಿಗೆ ನೆರವಾಗುವ ಅವಕಾಶ ಸಿಗಬಹುದು. ನಿಮ್ಮ ಸಾಮರ್ಥ್ಯಕ್ಕನುಗುಣವಾಗಿ ಸಂಪೂರ್ಣ ನೆರವಾಗುವುದರಿಂದ ಒಳಿತಾಗುವುದು. ಉದ್ಯೋಗ ಸ್ಥಳದಲ್ಲಿ ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗುವಿರಿ. ಹನುಮಾನ್ ಚಾಳೀಸ್ ಹೇಳಿಕೊಳ್ಳಿ.  

ವೃಷಭ(Taurus): ಸೌಂದರ್ಯವರ್ಧನೆ ಸಾಮಗ್ರಿಗಾಗಿ ಧನ ವ್ಯಯ. ಸೌಂದರ್ಯವರ್ಧಕ ವಸ್ತುಗಳು, ಪೂಜಾ ಸಾಮಗ್ರಿಗಳ ವ್ಯಾಪಾರಿಗಳಿಗೆ ಧನ ಲಾಭ, ಉದ್ಯೋಗಿಗಳಿಗೆ ಕೆಲಸದಲ್ಲಿ ವಿಳಂಬ. ವಿನಾ ಅಪವಾದ ಕೇಳಬೇಕಾದ ಪರಿಸ್ಥಿತಿ. ತಾಯಿ ಚಾಮುಂಡೇಶ್ವರಿ ಪ್ರಾರ್ಥನೆ ಮಾಡಿ. 

ಮಿಥುನ(Gemini): ಆರೋಗ್ಯದಲ್ಲಿ ಅನಿರೀಕ್ಷಿತ ಏರುಪೇರು. ಹೊಟ್ಟೆ, ಶ್ವಾಸಕೋಶ, ಹೃದಯ ಸಂಬಂಧಿ ಸಮಸ್ಯೆಗಳು ಎದುರಾಗಬಹುದು. ವೈದ್ಯರ ಬಳಿ ತಪಾಸಣೆ ಮಾಡಿಸಿ. ಉದ್ಯೋಗದಲ್ಲಿ ತಲೆಬಿಸಿ ಹೆಚ್ಚು. ಶೇರು ವ್ಯವಹಾರಗಳಲ್ಲಿ ನಷ್ಟ. ಕೋರ್ಟ್ ವ್ಯವಹಾರಗಳಲ್ಲಿ ನಿರಾಸೆ, ನವಗ್ರಹ ಶ್ಲೋಕ ಹೇಳಿಕೊಳ್ಳಿ. 

ಕಟಕ(Cancer): ಈ ದಿನ ಪ್ರೀತಿಯಲ್ಲಿ ಬೀಳಲಿದ್ದೀರಿ. ಈಗಾಗಲೇ ಪ್ರೀತಿಯಲ್ಲಿರುವವರ ಮಾತುಕತೆ ಮುಂದಿನ ಹಂತಕ್ಕೆ ತಲುಪಲಿದೆ. ವಿವಾಹಿತರ ನಡುವೆ ಪ್ರೀತಿ ಚೆನ್ನಾಗಿರಲಿದೆ. ವಿದ್ಯಾರ್ಥಿಗಳಿಗೆ ಏಕಾಗ್ರತೆ ಭಂಗ. ಆರೋಗ್ಯದಲ್ಲಿ ಸಣ್ಣಪುಟ್ಟ ಕಿರಿಕಿರಿಗಳು ಇರುತ್ತವೆ. ಶಿವಶಕ್ತಿಯರ ಪ್ರಾರ್ಥನೆ ಮಾಡಿ. 

ಸಿಂಹ(Leo): ರೈತರು, ಶಿಕ್ಷಣ ಕ್ಷೇತ್ರದಲ್ಲಿರುವವರು, ವ್ಯಾಪಾರಿಗಳು ಹೊಸ ಯೋಜನೆಯೊಂದನ್ನು ರೂಪಿಸುತ್ತಿದ್ದರೆ, ಅಥವಾ ಆ ಸಂಬಂಧ ನಿರೀಕ್ಷೆಯಲ್ಲಿದ್ದರೆ ಅದಕ್ಕೆ ಸ್ಪಷ್ಟ ಚಿತ್ರಣ ಇಂದು ಸಿಗಲಿದೆ. ಗೊಂದಲಗಳು ಮಾತನಾಡದೆ ಬಗೆಹರಿಯುವುದಿಲ್ಲ ಎಂಬುದು ನೆನಪಿರಲಿ. ಆಂಜನೇಯ ಪ್ರಾರ್ಥನೆ ಮಾಡಿ. 

ಕನ್ಯಾ(Virgo): ಉದ್ಯೋಗದಲ್ಲಿ ಸಹೋದ್ಯೋಗಿಗಳ ಕಿರಿಕಿರಿ, ಮೇಲಧಿಕಾರಿಗಳಿಂದ ಬೈಸಿಕೊಳ್ಳಬೇಕಾದ ಸಂದರ್ಭ ಮನಸ್ಸನ್ನು ಘಾಸಿಗೊಳಿಸುವುದು. ಉದ್ಯೋಗ ಬದಲಿಸುವ ಬಗ್ಗೆ ಯೋಚಿಸುವಿರಿ. ವಿವಾಹಾಕಾಂಕ್ಷಿಗಳಿಗೆ ನಿರಾಸೆ. ದೂರ ಪ್ರಯಾಣಕ್ಕೆ ಉತ್ತಮ ದಿನ. ಅಶ್ವತ್ಥ ಕಟ್ಟೆಗೆ ದೀಪ ಹಚ್ಚಿ ನಮಸ್ಕರಿಸಿ. 

ತುಲಾ(Libra): ಕಾರ್ಯಕ್ಷೇತ್ರದಲ್ಲಿ ನಿರೀಕ್ಷಿತ ಹಣ ಬರುವುದಿಲ್ಲ. ಕೊಟ್ಟ ಸಾಲ ಹಿಂದೆ ಬಾರದೆ ಚಿಂತೆ ಹೆಚ್ಚುವುದು. ಯೋಜನೆಗಳನ್ನು ರೂಪಿಸುವಾಗ ಆದಾಯ ಮೀರಿ ಖರ್ಚುವೆಚ್ಚಗಳಾಗುತ್ತಿವೆಯೇ ಎಂದು ಗಮನಿಸಿ. ಉಳಿತಾಯದ ಬಗ್ಗೆ ಗಮನ ಇರಲಿ. ರಾಮನಾಮ ಜಪ ಮಾಡಿ. 

Astrology And Personality Traits: ಈ ರಾಶಿಯವರು ಉತ್ತಮ ಸಲಹೆ ನೀಡೋದ್ರಲ್ಲಿ ನಿಸ್ಸೀಮರು!

ವೃಶ್ಚಿಕ(Scorpio): ಇಂದು ಸುಖಸಂತೋಷ ವರ್ಧಿಸಲಿದೆ. ಶತ್ರುಗಳು ನಿಮ್ಮ ಕಾರ್ಯವೈಖರಿಯಿಂದಲೇ ಪರಾಭವ ಹೊಂದುತ್ತಾರೆ. ವ್ಯಾಪಾರ ವ್ಯವಹಾರಗಳಲ್ಲಿ ಹೊಸ ಒಪ್ಪಂದಗಳಾಗಬಹುದು. ಬ್ಯಾಂಕ್‌ನಿಂದ ಸಾಲಕ್ಕಾಗಿ ಕಾಯುತ್ತಿದ್ದರೆ ಅದು ಇಂದು ಈಡೇರಬಹುದು. ಹಸುವಿಗೆ ಹಸಿರು ತಿನ್ನಿಸಿ. 

ಧನುಸ್ಸು(Sagittarius): ಆದಾಯ ವರ್ಧಿಸಲಿದೆ. ಕುಟುಂಬದೊಡನೆ ಪ್ರವಾಸದಿಂದ ಹರ್ಷೋಲ್ಲಾಸ. ನೂತನ ಗೃಹ ನಿರ್ಮಾಣ ಕಾರ್ಯಗಳು ಚುರುಕು ಪಡೆಯಲಿವೆ. ನಿರುದ್ಯೋಗಿಗಳಿಗೆ ಅವಕಾಶಗಳು ಅರಸಿ ಬರಲಿವೆ. ಹೆಚ್ಚಿನ ಪೂರ್ವತಯಾರಿ ಮಾಡಿಕೊಳ್ಳಿ. ತಾಯಿಯ ಕೈಯಿಂದ ಸಿಹಿ ತಿನಿಸಿಕೊಳ್ಳಿ. 

ಮಕರ(Capricorn): ಧನ ಹೂಡಿಕೆಯಲ್ಲಿ ವಂಚನೆಯಿಂದ ನಷ್ಟ ಸಂಭವ. ವಿದ್ಯೆ, ಕ್ರೀಡೆ, ವಿವಾಹ ಕಾರ್ಯಗಳಲ್ಲಿ ಆಶಾದಾಯಕ ಅಭಿವೃದ್ಧಿ ಇರಲಿದೆ. ಮಂಗಳ ಕಾರ್ಯಗಳು ಜರುಗುವುವು. ಮನೆಯಲ್ಲಿ ದೇವರ ಕಾರ್ಯದಿಂದ ಸಂತೋಷ. ಆಂಜನೇಯನಿಂಗೆ ಕೆಂಪು ಹೂವು ಏರಿಸಿ. 

Vastu Tips : ಹಣದ ಸುರಿಮಳೆಯಾಗ್ಬೇಕಂದ್ರೆ ಹೊಸ ವರ್ಷ ಮಾಡಿ ಈ ಕೆಲಸ

ಕುಂಭ(Aquarius): ಹಣಕಾಸಿನ ಯೋಜನೆ ರೂಪಿಸುವಿರಿ. ವೃತ್ತಿ ರಂಗದಲ್ಲಿ ಅಸೂಯೆ ಹೆಚ್ಚಬಹುದು. ಅದಕ್ಕೆ ತಲೆ ಕೆಡಿಸಿಕೊಳ್ಳದೆ ಶ್ರದ್ಧೆಯಿಂದ ಕೆಲಸ ಮಾಡಿ. ಕುಟುಂಬದಲ್ಲಿ ಧನ ಮೂಲಗಳು ಹೆಚ್ಚಲಿವೆ. ನಿರುದ್ಯೋಗಿಗಳಿಗೆ ಹಿಂದೆ ಕೈ ತಪ್ಪಿ ಹೋಗಿದ್ದ ಕೆಲಸವೊಂದು ಮತ್ತೆ ಅರಸಿ ಬರಬಹುದು. ಲಲಿತಾ ಸಹಸ್ರನಾಮ ಹೇಳಿಕೊಳ್ಳಿ. 

ಮೀನ(Pisces): ಕೈಗೊಂಡ ಕೆಲಸ ಕಾರ್ಯಗಳಲ್ಲಿ ಚಂಚಲತೆ. ಗೊಂದಲದ ಕಾರಣಗಳಿಂದ ಪ್ರಮುಖ ಕೆಲಸಗಳು ಮುಂದೆ ಹೋಗದೆ ಉಳಿಯುವುವು. ವಿದ್ಯಾರ್ಥಿಗಳಿಗೆ ಹಲವು ಅಡೆತಡೆಗಳು ಎದುರಾದಾವು. ನಿಶ್ಚಯವಾಗಿರುವ ವಿವಾಹಕ್ಕೆ ಅಡ್ಡಿಗಳು ಎದುರಾಗುವ ಆತಂಕ. ಶನೀಶ್ವರನ ಪ್ರಾರ್ಥನೆ ಮಾಡಿ. 

PREV
Read more Articles on
click me!

Recommended Stories

ಇಂದು ಬುಧವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಮಂಗಳವಾರ ಈ ರಾಶಿಗೆ ಶುಭ, ಅದೃಷ್ಟ